logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತದ ಪರ ಅತ್ಯಧಿಕ ಟೆಸ್ಟ್ ರನ್; ಲಕ್ಷ್ಮಣ್​​ರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಜಿಗಿದ ವಿರಾಟ್ ಕೊಹ್ಲಿ

ಭಾರತದ ಪರ ಅತ್ಯಧಿಕ ಟೆಸ್ಟ್ ರನ್; ಲಕ್ಷ್ಮಣ್​​ರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಜಿಗಿದ ವಿರಾಟ್ ಕೊಹ್ಲಿ

Dec 29, 2023 01:08 PM IST

Most Test Runs For India: ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ, ಭಾರತದ ಪರ ಅತ್ಯಧಿಕ ಟೆಸ್ಟ್​ ಗಳಿಸಿದ ಆಟಗಾರರ ಪೈಕಿ 4ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಟೆಸ್ಟ್​ ಸ್ಪೆಷಲಿಸ್ಟ್​ ವಿವಿಎಸ್ ಲಕ್ಷ್ಮಣ್​ರನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದ್ದಾರೆ.

  • Most Test Runs For India: ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ, ಭಾರತದ ಪರ ಅತ್ಯಧಿಕ ಟೆಸ್ಟ್​ ಗಳಿಸಿದ ಆಟಗಾರರ ಪೈಕಿ 4ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಟೆಸ್ಟ್​ ಸ್ಪೆಷಲಿಸ್ಟ್​ ವಿವಿಎಸ್ ಲಕ್ಷ್ಮಣ್​ರನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದ್ದಾರೆ.
ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 76 ರನ್​ಗಳ ಇನ್ನಿಂಗ್ಸ್​ ಕಟ್ಟಿದರು. ಆ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಮತ್ತೊಂದು ದಾಖಲೆ ಬರೆದರು. ಭಾರತ ತಂಡದ ಪರ ಟೆಸ್ಟ್​​ ಕ್ರಿಕೆಟ್​​ನಲ್ಲಿ ಅತ್ಯಧಿಕ ರನ್ ಕಲೆ ಹಾಕಿದ 4ನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.
(1 / 9)

ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿತ ಕಂಡ ಕಾರಣ ಟೆಸ್ಟ್​ ಸ್ಪೆಷಲಿಸ್ಟ್​ ವಿವಿಎಸ್ ಲಕ್ಷ್ಮಣ್ ಅವರು 5ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಈ ವರ್ಷ 2000+ ರನ್ ಗಳಿಸಿದ ಆಟಗಾರ ಎನಿಸಿಕೊಂಡ ವಿರಾಟ್, ಇದೀಗ ಮತ್ತೊಂದು ದಾಖಲೆ ಮೂಲಕ ಗಮನ ಸೆಳೆದಿದ್ದಾರೆ.
(2 / 9)

ಸೆಂಚುರಿಯನ್​​​​ ಟೆಸ್ಟ್​ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ 64 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 38 ರನ್ ಗಳಿಸಿ ಔಟಾದರು. 2ನೇ ಇನ್ನಿಂಗ್ಸ್‌ನಲ್ಲಿ 82 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದರು. ಹಾಗಾಗಿ ಎರಡು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 114 ರನ್ ಕಲೆ ಹಾಕಿದರು.
(3 / 9)

ಈ ಪಂದ್ಯದಲ್ಲಿ 114 ರನ್ ಗಳಿಸಿದ ನಂತರ ಕೊಹ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ 8790 ರನ್ ಕಲೆ ಹಾಕಿದಂತಾಯಿತು. 112 ಟೆಸ್ಟ್​ ಪಂದ್ಯಗಳ 189 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿರುವ ಕಿಂಗ್, 49.38 ಸರಾಸರಿಯಲ್ಲಿ ಇಷ್ಟು ರನ್ ಗಳಿಸಿದ್ದಾರೆ. ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 
(4 / 9)

ಸಚಿನ್ ತೆಂಡೂಲ್ಕರ್ ಭಾರತದ ಪರ ಅತ್ಯಧಿಕ ಟೆಸ್ಟ್ ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಭಾರತವಲ್ಲದೆ ವಿಶ್ವದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಹೊಂದಿದ್ದಾರೆ. 200 ಟೆಸ್ಟ್‌ಗಳ 329 ಇನ್ನಿಂಗ್ಸ್‌ಗಳಲ್ಲಿ 53.78 ಸರಾಸರಿಯಲ್ಲಿ 15921 ರನ್ ಗಳಿಸಿದ್ದಾರೆ. 51 ಶತಕ, 68 ಅರ್ಧಶತಕ ಸಿಡಿಸಿದ್ದಾರೆ.
(5 / 9)

ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ದ್ರಾವಿಡ್ ಭಾರತದ ಪರ ಟೆಸ್ಟ್ ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಎರಡನೇ ಆಟಗಾರ. 163 ಟೆಸ್ಟ್‌ಗಳ 284 ಇನ್ನಿಂಗ್ಸ್‌ಗಳಲ್ಲಿ 52.63 ಸರಾಸರಿಯಲ್ಲಿ 13265 ರನ್ ಗಳಿಸಿದ್ದಾರೆ. 
(6 / 9)

ಭಾರತದ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ 3ನೇ ಸ್ಥಾನದಲ್ಲಿದ್ದಾರೆ. ಅವರು 125 ಟೆಸ್ಟ್‌ಗಳ 214 ಇನ್ನಿಂಗ್ಸ್‌ಗಳಲ್ಲಿ 51.12 ಸರಾಸರಿಯಲ್ಲಿ 10122 ರನ್ ಗಳಿಸಿದ್ದಾರೆ.
(7 / 9)

ವಿವಿಎಸ್ ಲಕ್ಷ್ಮಣ್ ಭಾರತ ಪರ 134 ಟೆಸ್ಟ್‌ಗಳ 225 ಇನ್ನಿಂಗ್ಸ್‌ಗಳಲ್ಲಿ 45.97 ಸರಾಸರಿಯಲ್ಲಿ 8781 ರನ್ ಗಳಿಸಿದ್ದಾರೆ. 17 ಶತಕ, 56 ಅರ್ಧಶತಕ ಸಿಡಿಸಿದ್ದಾರೆ. ಸದ್ಯಕ್ಕೆ ಅವರು ಈ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.
(8 / 9)

ಇದೇ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಕ್ಯಾಲೆಂಡರ್​ ವರ್ಷದಲ್ಲಿ 2000+ ರನ್ ಪೂರೈಸಿದ್ದಾರೆ. ಆ ಮೂಲಕ ಅತ್ಯಧಿಕ ಬಾರಿ ಈ ಸಾಧನೆ ಮಾಡಿದ್ದ ಕುಮಾರ್ ಸಂಗಕ್ಕಾರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ 7 ಬಾರಿ ಒಂದು ವರ್ಷದಲ್ಲಿ 2000+ ರನ್ ಗಳಿಸಿದ ದಾಖಲೆ ಬರೆದಿದ್ದಾರೆ.
(9 / 9)

    ಹಂಚಿಕೊಳ್ಳಲು ಲೇಖನಗಳು