logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಗು ಹುಟ್ಟಿದ ಖುಷಿಯಲ್ಲಿ ಫೋಟೊ ತೆಗೆಸಬೇಕು ಅಂತಿದ್ದೀರಾ, ನವಜಾತ ಶಿಶುಗಳ ಫೋಟೊಶೂಟ್ ಮಾಡಿಸುವುದು ಎಷ್ಟು ಅಪಾಯ ನೋಡಿ

ಮಗು ಹುಟ್ಟಿದ ಖುಷಿಯಲ್ಲಿ ಫೋಟೊ ತೆಗೆಸಬೇಕು ಅಂತಿದ್ದೀರಾ, ನವಜಾತ ಶಿಶುಗಳ ಫೋಟೊಶೂಟ್ ಮಾಡಿಸುವುದು ಎಷ್ಟು ಅಪಾಯ ನೋಡಿ

Nov 28, 2024 02:20 PM IST

ಪುಟ್ಟ ಕಂದಮ್ಮಗಳ ಫೋಟೊ ನೋಡಿದಾಗ ಎತ್ತಿ ಮುದ್ದಾಡಬೇಕು ಅನ್ನಿಸುತ್ತೆ. ಇತ್ತೀಚೆಗೆ ನವಜಾತ ಶಿಶುಗಳ ಫೋಟೊಶೂಟ್ ಸಾಮಾನ್ಯವಾಗಿದೆ. ಆದರೆ ಪುಟ್ಟ ಮಕ್ಕಳ ಫೋಟೊಶೂಟ್ ಮಾಡಿಸುವುದರಿಂದ ಆ ಮಗುವಿನ ಆರೋಗ್ಯಕ್ಕೆ ಹಾನಿಯಾಗುತ್ತದೆ. ನವಜಾತ ಶಿಶುಗಳ ಫೋಟೊಶೂಟ್‌ನಿಂದ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅಧ್ಯಯನವೊಂದು ಹೇಳುತ್ತಿದೆ. 

ಪೋಷಕರಾಗುವುದು ಎಂದರೆ ವಿವರಿಸಲಾಗದ ಆನಂದ. ಅದರಲ್ಲೂ ಕಂದಮ್ಮ ಭೂಮಿಗೆ ಬಂದ ಮೇಲೆ ತಂದೆ–ತಾಯಿಗಳನ್ನು ಹಿಡಿಯುವವರೇ ಇರುವುದಿಲ್ಲ. ಇತ್ತೀಚೆಗೆ ಫೋಟೊಶೂಟ್ ಟ್ರೆಂಡ್ ಹೆಚ್ಚಾಗಿದ್ದು, ಪ್ರಿವೆಡ್ಡಿಂಗ್ ಶೂಟ್‌ನಂತೆ ಬೇಬಿ ಫೋಟೊಶೂಟ್ ಕೂಡ ಸಾಮಾನ್ಯ ಎಂಬಂತಾಗಿದೆ. ಪುಟ್ಟ ಕಂದಮ್ಮಗಳಿಗೆ ಬೇರೆ ಬೇರೆ ರೀತಿ ಡ್ರೆಸ್‌ ಹಾಕಿಸಿ, ಬೇರೆ ಬೇರೆ ಬ್ಯಾಕ್‌ಗ್ರೌಂಡ್‌ನಲ್ಲಿ ಫೋಟೊ ತೆಗೆಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಖುಷಿ ಪಡುತ್ತಾರೆ ಅಮ್ಮ–ಅಮ್ಮ. ಆದರೆ ಇತ್ತೀಚಿನ ಅಧ್ಯಯನವೊಂದರ ಪ್ರಕಾರ ನವಜಾತ ಶಿಶುಗಳ ಫೋಟೊಶೂಟ್ ಮಾಡಿಸುವುದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳುತ್ತದೆ. 
(1 / 9)

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಫೋಟೊಶೂಟ್‌ನಿಂದ ಮಗುವಿನ ಬೆನ್ನುಹುರಿ, ಕೀಲುಗಳು, ನರ ಮತ್ತು ರಕ್ತ ಪರಿಚಲನೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳುತ್ತದೆ. 
