logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pakistan Aqi: ಪಾಕಿಸ್ತಾನದಲ್ಲಿ ಪರಿಸ್ಥಿತಿ ಕೈ ಮೀರಿ ಹೋದ ವಾಯುಮಾಲಿನ್ಯ; ಶಾಲೆಗಳು, ಪಾರ್ಕ್​​ಗಳು 10 ದಿನ ಕ್ಲೋಸ್

Pakistan AQI: ಪಾಕಿಸ್ತಾನದಲ್ಲಿ ಪರಿಸ್ಥಿತಿ ಕೈ ಮೀರಿ ಹೋದ ವಾಯುಮಾಲಿನ್ಯ; ಶಾಲೆಗಳು, ಪಾರ್ಕ್​​ಗಳು 10 ದಿನ ಕ್ಲೋಸ್

Nov 10, 2024 08:45 PM IST

Pakistan Air Pollution: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಶಾಲೆಗಳಿಗೆ ಹತ್ತು ದಿನಗಳ ಕಾಲ ರಜೆ ನೀಡಲಾಗಿದೆ. ವಿಪರೀತ ಮಾಲಿನ್ಯದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

  • Pakistan Air Pollution: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಶಾಲೆಗಳಿಗೆ ಹತ್ತು ದಿನಗಳ ಕಾಲ ರಜೆ ನೀಡಲಾಗಿದೆ. ವಿಪರೀತ ಮಾಲಿನ್ಯದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಅತಿಯಾದ ಮಾಲಿನ್ಯದಿಂದಾಗಿ ಪಾಕಿಸ್ತಾನ ದೇಶದಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ. ಪ್ರಸ್ತುತ ಅನೇಕ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) 2,000ಕ್ಕಿಂತ ಹೆಚ್ಚಾಗಿದೆ.
(1 / 6)
ಅತಿಯಾದ ಮಾಲಿನ್ಯದಿಂದಾಗಿ ಪಾಕಿಸ್ತಾನ ದೇಶದಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ. ಪ್ರಸ್ತುತ ಅನೇಕ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) 2,000ಕ್ಕಿಂತ ಹೆಚ್ಚಾಗಿದೆ.(AFP)
ಸಾಮಾನ್ಯವಾಗಿ AQI 400ಕ್ಕಿಂತ ಹೆಚ್ಚಿನ ಗಾಳಿಯನ್ನು ಹೆಚ್ಚು ಕಲುಷಿತ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪಂಜಾಬ್ ಸೇರಿದಂತೆ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿನ ಪರಿಸ್ಥಿತಿ ಸಾಕಷ್ಟು ಶೋಚನೀಯವಾಗಿದೆ. ಲಾಹೋರ್, ಫೈಸಲಾಬಾದ್, ಗುಜ್ರಾನ್ವಾಲಾ, ಚಿನಿಯೋಟ್ ಮತ್ತು ಬಿಹಾರಿಗಳಲ್ಲಿ ಪರಿಸ್ಥಿತಿ ಸಾಕಷ್ಟು ಕೆಟ್ಟದಾಗಿದೆ.  
(2 / 6)
ಸಾಮಾನ್ಯವಾಗಿ AQI 400ಕ್ಕಿಂತ ಹೆಚ್ಚಿನ ಗಾಳಿಯನ್ನು ಹೆಚ್ಚು ಕಲುಷಿತ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪಂಜಾಬ್ ಸೇರಿದಂತೆ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳಲ್ಲಿನ ಪರಿಸ್ಥಿತಿ ಸಾಕಷ್ಟು ಶೋಚನೀಯವಾಗಿದೆ. ಲಾಹೋರ್, ಫೈಸಲಾಬಾದ್, ಗುಜ್ರಾನ್ವಾಲಾ, ಚಿನಿಯೋಟ್ ಮತ್ತು ಬಿಹಾರಿಗಳಲ್ಲಿ ಪರಿಸ್ಥಿತಿ ಸಾಕಷ್ಟು ಕೆಟ್ಟದಾಗಿದೆ.  (AFP)
