logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೋಕಸಭೆ ಚುನಾವಣೆಗೆ ನೋಂದಾಯಿತ ಒಟ್ಟು ಮತದಾರರು, ಮತಗಟ್ಟೆ, ಇವಿಎಂ ಸಂಪೂರ್ಣ ಮಾಹಿತಿ ಇಲ್ಲಿದೆ; -Lok Sabha Election 2024

ಲೋಕಸಭೆ ಚುನಾವಣೆಗೆ ನೋಂದಾಯಿತ ಒಟ್ಟು ಮತದಾರರು, ಮತಗಟ್ಟೆ, ಇವಿಎಂ ಸಂಪೂರ್ಣ ಮಾಹಿತಿ ಇಲ್ಲಿದೆ; -Lok Sabha Election 2024

Mar 16, 2024 06:02 PM IST

Lok Sabha Elections 2024: ಈ ಬಾರಿಯ ಲೋಕಸಭೆ ಚುನಾವಣೆಗೆ ನೋಂದಾಯಿತ 96.8 ಕೋಟಿ ಮತದಾರರು ಇದ್ದಾರೆ. ಪುರುಷ, ಮಹಿಳಾ ಮತದಾರರು, ಮತಗಟ್ಟೆಗಳು, ಭದ್ರತಾ ಸಿಬ್ಬಂದಿಯ ವಿವರ ಇಲ್ಲಿದೆ. 

  • Lok Sabha Elections 2024: ಈ ಬಾರಿಯ ಲೋಕಸಭೆ ಚುನಾವಣೆಗೆ ನೋಂದಾಯಿತ 96.8 ಕೋಟಿ ಮತದಾರರು ಇದ್ದಾರೆ. ಪುರುಷ, ಮಹಿಳಾ ಮತದಾರರು, ಮತಗಟ್ಟೆಗಳು, ಭದ್ರತಾ ಸಿಬ್ಬಂದಿಯ ವಿವರ ಇಲ್ಲಿದೆ. 
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ದೇಶದಲ್ಲಿರುವ ಒಟ್ಟು ನೋಂದಾಯಿತ ಮತದಾರರು, ಇವಿಎಂಗಳು ಹಾಗೂ ಮತಗಟ್ಟೆಗಳ ಮಾಹಿತಿಯನ್ನು ನೀಡಿದ್ದಾರೆ. 
(1 / 7)
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ದೇಶದಲ್ಲಿರುವ ಒಟ್ಟು ನೋಂದಾಯಿತ ಮತದಾರರು, ಇವಿಎಂಗಳು ಹಾಗೂ ಮತಗಟ್ಟೆಗಳ ಮಾಹಿತಿಯನ್ನು ನೀಡಿದ್ದಾರೆ. 
2024ರ ಲೋಕಸಭೆ ಚುನಾವಣೆಗೆ ಒಟ್ಟು 96.8 ಕೋಟಿ ನೋಂದಾಯಿತ ಮತದಾರರು ಇದ್ದಾರೆ. ಇದರಲ್ಲಿ 49.7 ಕೋಟಿ ಪುರುಷರು ಹಾಗೂ 47.1 ಮಹಿಳಾ ವೋಟರ್ಸ್ ಇದ್ದಾರೆ. 1.8 ಕೋಟಿ ಮಂದಿ ಮೊದಲ ಬಾರಿಗೆ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. 
(2 / 7)
2024ರ ಲೋಕಸಭೆ ಚುನಾವಣೆಗೆ ಒಟ್ಟು 96.8 ಕೋಟಿ ನೋಂದಾಯಿತ ಮತದಾರರು ಇದ್ದಾರೆ. ಇದರಲ್ಲಿ 49.7 ಕೋಟಿ ಪುರುಷರು ಹಾಗೂ 47.1 ಮಹಿಳಾ ವೋಟರ್ಸ್ ಇದ್ದಾರೆ. 1.8 ಕೋಟಿ ಮಂದಿ ಮೊದಲ ಬಾರಿಗೆ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. (ECI)
ದೇಶದಲ್ಲಿ ಒಟ್ಟು 10.5 ಲಕ್ಷ ಮತಗಟ್ಟೆಗಳಿದ್ದು, 1.5 ಕೋಟಿ ಚುನಾವಣಾ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಇದ್ದಾರೆ. ಮತದಾನ ನಡೆಸಲು 55 ಲಕ್ಷ ಇವಿಎಂಗಳು ಹಾಗೂ 4 ಲಕ್ಷ ವಾಹನಗಳಿವೆ.
(3 / 7)
ದೇಶದಲ್ಲಿ ಒಟ್ಟು 10.5 ಲಕ್ಷ ಮತಗಟ್ಟೆಗಳಿದ್ದು, 1.5 ಕೋಟಿ ಚುನಾವಣಾ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಇದ್ದಾರೆ. ಮತದಾನ ನಡೆಸಲು 55 ಲಕ್ಷ ಇವಿಎಂಗಳು ಹಾಗೂ 4 ಲಕ್ಷ ವಾಹನಗಳಿವೆ.(ECI)
ಏಪ್ರಿಲ್ 1ಕ್ಕೆ ಅನ್ವಯವಾಗುವಂತೆ 18 ವರ್ಷ ತುಂಬುವ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಂಡು ಈ ಭಾರಿಯ ವಿಧಾನಸಭೆಗಳ ಉಪ ಚುನಾವಣೆ, 4 ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ಮತದಾನ ಮಾಡಬಹುದು.
(4 / 7)
ಏಪ್ರಿಲ್ 1ಕ್ಕೆ ಅನ್ವಯವಾಗುವಂತೆ 18 ವರ್ಷ ತುಂಬುವ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಂಡು ಈ ಭಾರಿಯ ವಿಧಾನಸಭೆಗಳ ಉಪ ಚುನಾವಣೆ, 4 ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ಮತದಾನ ಮಾಡಬಹುದು.
ದೇಶದ 12 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು ಇದ್ದಾರೆ. ಒಟ್ಟಾರೆ 85.3 ಲಕ್ಷ ಮಹಿಳಾ ಮತದಾರರು 18 ರಿಂದ 19 ವರ್ಷದೊಳಗಿನವರಾಗಿದ್ದಾರೆ.
(5 / 7)
ದೇಶದ 12 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು ಇದ್ದಾರೆ. ಒಟ್ಟಾರೆ 85.3 ಲಕ್ಷ ಮಹಿಳಾ ಮತದಾರರು 18 ರಿಂದ 19 ವರ್ಷದೊಳಗಿನವರಾಗಿದ್ದಾರೆ.
ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಚುನಾವಣಾ ಆಯೋಗ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಮಾದರಿಯ ಮತಗಟ್ಟೆಯನ್ನು ಸ್ಥಾಪಿಸಲಾಗುತ್ತದೆ. ಜೊತೆಗೆ ಅಂಗವಿಕಲರಿಗೆ ವಿಶೇಷ ವ್ಯವಸ್ಥೆ ಹಾಗೂ ಉನ್ನತ ಹುದ್ದೆಯಲ್ಲಿರುವ ಮಹಿಳೆಯರಿಗೆ ಮತಗಟ್ಟೆಯಲ್ಲಿ ವಿಶೇಷ ಗೌರವ ನೀಡಲಾಗುತ್ತದೆ.
(6 / 7)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್.. ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
(7 / 7)
ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್.. ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು