logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೋಕಸಭೆ ಚುನಾವಣೆ ಕಣಕ್ಕೆ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು, ಯಾವ ರಾಜ್ಯದಲ್ಲಿ ಯಾರು Photos

ಲೋಕಸಭೆ ಚುನಾವಣೆ ಕಣಕ್ಕೆ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು, ಯಾವ ರಾಜ್ಯದಲ್ಲಿ ಯಾರು photos

Apr 01, 2024 04:10 PM IST

ಚುನಾವಣೆಗೆ ಸ್ಪರ್ಧಿಸಲು ಭಾರತೀಯ ಪ್ರಜೆಗಳಿಗೆ ಅವಕಾಶವಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಧಿಕಾರಿಗಳೂ ಚುನಾವಣೆ ಅಖಾಡಕ್ಕೆ ಧುಮುಕುತ್ತಿದ್ದಾರೆ. ಈ ಟ್ರೆಂಡ್‌ ಹೆಚ್ಚುತ್ತಿದೆ. ಈ ಬಾರಿಯೂ ಲೋಕಸಭೆ ಚುನಾವಣೆಗೆ ಕರ್ನಾಟಕ, ತಮಿಳುನಾಡು, ತೆಲಂಗಾಣ ಸೇರಿ ಎಲ್ಲಾ ಪಕ್ಷಗಳು ಐಎಎಸ್‌, ಐಪಿಎಸ್‌ ಅಧಿಕಾರಿಗಳಿಎಗ ಮಣೆ ಹಾಕಿವೆ. ಈ ಕುರಿತು ಚಿತ್ರ ನೋಟ ಇಲ್ಲಿದೆ.

  • ಚುನಾವಣೆಗೆ ಸ್ಪರ್ಧಿಸಲು ಭಾರತೀಯ ಪ್ರಜೆಗಳಿಗೆ ಅವಕಾಶವಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಧಿಕಾರಿಗಳೂ ಚುನಾವಣೆ ಅಖಾಡಕ್ಕೆ ಧುಮುಕುತ್ತಿದ್ದಾರೆ. ಈ ಟ್ರೆಂಡ್‌ ಹೆಚ್ಚುತ್ತಿದೆ. ಈ ಬಾರಿಯೂ ಲೋಕಸಭೆ ಚುನಾವಣೆಗೆ ಕರ್ನಾಟಕ, ತಮಿಳುನಾಡು, ತೆಲಂಗಾಣ ಸೇರಿ ಎಲ್ಲಾ ಪಕ್ಷಗಳು ಐಎಎಸ್‌, ಐಪಿಎಸ್‌ ಅಧಿಕಾರಿಗಳಿಎಗ ಮಣೆ ಹಾಕಿವೆ. ಈ ಕುರಿತು ಚಿತ್ರ ನೋಟ ಇಲ್ಲಿದೆ.
ಕುಮಾರನಾಯ್ಕ್‌  ರಾಯಚೂರು( ಕರ್ನಾಟಕ/ ಕಾಂಗ್ರೆಸ್)//ಕುಮಾರನಾಯ್ಕ್‌ ಕರ್ನಾಟಕದಲ್ಲಿ ಮೂರು ದಶಕ ಕಾಲ ಐಎಎಸ್‌ ಅಧಿಕಾರಿಯಾಗಿ ಕೆಲಸ ಮಾಡಿದವರು. ಬೆಳಗಾವಿ, ರಾಯಚೂರು, ಮೈಸೂರು ಜಿಲ್ಲೆಗಳಲ್ಲಿ ಜಿಪಂ ಸಿಇಒ, ಡಿಸಿಯಾಗಿ ಕೆಲಸ ಮಾಡಿದವರು. ಆನಂತರ ಬೆಂಗಳೂರಿನಲ್ಲಿ ನಾನಾ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಅಪರ ಮುಖ್ಯ ಕಾರ್ಯದರ್ಶಿಯಲ್ಲಿದ್ದು ನಿವೃತ್ತರಾದವರು. ಈಗ ಕಾಂಗ್ರೆಸ್‌ ಸೇರಿ ರಾಯಚೂರಿನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 
(1 / 7)

