logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Palaces: ಮೈಸೂರಿನಲ್ಲಿ ಈಗಲೂ ಪಾರಂಪರಿಕ ಕಟ್ಟಡಗಳ ಬಳಕೆ, ಹೀಗಿವೆ ರಾಜರ ಕಾಲದ ಅರಮನೆಗಳು Photos

Mysore Palaces: ಮೈಸೂರಿನಲ್ಲಿ ಈಗಲೂ ಪಾರಂಪರಿಕ ಕಟ್ಟಡಗಳ ಬಳಕೆ, ಹೀಗಿವೆ ರಾಜರ ಕಾಲದ ಅರಮನೆಗಳು photos

Oct 01, 2024 05:42 PM IST

 Karnataka Heriteage ಮೈಸೂರು ಪಾರಂಪರಿಕ ಕಟ್ಟಡಗಳ ತವರು. ಕೆಲವು ಅರಮನೆಗಳ ರೂಪದಲ್ಲಿದ್ದರೆ, ಇನ್ನಷ್ಟು ಸಾರ್ವಜನಿಕ ಕಟ್ಟಡಗಳು. ಮೈಸೂರಿನಲ್ಲಿಯೇ ನೂರಕ್ಕೂ ಅಧಿಕ ಪಾರಂಪರಿಕ ಕಟ್ಟಡಗಳು ಘೋಷಿತ ಪಟ್ಟಿಯಲ್ಲಿವೆ. ಇದರಲ್ಲಿ ಬಹುತೇಕ ಬಳಕೆಯಲ್ಲಿವೆ. ಪ್ರಮುಖ ಪಾರಂಪರಿಕ ಕಟ್ಟಡಗಳ ನೋಟ ಇಲ್ಲಿದೆ. 

  •  Karnataka Heriteage ಮೈಸೂರು ಪಾರಂಪರಿಕ ಕಟ್ಟಡಗಳ ತವರು. ಕೆಲವು ಅರಮನೆಗಳ ರೂಪದಲ್ಲಿದ್ದರೆ, ಇನ್ನಷ್ಟು ಸಾರ್ವಜನಿಕ ಕಟ್ಟಡಗಳು. ಮೈಸೂರಿನಲ್ಲಿಯೇ ನೂರಕ್ಕೂ ಅಧಿಕ ಪಾರಂಪರಿಕ ಕಟ್ಟಡಗಳು ಘೋಷಿತ ಪಟ್ಟಿಯಲ್ಲಿವೆ. ಇದರಲ್ಲಿ ಬಹುತೇಕ ಬಳಕೆಯಲ್ಲಿವೆ. ಪ್ರಮುಖ ಪಾರಂಪರಿಕ ಕಟ್ಟಡಗಳ ನೋಟ ಇಲ್ಲಿದೆ. 
ಮೈಸೂರು ಅರಮನೆ.ಅಂಬಾ ವಿಲಾಸ ಅರಮನೆ ಎಂತಲೂ ಕರೆಯಲಾಗುತ್ತದೆ. ಹಳೆ ಅರಮನೆಗೆ ಬೆಂಕಿ ಬಿದ್ದ ನಂತರ ಇದನ್ನು ನಿರ್ಮಿಸಲಾಯಿತು. ಈಗ ಪ್ರಮುಖ ಪ್ರವಾಸಿ ತಾಣವಿದು. 
(1 / 10)

ಮೈಸೂರಿಗೆ ಬರುವ ಅತಿಥಿಗಳಿಗೆಂದೇ ಮಹಾರಾಜರು ನಿರ್ಮಿಸಿದ್ದ ಕಟ್ಟಡ ಲಲಿತ್‌ ಮಹಲ್‌. ಈಗ ಇದು ಹೊಟೇಲ್‌ ಆಗಿ ಮಾರ್ಪಟ್ಟಿದೆ. ಜಂಗಲ್‌ ರೆಸಾರ್ಟ್‌ ಅವರ ನಿರ್ವಹಣೆಯಲ್ಲಿರುವ ಲಲಿತಮಹಲ್‌ ದೇಶದ ಪ್ರಮುಖ ಹೊಟೇಲ್‌ಗಳಲ್ಲಿ ಒಂದು.
(2 / 10)

