logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Dasara: ಮೈಸೂರು ದಸರಾಕ್ಕೆ ಬಂದ ಕ್ಯಾ ಅಭಿಮನ್ಯು ತಂಡದ ಬಯೋಡೇಟಾ, ಗೋಪಿ, ಧನಂಜಯ,ಏಕಲವ್ಯ, ಭೀಮಾ, ಕಂಜನ್‌, ಲಕ್ಷೀ ಆನೆಗಳ ವಿಶೇಷ ಏನು

Mysore Dasara: ಮೈಸೂರು ದಸರಾಕ್ಕೆ ಬಂದ ಕ್ಯಾ ಅಭಿಮನ್ಯು ತಂಡದ ಬಯೋಡೇಟಾ, ಗೋಪಿ, ಧನಂಜಯ,ಏಕಲವ್ಯ, ಭೀಮಾ, ಕಂಜನ್‌, ಲಕ್ಷೀ ಆನೆಗಳ ವಿಶೇಷ ಏನು

Aug 22, 2024 11:17 AM IST

Mysuru Dasara Jumbos ಮೈಸೂರು ದಸರಾ ಎಂದರೆ ಜಂಬೂಸವಾರಿ ಹಾಗೂ ಆನೆಗಳ ಆಕರ್ಷಣೆ. ಈಗಾಗಲೇ ದಸರಾ ಆಚರಣೆಗೆ ಮೈಸೂರಿಗೆ ಬಂದಿರುವ ಆನೆಗಳ ವಿವರ ಇಲ್ಲಿದೆ. 

  • Mysuru Dasara Jumbos ಮೈಸೂರು ದಸರಾ ಎಂದರೆ ಜಂಬೂಸವಾರಿ ಹಾಗೂ ಆನೆಗಳ ಆಕರ್ಷಣೆ. ಈಗಾಗಲೇ ದಸರಾ ಆಚರಣೆಗೆ ಮೈಸೂರಿಗೆ ಬಂದಿರುವ ಆನೆಗಳ ವಿವರ ಇಲ್ಲಿದೆ. 
ಮೈಸೂರು ದಸರಾ 2024ರಲ್ಲಿ ಭಾಗಿಯಾಲೆಂದು ಈಗಾಗಲೇ ಕೊಡಗಿನ ದುಬಾರೆ, ನಾಗರಹೊಳೆಯಿಂದ ಆನೆಗಳು ಗಜಪಯಣ ಆರಂಭಿಸಿ ಮೈಸೂರಿಗೆ ಆಗಮಿಸಿವೆ. ಒಂಬತ್ತು ಆನೆಗಳು ಬಂದಿದ್ದು.ಎರಡನೇ ಹಂತದಲ್ಲಿ ಐದು ಆನೆ ಬರಲಿವೆ. 
(1 / 10)
ಮೈಸೂರು ದಸರಾ 2024ರಲ್ಲಿ ಭಾಗಿಯಾಲೆಂದು ಈಗಾಗಲೇ ಕೊಡಗಿನ ದುಬಾರೆ, ನಾಗರಹೊಳೆಯಿಂದ ಆನೆಗಳು ಗಜಪಯಣ ಆರಂಭಿಸಿ ಮೈಸೂರಿಗೆ ಆಗಮಿಸಿವೆ. ಒಂಬತ್ತು ಆನೆಗಳು ಬಂದಿದ್ದು.ಎರಡನೇ ಹಂತದಲ್ಲಿ ಐದು ಆನೆ ಬರಲಿವೆ. (Ram)
ಕೂಲ್‌ ಕ್ಯಾಪ್ಟನ್‌ ಅಭಿಮನ್ಯುಎಂಥ ಆನೆ,ಹುಲಿ ಸೆರೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿಸಬಲ್ಲ ಆಪರೇಷನ್‌ ಆನೆ ಅಭಿಮನ್ಯು ಈಗ ದಸರಾ ತಂಡದ ಕ್ಯಾಪ್ಟನ್‌. ಐದನೇ ಬಾರಿಗೆ ಅಂಬಾರಿ ಹೊರುವ ಜವಾಬ್ದಾರಿಗೆ ಅಣಿಯಾಗಿದ್ದಾನೆ. ನಾಗರಹೊಳೆಯ ಮತ್ತಿಗೋಡು ಶಿಬಿರದ ವಾಸಿ 58 ವರ್ಷದ ಅಭಿಮನ್ಯು ಆನೆಯನ್ನು 1970ರಲ್ಲಿ ಕೊಡಗು ಜಿಲ್ಲೆ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಅಭಿಮನ್ಯು ಆನೆ 2012ರಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.  2015ರ ಜಂಬೂಸವಾರಿ ವೇಳೆ ಕರ್ನಾಟಕ ವಾದ್ಯಗೋಷ್ಠಿ ತಂಡದ ಗಾಡಿಯನ್ನು ಎಳೆದ ಅನುಭವವನ್ನೂ ಹೊಂದಿದೆ. ಅರ್ಜುನ ನಿವೃತ್ತಿ ಬಳಿಕ  2020ರಿಂದ ಅಭಿಮನ್ಯು, ಚಿನ್ನದ ಅಂಬಾರಿ ಹೊರುವ ಕಾರ್ಯವನ್ನು ಯಶಸ್ವಿ ನಿರ್ವಹಿಸುತ್ತಿರುವುದು ವಿಶೇಷ. 2.74 ಮೀಟರ್ ಎತ್ತರ ಇರುವ ಅಭಿಮನ್ಯು, ಸುಮಾರು 4,700ರಿಂದ 5,000 ಕೆ.ಜಿ.ಗೂ ಹೆಚ್ಚಿನ ತೂಕವಿದ್ದಾನೆ.
(2 / 10)

