logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Black Buck Jump Photo:ಮೈಸೂರಿನ ಮಧುಸೂದನ್‌ ತೆಗೆದ ಕೃಷ್ಣಮೃಗ ಹಾರುವ ಚಿತ್ರಕ್ಕೆ ರಾಷ್ಟ್ರೀಯ ಬಹುಮಾನ; ಹಾರುತ ದೂರ ದೂರ, ಮೇಲೇರುವ ಬಾರ ಬಾರಾ

Black Buck Jump Photo:ಮೈಸೂರಿನ ಮಧುಸೂದನ್‌ ತೆಗೆದ ಕೃಷ್ಣಮೃಗ ಹಾರುವ ಚಿತ್ರಕ್ಕೆ ರಾಷ್ಟ್ರೀಯ ಬಹುಮಾನ; ಹಾರುತ ದೂರ ದೂರ, ಮೇಲೇರುವ ಬಾರ ಬಾರಾ

Dec 03, 2024 09:25 AM IST

Black Buck Jump Photo: ವೇಗದಲ್ಲಿ ಕೃಷ್ಣಮೃಗವನ್ನು ಮೀರಿಸುವ ಪ್ರಾಣಿಗಳಿಲ್ಲ. ಅದರಲ್ಲೂ ಅವುಗಳು ಹಾರುವ ಶೈಲಿ ನೋಡುವುದೇ ಚಂದ.  ಆ ಕ್ಷಣ ಸೆರೆ ಹಿಡಿಯುವುದು ಕಷ್ಟವೇ. ಮೈಸೂರಿನ ಪತ್ರಿಕಾ ಛಾಯಾಗ್ರಾಹಕ ಎಸ್.ಆರ್.ಮಧುಸೂದನ್ ಸೆರೆ ಹಿಡಿದ ವಿಶಿಷ್ಟ ಛಾಯಾಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ.

  • Black Buck Jump Photo: ವೇಗದಲ್ಲಿ ಕೃಷ್ಣಮೃಗವನ್ನು ಮೀರಿಸುವ ಪ್ರಾಣಿಗಳಿಲ್ಲ. ಅದರಲ್ಲೂ ಅವುಗಳು ಹಾರುವ ಶೈಲಿ ನೋಡುವುದೇ ಚಂದ.  ಆ ಕ್ಷಣ ಸೆರೆ ಹಿಡಿಯುವುದು ಕಷ್ಟವೇ. ಮೈಸೂರಿನ ಪತ್ರಿಕಾ ಛಾಯಾಗ್ರಾಹಕ ಎಸ್.ಆರ್.ಮಧುಸೂದನ್ ಸೆರೆ ಹಿಡಿದ ವಿಶಿಷ್ಟ ಛಾಯಾಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ.
ಅದು ಕೃಷ್ಣ ಮೃಗಗಳ ಹಿಂಡು. ಮುಂದೆ ಏನನ್ನೋ ನೋಡಿದ ಒಂದು ಕೃಷ್ಣಮೃಗ ಆಗಸದೆತ್ತರಕ್ಕೆ ಹಾರಿಯೇ ಬಿಟ್ಟಿತು. ಜತೆಗಿದ್ದವರೂ ಹಾರಲು ಅಣಿಯಾದವು. ಇದು ಮಧುಸೂಧನ್‌ ಅವರ ಕ್ಯಾಮರಾ ಕಣ್ಣಿಗೆ ಸಿಕ್ಕ ಚಿತ್ರ
(1 / 6)

ಕೃಷ್ಣಮೃಗ ನಾಚಿಕೆ ಸ್ವಭಾವದ ಪ್ರಾಣಿಗಳು, ಕರ್ನಾಟಕದ ಹಾವೇರಿ, ತುಮಕೂರು ಜಿಲ್ಲೆಯ ಸೀಮಿತ ಪ್ರದೇಶದಲ್ಲಿವೆ. ಅವುಗಳು ಒಂದು ಕಡೆ ನಿಲ್ಲುವುದು ಕಡಿಮೆಯೇ. ಕೃಷ್ಣಮೃಗ ಕ್ಯಾಮರಾಕ್ಕೆ ಸೆರೆ ಸಿಗಲು ಗಂಟೆಗಟ್ಟಲೇ ಕಾಯಬೇಕು.
(2 / 6)

ಅವುಗಳು ಒಮ್ಮೆ ಹಾರಿದರೆ ಅದೆಷ್ಟು ದೂರಕ್ಕೆ ಜಿಗಿಯುತ್ತವೆ. ಆ ಕಾಲುಗಳು ಸ್ಪ್ರಿಂಗ್‌ ರೀತಿಯಲ್ಲೇ ಕೆಲಸ ಮಾಡುವುದನ್ನು ಹತ್ತಿರದಿಂದಲೇ ನೋಡಬೇಕು. 
(3 / 6)

ಹೀಗೆ ಮುಂದೆ ನೋಡಿಕೊಂಡು ಗಾಳಿಯಲ್ಲಿ ಹಾರಿದ ಕೃಷ್ಣಮೃಗ ತದೇಕಚಿತ್ತದಿಂದಲೇ ಮುಂದೆ ಸಾಗಲು ಅಣಿಯಾಗಿರುವ ಆ ಕ್ಷಣ ಮೋಹಕ. ಮನಮೋಹಕ.
(4 / 6)

ಮಧುಸೂದನ ಎಸ್ ಆರ್ ಅವರ ಕೃಷ್ಣಮೃಗ ಹಾರುತ್ತಿರುವ ಛಾಯಾಚಿತ್ರಕ್ಕೆ ಕಲ್ಬುರ್ಗಿಯ ರಾಯಲ್ ಅಕಾಡೆಮಿ ಅವಾರ್ಡ್ಸ್ 2024 ರ ಚಿನ್ನದ ಪದಕ ಗಳಿಸಿದೆ ಕಲ್ಬುರ್ಗಿಯ ಇಂಡಿಯನ್ ರಾಯಲ್ ಅಕಾಡೆಮಿ ಆಫ್  ಆರ್ಟ್ ಅಂಡ್  ಕಲ್ಚರ್ ವತಿಯಿಂದ 20ನೇ ವಾರ್ಷಿಕೋತ್ಸವದ ಅಂಗವಾಗಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಾರತದ ನಾನಾ ಭಾಗಗಳಿಂದ ಸ್ಪರ್ಧಿಗಳು ಭಾಗಿಯಾಗಿದ್ದರು.
(5 / 6)

ತುಮಕೂರು ಮೂಲದವರಾದರೂ ಮೈಸೂರಿನ ಕಾವಾದಲ್ಲಿ ಶಿಕ್ಷಣ ಮುಗಿಸಿ ನಂತರ ಎರಡೂವರೆ ದಶಕದಿಂದ ಮೈಸೂರಿನಲ್ಲಿ ಪತ್ರಿಕಾ ಹಾಗೂ ವನ್ಯಜೀವಿ ಛಾಯಾಗ್ರಾಹಕರಾಗಿರುವ ಮಧುಸೂದನ್‌ ತೆಗೆದ ಇಂತಹ ಅಪರೂಪದ ಚಿತ್ರಗಳಿಗೆ ಹಲವು ಬಾರಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
(6 / 6)

    ಹಂಚಿಕೊಳ್ಳಲು ಲೇಖನಗಳು