logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Union Budget 2023: ಅಂಚೆ ಇಲಾಖೆಯ ಈ ಯೋಜನೆಗೆ 'ಡಬಲ್' ಲಾಭ: ಹೆಚ್ಚಿನ ಹಣದ ನಿರೀಕ್ಷೆ ಖಾತರಿಪಡಿಸಿದ ಕೇಂದ್ರ ಬಜೆಟ್

Union Budget 2023: ಅಂಚೆ ಇಲಾಖೆಯ ಈ ಯೋಜನೆಗೆ 'ಡಬಲ್' ಲಾಭ: ಹೆಚ್ಚಿನ ಹಣದ ನಿರೀಕ್ಷೆ ಖಾತರಿಪಡಿಸಿದ ಕೇಂದ್ರ ಬಜೆಟ್

Feb 02, 2023 08:24 AM IST

Union Budget 2023: ನೀವು ಅಂಚೆ ಕಚೇರಿಯಲ್ಲಿ ಹಣವನ್ನು ಇಡುತ್ತೀರಾ? ಹಾಗಾದರೆ ಬಜೆಟ್‌ನಲ್ಲಿ ನಿಮಗೆ ಒಳ್ಳೆಯ ಸುದ್ದಿ ಇದೆ. ಈ ಬಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಅಂಚೆ ಕಚೇರಿ ಯೋಜನೆಯಲ್ಲಿ 'ಡಬಲ್' ಪ್ರಯೋಜನವನ್ನು ಘೋಷಿಸಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..