(2 / 9)
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಫೋಟೊಶೂಟ್‌ನಿಂದ ಮಗುವಿನ ಬೆನ್ನುಹುರಿ, ಕೀಲುಗಳು, ನರ ಮತ್ತು ರಕ್ತ ಪರಿಚಲನೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳುತ್ತದೆ. (shutterstock)
ಪೊಟ್ಯಾಟೊ ಸ್ಯಾಕ್ ಪೋಸ್‌ನಲ್ಲಿ ಮಗು ಮುದ್ದಾಗಿ ಕಾಣಿಸುತ್ತದೆ. ಈ ಪೋಸ್‌ಗೆ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಕೈಯನ್ನು ಗಲ್ಲದ ಕೆಳಗೆ ಬರುವಂತೆ ಇರಿಸಲಾಗುತ್ತದೆ. ಇದು ಪೋಸ್‌ನಲ್ಲಿ ಮಗು ಅಂದವಾಗಿ ಕಂಡರೂ ಇದರಿಂದ ಮಗುವಿನ ರಕ್ತ ಪರಿಚಲನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಹಾಗೂ ಮಗು ತೊಂದರೆ ಅನುಭವಿಸುತ್ತದೆ 
(3 / 9)
ಪೊಟ್ಯಾಟೊ ಸ್ಯಾಕ್ ಪೋಸ್‌ನಲ್ಲಿ ಮಗು ಮುದ್ದಾಗಿ ಕಾಣಿಸುತ್ತದೆ. ಈ ಪೋಸ್‌ಗೆ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಕೈಯನ್ನು ಗಲ್ಲದ ಕೆಳಗೆ ಬರುವಂತೆ ಇರಿಸಲಾಗುತ್ತದೆ. ಇದು ಪೋಸ್‌ನಲ್ಲಿ ಮಗು ಅಂದವಾಗಿ ಕಂಡರೂ ಇದರಿಂದ ಮಗುವಿನ ರಕ್ತ ಪರಿಚಲನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಹಾಗೂ ಮಗು ತೊಂದರೆ ಅನುಭವಿಸುತ್ತದೆ (shutterstock)
ಹ್ಯಾಂಗಿಂಗ್ ಪೋಸ್‌: ನೇತಾಡುವ ಭಂಗಿಯಲ್ಲಿ ಮಗುವಿನ ಫೋಟೊಶೂಟ್ ಮಾಡಿಸುವುದು ಈಗಿನ ಟ್ರೆಂಡ್‌. ಇದರಿಂದ ಮಗುವಿನ ಫೋಟೊ ಚೆನ್ನಾಗಿ ಬರಬಹುದು, ಆದರೆ ಬೀಳುವ ಸಾಧ್ಯತೆ ಹೆಚ್ಚು. ಹಲವು ಬಾರಿ ಮಗುವನ್ನು ನೇತುಹಾಕಲು ಬಳಸುವ ಬಟ್ಟೆ ತುಂಬಾ ಹಗುರವಾಗಿರುತ್ತದೆ. ಹಾಗಾಗಿ ಬಟ್ಟೆಯ ಮೇಲೆ ಕಟ್ಟಲಾದ ಗಂಟು ಬಿಚ್ಚಿದರೆ ಅಥವಾ ಮಗು ತನ್ನ ಸ್ಥಾನವನ್ನು ಬದಲಾಯಿಸಿದರೆ ಕೆಳಗೆ ಬೀಳುವ ಸಾಧ್ಯತೆ ಇದೆ. ಇದರಿಂದ ಮಗುವಿಗೆ ಗಂಭೀರ ಅಪಾಯಗಳು ಆಗಬಹುದು. 
(4 / 9)
ಹ್ಯಾಂಗಿಂಗ್ ಪೋಸ್‌: ನೇತಾಡುವ ಭಂಗಿಯಲ್ಲಿ ಮಗುವಿನ ಫೋಟೊಶೂಟ್ ಮಾಡಿಸುವುದು ಈಗಿನ ಟ್ರೆಂಡ್‌. ಇದರಿಂದ ಮಗುವಿನ ಫೋಟೊ ಚೆನ್ನಾಗಿ ಬರಬಹುದು, ಆದರೆ ಬೀಳುವ ಸಾಧ್ಯತೆ ಹೆಚ್ಚು. ಹಲವು ಬಾರಿ ಮಗುವನ್ನು ನೇತುಹಾಕಲು ಬಳಸುವ ಬಟ್ಟೆ ತುಂಬಾ ಹಗುರವಾಗಿರುತ್ತದೆ. ಹಾಗಾಗಿ ಬಟ್ಟೆಯ ಮೇಲೆ ಕಟ್ಟಲಾದ ಗಂಟು ಬಿಚ್ಚಿದರೆ ಅಥವಾ ಮಗು ತನ್ನ ಸ್ಥಾನವನ್ನು ಬದಲಾಯಿಸಿದರೆ ಕೆಳಗೆ ಬೀಳುವ ಸಾಧ್ಯತೆ ಇದೆ. ಇದರಿಂದ ಮಗುವಿಗೆ ಗಂಭೀರ ಅಪಾಯಗಳು ಆಗಬಹುದು. (shutterstock)
ಬಕೆಟ್ ಪೋಸ್‌: ಇದು ಮಗುವನ್ನು ಬಕೆಟ್ ಒಳಗೆ ಕೂರಿಸಿ ಫೋಟೊ ತೆಗೆಯುವುದು. ಮಗು ಬಕೆಟ್‌ನಲ್ಲಿ ನಿಲ್ಲುವಂತೆ ಮಾಡಿ ಮಗುವಿನ ಬಾಯಿಯನ್ನು ಬಕೆಟ್‌ನ ಅಂಚಿನ ಮೇಲೆ ಇರಿಸಲಾಗುತ್ತದೆ. ಈ ಭಂಗಿಯು ಮಗುವಿನ ಕೀಲುಗಳಿಗೆ ಹಾನಿ ಮಾಡುತ್ತದೆ ಎಂದು ಆ ಅಧ್ಯಯನ ಹೇಳಿದೆ. 