ಹಿರಿಯಕ್ಕ ವರಲಕ್ಷ್ಮಿ (67)ಮೈಸೂರು ದಸರಾ ತಂಡದ ಹಿರಿಯಾನೆ, ನಾಗರಹೊಳೆಯ ಭೀಮನಕಟ್ಟೆ ಶಿಬಿರದ ವರಲಕ್ಷ್ಮೀಗೆ ಈಗ 68 ವರ್ಷ. ಇದೂ ಕೂಡ ಕುಮ್ಕಿ ಆನೆಯೇ.  ಈ ಆನೆ 2.36 ಎತ್ತರ, ಸುಮಾರು 3300 ರಿಂದ 3500 ಕೆ.ಜಿ.ತೂಕ ಹೊಂದಿದೆ. ಹಲವಾರು ಬಾರಿ ದಸರಾಗೆ ಆಗಮಿಸಿದೆ. 
(3 / 10)

ಕಲರ್‌ ಫುಲ್‌ ಕಂಜನ್‌ (25)ಕೊಡಗಿನ ದುಬಾರೆ ಶಿಬಿರದ ವಾಸಿಯಾದ ಕಂಜನ್‌ ಕೂಡ ದಸರಾ ದಂಡ ಕಿರಿಯ ಸದಸ್ಯ ಈಗ ಕಂಜನ್‌ಗೆ 25 ವರ್ಷ. ಕಂಜನ್‌ ಕಳೆದ ವರ್ಷ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗಿ ಹೆಜ್ಜೆ ಹಾಕಿದ್ದ. ಯಾವುದೇ ತೊಂದರೆ ಮಾಡದೇ ಮಾವುತನ ಮಾತು ಕೇಳಿದ್ದ ಕಂಜನ್‌ ಎರಡನೇ ಬಾರಿಗೆ ದಸರಾಕ್ಕೆಂದು ಮೈಸೂರಿಗೆ ಬಂದಿದ್ದಾನೆ. ಈತನೂ ಹಾಸನ- ಕೊಡಗು ಕಾರ್ಯಾಚರಣೆಯಲ್ಲಿ ಸಿಕ್ಕಿದ್ದ.  ಈತ 2.62 ಎತ್ತರ, 3700 ರಿಂದ 3900 ಕೆ.ಜಿ.ತೂಕ ಹೊಂದಿದ್ದಾನೆ.
(4 / 10)

