logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Motivational Story: 10ನೇ ತರಗತಿಯಲ್ಲಿ ಫೇಲಾದವರು ಇಂದು ಸ್ಟಾರ್​ ಕ್ರಿಕೆಟರ್ಸ್​​; ಪರೀಕ್ಷೆಯಲ್ಲಿ ಸೋತು ಜೀವನದಲ್ಲಿ ಗೆದ್ದವರ ಯಶೋಗಾಥೆ ಇದು

Motivational Story: 10ನೇ ತರಗತಿಯಲ್ಲಿ ಫೇಲಾದವರು ಇಂದು ಸ್ಟಾರ್​ ಕ್ರಿಕೆಟರ್ಸ್​​; ಪರೀಕ್ಷೆಯಲ್ಲಿ ಸೋತು ಜೀವನದಲ್ಲಿ ಗೆದ್ದವರ ಯಶೋಗಾಥೆ ಇದು

May 08, 2023 12:09 PM IST

ಕರ್ನಾಟಕ ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಫಲಿತಾಂಶ (SSLC Results) ಪ್ರಕಟಗೊಂಡಿದೆ. ಹೆಚ್ಚು ಅಂಕ ಪಡೆದವರು ಸಂಭ್ರಮಿಸುತ್ತಿದ್ದರೆ, ಪರೀಕ್ಷಾ ಫಲಿತಾಂಶದಲ್ಲಿ ಕಡಿಮೆ ಅಂಕ ಬಂದವರು, ಫೇಲ್​ ಆದವರು ಚಿಂತೆಗೊಳಗಾಗಿದ್ದಾರೆ. ಅಂತಹ ಮಕ್ಕಳಿಗೆ ಈಗ ಬೇಕಾಗಿರುವುದು ಆತ್ಮಸ್ಥೈರ್ಯ, ಬೆಂಬಲ ಹಾಗೂ ಸ್ಪೂರ್ತಿ.

  • ಕರ್ನಾಟಕ ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಫಲಿತಾಂಶ (SSLC Results) ಪ್ರಕಟಗೊಂಡಿದೆ. ಹೆಚ್ಚು ಅಂಕ ಪಡೆದವರು ಸಂಭ್ರಮಿಸುತ್ತಿದ್ದರೆ, ಪರೀಕ್ಷಾ ಫಲಿತಾಂಶದಲ್ಲಿ ಕಡಿಮೆ ಅಂಕ ಬಂದವರು, ಫೇಲ್​ ಆದವರು ಚಿಂತೆಗೊಳಗಾಗಿದ್ದಾರೆ. ಅಂತಹ ಮಕ್ಕಳಿಗೆ ಈಗ ಬೇಕಾಗಿರುವುದು ಆತ್ಮಸ್ಥೈರ್ಯ, ಬೆಂಬಲ ಹಾಗೂ ಸ್ಪೂರ್ತಿ.
ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯ. ಅದರಲ್ಲೂ ಎಸ್​ಎಸ್​ಎಲ್​​ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇಕಡ 83.88 ಫಲಿತಾಂಶ ಬಂದಿದೆ. ಆದರೆ ಕೆಲವರು ಅನುತ್ತೀರ್ಣವಾಗಿ ನಾವು ಹಿಂದೆ ಬಿದ್ದೆವು ಎಂಬ ಚಿಂತೆಗೆ ಒಳಗಾಗಿದ್ದಾರೆ. ಒಂದು ಹಂತದಲ್ಲಿ ಹಿಂದೆ ಬಿದ್ದರೆ ಅಥವಾ ಫೇಲ್​ ಆದರೆ, ಧೈರ್ಯ ಎಂದೂ ಕಳೆದುಕೊಳ್ಳಬಾರದು.
(1 / 8)

ಫೇಲ್​ ಆಗಿದ್ದೇವೆಂದು ಎಂದಿಗೂ ಯಾರೂ ಧೃತಿಗೆಡಬಾರದು. ನಮ್ಮ ಜೀವನ ಇಷ್ಟೇ ನಿರ್ಧಾರ ತೆಗೆದುಕೊಳ್ಳಬಾರದು. ಎಷ್ಟೋ ಮಂದಿ ಎಸ್​​ಎಸ್​ಎಲ್​ಸಿ ಫೇಲ್​ ಆದರೂ, ಸಾಧನೆಯ ಶಿಖರವನ್ನೇರಿದ್ದಾರೆ. ಫೇಲ್​ ಆದ ಹೊರತಾಗಿಯೂ, ಜೀವನದಲ್ಲಿ ಸಾಧಿಸಿ ತೋರಿಸಿದ್ದಾರೆ. ಅದಕ್ಕೆ ಕ್ರಿಕೆಟಿಗರು ಕೂಡ ಹೊರತಾಗಿಲ್ಲ.
(2 / 8)

