logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Manipur Violence: ರಾಹುಲ್‌ ಗಾಂಧಿ ಮಣಿಪುರ ಭೇಟಿ ಮತ್ತು ದಿನದ ವಿದ್ಯಮಾನದ ಫೋಟೋಸ್‌ ಮತ್ತು ವರದಿ

Manipur Violence: ರಾಹುಲ್‌ ಗಾಂಧಿ ಮಣಿಪುರ ಭೇಟಿ ಮತ್ತು ದಿನದ ವಿದ್ಯಮಾನದ ಫೋಟೋಸ್‌ ಮತ್ತು ವರದಿ

Jun 29, 2023 07:23 PM IST

Manipur Violence: ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ತೆರಳಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ತಂಡ ಬಿಷ್ಣುಪುರ ಜಿಲ್ಲೆಯ ಚುರಚಂದಪುರಕ್ಕೆ ಹೋಗುವಾಗ ಪೊಲೀಸರು ತಡೆದಿದ್ದಾರೆ. ಸ್ಥಳೀಯರ ಪ್ರತಿಭಟನೆಯನ್ನೂ ರಾಹುಲ್‌ ಗಾಂಧಿ ತಂಡ ಎದುರಿಸಿದೆ. ಇಂದಿನ ವಿದ್ಯಮಾನದ ಫೋಟೋಸ್‌ ಇಲ್ಲಿವೆ.

