logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Population Control Bill: ಜನಸಂಖ್ಯಾ ನಿಯಂತ್ರಣ ಮಸೂದೆ ಬೆಂಬಲಿಸದವರ ಮತದಾನದ ಹಕ್ಕು ಹಿಂಪಡೆಯಬೇಕು: ಕೇಂದ್ರ ಸಚಿವ!

Population Control Bill: ಜನಸಂಖ್ಯಾ ನಿಯಂತ್ರಣ ಮಸೂದೆ ಬೆಂಬಲಿಸದವರ ಮತದಾನದ ಹಕ್ಕು ಹಿಂಪಡೆಯಬೇಕು: ಕೇಂದ್ರ ಸಚಿವ!

Nov 27, 2022 02:18 PM IST

ನವದೆಹಲಿ: ದೇಶದ ಮೀತಿ ಮೀರಿದ ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯಲು, ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೊಳಿಸುವುದೊಂದೇ ಮಾರ್ಗ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಕಿಶೋರ್‌ ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಗಿರಿರಾಜ್‌ ಸಿಂಗ್‌ ಕಿಶೋರ್‌, ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಜಾರಿಗೊಳಿಸುವುದು ಇಂದಿನ ತುರ್ತು ಅಗತ್ಯ ಎಂದು ಹೇಳಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ..

