logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ಪ್ರಸಿದ್ಧ ಬೆಟ್ಟಗಳ 10 ಪಟ್ಟಿಯಲ್ಲಿ ಯಾವುದಿದೆ, ನೃಪತುಂಗ ಬೆಟ್ಟದಿಂದ ಬಿಳಿಗಿರಿರಂಗನ ಬೆಟ್ಟದವರೆಗೆ

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ಪ್ರಸಿದ್ಧ ಬೆಟ್ಟಗಳ 10 ಪಟ್ಟಿಯಲ್ಲಿ ಯಾವುದಿದೆ, ನೃಪತುಂಗ ಬೆಟ್ಟದಿಂದ ಬಿಳಿಗಿರಿರಂಗನ ಬೆಟ್ಟದವರೆಗೆ

Oct 28, 2024 11:41 AM IST

ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕರ್ನಾಟಕದ ಪ್ರಮುಖ 10 ಆಕರ್ಷಕ ಬೆಟ್ಟಗಳ ಪಟ್ಟಿಯನ್ನು ನಿಮಗಾಗಿ ನೀಡಿದೆ. ಇದರ ವಿವರ ಇಲ್ಲಿದೆ

  • ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕರ್ನಾಟಕದ ಪ್ರಮುಖ 10 ಆಕರ್ಷಕ ಬೆಟ್ಟಗಳ ಪಟ್ಟಿಯನ್ನು ನಿಮಗಾಗಿ ನೀಡಿದೆ. ಇದರ ವಿವರ ಇಲ್ಲಿದೆ
ಮುಳ್ಳಯ್ಯನಗಿರಿ ಬೆಟ್ಟ//ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಕರ್ನಾಟಕದ ಎತ್ತರದ ಬೆಟ್ಟಗಳಲ್ಲಿ ಒಂದು. ಚಿಕ್ಕಮಗಳೂರಿನಿಂದ ಅನತಿ ದೂರದಲ್ಲಿ ಇರುವ ಮುಳ್ಳಯ್ಯನಗಿರಿ ಪ್ರಮುಖ ಪ್ರವಾಸಿ ಬೆಟ್ಟ. ಸಮುದ್ರ ಮಟ್ಟದಿಂದ1925  ಮೀಟರ್‌ ಎತ್ತರದಲ್ಲಿದೆ. ಸುತ್ತಲೂ ದಟ್ಟ ಅರಣ್ಯದ ಅನುಭವವನ್ನು ಇಲ್ಲಿ ನಿಂತು ಅನುಭವಿಸುವುದೇ ಭಿನ್ನ ಅನುಭೂತಿ.
(1 / 10)

ಕುಮಾರಸ್ವಾಮಿ ಬೆಟ್ಟ//ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ದಟ್ಟ ಅರಣ್ಯದ ನಡುವೆ ಇರುವ ಬೆಟ್ಟವಿದು ಈ ಬೆಟ್ಟದ ಮೇಲೆ ಶ್ರೀಕುಮಾರಸ್ವಾಮಿ ದೇವಾಲಯವಿದೆ. ಇದರಿಂದ ಕುಮಾರಸ್ವಾಮಿ ಬೆಟ್ಟ ಎಂದೇ ಕರೆಯುತ್ತಾರೆ. ಗಣಿಗಾರಿಕೆ ನಂತರ ಇಲ್ಲಿನ ಚಿತ್ರಣ ಬದಲಾಗಿದ್ದರೂ ಪ್ರವಾಸಿಗರ ಭೇಟಿಗೆ ಯಾವುದೇ ಅಡ್ಡಿಯಿಲ್ಲ.] 
(2 / 10)

