logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಿವಿ ಸಿಂಧು ಹ್ಯಾಟ್ರಿಕ್ ಪದಕದ ಕನಸು ಭಗ್ನ; ಎರಡು ಒಲಿಂಪಿಕ್ಸ್​ ಪದಕ ವಿಜೇತೆ ಅಭಿಯಾನ ಅಂತ್ಯ

ಪಿವಿ ಸಿಂಧು ಹ್ಯಾಟ್ರಿಕ್ ಪದಕದ ಕನಸು ಭಗ್ನ; ಎರಡು ಒಲಿಂಪಿಕ್ಸ್​ ಪದಕ ವಿಜೇತೆ ಅಭಿಯಾನ ಅಂತ್ಯ

Aug 02, 2024 05:40 AM IST

PV Sindhu: ಹ್ಯಾಟ್ರಿಕ್ ಪದಕದ ಭರವಸೆ ಮೂಡಿಸಿದ್ದ ಭಾರತದ ಸ್ಟಾರ್​ ಷಟ್ಲರ್ ಪಿವಿ ಸಿಂಧು ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಪ್ರೀ ಕ್ವಾರ್ಟರ್​​ ಫೈನಲ್​​ನಲ್ಲಿ ಸೋತು ನಿರಾಸೆ ಮೂಡಿಸಿದ್ದಾರೆ.

  • PV Sindhu: ಹ್ಯಾಟ್ರಿಕ್ ಪದಕದ ಭರವಸೆ ಮೂಡಿಸಿದ್ದ ಭಾರತದ ಸ್ಟಾರ್​ ಷಟ್ಲರ್ ಪಿವಿ ಸಿಂಧು ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಪ್ರೀ ಕ್ವಾರ್ಟರ್​​ ಫೈನಲ್​​ನಲ್ಲಿ ಸೋತು ನಿರಾಸೆ ಮೂಡಿಸಿದ್ದಾರೆ.
ಭಾರತದ ಸ್ಟಾರ್​ ಷಟ್ಲರ್​ ಪಿವಿ ಸಿಂಧು ಅವರ ಹ್ಯಾಟ್ರಿಕ್ ಪದಕದ ಕನಸು ಭಗ್ನಗೊಂಡಿತು. ಕಳೆದ ಎರಡು ಒಲಿಂಪಿಕ್ಸ್​​ಗಳಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದ ಸಿಂಧು, ಈ ಬಾರಿ ಚಿನ್ನಕ್ಕೆ ಗುರಿ ಇಟ್ಟಿದ್ದರು. ಆದರೆ ಪ್ಯಾರಿಸ್ ಒಲಿಂಪಿಕ್ಸ್​​​ನ ಮಹಿಳಾ ಸಿಂಗಲ್ಸ್​​ ಬ್ಯಾಡ್ಮಿಂಟನ್​​ ಪ್ರೀಕ್ವಾರ್ಟರ್​​ ಫೈನಲ್​​ ಸುತ್ತಿನಲ್ಲೇ ಸೋತು ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಪದಕದ ನಿರೀಕ್ಷೆ ಹುಟ್ಟು ಹಾಕಿದ್ದ ಸಿಂಧು ಸೋಲು ಕ್ರೀಡಾಪ್ರೇಮಿಗಳಿಗೆ ಭಾರಿ ನಿರಾಸೆ ತಂದಿಟ್ಟಿದೆ.
(1 / 6)

ರಿಯೋ ಒಲಿಂಪಿಕ್ಸ್​​​ನ ಮಹಿಳಾ ಸಿಂಗಲ್ಸ್​ನಲ್ಲಿ ಬೆಳ್ಳಿ ಪದಕ, ಟೊಕಿಯೊ ಒಲಿಂಪಿಕ್ಸ್​​​ನ ಮಹಿಳಾ ಸಿಂಗಲ್ಸ್​​ನಲ್ಲಿ ಕಂಚಿನ ಪದಕ ಗೆದ್ದಿದ್ದ ಪಿವಿ ಸಿಂಧು, ಪ್ಯಾರಿಸ್ ಒಲಿಂಪಿಕ್ಸ್​​​ನಲ್ಲಿ ಪದಕದ ಬಣ್ಣ ಬದಲಾಯಿಸಲು ಸಜ್ಜಾಗಿದ್ದರು. ಆದಾಗ್ಯೂ, ಭಾರತೀಯ ತಾರೆ ಹ್ಯಾಟ್ರಿಕ್ ಪದಕ ಗಳಿಸಲು ವಿಫಲರಾದರು.
(2 / 6)

