logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು ದಸರಾದಲ್ಲಿ ಕರ್ನಾಟಕ ಪೊಲೀಸ್‌ ಬ್ಯಾಂಡ್‌ ವೈಭವ; ಕನಕದಾಸರ ಕೀರ್ತನೆ , ತುಳಸಿದಾಸರ ಕೃತಿ, ಎಆರ್ ರಹಮಾನ್‌ ಗೀತ ಗುಚ್ಚದ ಸವಿ‌

ಮೈಸೂರು ದಸರಾದಲ್ಲಿ ಕರ್ನಾಟಕ ಪೊಲೀಸ್‌ ಬ್ಯಾಂಡ್‌ ವೈಭವ; ಕನಕದಾಸರ ಕೀರ್ತನೆ , ತುಳಸಿದಾಸರ ಕೃತಿ, ಎಆರ್ ರಹಮಾನ್‌ ಗೀತ ಗುಚ್ಚದ ಸವಿ‌

Oct 09, 2024 12:12 PM IST

ಭಾರತದಲ್ಲೇ ಅತಿ ವಿಭಿನ್ನ ಪೊಲೀಸ್‌ ಬ್ಯಾಂಡ್‌ ಇರುವುದು ಕರ್ನಾಟಕದ ಮೈಸೂರಿನಲ್ಲಿ. ಕನ್ನಡ, ಇಂಗ್ಲೀಷ್‌, ಹಿಂದಿ ಸಹಿತ ಹಲವು ಭಾಷೆಗಳ ಗೀತೆ, ಕೃತಿಗಳನ್ನು ಬ್ಯಾಂಡ್‌ ಮೂಲಕ ಪೊಲೀಸರು ನುಡಿಸುವುದನ್ನು ಕೇಳುವುದೇ ಚಂದ. ಮೈಸೂರು ಅರಮನೆ ಆವರಣದಲ್ಲಿ ಈ ಬಾರಿಯು ಪ್ರದರ್ಶನ ಗಮನ ಸೆಳೆಯಿತು.

  • ಭಾರತದಲ್ಲೇ ಅತಿ ವಿಭಿನ್ನ ಪೊಲೀಸ್‌ ಬ್ಯಾಂಡ್‌ ಇರುವುದು ಕರ್ನಾಟಕದ ಮೈಸೂರಿನಲ್ಲಿ. ಕನ್ನಡ, ಇಂಗ್ಲೀಷ್‌, ಹಿಂದಿ ಸಹಿತ ಹಲವು ಭಾಷೆಗಳ ಗೀತೆ, ಕೃತಿಗಳನ್ನು ಬ್ಯಾಂಡ್‌ ಮೂಲಕ ಪೊಲೀಸರು ನುಡಿಸುವುದನ್ನು ಕೇಳುವುದೇ ಚಂದ. ಮೈಸೂರು ಅರಮನೆ ಆವರಣದಲ್ಲಿ ಈ ಬಾರಿಯು ಪ್ರದರ್ಶನ ಗಮನ ಸೆಳೆಯಿತು.
ಕರ್ನಾಟಕದ ವಿವಿಧ ಜಿಲ್ಲೆಗಳ   400 ಕ್ಕಿಂತಲೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡಗಳಿಂದ ಆಕರ್ಷಕ ರೀತಿಯಲ್ಲಿ ವಿವಿಧ ವಿನ್ಯಾಸಗಳ ಸಾಮೂಹ ವಾದ್ಯಮೇಳವನ್ನು  ಪ್ರದರ್ಶಿಸಲಾಯಿತು. 
(1 / 7)

ಅರಮನೆ ಬೆಳಕಿನ ನಡುವೆ ಕರ್ನಾಟಕ ಪೊಲೀಸ್‌ ಬ್ಯಾಂಡ್‌ ಕಲಾವಿದರು  ಕನಕದಾಸರ ಕೀರ್ತನೆಯಾದ ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ಎಂಬ ಗೀತೆ ನುಡಿಸಿ ಮೆಚ್ಚುಗೆ ಪಡೆದರು. 
(2 / 7)

ಮಧ್ವಾಚಾರ್ಯರ ಕೃತಿಯಾದ ಪ್ರೇಣಯಾಮೋ ವಾಸುದೇವಂ ವಾದ್ಯಕ್ಕೆ ಜನರು ಮನಸೋತರು. ಸಂತ ತುಳಸಿದಾಸರ ಕೃತಿಯಾದ ಶ್ರೀ ರಾಮಚಂದ್ರ ಕೃಪಾಲು ಭಜಮನ ವಾದ್ಯಗಳನ್ನು ಕರ್ನಾಟಕ ವಾದ್ಯವೃಂದದವರು ಪ್ರಸ್ತುತಿ‌ ಪಡಿಸಿದರು. 
(3 / 7)

ಆಂಗ್ಲ ವಾದ್ಯ ವೃಂದದವರು ಹರ್ಮನ್ ಸ್ಪಾರ್ಕ್ ಅವರ ಲೈಟ್ ಕವಾಲಿ, ಎ ಆರ್ ರೆಹಮಾನ್ ಅವರ ಯಶಸ್ವಿ ಆರು ಗೀತೆಗಳನ್ನು ಒಟ್ಟುಗೂಡಿಸಿ ಪ್ರಸ್ತುತಪಡಿಸಿದ್ದು ವಿಶೇಷ. 
(4 / 7)

ಕರ್ನಾಟಕ ವಾದ್ಯವೃಂದ ಮತ್ತು ಆಂಗ್ಲ ವಾದ್ಯವೃಂದದವರು ಡಾ.ಎಲ್ ಸುಬ್ರಹ್ಮಣ್ಯ ಅವರ ಕನ್ವರ್ಜೇಷನ್  ಎಂಬ ಸಂಯೋಜನೆಯ ಜುಗಲ್ ಬಂದಿ ನಡೆಸಿದರು.
(5 / 7)

ಬಹು ವಾದ್ಯೋಪಕರಣಗಳನ್ನು ಬಳಸಿ ತಮ್ಮದೇ ಆದ ಶೈಲಿಯ  ವಾದ್ಯಮೇಳವನ್ನು ನೆರೆದಿದ್ದಂತಹ ಜನ ಸಾಗರದ ಮುಂದೆ  ಪ್ರದರ್ಶಿಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು.
(6 / 7)

ರಾಜ ಕಹಳೆ ಮೊಳಗಿಸುವ ಮೂಲಕ ಗೃಹ ಸಚಿವರಾದ ಜಿ ಪರಮೇಶ್ವರ ಅವರನ್ನು ಕರ್ನಾಟಕ‌ ಪೊಲೀಸ್ ಅವರು ಬರಮಾಡಿಕೊಂಡರು. ಸಚಿವರಾದ ಡಾ.ಮಹದೇವಪ್ಪ, ಸತೀಶ ಜಾರಕಿಹೊಳಿ. ಡಿಜಿಪಿ ಅಲೋಕ್‌ ಮೋಹನ್‌ ಮತ್ತಿತರು ಇದ್ದರು.
(7 / 7)

    ಹಂಚಿಕೊಳ್ಳಲು ಲೇಖನಗಳು