logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೋಕಸಭಾ ಚುನಾವಣೆ: ಕುಟುಂಬದವರೊಂದಿಗೆ ಮತ ಚಲಾಯಿಸಿದ ರಾಜಕೀಯ ನಾಯಕರು, ಅಧಿಕಾರಿಗಳು; ಮತದಾನ ಮಾಡಿ ಸಂಭ್ರಮಿಸಿದ ಪ್ರಮುಖರ ಫೋಟೊಸ್‌

ಲೋಕಸಭಾ ಚುನಾವಣೆ: ಕುಟುಂಬದವರೊಂದಿಗೆ ಮತ ಚಲಾಯಿಸಿದ ರಾಜಕೀಯ ನಾಯಕರು, ಅಧಿಕಾರಿಗಳು; ಮತದಾನ ಮಾಡಿ ಸಂಭ್ರಮಿಸಿದ ಪ್ರಮುಖರ ಫೋಟೊಸ್‌

Apr 26, 2024 10:47 AM IST

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಆರಂಭವಾಗಿದ್ದು, ಇಂದು ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ವಿವಿಧ ರಾಜಕೀಯ ನಾಯಕರು, ಅಧಿಕಾರಿಗಳು, ಪ್ರಮುಖರು ಹಾಗೂ ಸಾರ್ವಜನಿಕರು ಮತ ಹಾಕಿ, ಫೋಟೊ ಹಂಚಿಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ಸಂಭ್ರಮಿಸಿದ್ದಾರೆ.

  • ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಆರಂಭವಾಗಿದ್ದು, ಇಂದು ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ವಿವಿಧ ರಾಜಕೀಯ ನಾಯಕರು, ಅಧಿಕಾರಿಗಳು, ಪ್ರಮುಖರು ಹಾಗೂ ಸಾರ್ವಜನಿಕರು ಮತ ಹಾಕಿ, ಫೋಟೊ ಹಂಚಿಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ಸಂಭ್ರಮಿಸಿದ್ದಾರೆ.
ಲೋಕಸಭಾ ಚುನಾವಣೆ 2024 ಆರಂಭವಾಗಿದೆ. ನಾಡಿನಾದ್ಯಂತ ಜನರು ಪ್ರಜಾಪ್ರಭುತ್ವ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಕರ್ನಾಟಕ 14 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು, ವಿವಿಧ ಮತಗಟ್ಟೆಗಳಲ್ಲಿ ಸಾರ್ವಜನಿಕರು ಸೇರಿದಂತೆ ರಾಜಕೀಯ ನಾಯಕರು, ಅಧಿಕಾರಿಗಳು ತಮ್ಮ ಕುಟುಂಬದವರೊಂದಿಗೆ ಮತ ಚಲಾಯಿಸಿ ಫೋಟೊಗಳನ್ನ ಹಂಚಿಕೊಂಡಿದ್ದಾರೆ. ಮತ ಚಲಾಯಿಸಿದ ವಿವಿಧ ನಾಯಕರು ಹಾಗೂ ಅಧಿಕಾರಿಗಳ ಫೋಟೊಸ್‌ ಇಲ್ಲಿದೆ. 
(1 / 11)

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಪತ್ನಿ ಸಮೇತರಾಗಿ ಬಂದು ಮತ ಚಲಾಯಿಸಿದ್ದಾರೆ. 
(2 / 11)

ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮತ ಚಲಾಯಿಸಿ ಬಂದ ವೋಟರ್‌ ಐಡಿ ಹಿಡಿದು, ನಗುತ್ತಾ  ಫೋಟೊಗೆ ಫೋಸ್‌ ನೀಡಿರುವುದು
(3 / 11)

ಸೂಟು, ಬೂಟು, ಕೂಲಿಂಗ್‌ ಗ್ಲಾಸ್‌ ಧರಿಸಿ ಸಖತ್‌ ಸ್ಟೈಲಿಶ್‌ ಆಗಿ ಬಂದಿರುವ ಕಾಂಗ್ರೆಸ್‌ನ ಜಮೀರ್‌ ಅಹಮದ್‌ ವೋಟ್‌ ಮಾಡಿ ಫೋಟೊಗೆ ಪೋಸ್‌ ನೀಡಿದರು. 
(4 / 11)

ಮಂಗಳೂರು ನಗರದ ಬಲ್ಮಠದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಚಿಸಲಾಗಿರುವ ಮತಗಟ್ಟೆ 131ರಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಅವರ ಶ್ರೀಮತಿಯೊಂದಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.
(5 / 11)

ಮೈಸೂರಿನ ಮಹಾರಾಜ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಒಡೆಯರ್‌, ರಾಣಿ ಪ್ರಮೋದಾದೇವಿ, ಯದುವೀರ್‌ ಪತ್ನಿ ತ್ರಿಷಿಕಾ ಕುಮಾರಿ ಸಿಂಗ್‌ ಕುಟುಂಬ ಸಮೇತರಾಗಿ ಮತ ಚಲಾಯಿಸಿದ್ದಾರೆ. 
(6 / 11)

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್‌ ಬಿಳಿಪಂಚೆ, ಬಿಳಿ ಶರ್ಟ್‌, ಶಲ್ಯ ಧರಿಸಿ ವೋಟ್‌ ಹಾಕಲು ಬಂದಿದ್ದರು. ಇವರು ವೋಟ್‌ ಚಲಾಯಿಸಿದ ಬಳಿಕ ತಮ್ಮ ಮನೆಯವರೊಂದಿಗೆ ಫೋಟೊಗೆ ಪೋಸ್‌ ನೀಡಿದ್ರು
(7 / 11)

ಸುರೇಶ್‌ ಕುಮಾರ್‌ ತಮ್ಮ ಕುಟುಂಬದವರ ಜೊತೆಗೆ ಬಂದು ಮತ ಚಲಾಯಿಸಿದರು. 
(8 / 11)
ಸುರೇಶ್‌ ಕುಮಾರ್‌ ತಮ್ಮ ಕುಟುಂಬದವರ ಜೊತೆಗೆ ಬಂದು ಮತ ಚಲಾಯಿಸಿದರು. 
ಸುತ್ತೂರು ಮಠದ ಕಿರಿಯ ಶ್ರೀಗಳಾದ ಶ್ರೀ ಜಯರಾಜೇಂದ್ರ ಸ್ವಾಮಿಗಳು, ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನಲ್ಲಿ ಮತ ಚಲಾಯಿಸಿದರು.
(9 / 11)

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಸೇಂಟ್ ಮೇರಿಸ್ ಶಾಲೆಯ ಬೂತ್ ನಂಬರ್ 236 ರಲ್ಲಿ ಮತ ಚಲಾಯಿಸಿದ ರಾಮದಾಸ್.
(10 / 11)

ಮೈಸೂರಿನ ಅವಧೂತ ದತ್ತ ಪೀಠಾಧಿಪತಿ,  ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನ ಬೂತ್ ನಂಬರ್ 237ರಲ್ಲಿ ತಮ್ಮ ಮತ ಚಲಾಯಿಸಿದರು.
(11 / 11)

    ಹಂಚಿಕೊಳ್ಳಲು ಲೇಖನಗಳು