logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡ ರಾಜ್ಯೋತ್ಸವ 2024 : ನಿವೃತ್ತರಾಗಿದ್ದರೂ ಕರ್ನಾಟಕ ಎಂದೂ ಮರೆಯದ ಈ 10 ಪ್ರಮುಖ ಅಧಿಕಾರಿಗಳು ಯಾರು ಗೊತ್ತೆ?

ಕನ್ನಡ ರಾಜ್ಯೋತ್ಸವ 2024 : ನಿವೃತ್ತರಾಗಿದ್ದರೂ ಕರ್ನಾಟಕ ಎಂದೂ ಮರೆಯದ ಈ 10 ಪ್ರಮುಖ ಅಧಿಕಾರಿಗಳು ಯಾರು ಗೊತ್ತೆ?

Oct 31, 2024 06:42 PM IST

ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕರ್ನಾಟಕದಲ್ಲಿ ಕೆಲಸ ಮಾಡಿ ನಿವೃತ್ತರಾಗಿ ಈಗಲೂ ಜನಮಾನಸದಲ್ಲಿ ಉಳಿಸಿರುವ ಪ್ರಮುಖ ಅಧಿಕಾರಿಗಳ ವಿವರವನ್ನು ಇಲ್ಲಿ ನೀಡಿದೆ. ಅಧಿಕಾರ ಸಿಕ್ಕಾಗ ಜನರಿಗೋಸ್ಕರವೇ ನಿಷ್ಠೆ ಹಾಗೂ ಬದ್ದತೆಯಿಂದ ಕೆಲಸ ಮಾಡಿದ ಅಧಿಕಾರಿಗಳಿವರು.

  • ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕರ್ನಾಟಕದಲ್ಲಿ ಕೆಲಸ ಮಾಡಿ ನಿವೃತ್ತರಾಗಿ ಈಗಲೂ ಜನಮಾನಸದಲ್ಲಿ ಉಳಿಸಿರುವ ಪ್ರಮುಖ ಅಧಿಕಾರಿಗಳ ವಿವರವನ್ನು ಇಲ್ಲಿ ನೀಡಿದೆ. ಅಧಿಕಾರ ಸಿಕ್ಕಾಗ ಜನರಿಗೋಸ್ಕರವೇ ನಿಷ್ಠೆ ಹಾಗೂ ಬದ್ದತೆಯಿಂದ ಕೆಲಸ ಮಾಡಿದ ಅಧಿಕಾರಿಗಳಿವರು.
ಚಿರಂಜೀವಿ ಸಿಂಘ್‌, ಪಂಜಾಬ್‌ ಮೂಲದವರಾದರೂ ಕರ್ನಾಟಕ ಕೇಡರ್‌ ಅಧಿಕಾರಿಯಾಗಿ ನಾನಾ ಭಾಗದಲ್ಲಿ ಕೆಲಸ ಮಾಡಿ ಜನಾನುರಾಗಿ ಅಧಿಕಾರಿಯಾಗಿದ್ದವರು. ಹಲವಾರು ಸುಧಾರಣೆಗಳಿಗೆ ಅವರ ಶ್ರಮವಿದೆ. ಈಗಲೂ ಅಧಿಕಾರಿಗಳ ಮಟ್ಟದಲ್ಲಿ ಇವರಿಗೆ ಭಾರೀ ಗೌರವ.
(1 / 10)

ಮಂಡ್ಯ ಜಿಲ್ಲೆಯ ರೈತ ಕುಟುಂಬದಿಂದ ಬಂದು ಐಎಫ್‌ಎಸ್‌ ಅಧಿಕಾರಿಯಾಗಿ ಹಲವು ಸುಧಾರಣೆಗೆ ಕಾರಣರಾದವರು ಎ.ಸಿ. ಲಕ್ಷ್ಮಣ, ಕರ್ನಾಟಕದಲ್ಲಿ ಶ್ರೀಗಂಧ ಬೆಳೆಯಲು ಅವರು ನೀಡಿದ ಉತ್ತೇಜನ, ಕಾನೂನು ರೂಪಿಸಲು ಹಾಕಿದ ಪ್ರಯತ್ನ ದೊಡ್ಡದು. ವನತೋಟಗಾರಿಕೆಗೆ ನಿವೃತ್ತಿ ನಂತರವೂ ಶ್ರಮಿಸುತ್ತಲೇ ಇದ್ದಾರೆ.
(2 / 10)

