logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು ಅರಮನೆ ಅಂಗಳದಲ್ಲಿ ಬಹುಪರಾಕ್‌ ರಿಂಗಣ; ರಾಜವಂಶಸ್ಥ ಯದುವೀರ್‌ ಒಡೆಯರ್‌ ಖಾಸಗಿ ದರ್ಬಾರ್‌ ಹೀಗಿತ್ತು

ಮೈಸೂರು ಅರಮನೆ ಅಂಗಳದಲ್ಲಿ ಬಹುಪರಾಕ್‌ ರಿಂಗಣ; ರಾಜವಂಶಸ್ಥ ಯದುವೀರ್‌ ಒಡೆಯರ್‌ ಖಾಸಗಿ ದರ್ಬಾರ್‌ ಹೀಗಿತ್ತು

Oct 03, 2024 03:16 PM IST

ಮೈಸೂರು ದಸರಾ ಹಿನ್ನೆಲೆಯಲ್ಲಿ ಅರಮನೆಯ ಆವರಣದಲ್ಲಿ ಯದುವೀರ್‌ ಒಡೆಯರ್‌ ಅವರು ನವರಾತ್ರಿ ಖಾಸಗಿ ದರ್ಬಾರ್‌ ಅನ್ನು ಆರಂಭಿಸಿದರು.ಮೊದಲ ದಿನವೇ ನಾನಾ ಧಾರ್ಮಿಕ ಚಟುವಟಿಕೆಗಳು ಜರುಗಿದವುಚಿತ್ರಗಳು: ಎಸ್‌ಆರ್‌ ಮಧುಸೂಧನ್‌ ಮೈಸೂರು

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಹಾಗೂ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಖಾಸಗಿ ದರ್ಬಾರ್‌ ಅನ್ನು ಮೈಸೂರು ಅರಮನೆ ಆವರಣದಲ್ಲಿ ಗುರುವಾರ ಆರಂಭಿಸಿದರು. 
(1 / 6)

ಬೆಳಿಗ್ಗೆಯೇ ಎಣ್ಣೆಯ ಸ್ನಾನದ ನಂತರ ವಿವಿಧ ಪೂಜಾ ವಿಧಾನಗಳನ್ನು ಪೂರೈಸಿ ಕಂಕಣಧಾರಣೆ ಮಾಡಿಕೊಂಡು ಯದುವೀರ್‌ ಒಡೆಯರ್‌ ಅವರು ರತ್ನಖಚಿತ ಸಿಂಹಾಸನರೋಹಣ ಮಾಡಿದರು.
(2 / 6)

ವಂದಿ ಮಾಗದರು ಬಹುಪರಾಕ್‌ ಕೂಗುತ್ತಿರುವ ನಡುವೆಯೇ ಹಳೆಯ ರಾಜವೈಭವ ನೆನಪಿಸುವಂತೆ ಖಾಸಗಿ ದರ್ಬಾರ್‌ ಸಭಾಂಗಣದಲ್ಲಿ ನಡೆದ ಚಟುವಟಿಕೆಯಲ್ಲಿ ಯದುವೀರ್‌ ಉತ್ಸಾಹದಿಂದಲೇ ಭಾಗಿಯಾದರು.
(3 / 6)

ಯದುವೀರ್‌ ಅವರ ದರ್ಬಾರ್‌ ವೇಳೆ ಜಯಚಾಮರಾಜ ಒಡೆಯರ್‌ ಅವರ ಕಾಯೌ ಶ್ರೀ ಗೌರಿ ಸೇರಿ ಹಲವು ಗೀತೆಗಳನ್ನು ನುಡಿಸಲಾಯಿತು. ಈ ವೇಳೆ ಒಡೆಯರ್‌ ಗೌರವ ವಂದನೆ ಸಲ್ಲಿಸಿದರು.
(4 / 6)

ರತ್ನ ಖಚಿತ ಸಿಂಹಾಸನ ಏರಿದ ಯದುವೀರ್‌ ಅವರು ಕೆಲ ಹೊತ್ತು ಖಾಸಗಿ ದರ್ಬಾರ್‌ ಅನ್ನು ನಡೆಸಿ ಎಲ್ಲಾ ವಿಧಿ ವಿಧಾನಗಳನ್ನು ಮೊದಲ ದಿನ ಪೂರೈಸಿದರು.
(5 / 6)

ಈ ವೇಳೆ ಅರಮನೆ ಪುರೋಹಿತರು ಹಾಗೂ ಇತರೆ ದೇಗುಲಗಳ ಅರ್ಚಕರು ತಂದಿದ್ದ ತೀರ್ಥ ಹಾಗೂ ಪ್ರಸಾದವನ್ನು ಒಡೆಯರ್‌ ಅವರು ಸ್ವೀಕರಿಸಿದರು.
(6 / 6)

    ಹಂಚಿಕೊಳ್ಳಲು ಲೇಖನಗಳು