ಅಣ್ಣಾಮಲೈ ಕೊಯಮತ್ತೂರು( ತಮಿಳುನಾಡು/‌ ಬಿಜೆಪಿ)//ಕರ್ನಾಟಕದಲ್ಲಿ ಖಡಕ್‌ ಐಪಿಎಸ್‌ ಅಧಿಕಾರಿಯೆಂದು ಹೆಸರು ಮಾಡಿದ್ದ ಅಣ್ಣಾಮಲೈ ಕಾರ್ಕಳ, ಉಡುಪಿ, ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಕೆಲಸ ಮಾಡಿದವರು. ಆನಂತರ ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಿ ತಮಿಳುನಾಡು ರಾಜಕೀಯ ಪ್ರವೇಶಿಸಿದವರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು ಸಂಘಟನೆಯಲ್ಲಿ ತೊಡಗಿದ್ದಾರೆ. ಮೂರು ವರ್ಷದ ಹಿಂದೆ ವಿಧಾನಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಲೋಕಸಭೆ ಚುನಾವಣೆಗೆ ಕೊಯಮತ್ತೂರು ಕ್ಷೇತ್ರದಿಂದ ಅಣ್ಣಾಮಲೈ ಕಣಕ್ಕೆ ಇಳಿದಿದ್ದಾರೆ. 
(2 / 7)

ಶಶಿಕಾಂತ್‌ ಸೇಂಥಿಲ್ ತಿರುವಳ್ಳೂರು( ತಮಿಳುನಾಡು/ ಕಾಂಗ್ರೆಸ್‌)//ಶಶಿಕಾಂತ್‌ ಸೇಂಥಿಲ್‌ ಮೂಲತಃ ತಮಿಳುನಾಡಿನವರು. ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿಯಾಗಿ ನಿಯೋಜನೆಗೊಂಡವರು. ಮಂಡ್ಯದಲ್ಲಿ ಪ್ರೊಬೆಷನರಿಯಾಗಿ ಬಳ್ಳಾರಿ ಎಸಿ, ರಾಯಚೂರು ಡಿಸಿಯಾಗಿ ಕೆಲಸ ಮಾಡಿದವರು. ಆನಂತರ  ವೈಚಾರಿಕ ಹಾಗೂ ದೇಶದ ಆಡಳಿತ ನೀತಿಗಳ ಬಗ್ಗೆ ಅಸಮಾಧಾನಗೊಂಡು ಐಎಎಸ್‌ ಹುದ್ದೆ ತೊರೆದವರು. ಐದು ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದು. ಈ ಬಾರಿ ಕಾಂಗ್ರೆಸ್‌ ತಮಿಳುನಾಡಿನಲ್ಲಿ ಅವರಿಗೆ ತಿರುವಳ್ಳೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಿದೆ.
(3 / 7)

ತರಂಜಿತ್‌ ಸಿಂಗ್‌ ಸಂಧು- ಅಮೃತಸರ( ಪಂಜಾಬ್‌/ಬಿಜೆಪಿ)//ಪಂಜಾಬ್‌ ಮೂಲದವರಾದ ತರಂಜಿತ್‌ ಸಿಂಗ್‌ ಸಂಧು ಅವರು ಭಾರತೀಯ ವಿದೇಶಾಂಗ ಸೇವೆ ಅಧಿಕಾರಿ. ಅಮೆರಿಕಾದಲ್ಲಿ ಭಾರತದ ರಾಯಭಾರಿಯಾಗಿಯೂ ಕೆಲಸ ಮಾಡಿದವರು. ಇದಲ್ಲದೇ ಭಾರತದಲ್ಲಿಯೇ ವಿವಿಧ ಹುದ್ದೆ ಅಲಂಕರಿಸಿದವರು. ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರನ್ನು ಪಂಜಾಬ್‌ ನ ಅಮೃತಸರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ನೇಮಿಸಿದೆ. ಇಲ್ಲಿ ನಟ ಸನ್ನಿಡಿಯೋಲ್‌ ಬಿಜೆಪಿ ಸಂಸದರಾಗಿದ್ದರು.
(4 / 7)

