logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅನಿಲ್ ಕುಂಬ್ಳೆರಿಂದ ಆರ್ ಅಶ್ವಿನ್‌ವರೆಗೆ; ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಂ ಇಂಡಿಯಾದ ಸ್ಪಿನ್ನರ್ಸ್

ಅನಿಲ್ ಕುಂಬ್ಳೆರಿಂದ ಆರ್ ಅಶ್ವಿನ್‌ವರೆಗೆ; ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಂ ಇಂಡಿಯಾದ ಸ್ಪಿನ್ನರ್ಸ್

Nov 18, 2023 07:26 PM IST

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ 5 ಸ್ಪಿನ್ನರ್ಸ್ ವಿವರ ಇಲ್ಲಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ 5 ಸ್ಪಿನ್ನರ್ಸ್ ವಿವರ ಇಲ್ಲಿದೆ.
ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ 5 ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಅವರು ಅಗ್ರಸ್ಥಾನದಲ್ಲಿದ್ದಾರೆ. ಕುಂಬ್ಳೆ ಅವರು 1994 ರಿಂದ 2008ರ ಅವಧಿಯಲ್ಲಿ ಇಲ್ಲಿ 7 ಪಂದ್ಯಗಳನ್ನು ಆಡಿದ್ದು, 13 ಇನ್ನಿಂಗ್ಸ್‌ನಿಂದ 36 ವಿಕೆಟ್ ಪಡೆದಿದ್ದಾರೆ. 3 ಬಾರಿ 5 ವಿಕೆಟ್ ಹಾಗೂ 1 ಬಾರಿ 4 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
(1 / 5)

ಟೀಂ ಇಂಡಿಯಾದ ಮತ್ತೊಬ್ಬ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ 1999 ರಿಂದ 2010ರವರೆಗೆ ಈ ಮೈದಾನದಲ್ಲಿ 7 ಪಂದ್ಯಗಳನ್ನು ಆಡಿದ್ದು, 11 ಇನ್ನಿಂಗ್ಸ್‌ಗಳಿಂದ 29 ವಿಕೆಟ್ ಪಡೆದಿದ್ದಾರೆ. 3 ಬಾರಿ 5 ವಿಕೆಟ್ ಹಾಗೂ 1 ಬಾರಿ 4 ವಿಕೆಟ್ ಗಳಿಸಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 
(2 / 5)
ಟೀಂ ಇಂಡಿಯಾದ ಮತ್ತೊಬ್ಬ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ 1999 ರಿಂದ 2010ರವರೆಗೆ ಈ ಮೈದಾನದಲ್ಲಿ 7 ಪಂದ್ಯಗಳನ್ನು ಆಡಿದ್ದು, 11 ಇನ್ನಿಂಗ್ಸ್‌ಗಳಿಂದ 29 ವಿಕೆಟ್ ಪಡೆದಿದ್ದಾರೆ. 3 ಬಾರಿ 5 ವಿಕೆಟ್ ಹಾಗೂ 1 ಬಾರಿ 4 ವಿಕೆಟ್ ಗಳಿಸಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. (AFP)
2023ರ ವಿಶ್ವಕಪ್‌ನ ಟೀಂ ಇಂಡಿಯಾದಲ್ಲಿರುವ ಆರ್ ಅಶ್ವಿನ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ 2012 ರಿಂದ 2023ರ ವರೆಗಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅಹಮದಾಬಾದ್‌ನಲ್ಲಿ 4 ಪಂದ್ಯಗಳನ್ನು ಆಡಿದ್ದಾರೆ. 11 ಇನ್ನಿಂಗ್ಸ್‌ಗಳಿಂದ 26 ವಿಕೆಟ್ ಗಳಿಸಿದ್ದಾರೆ. 2 ಬಾರಿ 5 ವಿಕೆಟ್ ಹಾಗೂ 1 ಬಾರಿ 4 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
(3 / 5)
2023ರ ವಿಶ್ವಕಪ್‌ನ ಟೀಂ ಇಂಡಿಯಾದಲ್ಲಿರುವ ಆರ್ ಅಶ್ವಿನ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ 2012 ರಿಂದ 2023ರ ವರೆಗಿನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅಹಮದಾಬಾದ್‌ನಲ್ಲಿ 4 ಪಂದ್ಯಗಳನ್ನು ಆಡಿದ್ದಾರೆ. 11 ಇನ್ನಿಂಗ್ಸ್‌ಗಳಿಂದ 26 ವಿಕೆಟ್ ಗಳಿಸಿದ್ದಾರೆ. 2 ಬಾರಿ 5 ವಿಕೆಟ್ ಹಾಗೂ 1 ಬಾರಿ 4 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.(ICC-X)
ಮೋದಿ ಸ್ಟೇಡಿಯಂನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಂ ಇಂಡಿಯಾದ ಅಗ್ರ 5 ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಅಕ್ಷರ್ ಪಟೇಲ್ 4ನೇ ಸ್ಥಾನದಲ್ಲಿದ್ದಾರೆ. ಅಕ್ಷರ್ 2021 ರಿಂದ 2023ರ ಅವಧಿಯಲ್ಲಿ 3 ಪಂದ್ಯಗಳನ್ನು ಆಡಿದ್ದು, 6 ಇನ್ನಿಂಗ್ಸ್‌ಗಳಿಂದ 22 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. 3 ಬಾರಿ 5 ವಿಕೆಟ್ ಹಾಗೂ 1 ಬಾರಿ ನಾಲ್ಕು ವಿಕೆಟ್ ಸಾಧನೆ ಮಾಡಿದ್ದಾರೆ. 
(4 / 5)
ಮೋದಿ ಸ್ಟೇಡಿಯಂನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಂ ಇಂಡಿಯಾದ ಅಗ್ರ 5 ಸ್ಪಿನ್ನರ್‌ಗಳ ಪಟ್ಟಿಯಲ್ಲಿ ಅಕ್ಷರ್ ಪಟೇಲ್ 4ನೇ ಸ್ಥಾನದಲ್ಲಿದ್ದಾರೆ. ಅಕ್ಷರ್ 2021 ರಿಂದ 2023ರ ಅವಧಿಯಲ್ಲಿ 3 ಪಂದ್ಯಗಳನ್ನು ಆಡಿದ್ದು, 6 ಇನ್ನಿಂಗ್ಸ್‌ಗಳಿಂದ 22 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. 3 ಬಾರಿ 5 ವಿಕೆಟ್ ಹಾಗೂ 1 ಬಾರಿ ನಾಲ್ಕು ವಿಕೆಟ್ ಸಾಧನೆ ಮಾಡಿದ್ದಾರೆ. (AP)
ಮೋದಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಪ್ರಗ್ಯಾನ್ ಓಜಾ 5ನೇ  ಸ್ಥಾನದಲ್ದಿದ್ದಾರೆ. ಓಜಾ 2010 ರಿಂದ 2012ರ ಅವಧಿಯಲ್ಲಿ 2 ಪಂದ್ಯಗಳಿಂದ 4 ಇನ್ನಿಂಗ್ಸ್ ಆಡಿದ್ದು, 13 ವಿಕೆಟ್ ಗಳಿಸಿದ್ದಾರೆ. 1 ಬಾರಿ 5 ವಿಕೆಟ್ ಸಾಧನೆ ಹಾಗೂ 2 ಬಾರಿ 4 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
(5 / 5)

    ಹಂಚಿಕೊಳ್ಳಲು ಲೇಖನಗಳು