logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Science News: ದಿನಕ್ಕೆಷ್ಟು ಸಲ ಪವರ್‌ಕಟ್‌ ಮಾಡ್ತಾರಪ್ಪ ಎಂಬ ಚಿಂತೆ ಬಿಡಿ; 24x7 ವೈರ್‌ಲೆಸ್‌ ಪವರ್‌ ಸಪ್ಲೈ ಪ್ರಯೋಗ ಶುರುವಾಗಿದೆ

Science News: ದಿನಕ್ಕೆಷ್ಟು ಸಲ ಪವರ್‌ಕಟ್‌ ಮಾಡ್ತಾರಪ್ಪ ಎಂಬ ಚಿಂತೆ ಬಿಡಿ; 24X7 ವೈರ್‌ಲೆಸ್‌ ಪವರ್‌ ಸಪ್ಲೈ ಪ್ರಯೋಗ ಶುರುವಾಗಿದೆ

Jun 25, 2023 07:12 PM IST

Science News: ರಾಜ್ಯದಲ್ಲೀಗ ಗೃಹಜ್ಯೋತಿ (200 ಯೂನಿಟ್‌ ಕರೆಂಟ್‌ ಫ್ರೀ), ಪವರ್‌ಕಟ್‌, ವಿದ್ಯುತ್‌ ಬಿಲ್‌ ಏಕಾಕಿ ಏರಿಕೆ ಆಗಿರುವ ವಿಚಾರ ಬಹಳ ಚರ್ಚೆಯಲ್ಲಿದೆ. ಪದೇಪದೆ ಪವರ್‌ಕಟ್‌ ಕಿರಿಕಿರಿ ಬೇರೆ. ಸಾಕಪ್ಪಾ ಸಾಕು ಎನ್ನುವಂತಹ ಈ ವಿದ್ಯಮಾನದ ನಡುವೆ ಗಮನ ಸೆಳದ ವಿಚಾರ ಇದು. 24X7 ವೈರ್‌ಲೆಸ್‌ ಪವರ್‌ ಇನ್ನು ಕೆಲವೇ ವರ್ಷಗಳಲ್ಲಿ ನನಸಾಗಲಿದೆ. 

Science News: ರಾಜ್ಯದಲ್ಲೀಗ ಗೃಹಜ್ಯೋತಿ (200 ಯೂನಿಟ್‌ ಕರೆಂಟ್‌ ಫ್ರೀ), ಪವರ್‌ಕಟ್‌, ವಿದ್ಯುತ್‌ ಬಿಲ್‌ ಏಕಾಕಿ ಏರಿಕೆ ಆಗಿರುವ ವಿಚಾರ ಬಹಳ ಚರ್ಚೆಯಲ್ಲಿದೆ. ಪದೇಪದೆ ಪವರ್‌ಕಟ್‌ ಕಿರಿಕಿರಿ ಬೇರೆ. ಸಾಕಪ್ಪಾ ಸಾಕು ಎನ್ನುವಂತಹ ಈ ವಿದ್ಯಮಾನದ ನಡುವೆ ಗಮನ ಸೆಳದ ವಿಚಾರ ಇದು. 24X7 ವೈರ್‌ಲೆಸ್‌ ಪವರ್‌ ಇನ್ನು ಕೆಲವೇ ವರ್ಷಗಳಲ್ಲಿ ನನಸಾಗಲಿದೆ. 
ಕ್ಯಾಲ್ಟೆಕ್ ತಂಡವು ವಿಶ್ವದ ಮೊದಲ ಬಾಹ್ಯಾಕಾಶ-ಆಧಾರಿತ ವೈರ್‌ಲೆಸ್ ಪವರ್ ಟ್ರಾನ್ಸ್‌ಮಿಷನ್ ಅನ್ನು ಯಶಸ್ವಿಯಾಗಿ ನಡೆಸಿದೆ. ಮೊದಲ ಬಾರಿಗೆ ಪತ್ತೆಹಚ್ಚಬಹುದಾದ ಮಟ್ಟದ ಶಕ್ತಿಯನ್ನು ಭೂಮಿಗೆ ರವಾನಿಸುವಲ್ಲಿ ಅದು ಯಶಸ್ಸು ಕಂಡಿದೆ. ಬಾಹ್ಯಾಕಾಶ ಸೌರ ವಿದ್ಯುತ್ ಯೋಜನೆ (ಎಸ್‌ಎಸ್‌ಪಿಪಿ)ಯು ಬೃಹತ್ ಕಕ್ಷೀಯ ಶುದ್ಧ ಶಕ್ತಿ ಸಂಪನ್ಮೂಲಗಳನ್ನು ಅನ್ಲಾಕ್ ಮಾಡುವ ಗುರಿಯನ್ನು ಹೊಂದಿದೆ.
