logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Samit Dravid: ಮಹಾರಾಜ ಟ್ರೋಫಿ ಹರಾಜು: ಭರ್ಜರಿ ಮೊತ್ತ ಖರೀದಿಯಾದ ರಾಹುಲ್ ದ್ರಾವಿಡ್ ಪುತ್ರ ಸಮಿತ್

Samit Dravid: ಮಹಾರಾಜ ಟ್ರೋಫಿ ಹರಾಜು: ಭರ್ಜರಿ ಮೊತ್ತ ಖರೀದಿಯಾದ ರಾಹುಲ್ ದ್ರಾವಿಡ್ ಪುತ್ರ ಸಮಿತ್

Jul 26, 2024 06:05 AM IST

Maharaja Trophy KSCA T20 auction: ಮಹಾರಾಜ ಟ್ರೋಫಿ ಕೆಎಸ್​​ಸಿಎ ಟಿ20 ಲೀಗ್​​ಗೆ ಸಂಬಂಧಿಸಿದ ಹರಾಜಿನಲ್ಲಿ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ಮೈಸೂರು ವಾರಿಯರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

  • Maharaja Trophy KSCA T20 auction: ಮಹಾರಾಜ ಟ್ರೋಫಿ ಕೆಎಸ್​​ಸಿಎ ಟಿ20 ಲೀಗ್​​ಗೆ ಸಂಬಂಧಿಸಿದ ಹರಾಜಿನಲ್ಲಿ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ಮೈಸೂರು ವಾರಿಯರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಜುಲೈ 25ರ ಗುರುವಾರ ನಡೆದ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಲೀಗ್‌ ಆಟಗಾರರ ಹರಾಜಿನಲ್ಲಿ ಭಾರತದ ಬ್ಯಾಟಿಂಗ್ ಲೆಜೆಂಡ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ಅವರನ್ನು ಮೈಸೂರು ವಾರಿಯರ್ಸ್ ಖರೀದಿಸಿದೆ.
(1 / 6)

ಟೀಮ್ ಇಂಡಿಯಾ ಹೆಡ್​​ಕೋಚ್ ಸ್ಥಾನದಿಂದ ನಿವೃತ್ತಿಯಾಗುತ್ತಿದ್ದಂತೆ, ಮಗ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಆಲ್​​ರೌಂಡರ್ ಸಮಿತ್​​ರನ್ನು ಮೈಸೂರು ಫ್ರಾಂಚೈಸಿ 50 ಸಾವಿರ ಕೊಟ್ಟು ತಂಡಕ್ಕೆ ಕರೆಸಿಕೊಂಡಿದೆ.
(2 / 6)

ಫ್ರಾಂಚೈಸಿಯ ಅಧಿಕಾರಿಯೊಬ್ಬರು, ಸಮಿತ್ ಅವರನ್ನು ತಂಡಕ್ಕೆ ಖರೀದಿಸಿದ್ದು, ಖುಷಿ ನೀಡಿದೆ. ಅವರು ಕೆಎಸ್‌ಸಿಎನಲ್ಲಿ ವಯೋಮಾನದ ತಂಡಗಳಲ್ಲಿ ಭರವಸೆಯ ಆಟ ಪ್ರದರ್ಶಿಸಿದ್ದಾರೆ ಎಂದಿದ್ದಾರೆ.
(3 / 6)

ಈ ಆವೃತ್ತಿಯ ಕೂಚ್ ಬೆಹಾರ್ ಟ್ರೋಫಿ ಗೆದ್ದ ಅಂಡರ್​-19 ಕರ್ನಾಟಕ ತಂಡದಲ್ಲಿ ಸಮಿತ್ ಕೂಡ ಸ್ಥಾನ ಪಡೆದಿದ್ದರು. ಲಂಕಾಶೇರ್ ಎದುರಿನ ಕೆಎಸ್‌ಸಿಎ ಇಲೆವೆನ್ ತಂಡದಲ್ಲೂ ಕಣಕ್ಕಿಳಿದಿದ್ದಾರೆ.
(4 / 6)

ಭಾರತೀಯ ವೇಗಿ ಪ್ರಸಿದ್ಧ್ ಕೃಷ್ಣ ಸಹ ಮೈಸೂರು ವಾರಿಯರ್ಸ್ ಭಾಗವಾಗಿದ್ದಾರೆ. ಅವರಿಗೆ  ₹ 1 ಲಕ್ಷ ನೀಡಿ ಖರೀದಿಸಲಾಗಿದೆ. ಆದರೆ ಫೆಬ್ರವರಿಯಲ್ಲಿ ಕ್ವಾಡ್ರೈಸ್ಪ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಾರಣ ಎ ವರ್ಗದಿಂದ ಬಿ ವರ್ಗಕ್ಕೆ ವರ್ಗಾಯಿಸಲಾಯಿತು.
(5 / 6)

ಮೈಸೂರು ವಾರಿಯರ್ಸ್ ಅಂತಿಮ ತಂಡ: ಕರುಣ್ ನಾಯರ್ (ನಾಯಕ), ಸಿಎ ಕಾರ್ತಿಕ್, ಎಸ್​ಯು ಕಾರ್ತಿಕ್, ಮನೋಜ್ ಭಾಂಡಗೆ, ಜೆ ಸುಚಿತ್, ಕೆ ಗೌತಮ್, ವಿದ್ಯಾಧರ್ ಪಾಟೀಲ್, ಸಮಿತ್ ದ್ರಾವಿಡ್, ದೀಪಕ್ ದೇವಾಡಿಗ, ಸುಮಿತ್ ಕುಮಾರ್, ಸ್ಮಯನ್ ಶ್ರೀವಾಸ್ತವ, ವೆಂಕಟೇಶ್ ಎಂ, ಹರ್ಷಿಲ್ ಧರ್ಮಾನಿ, ಗೌತಮ್ ಮಿಶ್ರಾ, ಧನುಷ್ ಗೌಡ, ಜಾಸ್ಪರ್ ಇಜೆ , ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸರ್ಫರಾಜ್ ಅಶ್ರಫ್.
(6 / 6)

    ಹಂಚಿಕೊಳ್ಳಲು ಲೇಖನಗಳು