ಮಲೈ ಮಹದೇಶ್ವರ  ಬೆಟ್ಟ//ಏಳು ಮಲೆಗಳನ್ನು ದಾಟಿಕೊಂಡು ಹೋದರೆ ಸಿಗುವಂತಹ ಮಹದೇಶ್ವರ ಬೆಟ್ಟ, ಮಲೆಗಳಲ್ಲಿ ನೆಲೆ ನಿಂತಿರುವ ಮಹದೇಶ್ವರನನ್ನು ಮಲೆಮಹದೇಶ್ವರ ಎಂದು ಕರೆಯಲಾಗುತ್ತದೆ. ನಿಸರ್ಗ ಸೊಬಗಿನ ನಡುವೆ ಚಾಮರಾಜನಗರ ಜಿಲ್ಲೆ ಗಡಿ ಭಾಗದಲ್ಲಿರುವ ಲಕ್ಷಾಂತರ ಭಕ್ತರನ್ನು ಸೆಳೆಯುವ ಧಾರ್ಮಿಕ ತಾಣ. 
(3 / 10)

ಕುಂದಾದ್ರಿ ಬೆಟ್ಟ//ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಪ್ರಮುಖ ಬೆಟ್ಟಗಳ ಸಾಲಿನಲ್ಲಿ ಬರುವ ಕುಂದ್ರಾದ್ರಿ ಬೆಟ್ಟವೂ ಪ್ರಮುಖ ಪ್ರವಾಸಿ ಸ್ಥಳ. ಸಮುದ್ರ ಮಟ್ಟದಿಂದ 826  ಮೀಟರ್‌ ಎತ್ತರವಿರುವ ಕುಂದ್ರಾದ್ರಿ ಬೆಟ್ಟದ ಮೇಲೆ ನಿಂತರೆ ಪಶ್ಚಿಮ ಘಟ್ಟ ಶ್ರೇಣಿಯ ಸೊಬಗನ್ನು ಸವಿಯಬಹುದು.
(4 / 10)

ನಂದಿ ಬೆಟ್ಟ//ಬೆಂಗಳೂರಿನಿಂದ ಅನತಿ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ ಪ್ರಮುಖ ಪ್ರವಾಸಿ ತಾಣ. ಬೆಟ್ಟದ ಮೇಲಿನಿಂದ ನಿಂತಾಗ ಕಾಣುವ ರಮಣೀಯ ನೋಟ ಮುದ ನೀಡುವಂತದ್ದು. ಪ್ರವಾಸಿಗರ ಬೆಟ್ಟ ಎಂದೇ ಇದು ಖ್ಯಾತಿ ಪಡೆದಿದೆ. ಹಲವು ನದಿಗಳ ಮೂಲ ಸ್ಥಳವೂ ಹೌದು. ಸಮುದ್ರಮಟ್ಟದಿಂದ 1478 ಎತ್ತರದಲ್ಲಿದೆ ನಂದಿ ಬೆಟ್ಟ.
(5 / 10)

ಬಿಳಿಗಿರಿ ರಂಗನ ಬೆಟ್ಟ//ಚಾಮರಾಜನಗರ ಜಿಲ್ಲೆಯ ಮತ್ತೊಂದು ಪ್ರಮುಖ ಬೆಟ್ಟವಿದು. ಇದು ಸೋಲಿಗರ ಸಹಿತ ಹಲವು ಜನರ ಆರಾಧ್ಯದೈವ ಬಿಳಿಗಿರಿರಂಗನಾಥಸ್ವಾಮಿ ಇರುವ ಬೆಟ್ಟ. ಶತಮಾನಗಳ ಇತಿಹಾಸವಿರುವ ದೇಗುಲ, ಸುತ್ತಲೂ ಕಾಡು ಇಲ್ಲಿನ ವಿಶೇಷ. ನಿತ್ಯ ನೂರಾರು ಭಕ್ತರು ಬೆಟ್ಟದ ಪೂಜೆ ಜತೆಗೆ ಇಲ್ಲಿನ ಸೌಂದರ್ಯ ಸವಿಯಲು ಬರುತ್ತಾರೆ. 
(6 / 10)

