logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysuru Dasara 2023: ಮೈಸೂರು ದಸರಾದಲ್ಲಿ ಎದೆ ಜಲ್‌ ಎನ್ನಿಸಿದ ಜಟ್ಟಿ ಕಾಳಗ; ಫೋಟೊಗಳಲ್ಲಿ ನೋಡಿ ವಜ್ರಮುಷ್ಟಿ ಕಾಳಗದ ಝಲಕ್‌

Mysuru Dasara 2023: ಮೈಸೂರು ದಸರಾದಲ್ಲಿ ಎದೆ ಜಲ್‌ ಎನ್ನಿಸಿದ ಜಟ್ಟಿ ಕಾಳಗ; ಫೋಟೊಗಳಲ್ಲಿ ನೋಡಿ ವಜ್ರಮುಷ್ಟಿ ಕಾಳಗದ ಝಲಕ್‌

Oct 24, 2023 02:58 PM IST

ವಿಶಯದಶಮಿ ಹಿನ್ನೆಲೆ ಪ್ರತಿಬಾರಿಯಂತೆ ಈ ಬಾರಿಯು ಮೈಸೂರು ಅರಮನೆ ಆವರಣದಲ್ಲಿ ಜಟ್ಟಿ ಕಾಳಗ ನೆರವೇರಿತು. ಅರಮನೆ ಶ್ವೇತ ವರಹ ದೇವಸ್ಥಾನದಲ್ಲಿ ಈ ವಜ್ರಮುಷ್ಠಿ ಕಾಳಗ ನಡೆಯಿತು. ಈ ವರ್ಷದ ಜಟ್ಟಿ ಕಾಳಗ ಝಲಕ್‌ ಹೀಗಿದೆ ನೋಡಿ.

  • ವಿಶಯದಶಮಿ ಹಿನ್ನೆಲೆ ಪ್ರತಿಬಾರಿಯಂತೆ ಈ ಬಾರಿಯು ಮೈಸೂರು ಅರಮನೆ ಆವರಣದಲ್ಲಿ ಜಟ್ಟಿ ಕಾಳಗ ನೆರವೇರಿತು. ಅರಮನೆ ಶ್ವೇತ ವರಹ ದೇವಸ್ಥಾನದಲ್ಲಿ ಈ ವಜ್ರಮುಷ್ಠಿ ಕಾಳಗ ನಡೆಯಿತು. ಈ ವರ್ಷದ ಜಟ್ಟಿ ಕಾಳಗ ಝಲಕ್‌ ಹೀಗಿದೆ ನೋಡಿ.
ವಿಜಯದಶಮಿಯ ದಿನವಾದ ಇಂದು ಬೆಳಿಗ್ಗೆ ನಡೆದ ಜಟ್ಟಿ ಕಾಳಗ ನೋಡುಗರ ಎದೆ ಝಲ್‌ ಎನ್ನಿಸುವಂತಿತ್ತು. ವಿವಿಧ ಭಾಗದ ಹಲವು ಜಟ್ಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
(1 / 6)

ಜಟ್ಟಿ ಕಾಳಗವನ್ನು ನೇರವಾಗಿ ನೋಡಿ ಕಣ್ತುಂಬಿಕೊಂಡ ವೀಕ್ಷಕರು ಫೋಟೊಗಳನ್ನು ಸೆರೆ ಹಿಡಿಯುವ ಮೂಲಕ, ವಿಡಿಯೊ ಮಾಡುವ ಮೂಲಕ ಸಂಭ್ರಮಿಸಿದರು. 
(2 / 6)

ಚನ್ನಪಟ್ಟಣದ ಪ್ರವೀಣ ಜಟ್ಟಿ 13 ಸೆಕೆಂಡ್‌ನಲ್ಲಿ ಎದುರಾಳಿಯ ರಕ್ತ ಚಿಮ್ಮಿಸಿದರು. 
(3 / 6)
ಚನ್ನಪಟ್ಟಣದ ಪ್ರವೀಣ ಜಟ್ಟಿ 13 ಸೆಕೆಂಡ್‌ನಲ್ಲಿ ಎದುರಾಳಿಯ ರಕ್ತ ಚಿಮ್ಮಿಸಿದರು. 
ಇವರು ಪ್ರದೀಪ್‌ ಎಸ್‌. ಜೆಟ್ಟಿ ಅವರ ತಲೆಭಾಗಕ್ಕೆ ಹೊಡೆದು ರಕ್ತ ಚಿಮ್ಮಿಸಿದರು. 
(4 / 6)
ಇವರು ಪ್ರದೀಪ್‌ ಎಸ್‌. ಜೆಟ್ಟಿ ಅವರ ತಲೆಭಾಗಕ್ಕೆ ಹೊಡೆದು ರಕ್ತ ಚಿಮ್ಮಿಸಿದರು. 
ಇವರು ಚೆನ್ನಪಟ್ಟಣದ ಉಸ್ತಾದ್‌ ಪುರುಷೋತ್ತಮ್‌ ಜೆಟ್ಟಿ ಅವರ ಶಿಷ್ಯರಾಗಿದ್ದಾರೆ. ಪ್ರವೀಣ್‌ ಹಾಗೂ ಪ್ರದೀಪ್‌ ಜೆಟ್ಟಿಗಳ ನಡುವೆ ನಡೆದ ಜಟ್ಟಿ ಕಾಳಗ ರೋಚಕವಾಗಿತ್ತು.
(5 / 6)

ಈ ಬಾರಿ 15 ಸೆಕೆಂಡ್‌ನಲ್ಲಿ ಜಟ್ಟಿ ಕಾಳಗಕ್ಕೆ ಅಂತ್ಯ ಹಾಡಲಾಗಿದ್ದು, ಇದು ವೀಕ್ಷಕರಿಗೆ ನಿರಾಸೆ ಮೂಡಿಸಿತು. 15 ಸೆಕೆಂಡ್‌ನಲ್ಲಿ ರಕ್ತ ಚಿಮ್ಮಿದ ಕಾರಣ ಇದು ಶುಭ ಸೂಚಕ ಎಂದು ಕಾಳಗವನ್ನು ನಿಲ್ಲಿಸಲಾಯಿತು. 
(6 / 6)

    ಹಂಚಿಕೊಳ್ಳಲು ಲೇಖನಗಳು