logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌; ಹೇಗಿತ್ತು ನೀರಜ್ ಚೋಪ್ರಾ ಫೈನಲ್ ಆಟ; ಫೋಟೋಸ್

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌; ಹೇಗಿತ್ತು ನೀರಜ್ ಚೋಪ್ರಾ ಫೈನಲ್ ಆಟ; ಫೋಟೋಸ್

Dec 22, 2023 06:21 PM IST

ವಿಶ್ವ ಅಥ್ಲೇಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೈನಲ್‌ನ ಎರಡನೇ ಎಸೆತದಲ್ಲೇ 88.17 ಮೀಟರ್ ದೂರಕ್ಕೆ ಭರ್ಜಿ ಎಸೆದು ಈ ಸಾಧನೆ ಮಾಡಿದ್ದಾರೆ.

ವಿಶ್ವ ಅಥ್ಲೇಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೈನಲ್‌ನ ಎರಡನೇ ಎಸೆತದಲ್ಲೇ 88.17 ಮೀಟರ್ ದೂರಕ್ಕೆ ಭರ್ಜಿ ಎಸೆದು ಈ ಸಾಧನೆ ಮಾಡಿದ್ದಾರೆ.
ಒಲಿಂಪಿಕ್ ಚಿನ್ನದ ಹುಡುಗ ನೀರಜ್ ಚೋಪ್ರಾ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಆಗಿದ್ದಾರೆ.
(1 / 5)
ಒಲಿಂಪಿಕ್ ಚಿನ್ನದ ಹುಡುಗ ನೀರಜ್ ಚೋಪ್ರಾ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಆಗಿದ್ದಾರೆ.(REUTERS)
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನೀರಜ್ ಚೋಪ್ರಾ ಮೊದಲ ಎಸೆತವನ್ನು ಫೌಲ್ ಮಾಡಿದರು. ಎರಡನೇ ಎಸೆತವನ್ನು 88.17 ಮೀಟರ್ ದೂರಕ್ಕೆ ಎಸೆದು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
(2 / 5)
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನೀರಜ್ ಚೋಪ್ರಾ ಮೊದಲ ಎಸೆತವನ್ನು ಫೌಲ್ ಮಾಡಿದರು. ಎರಡನೇ ಎಸೆತವನ್ನು 88.17 ಮೀಟರ್ ದೂರಕ್ಕೆ ಎಸೆದು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.(AP)
ಜಾವೆಲಿನ್ ವಿಭಾಗದಲ್ಲಿ ನೀರಜ್ ಚೋಪ್ರಾ 88.17 ಮೀಟರ್‌ನೊಂದಿಗೆ ಮೊದಲ ಸ್ಥಾನ ಪಡೆದರೆ, ಪಾಕಿಸ್ತಾನದ ಅರ್ಷದ್ ನದೀಮ್ ಅವರು 87.82 ಮೀಟರ್‌ನೊಂದಿಗೆ ಎರಡನೇ ಸ್ಥಾನ, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 86.67 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
(3 / 5)
ಜಾವೆಲಿನ್ ವಿಭಾಗದಲ್ಲಿ ನೀರಜ್ ಚೋಪ್ರಾ 88.17 ಮೀಟರ್‌ನೊಂದಿಗೆ ಮೊದಲ ಸ್ಥಾನ ಪಡೆದರೆ, ಪಾಕಿಸ್ತಾನದ ಅರ್ಷದ್ ನದೀಮ್ ಅವರು 87.82 ಮೀಟರ್‌ನೊಂದಿಗೆ ಎರಡನೇ ಸ್ಥಾನ, ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ 86.67 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.(AFP)
ಮಹಿಳೆಯರ 3000 ಮೀಟರ್ ಸ್ವೀಪಲ್‌ ಚೇಸ್‌ನಲ್ಲಿ ಪಾರುಲ್‌ ಚೌಧರಿ 11ನೇ ಸ್ಥಾನ ಪಡೆದಿದ್ದಾರೆ.  9:15.31 ಸೆಕೆಂಡುಗಳ ಈ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಮೂಲಕ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
(4 / 5)
ಮಹಿಳೆಯರ 3000 ಮೀಟರ್ ಸ್ವೀಪಲ್‌ ಚೇಸ್‌ನಲ್ಲಿ ಪಾರುಲ್‌ ಚೌಧರಿ 11ನೇ ಸ್ಥಾನ ಪಡೆದಿದ್ದಾರೆ.  9:15.31 ಸೆಕೆಂಡುಗಳ ಈ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಮೂಲಕ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.(AFP)
ಪುರುಷರ  4x400 ಮೀಟರ್ ರಿಲೇ ತಂಡ ಉತ್ತಮ ಪ್ರದರ್ಶನ ನೀಡಿದ್ದು, ಫೈನಲ್‌ನಲ್ಲಿ 5ನೇ ಸ್ಥಾನ ಪಡೆದಿದೆ. ಮೊಹಮ್ಮದ್ ಅನಾಸ್ ಯಾಹಿಯಾ, ಅಮೋಜ್ ಜಾಕೋಬ್, ಮೊಹಮ್ಮದ್ ಅಜ್ಮಲ್ ವರಿಯಾಥೋಡಿ ಹಾಗೂ ರಾಜೇಶ್ ರಮೇಶ್ ಅವರನ್ನೊಳಗೊಂಡ ಭಾರತ ತಂಡ ಈ ಸಾಧನೆ ಮಾಡಿದೆ. 
(5 / 5)
ಪುರುಷರ  4x400 ಮೀಟರ್ ರಿಲೇ ತಂಡ ಉತ್ತಮ ಪ್ರದರ್ಶನ ನೀಡಿದ್ದು, ಫೈನಲ್‌ನಲ್ಲಿ 5ನೇ ಸ್ಥಾನ ಪಡೆದಿದೆ. ಮೊಹಮ್ಮದ್ ಅನಾಸ್ ಯಾಹಿಯಾ, ಅಮೋಜ್ ಜಾಕೋಬ್, ಮೊಹಮ್ಮದ್ ಅಜ್ಮಲ್ ವರಿಯಾಥೋಡಿ ಹಾಗೂ ರಾಜೇಶ್ ರಮೇಶ್ ಅವರನ್ನೊಳಗೊಂಡ ಭಾರತ ತಂಡ ಈ ಸಾಧನೆ ಮಾಡಿದೆ. (SAI Media Twitter)

    ಹಂಚಿಕೊಳ್ಳಲು ಲೇಖನಗಳು