(5 / 9)
ಬಕೆಟ್ ಪೋಸ್‌: ಇದು ಮಗುವನ್ನು ಬಕೆಟ್ ಒಳಗೆ ಕೂರಿಸಿ ಫೋಟೊ ತೆಗೆಯುವುದು. ಮಗು ಬಕೆಟ್‌ನಲ್ಲಿ ನಿಲ್ಲುವಂತೆ ಮಾಡಿ ಮಗುವಿನ ಬಾಯಿಯನ್ನು ಬಕೆಟ್‌ನ ಅಂಚಿನ ಮೇಲೆ ಇರಿಸಲಾಗುತ್ತದೆ. ಈ ಭಂಗಿಯು ಮಗುವಿನ ಕೀಲುಗಳಿಗೆ ಹಾನಿ ಮಾಡುತ್ತದೆ ಎಂದು ಆ ಅಧ್ಯಯನ ಹೇಳಿದೆ. (shutterstock)
ಫ್ರಾಗ್ ಪೋಸ‌್: ಕಪ್ಪೆ ಭಂಗಿಯಲ್ಲಿ ಮಗುವಿನ ಫೋಟೊಶೂಟ್ ಮಾಡಿಸುವುದನ್ನು ನೀವೂ ನೋಡಿರಬಹುದು. ಇದರಲ್ಲಿ ಮಗುವನ್ನು ಹೊಟ್ಟೆ ಮೇಲೆ ಮಲಗಿಸಿ ಕೈಯನ್ನು ಗಲ್ಲಕ್ಕೆ ಆನಿಸಿ ಇರಿಸಲಾಗುತ್ತದೆ. ಮಗುವಿನ ಮುಖದ ಭಾರದ ಕೈಗಳ ಮೇಲೆ ಇರುತ್ತದೆ. ಈ ಭಂಗಿ ಬಹಳ ಅಪಾಯಕಾರಿ ಯಾಕೆಂದರೆ ಮಗುವಿನ ತನ್ನನ್ನು ತಾನು ಸಮತೋಲನ ಮಾಡಿಕೊಳ್ಳುವುದೇ ಕಷ್ಟ, ಅಂಥದ್ರರಲ್ಲಿ ಕೈ ಬ್ಯಾಲೆನ್ಸ್ ಕೊಂಚ ತಪ್ಪಿದ್ರೂ ಮಗುವಿನ ಮುಖ ನೆಲಕ್ಕೆ ಬಡಿಯಬಹುದು. 