ಈಶಾನ್ಯ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ಐಪಿಎಸ್‌ ಅಧಿಕಾರಿಯಾಗಿ ಕೆಲಸ ಮಾಡಿದ ಸಾಂಗ್ಲಿಯಾನ ಒಂದು ಕಾಲಕ್ಕೆ ಹೊಸ ಅಲೆ ಸೃಷ್ಟಿಸಿದವರು. ಅವರ ಹೆಸರಿನಲ್ಲಿ ಚಿತ್ರಗಳೂ ಬಂದವು. ಬೆಂಗಳೂರಿನಿಂದ ಸಂಸದರೂ ಆಗಿದ್ದರು.
(3 / 10)

ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ ಮತ್ತೊಬ್ಬ ಅತ್ಯುತ್ತಮ ಅಧಿಕಾರಿಗಳ ಪಟ್ಟಿಯಲ್ಲಿ ತ.ಮ.ವಿಜಯಭಾಸ್ಕರ್‌ ಹೆಸರು ಸೇರುತ್ತದೆ. ಹಲವು ಕಡೆ ಜಿಲ್ಲಾಧಿಕಾರಿಯಾಗಿ ಒತ್ತುವರಿ ತಡೆದ, ಕರ್ನಾಟಕದಲ್ಲಿ ಪಾರಂಪರಿಕ ಪ್ರವಾಸೋದ್ಯಮಕ್ಕೆ ಬಲ ತುಂಬಿ ಆಡಳಿತ ಸುಧಾರಣೆಗೆ ಒತ್ತು ನೀಡಿದವರು ಇವರು.
(4 / 10)

ಕರ್ನಾಟಕದಲ್ಲಿ ಅರಣ್ಯ ಎನ್ನುವುದಕ್ಕೆ ಗಟ್ಟಿ ದನಿ ಎತ್ತಿದವರು ಕನ್ನಡಿಗರೇ ಆದ ಅ.ನಾ. ಯಲ್ಲಪ್ಪ ರೆಡ್ಡಿ. ಹಲವು ಜಿಲ್ಲೆಗಳಲ್ಲಿ ಅರಣ್ಯ ರಕ್ಷಣೆ, ಜಾಗೃತಿ ವಿಚಾರದಲ್ಲಿ ಅವರು ಮಾಡಿದ ಕೆಲಸ ದೊಡ್ಡದು. ಆನಂತರ ಕರ್ನಾಟಕದಲ್ಲಿ ಕಸ ವಿಂಗಡಣೆ, ಪರಿಸರ ಸ್ವಚ್ಛತೆಗೆ ವಿಶೇಷ ಮುತುವರ್ಜಿ ವಹಿಸಿದವರು.
(5 / 10)

ಕರ್ನಾಟಕದ ಪೊಲೀಸ್‌ ಇಲಾಖೆಯಲ್ಲಿ ದಂತಕತೆಯ ರೀತಿ ಕೆಲಸ ಮಾಡಿದವರು ಕೆಂಪಯ್ಯ, ಹಲವು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಮೂಡಿಸಿದ ಛಾಪು, ಮೈಸೂರಿನಲ್ಲಿ ಪೊಲೀಸ್‌ ಶಾಲೆ, ಠಾಣೆಗಳಿಗೆ ಹೊಸ ರೂಪ, ಪೊಲೀಸ್‌ ಭವನ ನಿರ್ಮಿಸಿದ ಖ್ಯಾತಿ ಅವರದ್ದು. ಇವರ ಹೆಸರಲ್ಲೂ ಚಿತ್ರ ಬಂದಿದೆ.
(6 / 10)

