logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Icc-asia Cup: ಏಷ್ಯಾಕಪ್, ಐಸಿಸಿ ಟೂರ್ನಿ ಇತಿಹಾಸದಲ್ಲಿ ಭಾರತದ ಪರ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರು; ಸಚಿನ್​ಗೇ ಇಲ್ಲ ಮೊದಲ ಸ್ಥಾನ

ICC-Asia Cup: ಏಷ್ಯಾಕಪ್, ಐಸಿಸಿ ಟೂರ್ನಿ ಇತಿಹಾಸದಲ್ಲಿ ಭಾರತದ ಪರ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರು; ಸಚಿನ್​ಗೇ ಇಲ್ಲ ಮೊದಲ ಸ್ಥಾನ

Aug 28, 2023 07:00 AM IST

Most Man Of the Match: ಏಷ್ಯಾಕಪ್​ ಮತ್ತು ಐಸಿಸಿ ಟೂರ್ನಿಗಳ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರು ಯಾರು ಎಂಬುದನ್ನು ಈ ಸುದ್ದಿಯಲ್ಲಿ ತಿಳಿಯೋಣ.

  • Most Man Of the Match: ಏಷ್ಯಾಕಪ್​ ಮತ್ತು ಐಸಿಸಿ ಟೂರ್ನಿಗಳ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರು ಯಾರು ಎಂಬುದನ್ನು ಈ ಸುದ್ದಿಯಲ್ಲಿ ತಿಳಿಯೋಣ.
ಏಷ್ಯಾಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಸ್ಟ್ 30ರಿಂದ ಶುರುವಾಗುವ ಏಕದಿನ ಮಾದರಿಯ ಏಷ್ಯಾಕಪ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಗಲಿದೆ. ಎಲ್ಲಾ ತಂಡಗಳು ಕೂಡ ಭರ್ಜರಿ ಸಿದ್ಧತೆ ನಡೆಸುತ್ತಿವೆ. ಅದರಂತೆ ಭಾರತ ತಂಡವು ಬೆಂಗಳೂರಿನ ಆಲೂರಿನಲ್ಲಿ ಸಿದ್ಧತೆ ಪೂರ್ವ ಸಿದ್ಧತಾ ಶಿಬಿರ ಆಯೋಜಿಸಿದೆ.
(1 / 12)

ಒಂದೆಡೆ ಬ್ಯಾಟರ್ಸ್ ರನ್ ಕೊಳ್ಳೆ ಹೊಡೆಯಲು ರಣಬೇಟೆಗೆ ರೆಡಿಯಾಗುತ್ತಿದ್ದರೆ, ಬೌಲರ್‌ಗಳು ಬ್ಯಾಟರ್ಸ್ ಗೆ ಚಳ್ಳೆ ಹಣ್ಣು ತಿನ್ನಿಸಲು ರಣ ತಂತ್ರ ರೂಪಿಸುತ್ತಿದ್ದಾರೆ. ಬ್ಯಾಟು-ಬಾಲ್ ನಡುವಿನ ಈ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
(2 / 12)

ಈ ಬ್ಯಾಟು-ಬಾಲ್ ನಡುವಿನ ಈ ಯುದ್ಧದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗುವುದೂ ಖಚಿತ. ಆದರೆ ಈ ಸುದ್ದಿಯಲ್ಲಿ ಏಷ್ಯಾಕಪ್ ಮತ್ತು ಐಸಿಸಿ ಎರಡೂ ಟೂರ್ನಮೆಂಟ್ ಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತೀಯ ಆಟಗಾರರು ಯಾರು ಎಂಬುದನ್ನು ತಿಳಿಯೋಣ.
(3 / 12)

ಐಸಿಸಿ ಮತ್ತು ಏಷ್ಯಾಕಪ್ ಎರಡೂ ಟೂರ್ನಮೆಂಟ್ ಗಳಲ್ಲಿ ವಿರಾಟ್ ಕೊಹ್ಲಿ 16 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ಭಾರತದ ಪರ ಅತಿ ಹೆಚ್ಚು ಪಂದ್ಯಶ್ರೇಷ್ಠ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯ ಕೊಹ್ಲಿ ಮುಂದೆ ಏಷ್ಯಾಕಪ್ ಮತ್ತು ವಿಶ್ವಕಪ್ ಟೂರ್ನಿಗಳಿದ್ದು, ತಮ್ಮ‌ ಅದ್ಬುತ ಪ್ರದರ್ಶನದ ಮೂಲಕ ಮತ್ತಷ್ಟು ಪ್ರಶಸ್ತಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.
(4 / 12)

ಕ್ರಿಕೆಟ್ ಲೋಕದ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್, ಬ್ಯಾಟಿಂಗ್ ಪಂಡಿತ, ಕ್ರಿಕೆಟ್ ದೇವರೆಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಒಟ್ಟು 12 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಸಚಿನ್ ದಾಖಲೆಯನ್ನು ರೋಹಿತ್ ಮುರಿಯುವ ಅವಕಾಶ ಹೆಚ್ಚಿದೆ.
(5 / 12)