(1 / 5)
ಕ್ಯಾಲ್ಟೆಕ್ ತಂಡವು ವಿಶ್ವದ ಮೊದಲ ಬಾಹ್ಯಾಕಾಶ-ಆಧಾರಿತ ವೈರ್‌ಲೆಸ್ ಪವರ್ ಟ್ರಾನ್ಸ್‌ಮಿಷನ್ ಅನ್ನು ಯಶಸ್ವಿಯಾಗಿ ನಡೆಸಿದೆ. ಮೊದಲ ಬಾರಿಗೆ ಪತ್ತೆಹಚ್ಚಬಹುದಾದ ಮಟ್ಟದ ಶಕ್ತಿಯನ್ನು ಭೂಮಿಗೆ ರವಾನಿಸುವಲ್ಲಿ ಅದು ಯಶಸ್ಸು ಕಂಡಿದೆ. ಬಾಹ್ಯಾಕಾಶ ಸೌರ ವಿದ್ಯುತ್ ಯೋಜನೆ (ಎಸ್‌ಎಸ್‌ಪಿಪಿ)ಯು ಬೃಹತ್ ಕಕ್ಷೀಯ ಶುದ್ಧ ಶಕ್ತಿ ಸಂಪನ್ಮೂಲಗಳನ್ನು ಅನ್ಲಾಕ್ ಮಾಡುವ ಗುರಿಯನ್ನು ಹೊಂದಿದೆ.(Canva)
ಕ್ಯಾಲ್ಟೆಕ್‌ ತಂಡ ಬಾಹ್ಯಾಕಾಶದ ಕಕ್ಷೆಗೆ ಕಳುಹಿಸಿದ್ದ ಪವರ್‌ ಟ್ರಾನ್ಸ್‌ಮಿಷನ್‌ ಉಪಕರಣ ತೆರೆದುಕೊಂಡಾಗ ಕಾಣುವ ರೀತಿ ಇದು. ಇನ್ನು ಸಂಶೋಧನೆಯ ವಿಚಾರಕ್ಕೆ ಬಂದರೆ, ಬಾಹ್ಯಾಕಾಶ-ಆಧಾರಿತ ಸೌರ ಶಕ್ತಿಯು ಭೂಮಿಯ ಬಹಳಷ್ಟು ಶುದ್ಧ ಇಂಧನದ ಸಮಸ್ಯೆಗಳನ್ನು ಪರಿಹರಿಸುತ್ತದೆ; ಒಂದು ಕಕ್ಷೀಯ ಸೌರ ಸೆಟಪ್ ಇದ್ದರೆ, ಅದು ಸೂರ್ಯನ ಬೆಳಕನ್ನು 24/7 ಸಂಗ್ರಹಿಸುವುದು ಸಾಧ್ಯವಿದೆ. ಇದು ಯಾವುದೇ ಪ್ರತೀಕೂಲ ಪರಿಸ್ಥಿತಿಗಳಿಂದ ತೊಂದರೆಗೆ ಒಳಗಾಗುವ ಸಾಧ್ಯತೆ ಕಡಿಮೆ.
