logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Iphone Se 4: ಮಧ್ಯಮ ವರ್ಗದವರೂ ಖರೀದಿಸಬಹುದು ಐಫೋನ್ ಎಸ್ಇ 4; ಭಾರತದಲ್ಲಿ ಆಪಲ್ ಫೋನ್ ಬೆಲೆ ಎಷ್ಟು?

iPhone SE 4: ಮಧ್ಯಮ ವರ್ಗದವರೂ ಖರೀದಿಸಬಹುದು ಐಫೋನ್ ಎಸ್ಇ 4; ಭಾರತದಲ್ಲಿ ಆಪಲ್ ಫೋನ್ ಬೆಲೆ ಎಷ್ಟು?

Sep 23, 2024 09:42 AM IST

ಸದ್ಯ ಭಾರತದಲ್ಲಿ ಐಫೋನ್ ಎಸ್ಇ 4 ಭಾರಿ ಚರ್ಚೆಯಲ್ಲಿದೆ. ಮಧ್ಯಮ ವರ್ಗದವರ ಕೈಗೆಟಕುವ ಬೆಲೆಯು ಆಪಲ್‌ ಫೋನ್‌ ಖರೀದಿಗೆ ಜನರು ಸಿದ್ಧತೆ ನಡೆಸುತ್ತಿದ್ದಾರೆ. ಭಾರತದಲ್ಲಿ ಈಗಾಗಲೇ ಇರುವ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಸ್ಪರ್ಧಿಯಾಗಿ ಐಫೋನ್‌ ಬರುತ್ತಿದೆ. ಇದರ ಬೆಲೆ ಕುರಿತು ನೋಡೋಣ. 