ಪಾಕಿಸ್ತಾನದ ಪಂಜಾಬ್ ಸರ್ಕಾರ ಈಗಾಗಲೇ ಶಾಲೆಗಳು, ಉದ್ಯಾನವನಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ಮುಚ್ಚಲು ಆದೇಶಿಸಿದೆ. ಈ ಸಂಸ್ಥೆಗಳು ಮುಂದಿನ 10 ದಿನಗಳವರೆಗೆ ಮುಚ್ಚುವಂತೆ ಸೂಚಿಸಲಾಗಿದೆ. ವೃದ್ಧರು ಮತ್ತು ಮಕ್ಕಳು ಮನೆಯಿಂದ ಹೊರಹೋಗದಂತೆ ಸೂಚಿಸಲಾಗಿದೆ.
(3 / 6)
ಪಾಕಿಸ್ತಾನದ ಪಂಜಾಬ್ ಸರ್ಕಾರ ಈಗಾಗಲೇ ಶಾಲೆಗಳು, ಉದ್ಯಾನವನಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ಮುಚ್ಚಲು ಆದೇಶಿಸಿದೆ. ಈ ಸಂಸ್ಥೆಗಳು ಮುಂದಿನ 10 ದಿನಗಳವರೆಗೆ ಮುಚ್ಚುವಂತೆ ಸೂಚಿಸಲಾಗಿದೆ. ವೃದ್ಧರು ಮತ್ತು ಮಕ್ಕಳು ಮನೆಯಿಂದ ಹೊರಹೋಗದಂತೆ ಸೂಚಿಸಲಾಗಿದೆ.(AFP)
ಪ್ರಸ್ತುತ, ಪಂಜಾಬ್ ಪ್ರಾಂತ್ಯದ ಅತಿದೊಡ್ಡ ನಗರವಾದ ಮುಲ್ತಾನ್​​ನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 2135 ಆಗಿದೆ. ಮತ್ತೊಂದೆಡೆ, ಸಂಸಾಬಾದ್ ಕಾಲೋನಿ ಮತ್ತು ಮುಲ್ತಾನ್ ಕಂಟೋನ್ಮೆಂಟ್​​ನಲ್ಲಿ ಕ್ರಮವಾಗಿ 1635 ಮತ್ತು 1527 ಆಗಿದೆ.
(4 / 6)
ಪ್ರಸ್ತುತ, ಪಂಜಾಬ್ ಪ್ರಾಂತ್ಯದ ಅತಿದೊಡ್ಡ ನಗರವಾದ ಮುಲ್ತಾನ್​​ನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 2135 ಆಗಿದೆ. ಮತ್ತೊಂದೆಡೆ, ಸಂಸಾಬಾದ್ ಕಾಲೋನಿ ಮತ್ತು ಮುಲ್ತಾನ್ ಕಂಟೋನ್ಮೆಂಟ್​​ನಲ್ಲಿ ಕ್ರಮವಾಗಿ 1635 ಮತ್ತು 1527 ಆಗಿದೆ.(AFP)
ವಾಯುಮಾಲಿನ್ಯದಿಂದ ಶ್ವಾಸಕೋಶಗಳು ಹಾನಿಗೊಳಗಾಗುವ ಪ್ರಕರಣಗಳು ಹೆಚ್ಚಾಗಿವೆ. ಅನೇಕ ಗಂಭೀರ ಸಮಸ್ಯೆಗಳೂ ಕಂಡು ಬರಬಹುದು. ಗಾಳಿಯಲ್ಲಿರುವ ಕಣಗಳ ಪ್ರಮಾಣ 2.5ರ ಆಧಾರದ ಮೇಲೆ ಗಾಳಿಯ ಶುದ್ಧತೆಯನ್ನು ಅಳೆಯಲಾಗುತ್ತದೆ.
(5 / 6)
ವಾಯುಮಾಲಿನ್ಯದಿಂದ ಶ್ವಾಸಕೋಶಗಳು ಹಾನಿಗೊಳಗಾಗುವ ಪ್ರಕರಣಗಳು ಹೆಚ್ಚಾಗಿವೆ. ಅನೇಕ ಗಂಭೀರ ಸಮಸ್ಯೆಗಳೂ ಕಂಡು ಬರಬಹುದು. ಗಾಳಿಯಲ್ಲಿರುವ ಕಣಗಳ ಪ್ರಮಾಣ 2.5ರ ಆಧಾರದ ಮೇಲೆ ಗಾಳಿಯ ಶುದ್ಧತೆಯನ್ನು ಅಳೆಯಲಾಗುತ್ತದೆ.(AFP)
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇದು ಸಾಮಾನ್ಯವಾಗಿ 35 ಗ್ರಾಂ ಆಗಿರಬೇಕು. ಪಾಕಿಸ್ತಾನದ ಮುಲ್ತಾನ್ ನಗರದಲ್ಲಿ ಇದರ ಪ್ರಮಾಣ 947 ಆಗಿದೆ. ಇದು ಪಾಕಿಸ್ತಾನದ ಚಿಂತೆ ಹೆಚ್ಚಿಸಿದೆ.
(6 / 6)
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇದು ಸಾಮಾನ್ಯವಾಗಿ 35 ಗ್ರಾಂ ಆಗಿರಬೇಕು. ಪಾಕಿಸ್ತಾನದ ಮುಲ್ತಾನ್ ನಗರದಲ್ಲಿ ಇದರ ಪ್ರಮಾಣ 947 ಆಗಿದೆ. ಇದು ಪಾಕಿಸ್ತಾನದ ಚಿಂತೆ ಹೆಚ್ಚಿಸಿದೆ.(AFP)

    ಹಂಚಿಕೊಳ್ಳಲು ಲೇಖನಗಳು