(2 / 5)
ಕ್ಯಾಲ್ಟೆಕ್‌ ತಂಡ ಬಾಹ್ಯಾಕಾಶದ ಕಕ್ಷೆಗೆ ಕಳುಹಿಸಿದ್ದ ಪವರ್‌ ಟ್ರಾನ್ಸ್‌ಮಿಷನ್‌ ಉಪಕರಣ ತೆರೆದುಕೊಂಡಾಗ ಕಾಣುವ ರೀತಿ ಇದು. ಇನ್ನು ಸಂಶೋಧನೆಯ ವಿಚಾರಕ್ಕೆ ಬಂದರೆ, ಬಾಹ್ಯಾಕಾಶ-ಆಧಾರಿತ ಸೌರ ಶಕ್ತಿಯು ಭೂಮಿಯ ಬಹಳಷ್ಟು ಶುದ್ಧ ಇಂಧನದ ಸಮಸ್ಯೆಗಳನ್ನು ಪರಿಹರಿಸುತ್ತದೆ; ಒಂದು ಕಕ್ಷೀಯ ಸೌರ ಸೆಟಪ್ ಇದ್ದರೆ, ಅದು ಸೂರ್ಯನ ಬೆಳಕನ್ನು 24/7 ಸಂಗ್ರಹಿಸುವುದು ಸಾಧ್ಯವಿದೆ. ಇದು ಯಾವುದೇ ಪ್ರತೀಕೂಲ ಪರಿಸ್ಥಿತಿಗಳಿಂದ ತೊಂದರೆಗೆ ಒಳಗಾಗುವ ಸಾಧ್ಯತೆ ಕಡಿಮೆ.(caltech.edu)
ಕ್ಯಾಲ್ಟೆಕ್‌ ತಂಢ ಬಾಹ್ಯಾಕಾಶದ ಕಕ್ಷೆಗೆ ಕಳುಹಿಸಿದ ಉಪಕರಣ ಇದು. ಸಂಶೋಧನೆಯ ವಿಚಾರದಲ್ಲಿ ಗಮನಿಸುವುದಾದರೆ, ಸೈದ್ಧಾಂತಿಕವಾಗಿ, ಬಾಹ್ಯಾಕಾಶದಲ್ಲಿನ ಸೌರ ಸಾಮರ್ಥ್ಯವು ಭೂಮಿಯ ಮೇಲಿನ ಸೌರ ಫಲಕಕ್ಕಿಂತ ಪ್ರತಿ ಚದರ ಮೀಟರ್‌ಗೆ ಎಂಟು ಪಟ್ಟು ಉತ್ತಮವಾಗಿದೆ. ಹೀಗಾಗಿ, ಹಲವು ಕಠಿಣ  ಸವಾಲುಗಳ ಹೊರತಾಗಿಯೂ, ಹಲವಾರು ಗುಂಪುಗಳು ಸೋಲಾರ್‌ ಪವರ್‌ ಅನ್ನು ಭೂಮಿಗೆ ನೇರವಾಗಿ ಇಂಧನದ ರೂಪದಲ್ಲಿ ತರಲು ಪ್ರಯತ್ನಿಸುತ್ತಿವೆ.
(3 / 5)
ಕ್ಯಾಲ್ಟೆಕ್‌ ತಂಢ ಬಾಹ್ಯಾಕಾಶದ ಕಕ್ಷೆಗೆ ಕಳುಹಿಸಿದ ಉಪಕರಣ ಇದು. ಸಂಶೋಧನೆಯ ವಿಚಾರದಲ್ಲಿ ಗಮನಿಸುವುದಾದರೆ, ಸೈದ್ಧಾಂತಿಕವಾಗಿ, ಬಾಹ್ಯಾಕಾಶದಲ್ಲಿನ ಸೌರ ಸಾಮರ್ಥ್ಯವು ಭೂಮಿಯ ಮೇಲಿನ ಸೌರ ಫಲಕಕ್ಕಿಂತ ಪ್ರತಿ ಚದರ ಮೀಟರ್‌ಗೆ ಎಂಟು ಪಟ್ಟು ಉತ್ತಮವಾಗಿದೆ. ಹೀಗಾಗಿ, ಹಲವು ಕಠಿಣ  ಸವಾಲುಗಳ ಹೊರತಾಗಿಯೂ, ಹಲವಾರು ಗುಂಪುಗಳು ಸೋಲಾರ್‌ ಪವರ್‌ ಅನ್ನು ಭೂಮಿಗೆ ನೇರವಾಗಿ ಇಂಧನದ ರೂಪದಲ್ಲಿ ತರಲು ಪ್ರಯತ್ನಿಸುತ್ತಿವೆ.(caltech.edu)
ಕ್ಯಾಲ್ಟೆಕ್‌ ತಂಡ ನಿರ್ವಹಿಸುತ್ತಿರುವ ಬಾಹ್ಯಾಕಾಶ ಉಪಕರಣದ ಕಂಟ್ರೋಲ್‌ ರೂಮ್‌ ಇದು.  ಕ್ಯಾಲ್ಟೆಕ್‌ ತಂಡವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಕಕ್ಷೆಯ ಮೂಲಮಾದರಿಯನ್ನು ಪ್ರಾರಂಭಿಸುವ ಮೂಲಕ ಗಮನಸೆಳೆದಿತ್ತು. ಐವತ್ತು ಕಿಲೋ ತೂಕದ ಬಾಹ್ಯಾಕಾಶ ಸೌರಶಕ್ತಿ ಪ್ರದರ್ಶಕ (SSPD-1) ಅನ್ನು ಮೊಮೆಂಟಸ್ ವಿಗೊರೈಡ್ ಬಾಹ್ಯಾಕಾಶ ನೌಕೆಗೆ ಲೋಡ್ ಮಾಡಿ ಇದೇ ವರ್ಷ ಜನವರಿ 3 ರಂದು ಸ್ಪೇಸ್‌ಎಕ್ಸ್‌  ರಾಕೆಟ್ ಮೂಲಕ ಕೆಳಹಂತದ ಕಕ್ಷೆಗೆ ಕಳುಹಿಸಿದೆ.