ಸಿದ್ಧರ ಬೆಟ್ಟ//ತುಮಕೂರು ನಗರಕ್ಕೆ ಸಮೀಪವೇ ಇರುವ ಸಿದ್ದರ ಬೆಟ್ಟವು ಶ್ರೀಮಂತ ಇತಿಹಾಸವನ್ನು ಹೊಂದಿರುವ ದೈವೀಕ ಹಾಗೂ ಪರಿಸರ ಮಹತ್ವದ ತಾಣ. ಬೆಟ್ಟವು ಹಲವಾರು ಗುಹೆಗಳಿಗೆ ನೆಲೆಯಾಗಿದೆ. ಇವುಗಳನ್ನು ಧ್ಯಾನಕ್ಕಾಗಿ ಸಂತರು ಮತ್ತು ತಪಸ್ವಿಗಳು ಬಳಸುತ್ತಿದ್ದರು ಎಂದು ನಂಬಲಾಗಿದೆ. ಇದರಿಂದಲೇ ಸಿದ್ದರ ಬೆಟ್ಟ ಎನ್ನುವ ಹೆಸರು ಬಂದಿದೆ. ಈಗಲೂ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. 
(7 / 10)

ಹಿಮವದ್‌ ಗೋಪಾಲಸ್ವಾಮಿ ಬೆಟ್ಟ//ಚಾಮರಾಜನಗರ ನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದೊಳಗೆ ಸೇರಿರುವ ಸದಾ ಹಿಮವನ್ನೇ ಹೊದ್ದು ಇರುವ ಈ ಬೆಟ್ಟವನ್ನು ಹಿಮವದ್‌ ಗೋಪಾಲಸ್ವಾಮಿ ಬೆಟ್ಟ. ಗೋಪಾಲಸ್ವಾಮಿ ಬೆಟ್ಟವು ಸುಂದರ ಪರಿಸರದ ನಡುವೆ ಇದೆ. ಗುಂಡ್ಲುಪೇಟೆಯಿಂದ ಬಂಡೀಪುರಕ್ಕೆ ಹೋಗುವಾಗ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ಸವಿ ಅನುಭವಿಸಿ ಹೋಗಬಹುದು.
(8 / 10)

ನೃಪತುಂಗ ಬೆಟ್ಟ//ಹುಬ್ಬಳ್ಳಿ ನಗರದಲ್ಲೇ ಇರುವ ನೃಪತುಂಗ ಬೆಟ್ಟ ನೆಚ್ಚಿನ ಪ್ರವಾಸಿಗರ ತಾಣ, ಉಣಕಲ್‌ ನಿಂದ ಅನತಿ ದೂರದಲ್ಲಿರುವ ನೃಪತುಂಗ ಬೆಟ್ಟ ಹಸಿರಿನಿಂದ ಕೂಡಿದೆ. ಬೆಟ್ಟವೇರಿ ಹುಬ್ಬಳ್ಳಿ ನೋಟ ಸವಿಯುವುದೇ ಆನಂದ. ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಈ ಬೆಟ್ಟಕ್ಕೆ ಬಂದರೆ ಆಟಕ್ಕೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿರುವುದರಿಂದ ಹೆಚ್ಚು ಸಮಯ ಕಳೆಯಬಹುದು.
(9 / 10)

ಚಾಮುಂಡಿಬೆಟ್ಟ//ಮೈಸೂರಿನ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ತಾಣವಿದು. ನಾಡದೇವತೆ ಚಾಮುಂಡೇಶ್ವರಿ ದೇಗುಲವಿರುವ ಕಾರಣದಿಂದ ಕರ್ನಾಟಕ ಮಾತ್ರವಲ್ಲದೇ ಉತ್ತರ ಭಾರತದಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಮಹಿಷನ ವಿಗ್ರಹ, ನಂದಿ ಇಲ್ಲಿನ ಆಕರ್ಷಣೆ. ಚಿರತೆ ಸಹಿತ ಹಲವು ಪ್ರಾಣಿ, ಪಕ್ಷಿಗಳು ಇಲ್ಲಿ ನೆಲಗೊಂಡಿವೆ.  ಸಮುದ್ರಮಟ್ಟದಿಂದ 1063 ಮೀಟರ್‌ ಎತ್ತರದಲ್ಲಿದೆ.
(10 / 10)

    ಹಂಚಿಕೊಳ್ಳಲು ಲೇಖನಗಳು