logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vande Bharat Express: ವಂದೇ ಭಾರತ್ ರೈಲು ಆಧುನಿಕ ಭಾರತದ ಅದ್ಭುತ ಚಿತ್ರ: ಪ್ರಧಾನಿ ಮೋದಿ ಅಭಿಮತ

Vande Bharat Express: ವಂದೇ ಭಾರತ್ ರೈಲು ಆಧುನಿಕ ಭಾರತದ ಅದ್ಭುತ ಚಿತ್ರ: ಪ್ರಧಾನಿ ಮೋದಿ ಅಭಿಮತ

Feb 10, 2023 04:57 PM IST

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ, ಮುಂಬೈ-ಸೋಲಾಪುರ ಹಾಗೂ ಮುಂಬೈ-ಸಾಯಿನಗರ ಶಿರಡಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಈ ವೇಳೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಈ ಕುರಿತು ಇಲ್ಲಿದೆ ಮಾಹಿತಿ..

  • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ, ಮುಂಬೈ-ಸೋಲಾಪುರ ಹಾಗೂ ಮುಂಬೈ-ಸಾಯಿನಗರ ಶಿರಡಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಈ ವೇಳೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಈ ಕುರಿತು ಇಲ್ಲಿದೆ ಮಾಹಿತಿ..
ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಮುಂಬೈ-ಸೋಲಾಪುರ ಹಾಗೂ ಮುಂಬೈ-ಸಾಯಿನಗರ ಶಿರಡಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ ನರೇಂದ್ರ ಮೋದಿ
(1 / 5)
ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಮುಂಬೈ-ಸೋಲಾಪುರ ಹಾಗೂ ಮುಂಬೈ-ಸಾಯಿನಗರ ಶಿರಡಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ ನರೇಂದ್ರ ಮೋದಿ(ANI)
ಬಳಿಕ ಮಾತನಾಡಿದ ಪ್ರಧಾನಿ ಮೋದಿ ಮೊದಲ ಬಾರಿಗೆ ಎರಡು ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲಾಗಿದೆ. ಮುಂಬೈ ಮತ್ತು ಪುಣೆಯಂತಹ ಹಣಕಾಸು ಕೇಂದ್ರ ನಗರಗಳ ಜನರು, ತಮ್ಮ ಆದಾಯದ ಬಹುಪಾಲನ್ನು ಭಕ್ತಿಯ ಕೇಂದ್ರಗಳಿಗೆ ಸಂಪರ್ಕಿಸುತ್ತಾರೆ. ಈ ರೈಲು ಸೇವೆ ಕಾಲೇಜಿಗೆ ಹೋಗುವ ಮತ್ತು ಕಚೇರಿಗೆ ಹೋಗುವ ಜನರು, ರೈತರು ಮತ್ತು ಭಕ್ತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.
(2 / 5)
ಬಳಿಕ ಮಾತನಾಡಿದ ಪ್ರಧಾನಿ ಮೋದಿ ಮೊದಲ ಬಾರಿಗೆ ಎರಡು ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲಾಗಿದೆ. ಮುಂಬೈ ಮತ್ತು ಪುಣೆಯಂತಹ ಹಣಕಾಸು ಕೇಂದ್ರ ನಗರಗಳ ಜನರು, ತಮ್ಮ ಆದಾಯದ ಬಹುಪಾಲನ್ನು ಭಕ್ತಿಯ ಕೇಂದ್ರಗಳಿಗೆ ಸಂಪರ್ಕಿಸುತ್ತಾರೆ. ಈ ರೈಲು ಸೇವೆ ಕಾಲೇಜಿಗೆ ಹೋಗುವ ಮತ್ತು ಕಚೇರಿಗೆ ಹೋಗುವ ಜನರು, ರೈತರು ಮತ್ತು ಭಕ್ತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.(ANI)
