logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶ್ರೀರಂಗಪಟ್ಟಣ ದಸರಾದಲ್ಲಿ ಹ್ಯಾಟ್ರಿಕ್‌ ಹೀರೋ ಶಿವಣ್ಣ ಗಾನಮೋಡಿ, ವಾಸುವೈಭವ್‌ ಸಂಗೀತ ಸಂಜೆಗೆ ಜನ ಫಿದಾ

ಶ್ರೀರಂಗಪಟ್ಟಣ ದಸರಾದಲ್ಲಿ ಹ್ಯಾಟ್ರಿಕ್‌ ಹೀರೋ ಶಿವಣ್ಣ ಗಾನಮೋಡಿ, ವಾಸುವೈಭವ್‌ ಸಂಗೀತ ಸಂಜೆಗೆ ಜನ ಫಿದಾ

Oct 05, 2024 12:18 PM IST

 ಶ್ರೀರಂಗಪಟ್ಟಣ ದಸರಾವೂ ಈಗ ಪ್ರಮುಖ ಆಕರ್ಷಣೆ. ನಾಲ್ಕು ದಿನಗಳ ಕಾಲ ನಡೆಯುವ ಶ್ರೀರಂಗಪಟ್ಟಣ ದಸರಾದ ಮೊದಲ ದಿನ ಚಲನಚಿತ್ರ ತಾರೆಯರು ಮೆರಗು ನೀಡಿದರು. ಅದರ ಚಿತ್ರನೋಟ ಇಲ್ಲಿದೆ.

ಮಂಡ್ಯದ ಕಾವೇರಿ ತೀರದ ನಗರಿ ಹಾಗೂ ಐತಿಹಾಸಿಕ ಹಿನ್ನೆಲೆಯ ಶ್ರೀರಂಗಪಟ್ಟಣದಲ್ಲಿ ದಸರಾಕ್ಕೆ ಚಾಲನೆ ನೀಡಿದ ನಟ ಶಿವರಾಜಕುಮಾರ್‌ ಅವರನ್ನು ಆತ್ಮೀಯವಾಗಿ ಸಚಿವ ಚಲುವರಾಯ ಸ್ವಾಮಿ ಬರ ಮಾಡಿಕೊಂಡರು.
(1 / 9)

ಶಿವರಾಜಕುಮಾರ್‌ ಅವರು ಶ್ರೀರಂಗಪಟ್ಟಣ ದಸರಾದಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡಿ ನಂತರ ಸಂಜೆ ನಡೆದ ಕಾರ್ಯಕ್ರಮದಲ್ಲೂ ಭಾಗಿಯಾದರು.
(2 / 9)

ನನ್ನ ಬಹಳಷ್ಟು ಚಲನಚಿತ್ರಗಳನ್ನು ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ಶ್ರೀರಂಗಪಟ್ಟಣ ದಲ್ಲಿ ಅಭಿಮಾನಿಗಳು, ಬಂಧುಬಳಗ ಹೆಚ್ಚು, ಶ್ರೀರಂಗಪಟ್ಟಣ ಹಾಗೂ ಮೈಸೂರು  ನನಗೆ ಅದೃಷ್ಟದ ಸ್ಥಳಗಳಾಗಿದ್ದು, ಇಲ್ಲಿ ಮಾಡುವ ಚಲನಚಿತ್ರಗಳು ಯಶಸ್ವಿಯಾಗಿದೆ.  ಯಾವುದೇ ಜಾತಿ, ಮತ, ಪಂಥಗಳಿಗೆ ಹಬ್ಬ ಮೀಸಲಾಗದೇ ಎಲ್ಲರೂ ಒಟ್ಟಿಗೆ ಭಾಗವಹಿಸಿ ಆಚರಿಸುವ ಹಬ್ಬವೇ  ದಸರಾ ಹಬ್ಬ ಎಂದು ಶಿವಣ್ಣ ಭಾಷಣದಲ್ಲಿ ನೆನಪಿಸಿಕೊಂಡರು.
(3 / 9)

ಹಸಿದಾಗ ಅನ್ನ ದಣಿದಾಗ ನೀರು, ಇವನ್ಯಾರ ಮಗನೋ, ಯಾರೇ ಕೂಗಾಡಲಿ, ಗೊಂಬೆ ಹೇಳುತೈತೆ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು ಶಿವರಾಜಕುಮಾರ್‌.
(4 / 9)

ಮೊದಲ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜೋರಾಗಿಯೇ ಇದ್ದವು. ವಾಸುಕಿ ವೈಭವ್‌ ತಂಡ ಕಾರ್ಯಕ್ರಮ ನಡೆಸಿಕೊಟ್ಟಿತು.
(5 / 9)

ಹೊಸ ತಲೆಮಾರಿನ ಗಾಯಕ ಹಾಗೂ ಸಂಗೀತ ನಿರ್ದೇಶಕರಾದ ವಾಸುಕಿ ವೈಭವ್‌ ಹಲವಾರು ಗೀತೆಗಳನ್ನು ತಮ್ಮದೇ ಶೈಲಿಯಲ್ಲಿ ಪ್ರಸ್ತುತಪಡಿಸಿದರು.
(6 / 9)

ಶ್ರೀರಂಗಪಟ್ಟಣ ಮಾತ್ರವಲ್ಲದೇ ಮಂಡ್ಯ, ಮೈಸೂರು ಭಾಗಗದಿಂದಲೂ ಆಗಮಿಸಿದ್ದ ಸಂಗೀತಪ್ರಿಯರು ದಸರಾ ಕಾರ್ಯಕ್ರಮಲ್ಲಿ ಫಿದಾ ಆದರು.
(7 / 9)

ತಮ್ಮದೇ ಚಿತ್ರಗಳ ಹಲವು ಹಾಡುಗಳನ್ನು ವಾಸುಕಿ ಹಾಡಿದರು. ಬಡವ ರ್ಯಾಸ್ಕಲ್‌, ಉಪ್ಪುಹುಳಿ ಖಾರ ಸಹಿತ ಹಲವು ಗೀತೆಗಳು ರಂಜಿಸಿದವು.
(8 / 9)

ಹೃದಯ ಪಾಡು, ಹೃದಯವೇ ನೋಡು, ನಿನದೆ ನೆನಪು ಎನ್ನುವ ಪ್ರೇಮ ಗೀತೆಗಳನ್ನು ವಾಸುಕಿ ವೈಭವ್‌ ಹಾಡಿದರು.
(9 / 9)

    ಹಂಚಿಕೊಳ್ಳಲು ಲೇಖನಗಳು