Manipur Violence: ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ತೆರಳಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ತಂಡ ಬಿಷ್ಣುಪುರ ಜಿಲ್ಲೆಯ ಚುರಚಂದಪುರಕ್ಕೆ ಹೋಗುವಾಗ ಪೊಲೀಸರು ತಡೆದಿದ್ದಾರೆ. ಸ್ಥಳೀಯರ ಪ್ರತಿಭಟನೆಯನ್ನೂ ರಾಹುಲ್‌ ಗಾಂಧಿ ತಂಡ ಎದುರಿಸಿದೆ. ಇಂದಿನ ವಿದ್ಯಮಾನದ ಫೋಟೋಸ್‌ ಇಲ್ಲಿವೆ.
ಮಣಿಪುರದ ಬಿಷ್ಣುಪುರ ಜಿಲ್ಲೆ ಚುರಚಂದಪುರಕ್ಕೆ ಹೊರಟ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ತಂಡಕ್ಕೆ ಪ್ರತಿರೋಧ ವ್ಯಕ್ತವಾಗಿದೆ. ಪೊಲೀಸರು ಕೂಡಲೇ ಗುಂಪನ್ನು ಚದುರಿಸಿ ಕಾಂಗೆಸ್‌ ನಾಯಕರ ತಂಡದ ಪ್ರವಾಸ ಕೈಬಿಡುವಂತೆ ಮನವರಿಕೆ ಮಾಡಿಕೊಟ್ಟರು.
(1 / 7)
ಮಣಿಪುರದ ಬಿಷ್ಣುಪುರ ಜಿಲ್ಲೆ ಚುರಚಂದಪುರಕ್ಕೆ ಹೊರಟ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ತಂಡಕ್ಕೆ ಪ್ರತಿರೋಧ ವ್ಯಕ್ತವಾಗಿದೆ. ಪೊಲೀಸರು ಕೂಡಲೇ ಗುಂಪನ್ನು ಚದುರಿಸಿ ಕಾಂಗೆಸ್‌ ನಾಯಕರ ತಂಡದ ಪ್ರವಾಸ ಕೈಬಿಡುವಂತೆ ಮನವರಿಕೆ ಮಾಡಿಕೊಟ್ಟರು.(REUTERS)
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ಕೇಶಾಮ್ ಮೇಘಚಂದ್ರ ಸಿಂಗ್ ಅವರ ಬೆಂಗಾವಲು ವಾಹನವನ್ನು ಗುರುವಾರ ಬಿಷ್ಣುಪುರದಲ್ಲಿ ಪೊಲೀಸರು ತಡೆದರು. ಅವರು ಜನಾಂಗೀಯ ಹಿಂಸಾಚಾರದ ಸಂತ್ರಸ್ತರನ್ನು ಭೇಟಿಯಾಗಲು ಹೊರಟಿದ್ದರು. (ANI Photo)
(2 / 7)
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ಕೇಶಾಮ್ ಮೇಘಚಂದ್ರ ಸಿಂಗ್ ಅವರ ಬೆಂಗಾವಲು ವಾಹನವನ್ನು ಗುರುವಾರ ಬಿಷ್ಣುಪುರದಲ್ಲಿ ಪೊಲೀಸರು ತಡೆದರು. ಅವರು ಜನಾಂಗೀಯ ಹಿಂಸಾಚಾರದ ಸಂತ್ರಸ್ತರನ್ನು ಭೇಟಿಯಾಗಲು ಹೊರಟಿದ್ದರು. (ANI Photo)(Congress Twitter)
ಮಣಿಪುರದ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಮತ್ತು ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ಕೇಶಾಮ್ ಮೇಘಚಂದ್ರ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆ ಗುರುವಾರ ಬಿಷ್ಣುಪುರದಲ್ಲಿ ಎಸ್ಪಿ ಹೈಸ್ನಮ್ ಬಲರಾಮ್ ಸಿಂಗ್ ಅವರೊಂದಿಗೆ ವಾಗ್ವಾದ ನಡೆಸಿದರು.
(3 / 7)
ಮಣಿಪುರದ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಮತ್ತು ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ಕೇಶಾಮ್ ಮೇಘಚಂದ್ರ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆ ಗುರುವಾರ ಬಿಷ್ಣುಪುರದಲ್ಲಿ ಎಸ್ಪಿ ಹೈಸ್ನಮ್ ಬಲರಾಮ್ ಸಿಂಗ್ ಅವರೊಂದಿಗೆ ವಾಗ್ವಾದ ನಡೆಸಿದರು.(ANI)
ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿರುವ ಮತ್ತು ಗುಂಡಿನ ದಾಳಿ ಆಗಿರುವ ಸ್ಥಳದ ಚಿತ್ರಣ ನೀಡುವ ಪಿಟಿಐ ಗ್ರಾಫಿಕ್ಸ್‌
(4 / 7)
ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿರುವ ಮತ್ತು ಗುಂಡಿನ ದಾಳಿ ಆಗಿರುವ ಸ್ಥಳದ ಚಿತ್ರಣ ನೀಡುವ ಪಿಟಿಐ ಗ್ರಾಫಿಕ್ಸ್‌(PTI)
ರಾಹುಲ್ ಗಾಂಧಿ ಮತ್ತು ಬೆಂಬಲಿಗರು ಚುರಚಂದಪುರಕ್ಕೆ ಹೋಗುತ್ತಿದ್ದ ವೇಳೆ ಪೊಲೀಸರು ಅವರನ್ನು ತಡೆದರು. ಇದಾದ ನಂತರ ಪೊಲೀಸ್ ಬ್ಯಾರಿಕೇಡ್ ಅನ್ನು ಭೇದಿಸಲು ರಾಹುಲ್‌ ಗಾಂಧಿ ಬೆಂಬಲಿಗರು ಪ್ರಯತ್ನಿಸಿದರು. 
(5 / 7)
ರಾಹುಲ್ ಗಾಂಧಿ ಮತ್ತು ಬೆಂಬಲಿಗರು ಚುರಚಂದಪುರಕ್ಕೆ ಹೋಗುತ್ತಿದ್ದ ವೇಳೆ ಪೊಲೀಸರು ಅವರನ್ನು ತಡೆದರು. ಇದಾದ ನಂತರ ಪೊಲೀಸ್ ಬ್ಯಾರಿಕೇಡ್ ಅನ್ನು ಭೇದಿಸಲು ರಾಹುಲ್‌ ಗಾಂಧಿ ಬೆಂಬಲಿಗರು ಪ್ರಯತ್ನಿಸಿದರು. (REUTERS)
ರಾಹುಲ್‌ ಗಾಂಧಿ ಅವರಿದ್ದ ವಾಹವನ್ನು ಸುತ್ತುವರಿದ ಮಣಿಪುರ ಪೊಲೀಸರು.
(6 / 7)
ರಾಹುಲ್‌ ಗಾಂಧಿ ಅವರಿದ್ದ ವಾಹವನ್ನು ಸುತ್ತುವರಿದ ಮಣಿಪುರ ಪೊಲೀಸರು.(REUTERS)
ಕಾಂಗೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ವಿರೋಧಿಸಿ ಮುನ್ನುಗ್ಗಿದ ಸ್ಥಳೀಯರ ಗುಂಪನ್ನು ಚದುರಿಸುವುದಕ್ಕೆ ಪೊಲೀಸರು ಅಶ್ರುವಾಯು ಸಿಡಿಸಿದ ಕ್ಷಣ.
(7 / 7)
ಕಾಂಗೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ವಿರೋಧಿಸಿ ಮುನ್ನುಗ್ಗಿದ ಸ್ಥಳೀಯರ ಗುಂಪನ್ನು ಚದುರಿಸುವುದಕ್ಕೆ ಪೊಲೀಸರು ಅಶ್ರುವಾಯು ಸಿಡಿಸಿದ ಕ್ಷಣ.(REUTERS)

    ಹಂಚಿಕೊಳ್ಳಲು ಲೇಖನಗಳು