ಕರ್ನಾಟಕದಲ್ಲಿಯೇ ಕೆಲಸ ಮಾಡಿದ ಎಂ. ಮದನಗೋಪಾಲ್‌ ಕೂಡ ಅತ್ಯುತ್ತಮ ಅಧಿಕಾರಿಗಳ ಪಟ್ಟಿಯಲ್ಲಿದ್ಧಾರೆ. ಕರ್ನಾಟಕದಲ್ಲಿ ಗಣಿಗಾರಿಕೆಯಲ್ಲಿ ಘಟಾನುಘಟಿಗಳು ಇದ್ದಾಗ ಅದಕ್ಕೆ ಮೂಗುದಾರ ಹಾಕಿದವರು. ಆನಂತರ ಆಡಳಿತದ ಕಟ್ಟುನಿಟ್ಟಿಗೆ ಹೆಸರಾದವರು. ಲೇಖಕರು ಕೂಡ,
(7 / 10)

ಕರ್ನಾಟಕದವರೇ ಆಗ ಗಾ.ನಂ. ಶ್ರೀಕಂಠಯ್ಯ ಐಎಫ್‌ಎಸ್‌ ಅಧಿಕಾರಿಯಾಗಿ ಆಯುರ್ವೇದ, ದೇಸಿ ಔಷಧಕ್ಕೆ ಒತ್ತು ನೀಡಿದವರು. ಶಿವಮೊಗ್ದದಲ್ಲಿದ್ದಾಗ ನಾಟಿವೈದ್ಯರನ್ನು ಸಂಘಟಿಸಿದರು. ಮೈಸೂರಿನಲ್ಲಿ ಕೆರೆಗೆ ರಾಶಿ ವನ ರೂಪಿಸಿದವರು. ಆಯುಷ್‌ ನಿರ್ದೇಶಕರಾಗಿದ್ದಾಗ ನಾಲ್ಕು ವರ್ಷ ಇಲಾಖೆಗೆ ಕಾಯಕಲ್ಪ ನೀಡಿದವರು. ಈಗಲೂ ಹಲವರು ಸಂಘಟನೆಗಳಲ್ಲಿ ಸಕ್ರಿಯರು.
(8 / 10)

ಕರ್ನಾಟಕದ ಬೆಳಗಾವಿ ಜಿಲ್ಲೆಯವರಾದ ಡಾ.ಸಿ.ಜಿ.ಬೆಟ್ಟಸೂರಮಠ ಕೆಎಎಸ್‌ ಅಧಿಕಾರಿಯಾಗಿ ಮೂರೂವರೆ ದಶಕ ಕೆಲಸ ಮಾಡಿದವರು.ಮೈಸೂರಲ್ಲಿ ಆಡಳಿತಕ್ಕೆ ಬಲ ತುಂಬಿ ಸ್ವಚ್ಛತೆಯಲ್ಲಿ ಮೈಸೂರು ನಂಬರ್‌  1 ಸ್ಥಾನ ಪಡೆಯಲು ಕಾರಣರಾದವರು. ಜಯರಾಮರಾಜ ಒಡೆಯರ್‌ ವೃತ್ತ ನಿರ್ಮಿಸಿ ಪಾರಂಪರಿಕ ಪ್ರವಾಸೋದ್ಯಮಕ್ಕೆ ಬಲ ತುಂಬಿದವರು.
(9 / 10)

ಉತ್ತರ ಭಾರತದವರಾದರೂ ಕರ್ನಾಟಕ ಕೇಡರ್‌ ಐಎಫ್‌ಎಸ್‌ ಅಧಿಕಾರಿಯಾಗಿ ಯುವಿಸಿಂಗ್‌ ಗಣಿ ಕಳ್ಳಾಟ ತಡೆಗೆ ಬಿಗಿ ಕ್ರಮ ಕೈಗೊಂಡವರು. ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರೊಂದಿಗೆ ಜತೆಯಾಗಿ ಕೆಲಸ ಮಾಡಿದವರು. ಗಣಿ ವಿಚಾರದಲ್ಲಿ ಅವರು ನೀಡಿದ ವರದಿ ಮಹತ್ವದ್ದು.
(10 / 10)

    ಹಂಚಿಕೊಳ್ಳಲು ಲೇಖನಗಳು