  • ಸದ್ಯ ಭಾರತದಲ್ಲಿ ಐಫೋನ್ ಎಸ್ಇ 4 ಭಾರಿ ಚರ್ಚೆಯಲ್ಲಿದೆ. ಮಧ್ಯಮ ವರ್ಗದವರ ಕೈಗೆಟಕುವ ಬೆಲೆಯು ಆಪಲ್‌ ಫೋನ್‌ ಖರೀದಿಗೆ ಜನರು ಸಿದ್ಧತೆ ನಡೆಸುತ್ತಿದ್ದಾರೆ. ಭಾರತದಲ್ಲಿ ಈಗಾಗಲೇ ಇರುವ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಸ್ಪರ್ಧಿಯಾಗಿ ಐಫೋನ್‌ ಬರುತ್ತಿದೆ. ಇದರ ಬೆಲೆ ಕುರಿತು ನೋಡೋಣ. 
ಇತ್ತೀಚೆಗೆ ನಡೆದ ಆಪಲ್ ಗ್ಲೋಟೈಮ್ ಈವೆಂಟ್ 2024ರಲ್ಲಿ ಹೊಸ ಐಫೋನ್ 16 ಸೀರೀಸ್ ಬಿಡುಗಡೆಯಾಯ್ತು. ಆ ನಂತರ ಐಫೋನ್ ಎಸ್ಇ 4 ಈಗ ಹೆಚ್ಚು ನಿರೀಕ್ಷೆ ಮೂಡಿಸಿದೆ. ಐಫೋನ್ ಎಸ್ಇ ಮಾದರಿಯು ಈಗ ಬಹಳ ಸಮಯದ ನಂತರ ಅಪ್ಡೇಟ್‌ ಆಗಿ ಬರಿತ್ತಿದೆ. ಇದು 2022ರಲ್ಲಿ ಬಿಡುಗಡೆಯಾದ ಐಫೋನ್ ಎಸ್ಇ 3ರ ಅಪ್ಡೇಟ್‌ ಆಗಿರಲಿದೆ.
(1 / 5)
ಇತ್ತೀಚೆಗೆ ನಡೆದ ಆಪಲ್ ಗ್ಲೋಟೈಮ್ ಈವೆಂಟ್ 2024ರಲ್ಲಿ ಹೊಸ ಐಫೋನ್ 16 ಸೀರೀಸ್ ಬಿಡುಗಡೆಯಾಯ್ತು. ಆ ನಂತರ ಐಫೋನ್ ಎಸ್ಇ 4 ಈಗ ಹೆಚ್ಚು ನಿರೀಕ್ಷೆ ಮೂಡಿಸಿದೆ. ಐಫೋನ್ ಎಸ್ಇ ಮಾದರಿಯು ಈಗ ಬಹಳ ಸಮಯದ ನಂತರ ಅಪ್ಡೇಟ್‌ ಆಗಿ ಬರಿತ್ತಿದೆ. ಇದು 2022ರಲ್ಲಿ ಬಿಡುಗಡೆಯಾದ ಐಫೋನ್ ಎಸ್ಇ 3ರ ಅಪ್ಡೇಟ್‌ ಆಗಿರಲಿದೆ.(AppleTrack)
ಐಫೋನ್ ಎಸ್ಇ 4 ಬಿಡುಗಡೆಯಾದರೆ, ಸದ್ಯಕ್ಕೆ ಆಪಲ್ ಸ್ಟೋರ್‌ನಲ್ಲಿ ಅತ್ಯಂತ ಕೈಗೆಟುಕುವ ಫೋನ್ ಆಗಲಿದೆ. ಈ ಹಿಂದೆ ಐಫೋನ್ ಎಸ್ಇ 3 ಅನ್ನು 43,900 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ವರದಿಗಳ ಪ್ರಕಾರ, ಐಫೋನ್ ಎಸ್ಇ 4 ಕೂಡ ಇದೇ ರೀತಿಯ ಬೆಲೆ ಹೊಂದಿರಲಿದೆ. ಏನೇ ಆದರೂ 50,000 ರೂ.ಗಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ.
(2 / 5)
ಐಫೋನ್ ಎಸ್ಇ 4 ಬಿಡುಗಡೆಯಾದರೆ, ಸದ್ಯಕ್ಕೆ ಆಪಲ್ ಸ್ಟೋರ್‌ನಲ್ಲಿ ಅತ್ಯಂತ ಕೈಗೆಟುಕುವ ಫೋನ್ ಆಗಲಿದೆ. ಈ ಹಿಂದೆ ಐಫೋನ್ ಎಸ್ಇ 3 ಅನ್ನು 43,900 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ವರದಿಗಳ ಪ್ರಕಾರ, ಐಫೋನ್ ಎಸ್ಇ 4 ಕೂಡ ಇದೇ ರೀತಿಯ ಬೆಲೆ ಹೊಂದಿರಲಿದೆ. ಏನೇ ಆದರೂ 50,000 ರೂ.ಗಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ.
ವರದಿಗಳು ಹಾಗೂ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಐಫೋನ್ ಎಸ್ಇ 4 ಎಲ್ಲಾ ಹೊಸ ವೈಶಿಷ್ಟ್ಯಗಳೊಂದಿಗೆ ಬರಲಿದೆ. ವಿಶೇಷವಾಗಿ ಆಪಲ್ ಇಂಟೆಲಿಜೆನ್ಸ್‌ನೊಂದಿಗೆ ನಿಮಗೆ ಮೌಲ್ಯಯುತ ಖರೀದಿಯಾಗಲಿದೆ ಎಂದು ಸೂಚಿಸುತ್ತದೆ. ಅಂದಾಜು 45,000 ರೂಪಾಯಿಯ ಫೋನ್‌, ಎಐ ತಂತ್ರಜ್ಞಾನದ ಜಗತ್ತಿಗೆ ಪ್ರವೇಶ ಒದಗಿಸಬಹುದು.