  • ನವದೆಹಲಿ: ದೇಶದ ಮೀತಿ ಮೀರಿದ ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯಲು, ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೊಳಿಸುವುದೊಂದೇ ಮಾರ್ಗ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಕಿಶೋರ್‌ ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಗಿರಿರಾಜ್‌ ಸಿಂಗ್‌ ಕಿಶೋರ್‌, ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಜಾರಿಗೊಳಿಸುವುದು ಇಂದಿನ ತುರ್ತು ಅಗತ್ಯ ಎಂದು ಹೇಳಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ..
ಚೀನಾ 'ಒಂದು ಮಗು ನೀತಿ'ಯನ್ನು ಜಾರಿಗೆ ತರುವ ಮೂಲಕ, ಜನಸಂಖ್ಯೆಯನ್ನು ನಿಯಂತ್ರಿಸಿತು ಮತ್ತು ಅಭಿವೃದ್ಧಿಯನ್ನು ಸಾಧಿಸಿತು. ಚೀನಾದಲ್ಲಿ ಒಂದು ನಿಮಿಷಕ್ಕೆ 10 ಮಕ್ಕಳು ಮಾತ್ರ ಜನಿಸುತ್ತಾರೆ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದ್ಧಾರೆ.
(1 / 5)
ಚೀನಾ 'ಒಂದು ಮಗು ನೀತಿ'ಯನ್ನು ಜಾರಿಗೆ ತರುವ ಮೂಲಕ, ಜನಸಂಖ್ಯೆಯನ್ನು ನಿಯಂತ್ರಿಸಿತು ಮತ್ತು ಅಭಿವೃದ್ಧಿಯನ್ನು ಸಾಧಿಸಿತು. ಚೀನಾದಲ್ಲಿ ಒಂದು ನಿಮಿಷಕ್ಕೆ 10 ಮಕ್ಕಳು ಮಾತ್ರ ಜನಿಸುತ್ತಾರೆ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದ್ಧಾರೆ.(ANI)
ಭಾರತಕ್ಕೆ ಜನಸಂಖ್ಯಾ ನಿಯಂತ್ರಣ ಮಸೂದೆಯು ನಿರ್ಣಾಯಕವಾಗಿದೆ. ನಾವು ಸೀಮಿತ ಸಂಪನ್ಮೂಲಗಳನ್ನು ಹೊಂದಿದ್ದೇವೆ. ಭಾರತದಲ್ಲಿ ಒಂದು ನಿಮಿಷಕ್ಕೆ 30 ಮಕ್ಕಳು ಜನಿಸುತ್ತಾರೆ ಎಂದರೆ ಅದು ಖಂಡಿತವಾಗಿಯೂ ಚಿಂತಿಸಬೇಕಾದ ಸಂಗತಿ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಕಿಶೋರ್‌ ಹೇಳಿದರು. (ಸಂಗ್ರಹ ಚಿತ್ರ)
(2 / 5)
ಭಾರತಕ್ಕೆ ಜನಸಂಖ್ಯಾ ನಿಯಂತ್ರಣ ಮಸೂದೆಯು ನಿರ್ಣಾಯಕವಾಗಿದೆ. ನಾವು ಸೀಮಿತ ಸಂಪನ್ಮೂಲಗಳನ್ನು ಹೊಂದಿದ್ದೇವೆ. ಭಾರತದಲ್ಲಿ ಒಂದು ನಿಮಿಷಕ್ಕೆ 30 ಮಕ್ಕಳು ಜನಿಸುತ್ತಾರೆ ಎಂದರೆ ಅದು ಖಂಡಿತವಾಗಿಯೂ ಚಿಂತಿಸಬೇಕಾದ ಸಂಗತಿ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಕಿಶೋರ್‌ ಹೇಳಿದರು. (ಸಂಗ್ರಹ ಚಿತ್ರ)(HT)
ಭಾರತವು ಚೀನಾದೊಂದಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಬೇಕು ಎಂಬುದು ನಮ್ಮೆಲ್ಲರ ಬಯಕೆ. ಆದರೆ ಅಸಲಿಗೆ ನಾವು ಜನಸಂಖ್ಯೆಯಲ್ಲಿ ಚೀನಾವನ್ನು ಮೀರಲು ಮಾತ್ರ ಶ್ರಮಿಸುತ್ತಿದ್ದೇವೆ. ಹೆಚ್ಚಿನ ಜನಸಂಖ್ಯೆ ಮತ್ತು ಸಿಮೀತ ಸಂಪನ್ಮೂಲಗೊಂದಿಗೆ ನಾವು ಚೀನಾದೊಂದಿಗೆ ಸ್ಪರ್ಧಿಸಲಾಗದು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಕಿಶೋರ್‌ ಅಭಿಪ್ರಾಯಪಟ್ಟಿದ್ದಾರೆ. (ಸಂಗ್ರಹ ಚಿತ್ರ)
(3 / 5)
ಭಾರತವು ಚೀನಾದೊಂದಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಬೇಕು ಎಂಬುದು ನಮ್ಮೆಲ್ಲರ ಬಯಕೆ. ಆದರೆ ಅಸಲಿಗೆ ನಾವು ಜನಸಂಖ್ಯೆಯಲ್ಲಿ ಚೀನಾವನ್ನು ಮೀರಲು ಮಾತ್ರ ಶ್ರಮಿಸುತ್ತಿದ್ದೇವೆ. ಹೆಚ್ಚಿನ ಜನಸಂಖ್ಯೆ ಮತ್ತು ಸಿಮೀತ ಸಂಪನ್ಮೂಲಗೊಂದಿಗೆ ನಾವು ಚೀನಾದೊಂದಿಗೆ ಸ್ಪರ್ಧಿಸಲಾಗದು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಕಿಶೋರ್‌ ಅಭಿಪ್ರಾಯಪಟ್ಟಿದ್ದಾರೆ. (ಸಂಗ್ರಹ ಚಿತ್ರ)(ANI)
ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಧರ್ಮ ಅಥವಾ ಪಂಗಡವನ್ನು ಲೆಕ್ಕಿಸದೆ ಪ್ರತಿಯೊಬ್ಬರ ಮೇಲೆ ಜಾರಿಗೊಳಿಸಬೇಕು. ಹಾಗಯೇ ಈ ನೀತಿಯನ್ನು ಅನುಸರಿಸದವರಿಗೆ ಸರ್ಕಾರದ ಪ್ರಯೋಜನಗಳನ್ನು ನೀಡಬಾರದು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಕಿಶೋರ್‌ ಸಲಹೆ ನೀಡಿದ್ದಾರೆ. (ಸಂಗ್ರಹ ಚಿತ್ರ)
(4 / 5)
ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಧರ್ಮ ಅಥವಾ ಪಂಗಡವನ್ನು ಲೆಕ್ಕಿಸದೆ ಪ್ರತಿಯೊಬ್ಬರ ಮೇಲೆ ಜಾರಿಗೊಳಿಸಬೇಕು. ಹಾಗಯೇ ಈ ನೀತಿಯನ್ನು ಅನುಸರಿಸದವರಿಗೆ ಸರ್ಕಾರದ ಪ್ರಯೋಜನಗಳನ್ನು ನೀಡಬಾರದು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಕಿಶೋರ್‌ ಸಲಹೆ ನೀಡಿದ್ದಾರೆ. (ಸಂಗ್ರಹ ಚಿತ್ರ)(PIB)
ಜೊತೆಗೆ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಪಾಲಿಸದವರ ಮತದಾನದ ಹಕ್ಕನ್ನೂ ಹಿಂಪಡೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಕಿಶೋರ್‌ ಆಗ್ರಹಿಸಿದ್ದಾರೆ.
(5 / 5)
ಜೊತೆಗೆ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಪಾಲಿಸದವರ ಮತದಾನದ ಹಕ್ಕನ್ನೂ ಹಿಂಪಡೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಕಿಶೋರ್‌ ಆಗ್ರಹಿಸಿದ್ದಾರೆ.(ANI)

    ಹಂಚಿಕೊಳ್ಳಲು ಲೇಖನಗಳು