(2 / 10)ಅಕ್ಟೋಬರ್ 4 ಜಾವಾ ಮೋಟಾರ್ ಬೈಕ್ಅಕ್ಟೋಬರ್ 4 ರಂದು ಪಾರಂಪರಿಕ ಜಾವಾ ಮೋಟಾರ್ ಬೈಕ್ ಸವಾರಿಯನ್ನು ಏರ್ಪಡಿಸಿದ್ದು, ಮೋಟಾರ್ ಬೈಕ್ ಸವಾರಿಗೆ 25 ರಿಂದ 50 ವರ್ಷ ವಯೋಮಿತಿಯುಳ್ಳ ವಿದ್ಯಾರ್ಥಿಗಳು/ ಯುವಕರು ಹಾಗೂ ಪುರುಷರು ಭಾಗವಹಿಸಬಹುದಾಗಿದ್ದು, ಮೊದಲು ನೋಂದಣಿ ಮಾಡಿಕೊಳ್ಳುವ 10 ಮಂದಿ ಜಾವ ಮೋಟಾರ್ ಬೈಕುವುಳ್ಳ ಆಸಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು( ಕಡ್ಡಾಯವಾಗಿ ಜಾವಾ ಮೋಟಾರ್ ಬೈಕ್ ತರುವುದು). ಮೋಟಾರ್ ಬೈಕ್ ಸವಾರಿಯೂ ರಂಗಾಚಾರ್ಲು ಪುರಭವನ( ಟೌನ್ ಹಾಲ್ )ದಿಂದ ಪ್ರಾರಂಭವಾಗಿ, ದೊಡ್ಡ ಗಡಿಯಾರ ಗೋಪುರ(ಸಿಲ್ವರ್ ಜುಬಿಲಿ ಕ್ಲಾಕ್ ಟವರ್), ಫ್ರೀ ಮೇಸನ್ಸ್ ಕ್ಲಬ್, 10ನೇ ಚಾಮರಾಜೇಂದ್ರ ವೃತ್ತ ಅಂಬಾ ವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಲಾನ್ಸ್‌ಡೌನ್ ಕಟ್ಟಡ, ಬನುಮಯ್ಯ ಶಿಕ್ಷಣ ಸಂಸ್ಥೆ, ಮೈಸೂರು ಮಹಾನಗರ ಪಾಲಿಕೆ(ಕಾರ್ಪೋರೇಷನ್ ಕಛೇರಿ), ಮಹಾರಾಜ ಸಂಸ್ಕೃತ ಪಾಠಶಾಲೆ, ಸಾರ್ವಜನಿಕ ಕಛೇರಿಗಳ ಸಂಕೀರ್ಣ(ಕಾಡಾ- Public Office), ಅಂಬಾವಿಲಾಸ ಅರಮನೆ (ವರಹಗೇಟ್), ಗನ್‌ಹೌಸ್, ಶಿವರಾತ್ರೀಶ್ವರ ಮಠದ ಆಡಳಿತ ಕಟ್ಟಡ, 6 ಗೇಟ್, ಕರ್ಜನ್ ಪಾರ್ಕ್, ಬ್ಯಾಂಡ್ ಹೌಸ್, ಆಡಳಿತ ತರಬೇತಿ ಸಂಸ್ಥೆ (ATI) ಕೆ.ಎಸ್.ಆರ್.ಪಿ ಕಟ್ಟಡ ಮೈಸೂರು ಪ್ರವೇಶದ್ಧಾರ, ಲಲಿತ್ ಮಹಲ್, ಪೋಸ್ಟಲ್ ಟ್ರೈನಿಂಗ್ ಸೆಂಟರ್(PTC), ವಸಂತ್ ಮಹಲ್(ಡಯಟ್) ಹಾದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹತ್ತಿರ ಮುಕ್ತಾಯಗೊಳ್ಳಲಿದೆ