logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2023ರಲ್ಲಿ ಅತಿ ಹೆಚ್ಚು ಏಕದಿನ ವಿಕೆಟ್ ಕಬಳಿಸಿದ ಬೌಲರ್‌ಗಳು; ಅಗ್ರ ಮೂವರು ಭಾರತೀಯರು

2023ರಲ್ಲಿ ಅತಿ ಹೆಚ್ಚು ಏಕದಿನ ವಿಕೆಟ್ ಕಬಳಿಸಿದ ಬೌಲರ್‌ಗಳು; ಅಗ್ರ ಮೂವರು ಭಾರತೀಯರು

Dec 27, 2023 07:01 PM IST

Most ODI Wickets In 2023: 2023ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದವರು ಯಾರು? ಅಗ್ರ ಹತ್ತು ಬೌಲರ್‌ಗಳ ಪಟ್ಟಿ ಇಲ್ಲಿದೆ.

  • Most ODI Wickets In 2023: 2023ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದವರು ಯಾರು? ಅಗ್ರ ಹತ್ತು ಬೌಲರ್‌ಗಳ ಪಟ್ಟಿ ಇಲ್ಲಿದೆ.
2023ರಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಬೌಲಿಂಗ್‌ನಲ್ಲಿಯೂ ಭಾರತೀಯ ಕ್ರಿಕೆಟಿಗರು ಪ್ರಾಬಲ್ಯ ಮೆರೆದಿದ್ದಾರೆ. ಭಾರತದ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2023ರಲ್ಲಿ ಏಕದಿನ ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಮೂರು ಬ್ಯಾಟರ್‌ಗಳಾಗಿದ್ದಾರೆ. ಗಮನಾರ್ಹ ಅಂಶವೆಂದರೆ, ವರ್ಷವಿಡೀ ಅತಿ ಹೆಚ್ಚು ಏಕದಿನ ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂವರು ಭಾರತೀಯ ಬೌಲರ್‌ಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ.
(1 / 6)
2023ರಲ್ಲಿ ನಡೆದ ಏಕದಿನ ಪಂದ್ಯಗಳಲ್ಲಿ ಬೌಲಿಂಗ್‌ನಲ್ಲಿಯೂ ಭಾರತೀಯ ಕ್ರಿಕೆಟಿಗರು ಪ್ರಾಬಲ್ಯ ಮೆರೆದಿದ್ದಾರೆ. ಭಾರತದ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2023ರಲ್ಲಿ ಏಕದಿನ ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಮೂರು ಬ್ಯಾಟರ್‌ಗಳಾಗಿದ್ದಾರೆ. ಗಮನಾರ್ಹ ಅಂಶವೆಂದರೆ, ವರ್ಷವಿಡೀ ಅತಿ ಹೆಚ್ಚು ಏಕದಿನ ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೂವರು ಭಾರತೀಯ ಬೌಲರ್‌ಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ.(AP)
ಸ್ಪಿನ್ನರ್ ಕುಲ್ದೀಪ್ ಯಾದವ್ 2023ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು 29 ಇನ್ನಿಂಗ್ಸ್‌ಗಳಲ್ಲಿ ಆಡಿ ಬರೋಬ್ಬರಿ 49 ವಿಕೆಟ್‌ಗಳನ್ನು ಪಡೆದಿದ್ದಾರೆ. ಕುಲ್ದೀಪ್ 2 ಬಾರಿ 4 ವಿಕೆಟ್ ಮತ್ತು1 ಬಾರಿ 5 ವಿಕೆಟ್ ಕಬಳಿಸಿದ್ದಾರೆ.
(2 / 6)
ಸ್ಪಿನ್ನರ್ ಕುಲ್ದೀಪ್ ಯಾದವ್ 2023ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು 29 ಇನ್ನಿಂಗ್ಸ್‌ಗಳಲ್ಲಿ ಆಡಿ ಬರೋಬ್ಬರಿ 49 ವಿಕೆಟ್‌ಗಳನ್ನು ಪಡೆದಿದ್ದಾರೆ. ಕುಲ್ದೀಪ್ 2 ಬಾರಿ 4 ವಿಕೆಟ್ ಮತ್ತು1 ಬಾರಿ 5 ವಿಕೆಟ್ ಕಬಳಿಸಿದ್ದಾರೆ.(ANI)
2023ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಎರಡನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ವೇಗಿ ವರ್ಷವಿಡೀ 24 ಏಕದಿನ ಇನ್ನಿಂಗ್ಸ್‌ಗಳಲ್ಲಿ 44 ವಿಕೆಟ್‌ ಕಲೆಹಾಕಿದ್ದಾರೆ. ಅವರು 2 ಬಾರಿ 4 ವಿಕೆಟ್ ಮತ್ತು 1 ಬಾರಿ 5 ವಿಕೆಟ್ ಗೊಂಚಲನ್ನು ಪಡೆದಿದಾರೆ.
(3 / 6)