ಟೀಮ್ ಇಂಡಿಯಾ ನಾಯಕ, ಹಿಟ್​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಐಸಿಸಿ ಮತ್ತು ಏಷ್ಯಾಕಪ್ ಇತಿಹಾಸದಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಅವರು ಒಟ್ಟು 10 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಎರಡೂ (ಏಷ್ಯಾಕಪ್, ವಿಶ್ವಕಪ್) ಮಹತ್ವದ ಟೂರ್ನಿಗಳಿದ್ದು, ಇನ್ನಷ್ಟು ಪ್ರಶಸ್ತಿ ಬಾಚಿಕೊಳ್ಳುವ ಸಾಧ್ಯತೆ ಇದೆ.
(6 / 12)

ಟೀಮ್ ಇಂಡಿಯಾ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರು ಮಹತ್ವದ ಟೂರ್ನಿಗಳಲ್ಲಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದರೆ 2011ರ ಏಕದಿನ ವಿಶ್ವಕಪ್. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ, ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದರು. ಸದ್ಯ ಅವರು ಐಸಿಸಿ-ಏಷ್ಯಾಕಪ್ ಚರಿತ್ರೆಯಲ್ಲಿ 9 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
(7 / 12)

ಭಾರತೀಯ ಕ್ರಿಕೆಟ್​ಗೆ ಹೊಸ ರೂಪ ಕೊಟ್ಟ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಪ್ರಮುಖ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅದರ‌ ಪರಿಣಾಮ ದಾದಾ ಅವರಿಗೆ ಒಟ್ಟು 8 ಪಂದ್ಯ ಪುರುಷೋತ್ತಮ ಪ್ರಶಸ್ತಿ ಸಿಕ್ಕಿದೆ‌. 
(8 / 12)

ಟೀಮ್‌ ಇಂಡಿಯಾದ ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಕೂಡ ಹೆಚ್ಚು ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಸೇರಿದ್ದಾರೆ. ಅವರು ಮಹತ್ವದ ಟೂರ್ನಿಗಳಲ್ಲಿ ತಂಡಕ್ಕೆ ಅಮೋಘ ಕಾಣಿಕೆ‌ ಕೊಟ್ಟಿರುವ ಗಬ್ಬರ್, ಈವರೆಗೂ 7 ಬಾರಿ ಈ ಪ್ರಶಸ್ತಿಯನ್ನು‌ ಮುಡಿಗೇರಿಸಿಕೊಂಡಿದ್ದಾರೆ.‌ ಸದ್ಯ ಧವನ್ ಏಕದಿನ ವಿಶ್ವಕಪ್ ಆಯ್ಕೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರು ಆಯ್ಕೆಯಾಗುವುದು ಅನುಮಾನ.
(9 / 12)

ಭಾರತದ ಅಮೇಜಿಂಗ್ ಆಲ್ ರೌಂಡರ್ ಎಂದೇ ಕರೆಸಿಕೊಳ್ಳುವ ರವೀಂದ್ರ ಜಡೇಜಾ, ಬೌಲಿಂಗ್-ಬ್ಯಾಟಿಂಗ್ ಮೂಲಕ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಆ ಮೂಲಕ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಫೀಲ್ಡಿಂಗ್ ‌ನಿಂದಲೂ ವಿಶ್ವದ ಗಮನ ಸೆಳೆದಿರುವ ಜಡ್ಡು ಈವರೆಗೂ  6 ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
(10 / 12)

ಮಧ್ಯಮ‌ ಮತ್ತು ಕೆಳ ಕ್ರಮಾಂಕದಲ್ಲಿ ಭರವಸೆಯ ಬ್ಯಾಟಿಂಗ್ ನಡೆಸುತ್ತಿದ್ದ ಎಡಗೈ ಆಟಗಾರ ಸುರೇಶ್ ರೈನಾ, ಮಹತ್ವದ ಸಂದರ್ಭದಲ್ಲಿ ತಂಡದ ಕೈಹಿಡಿದ ಉದಾಹರಣೆಗಳೇ ಹೆಚ್ಚು. ಒತ್ತಡವನ್ನು ಅದ್ಭುತವಾಗಿ ನಿಭಾಯಿಸುತ್ತಿದ್ದ ಮತ್ತು ಅದ್ಭುತ ಫೀಲ್ಡರ್ ಕೂಡ ಆಗಿದ್ದ ರೈನಾ 5 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. 
(11 / 12)

ಸ್ಫೋಟಕ‌ ಬ್ಯಾಟಿಂಗ್ ಮೂಲಕ ಬೌಲರ್‌ಗಳ ಎದೆ ನಡುಗಿಸುತ್ತಿದ್ದ ವೀರೇಂದ್ರ ಸೆಹ್ವಾಗ್ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಅವರು ಐಸಿಸಿ ಮತ್ತು ಏಷ್ಯಾಕಪ್ ಟೂರ್ನಿಯ ಇತಿಹಾಸದಲ್ಲಿ 5 ಬಾರಿ ಪಂದ್ಯಪುರುಷ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
(12 / 12)

    ಹಂಚಿಕೊಳ್ಳಲು ಲೇಖನಗಳು