  • Union Budget 2023: ನೀವು ಅಂಚೆ ಕಚೇರಿಯಲ್ಲಿ ಹಣವನ್ನು ಇಡುತ್ತೀರಾ? ಹಾಗಾದರೆ ಬಜೆಟ್‌ನಲ್ಲಿ ನಿಮಗೆ ಒಳ್ಳೆಯ ಸುದ್ದಿ ಇದೆ. ಈ ಬಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಅಂಚೆ ಕಚೇರಿ ಯೋಜನೆಯಲ್ಲಿ 'ಡಬಲ್' ಪ್ರಯೋಜನವನ್ನು ಘೋಷಿಸಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..
ಅಂಚೆ ಇಲಾಖೆ ಮಾಸಿಕ ಆದಾಯ ಯೋಜನೆ (ಎಂಐಎಸ್) ಠೇವಣಿ ಮಿತಿಯನ್ನು ಹೆಚ್ಚಿಸಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಇದನ್ನು ಘೋಷಿಸಿದ್ದಾರೆ. ಮುಂದಿನ ಆರ್ಥಿಕ ವರ್ಷದಿಂದ ಜನರು ಅಂಚೆ ಇಲಾಖೆಯ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಹೆಚ್ಚಿನ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
(1 / 5)
ಅಂಚೆ ಇಲಾಖೆ ಮಾಸಿಕ ಆದಾಯ ಯೋಜನೆ (ಎಂಐಎಸ್) ಠೇವಣಿ ಮಿತಿಯನ್ನು ಹೆಚ್ಚಿಸಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಇದನ್ನು ಘೋಷಿಸಿದ್ದಾರೆ. ಮುಂದಿನ ಆರ್ಥಿಕ ವರ್ಷದಿಂದ ಜನರು ಅಂಚೆ ಇಲಾಖೆಯ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಹೆಚ್ಚಿನ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.(HT)
ಬುಧವಾರದ ತಮ್ಮ ಬಜೆಟ್ ಭಾಷಣದಲ್ಲಿ, ಕೇಂದ್ರ ಹಣಕಾಸು ಸಚಿವರು, ಅಂಚೆ ಇಲಾಖೆಯ ಮಾಸಿಕ ಆದಾಯ ಯೋಜನೆ (ಎಂಐಎಸ್) ಅಡಿಯಲ್ಲಿ, ಏಕ ಖಾತೆದಾರರಿಗೆ ಗರಿಷ್ಠ ಠೇವಣಿ ಮಿತಿಯನ್ನು 4.5 ಲಕ್ಷ ರೂ.ದಿಂದ 9 ಲಕ್ಷ ರೂ.ಗೆ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು. ಜಂಟಿ ಖಾತೆಯ ಸಂದರ್ಭದಲ್ಲಿ, ಗರಿಷ್ಠ ಮಿತಿಯನ್ನು 15 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದು ಪ್ರಸ್ತುತ ಒಂಬತ್ತು ಲಕ್ಷ ರೂ. ಇದೆ. (ಸಂಗ್ರಹ ಚಿತ್ರ)
(2 / 5)
ಬುಧವಾರದ ತಮ್ಮ ಬಜೆಟ್ ಭಾಷಣದಲ್ಲಿ, ಕೇಂದ್ರ ಹಣಕಾಸು ಸಚಿವರು, ಅಂಚೆ ಇಲಾಖೆಯ ಮಾಸಿಕ ಆದಾಯ ಯೋಜನೆ (ಎಂಐಎಸ್) ಅಡಿಯಲ್ಲಿ, ಏಕ ಖಾತೆದಾರರಿಗೆ ಗರಿಷ್ಠ ಠೇವಣಿ ಮಿತಿಯನ್ನು 4.5 ಲಕ್ಷ ರೂ.ದಿಂದ 9 ಲಕ್ಷ ರೂ.ಗೆ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು. ಜಂಟಿ ಖಾತೆಯ ಸಂದರ್ಭದಲ್ಲಿ, ಗರಿಷ್ಠ ಮಿತಿಯನ್ನು 15 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದು ಪ್ರಸ್ತುತ ಒಂಬತ್ತು ಲಕ್ಷ ರೂ. ಇದೆ. (ಸಂಗ್ರಹ ಚಿತ್ರ)(HT)
ಮಾಸಿಕ ಆದಾಯ ಯೋಜನೆಯು, ಅಂಚೆ ಇಲಾಖೆಯ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಐದು ವರ್ಷಗಳ ನಂತರ ನೀವು ಯೋಜನೆಯನ್ನು ನಿಲ್ಲಿಸಿದರೆ, ಹೆಚ್ಚುವರಿ ಹಣದ ಅಗತ್ಯವಿಲ್ಲ. ಯೋಜನೆಯನ್ನು ಮೊದಲೇ ಮುಚ್ಚಿದರೆ (1 ವರ್ಷದ ಮೊದಲು, 1 ವರ್ಷದಿಂದ 3 ವರ್ಷಗಳ ಮೊದಲು ಮತ್ತು 3 ವರ್ಷದಿಂದ 5 ವರ್ಷಗಳ ಮೊದಲು) ಕೆಲವು ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)
(3 / 5)
ಮಾಸಿಕ ಆದಾಯ ಯೋಜನೆಯು, ಅಂಚೆ ಇಲಾಖೆಯ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಐದು ವರ್ಷಗಳ ನಂತರ ನೀವು ಯೋಜನೆಯನ್ನು ನಿಲ್ಲಿಸಿದರೆ, ಹೆಚ್ಚುವರಿ ಹಣದ ಅಗತ್ಯವಿಲ್ಲ. ಯೋಜನೆಯನ್ನು ಮೊದಲೇ ಮುಚ್ಚಿದರೆ (1 ವರ್ಷದ ಮೊದಲು, 1 ವರ್ಷದಿಂದ 3 ವರ್ಷಗಳ ಮೊದಲು ಮತ್ತು 3 ವರ್ಷದಿಂದ 5 ವರ್ಷಗಳ ಮೊದಲು) ಕೆಲವು ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)(HT)
ಕೇಂದ್ರ ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಬದಲಾಯಿಸುತ್ತದೆ. ಇದು ಮಾಸಿಕ ಆದಾಯ ಯೋಜನೆಗೂ ಅನ್ವಯಿಸುತ್ತದೆ. ಅದೇ ರೀತಿ, ಪ್ರಸಕ್ತ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್ 2023), ಮಾಸಿಕ ಆದಾಯ ಯೋಜನೆಯ ಬಡ್ಡಿ ದರ ಶೇ. 7.1ರಷ್ಟಿದೆ. 
(4 / 5)
ಕೇಂದ್ರ ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಬದಲಾಯಿಸುತ್ತದೆ. ಇದು ಮಾಸಿಕ ಆದಾಯ ಯೋಜನೆಗೂ ಅನ್ವಯಿಸುತ್ತದೆ. ಅದೇ ರೀತಿ, ಪ್ರಸಕ್ತ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್ 2023), ಮಾಸಿಕ ಆದಾಯ ಯೋಜನೆಯ ಬಡ್ಡಿ ದರ ಶೇ. 7.1ರಷ್ಟಿದೆ. (HT)
ಯಾರು ಅಂಚೆ ಇಲಾಖೆ ಮಾಸಿಕ ಆದಾಯ ಯೋಜನೆಗೆ ಅರ್ಹರು? 1) ವಯಸ್ಕರು2) ಜಂಟಿ ಖಾತೆ (ಗರಿಷ್ಠ 3 ವಯಸ್ಕರು) 3) ಅಪ್ರಾಪ್ತ ವಯಸ್ಕರ ಸಂದರ್ಭದಲ್ಲಿ ಅವರ ಪೋಷಕರು4) 10 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಅಪ್ರಾಪ್ತರು ತಮ್ಮ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. (ಸಾಂದರ್ಭಿಕ ಚಿತ್ರ)
(5 / 5)
ಯಾರು ಅಂಚೆ ಇಲಾಖೆ ಮಾಸಿಕ ಆದಾಯ ಯೋಜನೆಗೆ ಅರ್ಹರು? 1) ವಯಸ್ಕರು2) ಜಂಟಿ ಖಾತೆ (ಗರಿಷ್ಠ 3 ವಯಸ್ಕರು) 3) ಅಪ್ರಾಪ್ತ ವಯಸ್ಕರ ಸಂದರ್ಭದಲ್ಲಿ ಅವರ ಪೋಷಕರು4) 10 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಅಪ್ರಾಪ್ತರು ತಮ್ಮ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. (ಸಾಂದರ್ಭಿಕ ಚಿತ್ರ)(HT)

    ಹಂಚಿಕೊಳ್ಳಲು ಲೇಖನಗಳು