ಮೈಸೂರಿನ ಚಲುವಾಂಬ ಅರಮನೆ,. ಇದೂ ಕೂಡ ಮಹಾರಾಜರ ಅರಮನೆಯೇ. ಈಗ ಇದು ಕೇಂದ್ರ ಆಹಾರ ಸಂಶೋಧನಾಲಯ( CFTRI) ವಾಗಿ ಬದಲಾಗಿದೆ.
(3 / 10)

ಮೈಸೂರಿನ ಮೃಗಾಲಯಕ್ಕೆ ಹೊಂದಿಕೊಂಡಂತೆ ಇರುವ ಪ್ರಮುಖ ಅರಮನೆಯಿದು. ಇದನ್ನು ಮಹಾರಾಜರ ಬೇಸಿಗೆ ಅರಮನೆ ಎಂತಲೂ ಕರೆಯಲಾಗುತ್ತದೆ.
(4 / 10)

ಮೈಸೂರಿನಲ್ಲಿ ಮಹಾರಾಜರು ಬಳಸುತ್ತಿದ್ದ ಅರಮನೆಗಳಲ್ಲಿ ಒಂದು ಜಗನ್ಮೋಹನ ಅರಮನೆ. ಇದು ಈಗ ಜಗನ್ಮೋಹನ ಕಲಾ ಗ್ಯಾಲರಿಯಾಗಿ ಹಾಗೂ ಕಾರ್ಯಕ್ರಮ ನಡೆಸುವ ವೇದಿಕೆಯಾಗಿ ಬಳಕೆಯಾಗುತ್ತಿದೆ.
(5 / 10)

ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿರುವ ಜಯಲಕ್ಷ್ಮಿ ಅರಮನೆಯಿದು. ಇದು ಮಹಾರಾಜರ ಅರಮನೆಯೇ. ಈಗ ಜನಪದ ವಸ್ತು ಸಂಗ್ರಹಾಲಯವಾಗಿ ಬಳಕೆಯಾಗಿತ್ತಿದೆ. 
(6 / 10)

ಇದು ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ಭವನ. ಕ್ರಾಫರ್ಡ್‌ ಹಾಲ್‌ ಎಂತಲೂ ಕರೆಯಲಾಗುತ್ತದೆ. 
(7 / 10)
ಇದು ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ಭವನ. ಕ್ರಾಫರ್ಡ್‌ ಹಾಲ್‌ ಎಂತಲೂ ಕರೆಯಲಾಗುತ್ತದೆ. 
ಮೈಸೂರಿನ ಶಿಕ್ಷಣ ಕೇಂದ್ರಗಳಲ್ಲಿ ಮಹಾರಾಜ ಕಾಲೇಜು ಪ್ರಮುಖವಾದದ್ದು. ಇಲ್ಲಿ ಲಕ್ಷಾಂತರ ಮಂದಿ ಶಿಕ್ಷಣ ಪಡೆದು ಬದುಕು ರೂಪಿಸಿಕೊಂಡಿದ್ದಾರೆ. ಈಗಲೂ ಕರ್ನಾಟಕದ ಪ್ರಮುಖ ಶಿಕ್ಷಣ ಕೇಂದ್ರವಿದು.
(8 / 10)

ಮೈಸೂರು ಭಾಗದವರಿಗೆ ಆರೋಗ್ಯ ನೀಡಲೆಂದು ಮಹಾರಾಜರು ನಿರ್ಮಿಸಿದ್ದ ಕಟ್ಟಡವಿದು. ಇದು ಕೃಷ್ಣರಾಜೇಂದ್ರ ಆಸ್ಪತ್ರೆ. ಮೈಸೂರು ಮಾತ್ರವಲ್ಲದೇ ಮಂಡ್ಯ, ಕೊಡಗು, ಹಾಸನ,. ಚಾಮರಾಜನಗರ ದವರಿಗೂ ಆರೋಗ್ಯ ನೀಡುವ ಪ್ರಮುಖ ಕೇಂದ್ರ.
(9 / 10)

ಮೈಸೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆಂದೇ ಪುರಭವನವನ್ನು ಮಹಾರಾಜರು ನಿರ್ಮಿಸಿದ್ದರು. ಈಗಲೂ ರಂಗಾಚಾರ್ಲು ಭವನವಾಗಿ ಪುರಭವನ ಬಳಕೆಯಲ್ಲಿದೆ.
(10 / 10)

    ಹಂಚಿಕೊಳ್ಳಲು ಲೇಖನಗಳು