2023ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಎರಡನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ವೇಗಿ ವರ್ಷವಿಡೀ 24 ಏಕದಿನ ಇನ್ನಿಂಗ್ಸ್‌ಗಳಲ್ಲಿ 44 ವಿಕೆಟ್‌ ಕಲೆಹಾಕಿದ್ದಾರೆ. ಅವರು 2 ಬಾರಿ 4 ವಿಕೆಟ್ ಮತ್ತು 1 ಬಾರಿ 5 ವಿಕೆಟ್ ಗೊಂಚಲನ್ನು ಪಡೆದಿದಾರೆ.(AFP)
2023ರಲ್ಲಿ, ಮೊಹಮ್ಮದ್ ಶಮಿ ಕೇವಲ 19 ಏಕದಿನ ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್‌ ಮಾಡಿ ಮೂರನೇ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಇವರ ಕಬಳಿಕೆ 43 ವಿಕೆಟ್. 1 ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದ, ಬರೋಬ್ಬರಿ 4 ಬಾರಿ 5 ವಿಕೆಟ್ ಗೊಂಚಲನ್ನು ಪಡೆದರು.
(4 / 6)
2023ರಲ್ಲಿ, ಮೊಹಮ್ಮದ್ ಶಮಿ ಕೇವಲ 19 ಏಕದಿನ ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್‌ ಮಾಡಿ ಮೂರನೇ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಇವರ ಕಬಳಿಕೆ 43 ವಿಕೆಟ್. 1 ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದ, ಬರೋಬ್ಬರಿ 4 ಬಾರಿ 5 ವಿಕೆಟ್ ಗೊಂಚಲನ್ನು ಪಡೆದರು.(PTI)
ನೇಪಾಳದ ಸಂದೀಪ್ ಲಮಿಶಾನೆ (21 ಇನ್ನಿಂಗ್ಸ್‌ಗಳಲ್ಲಿ 43 ವಿಕೆಟ್) ಪಡೆಯುವ ಮೂಲಕ 2023ರಲ್ಲಿ ಅತಿ ಹೆಚ್ಚು ಏಕದಿನ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಶಾಹೀನ್ ಅಫ್ರಿದಿ ಐದನೇ ಸ್ಥಾನದಲ್ಲಿದ್ದಾರೆ. ಇವರ ಸಾಧನೆ 21 ಇನ್ನಿಂಗ್ಸ್‌ಗಳಲ್ಲಿ 42 ವಿಕೆಟ್.
(5 / 6)
ನೇಪಾಳದ ಸಂದೀಪ್ ಲಮಿಶಾನೆ (21 ಇನ್ನಿಂಗ್ಸ್‌ಗಳಲ್ಲಿ 43 ವಿಕೆಟ್) ಪಡೆಯುವ ಮೂಲಕ 2023ರಲ್ಲಿ ಅತಿ ಹೆಚ್ಚು ಏಕದಿನ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಶಾಹೀನ್ ಅಫ್ರಿದಿ ಐದನೇ ಸ್ಥಾನದಲ್ಲಿದ್ದಾರೆ. ಇವರ ಸಾಧನೆ 21 ಇನ್ನಿಂಗ್ಸ್‌ಗಳಲ್ಲಿ 42 ವಿಕೆಟ್.(AFP)
ಪಾಕಿಸ್ತಾನದ ಹ್ಯಾರಿಸ್ ರೌಫ್ (22 ಇನ್ನಿಂಗ್ಸ್‌ನಲ್ಲಿ 40 ವಿಕೆಟ್), ಆಸ್ಟ್ರೇಲಿಯಾದ ಆಡಮ್ ಜಂಪಾ (20 ಇನ್ನಿಂಗ್ಸ್‌ನಲ್ಲಿ 38 ವಿಕೆಟ್), ಶ್ರೀಲಂಕಾದ ಮಹಿಷ್ ತೀಕ್ಷಣಾ (23 ಇನ್ನಿಂಗ್ಸ್‌ನಲ್ಲಿ 37 ವಿಕೆಟ್), ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ (20 ಇನ್ನಿಂಗ್ಸ್‌ಗಳಲ್ಲಿ 33 ವಿಕೆಟ್‌ಗಳು) ಮತ್ತು ಬಾಂಗ್ಲಾದೇಶದ ಶರೀಫುಲ್ ಇಸ್ಲಾಮ್ (19 ಇನ್ನಿಂಗ್ಸ್‌ಗಳಲ್ಲಿ 32 ವಿಕೆಟ್‌ಗಳು) ಕ್ರಮವಾಗಿ 6 ​​ರಿಂದ 10ನೇ ಸ್ಥಾನದಲ್ಲಿದ್ದಾರೆ.
(6 / 6)
ಪಾಕಿಸ್ತಾನದ ಹ್ಯಾರಿಸ್ ರೌಫ್ (22 ಇನ್ನಿಂಗ್ಸ್‌ನಲ್ಲಿ 40 ವಿಕೆಟ್), ಆಸ್ಟ್ರೇಲಿಯಾದ ಆಡಮ್ ಜಂಪಾ (20 ಇನ್ನಿಂಗ್ಸ್‌ನಲ್ಲಿ 38 ವಿಕೆಟ್), ಶ್ರೀಲಂಕಾದ ಮಹಿಷ್ ತೀಕ್ಷಣಾ (23 ಇನ್ನಿಂಗ್ಸ್‌ನಲ್ಲಿ 37 ವಿಕೆಟ್), ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸೆನ್ (20 ಇನ್ನಿಂಗ್ಸ್‌ಗಳಲ್ಲಿ 33 ವಿಕೆಟ್‌ಗಳು) ಮತ್ತು ಬಾಂಗ್ಲಾದೇಶದ ಶರೀಫುಲ್ ಇಸ್ಲಾಮ್ (19 ಇನ್ನಿಂಗ್ಸ್‌ಗಳಲ್ಲಿ 32 ವಿಕೆಟ್‌ಗಳು) ಕ್ರಮವಾಗಿ 6 ​​ರಿಂದ 10ನೇ ಸ್ಥಾನದಲ್ಲಿದ್ದಾರೆ.(ANI)

    ಹಂಚಿಕೊಳ್ಳಲು ಲೇಖನಗಳು