(4 / 5)
ಕ್ಯಾಲ್ಟೆಕ್‌ ತಂಡ ನಿರ್ವಹಿಸುತ್ತಿರುವ ಬಾಹ್ಯಾಕಾಶ ಉಪಕರಣದ ಕಂಟ್ರೋಲ್‌ ರೂಮ್‌ ಇದು.  ಕ್ಯಾಲ್ಟೆಕ್‌ ತಂಡವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಕಕ್ಷೆಯ ಮೂಲಮಾದರಿಯನ್ನು ಪ್ರಾರಂಭಿಸುವ ಮೂಲಕ ಗಮನಸೆಳೆದಿತ್ತು. ಐವತ್ತು ಕಿಲೋ ತೂಕದ ಬಾಹ್ಯಾಕಾಶ ಸೌರಶಕ್ತಿ ಪ್ರದರ್ಶಕ (SSPD-1) ಅನ್ನು ಮೊಮೆಂಟಸ್ ವಿಗೊರೈಡ್ ಬಾಹ್ಯಾಕಾಶ ನೌಕೆಗೆ ಲೋಡ್ ಮಾಡಿ ಇದೇ ವರ್ಷ ಜನವರಿ 3 ರಂದು ಸ್ಪೇಸ್‌ಎಕ್ಸ್‌  ರಾಕೆಟ್ ಮೂಲಕ ಕೆಳಹಂತದ ಕಕ್ಷೆಗೆ ಕಳುಹಿಸಿದೆ.(caltech.edu)
ಟ್ರಾನ್ಸ್‌ಮಿಷನ್‌ ಉಪಕರಣದ ಒಂದು ನೋಟ ಇದು. ಮೂರು ವ್ಯವಸ್ಥೆಗಳನ್ನು ಅಂದರೆ, ದೊಡ್ಡ ಶ್ರೇಣಿಯಲ್ಲಿ ಬಳಸಲು ಆಶಿಸುವ ಹಗುರವಾದ, ಮಡಿಸಬಹುದಾದ ರಚನೆಗಳಿಗಾಗಿ ವಿನ್ಯಾಸ ಮತ್ತು ನಿಯೋಜನೆ ಕಾರ್ಯವಿಧಾನಗಳನ್ನು  ಪರೀಕ್ಷಿಸಲು ಅನುವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ: ಈ ಪರೀಕ್ಷೆಗಳು ಈಗ ಹಂತ ಹಂತವಾಗಿ ಶುರುವಾಗಿದೆ. (ಮಾಹಿತಿ - ಕ್ಯಾಲ್ಟೆಕ್‌) 
(5 / 5)
ಟ್ರಾನ್ಸ್‌ಮಿಷನ್‌ ಉಪಕರಣದ ಒಂದು ನೋಟ ಇದು. ಮೂರು ವ್ಯವಸ್ಥೆಗಳನ್ನು ಅಂದರೆ, ದೊಡ್ಡ ಶ್ರೇಣಿಯಲ್ಲಿ ಬಳಸಲು ಆಶಿಸುವ ಹಗುರವಾದ, ಮಡಿಸಬಹುದಾದ ರಚನೆಗಳಿಗಾಗಿ ವಿನ್ಯಾಸ ಮತ್ತು ನಿಯೋಜನೆ ಕಾರ್ಯವಿಧಾನಗಳನ್ನು  ಪರೀಕ್ಷಿಸಲು ಅನುವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ: ಈ ಪರೀಕ್ಷೆಗಳು ಈಗ ಹಂತ ಹಂತವಾಗಿ ಶುರುವಾಗಿದೆ. (ಮಾಹಿತಿ - ಕ್ಯಾಲ್ಟೆಕ್‌) (caltech.edu)

    ಹಂಚಿಕೊಳ್ಳಲು ಲೇಖನಗಳು