ದೇಬಶಿಶ್‌ ಧರ್‌- ಬಿರಬುಂ, ಪಶ್ಚಿಮ ಬಂಗಾಲ/ ಬಿಜೆಪಿ//ಪಶ್ಚಿಮ ಬಂಗಾಲದಲ್ಲಿ ಮೂರು ವರ್ಷದ ಹಿಂದೆ ಕೂಚ್‌ ಬೆಹಾರ್‌ ಜಿಲ್ಲೆ ಎಸ್ಪಿಯಾಗಿ ವಿವಾದ ಸೃಷ್ಟಿಸಿ ಅಮಾನತುಗೊಂಡಿದ್ದ ಐಪಿಎಸ್‌ ಅಧಿಕಾರಿ ದೇಬಶಿಶ್‌ ಧರ್‌ ಅವರು ಮಮತಾ ಬ್ಯಾನರ್ಜಿ ಕೆಂಗಣ್ಣಿಗೆ ಗುರಿಯಾಗಿದ್ದವರು. ಆನಂತರ ಅವರು ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡಿದ್ದರು. ಅವರಿಗೆ ಈ ಬಾರಿ ಪಶ್ಚಿಮ ಬಂಗಾಲದ ಬಿರಬುಂ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. 
(5 / 7)

ವೆಂಕಟರಮಣ ರೆಡ್ಡಿ ಮೇದಕ್‌( ತೆಲಂಗಾಣ/ ಬಿಆರ್‌ಎಸ್)//ತೆಲಂಗಾಣದ ಐಎಎಸ್‌ ಅಧಿಕಾರಿಯಾಗಿದ್ದ ಪರುಪತಿ ವೆಂಕಟ್ರಮಣ ರೆಡ್ಡಿ ಅವರು ವಿವಿಧ ಹುದ್ದೆಗಳಲ್ಲ ಕೆಲಸ ಮಾಡಿದವರು. ಸಿದ್ದಿಪೇಟೆ ಕಲೆಕ್ಟರ್‌ ಕೂಡ ಆಗಿದ್ದರು. ಆನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಆರ್‌ಎಸ್‌ ಪಕ್ಷ ಸೇರಿಕೊಂಡು ಎಂಎಲ್ಸಿ ಆಗಿದ್ದರು. ಈ ಬಾರಿ ಮೇದಕ್‌ ಕ್ಷೇತ್ರದಿಂದ  ಟಿಕೆಟ್‌ ನೀಡಲಾಗಿದೆ.
(6 / 7)

ಡಾ.ಆರ್.ಎಸ್.ಪ್ರವೀಣ್‌ ಕುಮಾರ್‌ ನಾಗರ ಕರ್ನೂಲು( ತೆಲಂಗಾಣ/ ಬಿಆರ್‌ಎಸ್‌)//ತೆಲಂಗಾಣದ ಮಾಜಿ ಐಪಿಎಸ್‌ ಅಧಿಕಾರಿ ಆರ್‌.ಎಸ್.ಪ್ರವೀಣ್‌ ಕುಮಾರ್‌ ಎಡಿಜಿಪಿ ಹುದ್ದೆಯಲ್ಲಿದ್ದವರು. ಎಸ್ಪಿ, ಐಜಿಯಾಗಿ ಕೆಲಸ ಮಾಡಿದವರು. ತೆಲಂಗಾಣ ಸಮಾಜ ಕಲ್ಯಾಣ ವಸತಿ ನಿಲಯಗಳ ಸಂಸ್ಥೆ ಸೊಸೈಟಿ ಕಾರ್ಯದರ್ಶಿಯಾಗಿ ಗಮನ ಸೆಳೆಯುವಂತಹ ಕೆಲಸ ಮಾಢಿದವರು. ಆನಂತರ ರಾಜೀನಾಮೆ ನೀಡಿ ಬಿಎಸ್ಪಿ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಬಿಆರ್‌ಎಸ್‌ ಸೇರಿ ನಾಗರಕರ್ನೂಲು ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. 
(7 / 7)

    ಹಂಚಿಕೊಳ್ಳಲು ಲೇಖನಗಳು