ಸಚಿನ್ ತೆಂಡೂಲ್ಕರ್.. ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಕ್ರಿಕೆಟ್​​ ಜನಗತ್ತಿನಲ್ಲಿ ಎಂದಿಗೂ ಅಜರಾಮರ. ಸಾವಿರಾರು ಯುವ ಕ್ರಿಕೆಟಿಗರಿಗೆ ಮಾದರಿ. ಕ್ರಿಕೆಟ್​ ದೇವರೆಂದೇ ಖ್ಯಾತಿ ಪಡೆದಿರುವ ಸಚಿನ್​, 10ನೇ ತರಗತಿಯಲ್ಲಿ ಫೇಲ್​ ಆಗಿದ್ದರು. ಕ್ರಿಕೆಟ್ ಆಡುವುದರಲ್ಲಿ ನಿರತರಾಗಿದ್ದ ಸಚಿನ್​ ಓದಿನ ಕಡೆ ಒಲವು ತೋರಿಸಲಿಲ್ಲ. ದಾಖಲೆಗಳ ಸಾಮ್ರಾಜ್ಯ ನಿರ್ಮಿಸಿರುವ ಸಚಿನ್​, ಭಾರತ ರತ್ನ ಗೌರವಕ್ಕೂ ಪಾತ್ರರಾಗಿದ್ದಾರೆ.
(3 / 8)
ಸಚಿನ್ ತೆಂಡೂಲ್ಕರ್.. ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಕ್ರಿಕೆಟ್​​ ಜನಗತ್ತಿನಲ್ಲಿ ಎಂದಿಗೂ ಅಜರಾಮರ. ಸಾವಿರಾರು ಯುವ ಕ್ರಿಕೆಟಿಗರಿಗೆ ಮಾದರಿ. ಕ್ರಿಕೆಟ್​ ದೇವರೆಂದೇ ಖ್ಯಾತಿ ಪಡೆದಿರುವ ಸಚಿನ್​, 10ನೇ ತರಗತಿಯಲ್ಲಿ ಫೇಲ್​ ಆಗಿದ್ದರು. ಕ್ರಿಕೆಟ್ ಆಡುವುದರಲ್ಲಿ ನಿರತರಾಗಿದ್ದ ಸಚಿನ್​ ಓದಿನ ಕಡೆ ಒಲವು ತೋರಿಸಲಿಲ್ಲ. ದಾಖಲೆಗಳ ಸಾಮ್ರಾಜ್ಯ ನಿರ್ಮಿಸಿರುವ ಸಚಿನ್​, ಭಾರತ ರತ್ನ ಗೌರವಕ್ಕೂ ಪಾತ್ರರಾಗಿದ್ದಾರೆ.(ICC Twitter)
ಹಾರ್ದಿಕ್ ಪಾಂಡ್ಯ ಅವರ ಜೀವನವೂ ಸ್ಫೂರ್ತಿದಾಯಕ ಕಥೆ. ಹಾರ್ದಿಕ್ ಅವರ ಕುಟುಂಬವೂ ತೀರಾ ಬಡತನದಿಂದ ಕೂಡಿತ್ತು. 9ನೇ ತರಗತಿಯಲ್ಲೇ ಫೇಲ್​ ಆಗಿ ತಮ್ಮ ಓದನ್ನು ಬಿಟ್ಟು ಕ್ರಿಕೆಟ್ ಆಡುತ್ತಿದ್ದರು. ಈಗ ಟೀಮ್​ ಇಂಡಿಯಾದ ನಾಯಕನಾಗಿದ್ದಾರೆ. ಐಪಿಎಲ್​ನಲ್ಲಿ ಗುಜರಾತ್ ತಂಡದ ಕ್ಯಾಪ್ಟನ್​ ಆಗಿದ್ದಾರೆ. ಆದರೆ ಈ ಸ್ಥಾನಕ್ಕೇರಬೇಕಾದರೆ ಎಷ್ಟು ಕಷ್ಟಪಟ್ಟಿರಬೇಡ ನೀವೇ ಯೋಚಿಸಿ.
(4 / 8)

ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಕೂಡ 10ನೇ ತರಗತಿಯಲ್ಲಿ 3 ಬಾರಿ ಫೇಲ್​ ಆಗಿದ್ದರು. ಪ್ರಸ್ತುತ ಕೃನಾಲ್​ ಭಾರತ-ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ದೇಶೀಯ ಕ್ರಿಕೆಟ್​​ನಲ್ಲಿ ಬರೋಡಾ ತಂಡದ ನಾಯಕನಾಗಿದ್ದರೆ, ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸದಸ್ಯರಾಗಿದ್ದಾರೆ. ಈಗ ಕೆಎಲ್​ ರಾಹುಲ್​ ಅಲಭ್ಯತೆಯಲ್ಲಿ ತಂಡದ ನಾಯಕನೂ ಆಗಿದ್ದಾರೆ.
(5 / 8)