(3 / 5)
ವರದಿಗಳು ಹಾಗೂ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಐಫೋನ್ ಎಸ್ಇ 4 ಎಲ್ಲಾ ಹೊಸ ವೈಶಿಷ್ಟ್ಯಗಳೊಂದಿಗೆ ಬರಲಿದೆ. ವಿಶೇಷವಾಗಿ ಆಪಲ್ ಇಂಟೆಲಿಜೆನ್ಸ್‌ನೊಂದಿಗೆ ನಿಮಗೆ ಮೌಲ್ಯಯುತ ಖರೀದಿಯಾಗಲಿದೆ ಎಂದು ಸೂಚಿಸುತ್ತದೆ. ಅಂದಾಜು 45,000 ರೂಪಾಯಿಯ ಫೋನ್‌, ಎಐ ತಂತ್ರಜ್ಞಾನದ ಜಗತ್ತಿಗೆ ಪ್ರವೇಶ ಒದಗಿಸಬಹುದು.(Ming-Chi Kuo)
ಐಫೋನ್ ಎಸ್ಇ ಫೋನ್‌, ಯುಎಸ್‌ಬಿ-ಸಿ ಪೋರ್ಟ್ ಮತ್ತು ಆಕ್ಷನ್ ಬಟನ್ ಕೂಡಾ ಪಡೆಯುತ್ತದೆ. ಈ ಮಾದರಿಯು ಮುಂಬರುವ ಐಫೋನ್ 16ನ ವಿನ್ಯಾಸ ಭಾಷೆಯನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿವೆ. ಫೇಸ್ ಐಡಿಯೊಂದಿಗೆ ಒಎಲ್ಇಡಿ ಡಿಸ್ಪ್ಲೇ ಹೊಂದಿರಲಿದೆ.
(4 / 5)
ಐಫೋನ್ ಎಸ್ಇ ಫೋನ್‌, ಯುಎಸ್‌ಬಿ-ಸಿ ಪೋರ್ಟ್ ಮತ್ತು ಆಕ್ಷನ್ ಬಟನ್ ಕೂಡಾ ಪಡೆಯುತ್ತದೆ. ಈ ಮಾದರಿಯು ಮುಂಬರುವ ಐಫೋನ್ 16ನ ವಿನ್ಯಾಸ ಭಾಷೆಯನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿವೆ. ಫೇಸ್ ಐಡಿಯೊಂದಿಗೆ ಒಎಲ್ಇಡಿ ಡಿಸ್ಪ್ಲೇ ಹೊಂದಿರಲಿದೆ.(X.com/MajinBuOfficial)
ಕಂಪನಿ ಬಹಿರಂಗಪಡಿಸಿದಂತೆ, ಆಪಲ್ ಇಂಟೆಲಿಜೆನ್ಸ್ ಕಾರ್ಯನಿರ್ವಹಿಸಲು ಕನಿಷ್ಠ 8 ಜಿಬಿ RAM ಅಗತ್ಯವಿದೆ. ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್ ಪಡೆದರೆ ಅದು 8 ಜಿಬಿ RAM ಅನ್ನು ಸಹ ಪಡೆಯುತ್ತದೆ. ಹೊಸ ವಿನ್ಯಾಸ, ಶಕ್ತಿಯುತ ಚಿಪ್ಸೆಟ್, ಒಎಲ್ಇಡಿ ಡಿಸ್ಪ್ಲೇ ಮತ್ತು ಸುಧಾರಿತ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳೊಂದಿಗೆ, ಐಫೋನ್ ಎಸ್ಇ 4 ಖರೀದಿದಾರರ ಆಯ್ಕೆಯಾಗಬಹುದು. ಅಲ್ಲದೆ ಕಡಿಮೆ ಬೆಲೆಯಿಂದಾಗಿ ಮಧ್ಯಮ ವರ್ಗದವರ ಆಯ್ಕೆಯಾಗಬಹುದು. 
(5 / 5)
ಕಂಪನಿ ಬಹಿರಂಗಪಡಿಸಿದಂತೆ, ಆಪಲ್ ಇಂಟೆಲಿಜೆನ್ಸ್ ಕಾರ್ಯನಿರ್ವಹಿಸಲು ಕನಿಷ್ಠ 8 ಜಿಬಿ RAM ಅಗತ್ಯವಿದೆ. ಐಫೋನ್ ಎಸ್ಇ 4 ಆಪಲ್ ಇಂಟೆಲಿಜೆನ್ಸ್ ಪಡೆದರೆ ಅದು 8 ಜಿಬಿ RAM ಅನ್ನು ಸಹ ಪಡೆಯುತ್ತದೆ. ಹೊಸ ವಿನ್ಯಾಸ, ಶಕ್ತಿಯುತ ಚಿಪ್ಸೆಟ್, ಒಎಲ್ಇಡಿ ಡಿಸ್ಪ್ಲೇ ಮತ್ತು ಸುಧಾರಿತ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳೊಂದಿಗೆ, ಐಫೋನ್ ಎಸ್ಇ 4 ಖರೀದಿದಾರರ ಆಯ್ಕೆಯಾಗಬಹುದು. ಅಲ್ಲದೆ ಕಡಿಮೆ ಬೆಲೆಯಿಂದಾಗಿ ಮಧ್ಯಮ ವರ್ಗದವರ ಆಯ್ಕೆಯಾಗಬಹುದು. (IceUniverse)

    ಹಂಚಿಕೊಳ್ಳಲು ಲೇಖನಗಳು