ಪ್ರಿ ಕ್ವಾರ್ಟರ್ ಫೈನಲ್​ನಲ್ಲಿ 10ನೇ ಶ್ರೇಯಾಂಕದ ಸಿಂಧು, ಆರನೇ ಶ್ರೇಯಾಂಕದ ಚೀನಾದ ಹಿ ಬಿಂಗ್ ಕ್ಸಿಯಾವೊ ವಿರುದ್ಧ ಸೆಣಸಿದರು. ಸಿಂಧು ಪಂದ್ಯದ ಆರಂಭದಿಂದಲೂ ಪ್ರತಿರೋಧ ತೋರಿದರೂ 0-2 ನೇರ ಗೇಮ್​​ಗಳಲ್ಲಿ ಪಂದ್ಯವನ್ನು ಸೋತು ಹೊರಬಿದ್ದರು.
(3 / 6)

ಮೊದಲ ಗೇಮ್​​ನಲ್ಲಿ ಸಿಂಧು ಒಂದು ಹಂತದಲ್ಲಿ 3-8ರಿಂದ ಹಿನ್ನಡೆ ಅನುಭವಿಸಿದ್ದರು. ಪಂದ್ಯದ ಮಧ್ಯದ ವಿರಾಮದ ವೇಳೆಗೆ ಸಿಂಧು ಅಂತರವನ್ನು 8-11ಕ್ಕೆ ಇಳಿಸಿದರು. ಬಳಿಕ ಇಬ್ಬರು ಸಮಬಲದ ಹೋರಾಟ ನಡೆಸಿದರು. ಆದರೆ, 30 ನಿಮಿಷಗಳ ಕಠಿಣ ಹೋರಾಟದ ನಂತರ ಸಿಂಧು ಮೊದಲ ಗೇಮ್ ಅನ್ನು 19-21 ರಿಂದ ಕಳೆದುಕೊಂಡರು.
(4 / 6)

ಎರಡನೇ ಗೇಮ್​ನ ಆರಂಭದಿಂದಲೂ ಹಿನ್ನಡೆ ಹಿನ್ನಡೆ ಅನುಭವಿಸಿದ ಸಿಂಧು, ಕಂಬ್ಯಾಕ್ ಮಾಡಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಯಶಸ್ಸು ಸಿಗಲಿಲ್ಲ. ಎದುರಾಳಿ ಅದಕ್ಕೆ ಅವಕಾಶವೇ ಕೊಡಲಿಲ್ಲ. 26 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಎರಡನೇ ಗೇಮ್ ಅನ್ನೂ ಭಾರತದ ಆಟಗಾರ್ತಿ 14-21ರಿಂದ ಕಳೆದುಕೊಂಡರು.
(5 / 6)

ಮಹಿಳಾ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್​​​ನಲ್ಲಿ ಸಿಂಧು ಅವರನ್ನು 19-21, 14-21 ಅಂತರದಿಂದ ಮಣಿಸಿದ ಬಿಂಗ್ ಕ್ಸಿಯಾವೊ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ವಿಶೇಷವೆಂದರೆ, ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಬಿಂಗ್ ಕ್ಸಿಯಾವೊ ಸೋಲಿಸಿ ಸಿಂಧು ಕಂಚು ಗೆದ್ದಿದ್ದರು, ಇದೀಗ ಮೂರು ವರ್ಷಗಳ ನಂತರ ಸಿಂಧು ವಿರುದ್ಧ ಬಿಂಗ್ ಸೇಡು ತೀರಿಸಿಕೊಂಡಿದ್ದಾರೆ.
(6 / 6)

    ಹಂಚಿಕೊಳ್ಳಲು ಲೇಖನಗಳು