(6 / 9)
ಫ್ರಾಗ್ ಪೋಸ‌್: ಕಪ್ಪೆ ಭಂಗಿಯಲ್ಲಿ ಮಗುವಿನ ಫೋಟೊಶೂಟ್ ಮಾಡಿಸುವುದನ್ನು ನೀವೂ ನೋಡಿರಬಹುದು. ಇದರಲ್ಲಿ ಮಗುವನ್ನು ಹೊಟ್ಟೆ ಮೇಲೆ ಮಲಗಿಸಿ ಕೈಯನ್ನು ಗಲ್ಲಕ್ಕೆ ಆನಿಸಿ ಇರಿಸಲಾಗುತ್ತದೆ. ಮಗುವಿನ ಮುಖದ ಭಾರದ ಕೈಗಳ ಮೇಲೆ ಇರುತ್ತದೆ. ಈ ಭಂಗಿ ಬಹಳ ಅಪಾಯಕಾರಿ ಯಾಕೆಂದರೆ ಮಗುವಿನ ತನ್ನನ್ನು ತಾನು ಸಮತೋಲನ ಮಾಡಿಕೊಳ್ಳುವುದೇ ಕಷ್ಟ, ಅಂಥದ್ರರಲ್ಲಿ ಕೈ ಬ್ಯಾಲೆನ್ಸ್ ಕೊಂಚ ತಪ್ಪಿದ್ರೂ ಮಗುವಿನ ಮುಖ ನೆಲಕ್ಕೆ ಬಡಿಯಬಹುದು. (shutterstock)
ಸಿಬ್ಲಿಂಗ್ ಪೋಸ್‌: ಇದು ಹೆಸರೇ ಹೇಳುವಂತೆ ಮಗುವಿನ ಅಣ್ಣ, ಅಕ್ಕನ ಜೊತೆ ಫೋಟೊ ತೆಗೆಸುವುದು. ಹಲವರು ಬಾರಿ ತಮ್ಮ ಎರಡನೇ ಮಗುವಿನ ಫೋಟೊಶೂಟ್ ಮಾಡಿಸುವಾಗ ಪೋಷಕರು ಮೊದಲ ಮಗುವಿನ ಕೈಯಲ್ಲಿ ಪುಟ್ಟ ಮಗುವನ್ನು ಕೊಡುತ್ತಾರೆ. ಮಕ್ಕಳ ಮನಸ್ಸು ಚಂಚಲ ಮತ್ತು ಅವರಿಗೆ ಮಗುವನ್ನು ಹೇಗೆ ಹಿಡಿದುಕೊಳ್ಳಬೇಕು ಎಂಬುದು ಗೊತ್ತಿರುವುದಿಲ್ಲ. ಆಗ ಅವರು ಮಗುವನ್ನು ಕೆಳಕ್ಕೆ ಬೀಳಿಸಿಬಿಡಬಹುದು. ಇದರಿಂದ ಮಗುವಿಗೆ ಗಾಯವಾಗುವ ಹಾಗೂ ಗಂಭೀರ ಅಪಾಯ ಆಗುವ ಸಾಧ್ಯತೆ ಇದೆ.  
(7 / 9)
ಸಿಬ್ಲಿಂಗ್ ಪೋಸ್‌: ಇದು ಹೆಸರೇ ಹೇಳುವಂತೆ ಮಗುವಿನ ಅಣ್ಣ, ಅಕ್ಕನ ಜೊತೆ ಫೋಟೊ ತೆಗೆಸುವುದು. ಹಲವರು ಬಾರಿ ತಮ್ಮ ಎರಡನೇ ಮಗುವಿನ ಫೋಟೊಶೂಟ್ ಮಾಡಿಸುವಾಗ ಪೋಷಕರು ಮೊದಲ ಮಗುವಿನ ಕೈಯಲ್ಲಿ ಪುಟ್ಟ ಮಗುವನ್ನು ಕೊಡುತ್ತಾರೆ. ಮಕ್ಕಳ ಮನಸ್ಸು ಚಂಚಲ ಮತ್ತು ಅವರಿಗೆ ಮಗುವನ್ನು ಹೇಗೆ ಹಿಡಿದುಕೊಳ್ಳಬೇಕು ಎಂಬುದು ಗೊತ್ತಿರುವುದಿಲ್ಲ. ಆಗ ಅವರು ಮಗುವನ್ನು ಕೆಳಕ್ಕೆ ಬೀಳಿಸಿಬಿಡಬಹುದು. ಇದರಿಂದ ಮಗುವಿಗೆ ಗಾಯವಾಗುವ ಹಾಗೂ ಗಂಭೀರ ಅಪಾಯ ಆಗುವ ಸಾಧ್ಯತೆ ಇದೆ.  (shutterstock)
ಗಮನಿಸಿ: ಈ ಮಾಹಿತಿಯ ಸಾಮಾನ್ಯಜ್ಞಾನ ಹಾಗೂ ಅಧ್ಯಯನ್ನು ಆಧರಿಸಿದ ಬರಹವಾಗಿದೆ. ಈ ಕುರಿತ ನಿಖರ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ. 
(8 / 9)
ಗಮನಿಸಿ: ಈ ಮಾಹಿತಿಯ ಸಾಮಾನ್ಯಜ್ಞಾನ ಹಾಗೂ ಅಧ್ಯಯನ್ನು ಆಧರಿಸಿದ ಬರಹವಾಗಿದೆ. ಈ ಕುರಿತ ನಿಖರ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ. 
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(9 / 9)
ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

    ಹಂಚಿಕೊಳ್ಳಲು ಲೇಖನಗಳು