ಐಎಎಸ್ ಅಂಜು ಶರ್ಮಾ ಅವರದ್ದು ಕೂಡ ರೋಚಕ ಕಥೆ. ಇವರು 10 ಮತ್ತು 12ರಲ್ಲಿ ಅನುತ್ತೀರ್ಣರಾಗಿದ್ದರು. ಎಸ್​ಎಸ್​ಎಲ್​ಸಿಯಲ್ಲಿ ರಸಾಯನಶಾಸ್ತ್ರದಲ್ಲಿ ಫೇಲ್​ ಆಗಿದ್ದರು. ಪಿಯುಸಿಯಲ್ಲಿ ಅರ್ಥಶಾಸ್ತ್ರದಲ್ಲಿ ಅನುತ್ತೀರ್ಣರಾಗಿದ್ದರು. ಮರು ಪರೀಕ್ಷೆಯಲ್ಲಿ ಪಾಸಾಗಿ ಗೋಲ್ಡ್ ಮೆಡಲಿಸ್ಟ್ ಆದರು. ಬಿ.ಎಸ್ಸಿ ಪೂರ್ಣಗೊಳಿಸಿ ಎಂಬಿಎ ಮಾಡಿದರು. ತನ್ನ 22ನೇ ವಯಸ್ಸಿನಲ್ಲಿ ಮೊದಲ ಬಾರಿಗೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿ ದಾಖಲೆ ಬರೆದರು.
(6 / 8)

ಐಪಿಎಸ್ ಮನೋಜ್ ಕುಮಾರ್ ಶರ್ಮಾ.. ಇವರು ಪಿಯುಸಿ (12ನೇ ತರಗತಿ) ಫೇಲ್ ಆಗಿ ಟೆಂಪೋ ಓಡಿಸುತ್ತಿದ್ದರು. ಭಿಕ್ಷುಕರೊಂದಿಗೆ ಮಲಗುತ್ತಿದ್ದರು. ಇಂತಹ ವ್ಯಕ್ತಿ ಐಪಿಎಸ್ ಆಗಿದ್ದೇ ಒಂದು ಪವಾಡ. ಮಧ್ಯಪ್ರದೇಶದ ಐಪಿಎಸ್ ಮನೋಜ್ ಕುಮಾರ್ ಶರ್ಮಾ ಕಲ್ಲು ಮುಳ್ಳಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಉನ್ನತ ಅಧಿಕಾರಕ್ಕೆ ಏರಿದರಷ್ಟೇ ನಿನ್ನ ಮದುವೆಯಾಗುವುದಾಗಿ ತನ್ನ ಪ್ರೇಯಸಿ ಹಾಕಿದ ಷರತ್ತಿನಿಂದ ಅವರು ಐಪಿಎಸ್​ ಅಧಿಕಾರಿಯಾದರು. ಇವರು ಎಂಥವರಿಗೂ ಸ್ಫೂರ್ತಿ.
(7 / 8)

ಇವರಷ್ಟೇ ಅಲ್ಲ, ಹೀಗೆ ಸ್ಫೂರ್ತಿಯಾದವರ ಸಂಖ್ಯೆ ಬಹಳಷ್ಟಿದೆ. ಫೇಲಾಗಿದ್ದೇವೆಂದು ಕೈಕಟ್ಟಿ ಕೂರಬಾರದು. ನಾವು ಅನುತ್ತೀರ್ಣರಾಗಿದ್ದೇವೆ ಎಂಬ ಚಿಂತೆ ಬೇಡ. ಧೈರ್ಯವಾಗಿ ಮುನ್ನುಗ್ಗಬೇಕು. ನೀವು ಫೇಲಾಗಿದ್ದು, ಪರೀಕ್ಷೆಯಲ್ಲಿ ಮಾತ್ರ. ಜೀವನದಲ್ಲಿ ಅಲ್ಲ ಎಂಬುದನ್ನು ಮರೆಯಬಾರದು. ಸತತ ಪ್ರಯತ್ನ ಮಾಡಬೇಕು. ಕಠಿಣ ಪರಿಶ್ರಮ ಹಾಕಬೇಕು. ಆಗ ಗೆಲುವು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. 
(8 / 8)

    ಹಂಚಿಕೊಳ್ಳಲು ಲೇಖನಗಳು