ಹೊಸ ಆಕರ್ಷಣೆ ಏಕಲವ್ಯ (38) ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನಲ್ಲಿ ಭಾರೀ ಗದ್ದಲ ಮಾಡುತ್ತಾ ಸದ್ದು ಮಾಡಿದ್ದ ಆನೆಯೇ ಏಕಲವ್ಯ. ಈಗ ದಸರಾ ತಂಡಕ್ಕೆ ಸೇರ್ಪಡೆಯಾಗಿದ್ದಾನೆ. ನಾಗರಹೊಳೆಯ ಮತ್ತಿಗೋಡು ಶಿಬಿರದ ಏಕಲವ್ಯ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿರುವುದು ವಿಶೇಷ. ಏಕಲವ್ಯನಿಗೆ 39 ವರ್ಷ. ಈ ಆನೆ ಸುಮಾರು 4,150 ಕೆ.ಜಿ. ತೂಕ, 2.83 ಮೀಟರ್ ಎತ್ತರ, 3.70 ಮೀಟರ್ ಉದ್ದವಿದೆ. ಪುಂಡಾನೆಯಾಗಿದ್ದ ಏಕಲವ್ಯ ಈಗ ಶಿಸ್ತಿನ ಆನೆಯಾಗಿ ಐದೇ ವರ್ಷದಲ್ಲಿ ಬದಲಾಗಿದೆ. 
(5 / 10)

ದಸರಾ ಆಕರ್ಷಣೆ ಧನಂಜಯ (43),ಕೊಡಗಿನ ದುಬಾರೆ ಆನೆ ಶಿಬಿರದ ವಾಸಿಯಾದ 44 ವರ್ಷದ ಧನಂಜಯ ಆನೆ ಈ ಬಾರಿಯೂ ಆಗಮಿಸಿದ್ದಾನೆ. ಈತನನ್ನು  2013ರಲ್ಲಿ ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಸೆರೆ ಹಿಡಿಯಲಾಗಿತ್ತು. ಕಾಡಾನೆ ಮತ್ತು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಧನಂಜಯ ಈಗಲೂ ಅಭಿಮನ್ಯುವಿಗೆ ಸಾಥಿ. ಧನಂಜಯ ಆನೆ ಐದು ವರ್ಷದಿಂದ ದಸರಾದಲ್ಲಿ ಭಾಗವಹಿಸುತ್ತಿರುವುದು ವಿಶೇಷ. 2.80 ಮೀಟರ್ ಎತ್ತರ ಇರುವ ಧನಂಜಯ ಸುಮಾರು 4000 ರಿಂದ 4200 ಕೆ.ಜಿ. ತೂಗುತ್ತಾನೆ. ಈ ಬಾರಿ ದಸರಾದಲ್ಲಿ  ಧನಂಜಯನಿಗೆ ನೌಫತ್ ಆನೆಯ ಹೊಣೆ.
(6 / 10)

ಕಟ್ಟು ಮಸ್ತಾದ ಗೋಪಿ (41), ಒಮ್ಮೆಲೆ ನೋಡಿದರೆ ಮಾಜಿ ಕ್ಯಾಪ್ಟನ್‌ ಬಲರಾಮನ್ನು ಹೋಲುತ್ತಾನೆ ಗೋಪಿ. ಕೊಡಗಿನ ದುಬಾರೆ ಶಿಬಿರದ ವಾಸಿಯಾದ ಗೋಪಿಗೆ ಈಗ 42 ವರ್ಷ. 1990ರಲ್ಲಿ ಹಾಸನದ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಈತನನ್ನು ಸೆರೆ ಹಿಡಿಯಲಾಗಿತ್ತು. ಗೋಪಿ 12ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾನೆ. 2015ರಲ್ಲಿ ಗೋಪಿ ಅರಮಮನೆಯ ಪಟ್ಟದ ಆನೆಯಾಗಿದ್ದ. ಗೋಪಿ, 2.86 ಮೀ ಎತ್ತರ, ಸುಮಾರು 3700 ರಿಂದ 3800 ಕೆ.ಜಿ. ತೂಕ ಹೊಂದಿರುವ ಗೋಪಿ ಅಂಬಾರಿ  ಹೊರುವ ಸಾಮರ್ಥ್ಯ ಹೊಂದಿದ್ದಾನೆ. 
(7 / 10)