ವಂದೇ ಭಾರತ್ ರೈಲು ಇಂದಿನ ಆಧುನಿಕ ಭಾರತದ ಅದ್ಭುತ ಚಿತ್ರವಾಗಿದೆ. ಇದು ಭಾರತದ ವೇಗ ಮತ್ತು ಪ್ರಮಾಣದ ಪ್ರತಿಬಿಂಬವಾಗಿದೆ. ದೇಶವು ವಂದೇ ಭಾರತವನ್ನು ಪ್ರಾರಂಭಿಸುತ್ತಿರುವ ವೇಗವನ್ನು ನೀವು ನೋಡಬಹುದು. 10 ರೈಲುಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಪ್ರಧಾನಿ ಮೋದಿ ನುಡಿದರು.
(3 / 5)
ವಂದೇ ಭಾರತ್ ರೈಲು ಇಂದಿನ ಆಧುನಿಕ ಭಾರತದ ಅದ್ಭುತ ಚಿತ್ರವಾಗಿದೆ. ಇದು ಭಾರತದ ವೇಗ ಮತ್ತು ಪ್ರಮಾಣದ ಪ್ರತಿಬಿಂಬವಾಗಿದೆ. ದೇಶವು ವಂದೇ ಭಾರತವನ್ನು ಪ್ರಾರಂಭಿಸುತ್ತಿರುವ ವೇಗವನ್ನು ನೀವು ನೋಡಬಹುದು. 10 ರೈಲುಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಪ್ರಧಾನಿ ಮೋದಿ ನುಡಿದರು.(ANI)
ಸಂಸದರು ತಮ್ಮ ಪ್ರದೇಶಗಳ ನಿಲ್ದಾಣಗಳಲ್ಲಿ 1-2 ನಿಮಿಷ ನಿಲುಗಡೆಗೆ ರೈಲುಗಳ ನಿಲುಗಡೆಗೆ ವ್ಯವಸ್ಥೆ ಮಾಡುವಂತೆ ಪತ್ರ ಬರೆಯುತ್ತಿದ್ದ ಕಾಲವೊಂದಿತ್ತು. ಈಗ ಸಂಸದರು ನನ್ನನ್ನು ಭೇಟಿಯಾದಾಗ, ಅವರು ತಮ್ಮ ಪ್ರದೇಶದಲ್ಲಿ ವಂದೇ ಭಾರತ ರೈಲಿ ಸೇವೆಗೆ ಒತ್ತಾಯಿಸುತ್ತಾರೆ. ಇದು ಇಂದಿನ ವಂದೇ ಭಾರತ್ ರೈಲುಗಳ ಕ್ರೇಜ್ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
(4 / 5)
ಸಂಸದರು ತಮ್ಮ ಪ್ರದೇಶಗಳ ನಿಲ್ದಾಣಗಳಲ್ಲಿ 1-2 ನಿಮಿಷ ನಿಲುಗಡೆಗೆ ರೈಲುಗಳ ನಿಲುಗಡೆಗೆ ವ್ಯವಸ್ಥೆ ಮಾಡುವಂತೆ ಪತ್ರ ಬರೆಯುತ್ತಿದ್ದ ಕಾಲವೊಂದಿತ್ತು. ಈಗ ಸಂಸದರು ನನ್ನನ್ನು ಭೇಟಿಯಾದಾಗ, ಅವರು ತಮ್ಮ ಪ್ರದೇಶದಲ್ಲಿ ವಂದೇ ಭಾರತ ರೈಲಿ ಸೇವೆಗೆ ಒತ್ತಾಯಿಸುತ್ತಾರೆ. ಇದು ಇಂದಿನ ವಂದೇ ಭಾರತ್ ರೈಲುಗಳ ಕ್ರೇಜ್ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.(ANI)
21ನೇ ಶತಮಾನದ ಭಾರತವು ತನ್ನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ತ್ವರಿತವಾಗಿ ಸುಧಾರಿಸಬೇಕಾಗಿದೆ. ನಮ್ಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಎಷ್ಟು ವೇಗವಾಗಿ ಆಧುನಿಕವಾಗುತ್ತದೆಯೋ ಅಷ್ಟು ಜನರ ಜೀವನ ಸುಲಭವಾಗುತ್ತದೆ. ಅಲ್ಲದೇ ಇದರಿಂದ ಜನರ ಜೀವನದ ಗುಣಮಟ್ಟವು ಆಹ್ಲಾದಕರ ಸುಧಾರಣೆಗಳನ್ನು ಕಾಣುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
(5 / 5)
21ನೇ ಶತಮಾನದ ಭಾರತವು ತನ್ನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ತ್ವರಿತವಾಗಿ ಸುಧಾರಿಸಬೇಕಾಗಿದೆ. ನಮ್ಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಎಷ್ಟು ವೇಗವಾಗಿ ಆಧುನಿಕವಾಗುತ್ತದೆಯೋ ಅಷ್ಟು ಜನರ ಜೀವನ ಸುಲಭವಾಗುತ್ತದೆ. ಅಲ್ಲದೇ ಇದರಿಂದ ಜನರ ಜೀವನದ ಗುಣಮಟ್ಟವು ಆಹ್ಲಾದಕರ ಸುಧಾರಣೆಗಳನ್ನು ಕಾಣುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.(ANI)

    ಹಂಚಿಕೊಳ್ಳಲು ಲೇಖನಗಳು