ಕಿರಿಯ ಸದಸ್ಯ ರೋಹಿತ್ಬಂಡೀಪುರದ ರಾಮಪುರ ಶಿಬಿರದ ವಾಸಿಯಾಗಿರುವ ರೋಹಿತ್‌ಗೆ  ಈಗ 22 ವರ್ಷ. ರೋಹಿತ್ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿರುವ ಅತೀ ಚಿಕ್ಕ ವಯಸ್ಸಿನ ಆನೆ ಎಂಬ ಹಿರಿಮೆ ಹೊಂದಿದೆ. ಈತ 2.70 ಮೀ ಎತ್ತರ, ಸುಮಾರು 2900 ರಿಂದ 3000 ತೂಗುತ್ತಾನೆ. ಕಳೆದ ವರ್ಷವೂ ದಸರಾಗೆ ಬಂದಿದ್ದ. ರೋಹಿತ್​ ಎರಡನೇ ಬಾರಿಗೆ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿದ್ದು ಭವಿಷ್ಯದ ಅಂಬಾರಿ ಆನೆ ಆಗಬಹುದು ಎನ್ನಲಾಗುತ್ತಿದೆ.
(8 / 10)

ಭವಿಷ್ಯದ ಕ್ಯಾಪ್ಟನ್‌ ಭೀಮ (24),ಭೀಮ ಆನೆ ಎತ್ತರ ಮಾತ್ರವಲ್ಲ ನೋಡಲು ಸುಂದರ.  24ರ ಹರೆಯದ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದ ವಾಸಿ ಭೀಮ. ಅಭಿಮನ್ಯುವಿನ ನಂತರ ಚಿನ್ನದ ಅಂಬಾರಿ ಹೊರಲು ಬೇಕಾದ ಎಲ್ಲಾ ವಿಶೇಷ ಗುಣಲಕ್ಷಣಗಳು ಈತನಲ್ಲಿವೆ. 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಹೆತ್ತೂರಿನಲ್ಲಿ ಈತನನ್ನು ಸೆರೆ ಹಿಡಿಯಲಾಗಿತ್ತು. ಕೆಲವೇ ವರ್ಷದಲ್ಲಿ ಪಳಗಿ ದಸರಾಕ್ಕೆ ಅಣಿಯಾದ ಭೀಮ. ಭೀಮಾ ಆನೆ 2.85 ಮೀ. ಎತ್ತರ, 3.05 ಮೀ ಉದ್ದ ಮತ್ತು ಸುಮಾರು 3800 ರಿಂದ 4,000 ಕೆ.ಜಿ. ತೂಕ ಹೊಂದಿದೆ. ಭೀಮ 2017  ಹಾಗೂ 2022  ದಸರಾದಲ್ಲಿ ಪಾಲ್ಗೊಂಡಿದ್ದ. ಈ ಬಾರಿ ಆಗಮಿಸಿದ್ದಾನೆ
(9 / 10)

ಕುಮ್ಕಿ ಆನೆ ಲಕ್ಷ್ಮೀ (53), ದಸರಾದಲ್ಲಿ ಮುಖ್ಯ ಆನೆ ಜತೆಗೆ ಸಾಥ್‌ ನೀಡುವ ಕುಮ್ಕಿ ಆನೆಗಳಿಗೂ ಗೌರವ. ಏಕೆಂದರೆ ಕುಮ್ಕಿ ಆನೆಗಳಿದ್ದರೆ ಕ್ಯಾಪ್ಟನ್‌ ಕೂಲ್‌ ಆಗಿ ಹೆಜ್ಜೆ  ಹಾಕುತ್ತಾನೆ. ಇದರಲ್ಲಿ  ಲಕ್ಷ್ಮೀ ಆನೆ ಪ್ರಮುಖವಾದದ್ದು. ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ದೊಡ್ಡ ಹರವೆ ಶಿಬಿರದ ಲಕ್ಷ್ಮೀಗೆ ಈಗ 53 ವರ್ಷ.‌ ಕೆಲ ವರ್ಷದ ಹಿಂದೆ ದಸರಾ ವೇಳೆಯೇ ಮರಿ ಹಾಕಿ ಗಮನ ಸೆಳೆದಿದ್ದಳು  ಲಕ್ಷ್ಮೀ. 2.52 ಎತ್ತರ, 3000 ರಿಂದ 3200 ಕೆ.ಜಿ.ತೂಕ ಹೊಂದಿದ್ದಾಳೆ. ಹಲವಾರು  ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವ ಅನುಭವ ಲಕ್ಷ್ಮೀಯ ವಿಶೇಷ, ಕೂಲ್‌ ಆನೆ ಎನ್ನುವ ಹಿರಿಮೆ ಬೇರೆ.
(10 / 10)

    ಹಂಚಿಕೊಳ್ಳಲು ಲೇಖನಗಳು