logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rahul Gandhi: ಪಂಜಾಬ್‌ ಪ್ರವೇಶಿಸಲಿದೆ ಭಾರತ್‌ ಜೋಡೋ ಯಾತ್ರೆ: ಸ್ವರ್ಣಮಂದಿರಲ್ಲಿ ವಿಶೇಷ ಪೂಜೆ ಸಲ್ಲಿಸಿದ ರಾಹುಲ್‌ ಗಾಂಧಿ

Rahul Gandhi: ಪಂಜಾಬ್‌ ಪ್ರವೇಶಿಸಲಿದೆ ಭಾರತ್‌ ಜೋಡೋ ಯಾತ್ರೆ: ಸ್ವರ್ಣಮಂದಿರಲ್ಲಿ ವಿಶೇಷ ಪೂಜೆ ಸಲ್ಲಿಸಿದ ರಾಹುಲ್‌ ಗಾಂಧಿ

Jan 10, 2023 04:41 PM IST

ದೇಶದಲ್ಲಿ ಕೋಮುಸೌಹಾರ್ದತೆ ಕಾಪಾಡಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ಭಾರತ್‌ ಜೋಡೋ ಯಾತ್ರೆ, ಪಂಜಾಬ್‌ ಪ್ರವೇಶಿಸಲಿದೆ. ಇದಕ್ಕೂ ಮುನ್ನ ರಾಹುಲ್‌ ಗಾಂಧಿ ಅವರು ಅಮೃತಸರ್‌ದಲ್ಲಿರುವ ಸ್ವರ್ಣಮಂದಿರಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಕುರಿತು ಮಾಹಿತಿ ಇಲ್ಲಿದೆ..

  • ದೇಶದಲ್ಲಿ ಕೋಮುಸೌಹಾರ್ದತೆ ಕಾಪಾಡಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ಭಾರತ್‌ ಜೋಡೋ ಯಾತ್ರೆ, ಪಂಜಾಬ್‌ ಪ್ರವೇಶಿಸಲಿದೆ. ಇದಕ್ಕೂ ಮುನ್ನ ರಾಹುಲ್‌ ಗಾಂಧಿ ಅವರು ಅಮೃತಸರ್‌ದಲ್ಲಿರುವ ಸ್ವರ್ಣಮಂದಿರಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಕುರಿತು ಮಾಹಿತಿ ಇಲ್ಲಿದೆ..
ಭಾರತ್ ಜೋಡೋ ಯಾತ್ರೆಯು ಪಂಜಾಬ್ ಪ್ರವೇಶಿಸುವ ಮೊದಲು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಅಮೃತಸರದ ಸ್ವರ್ಣ ಮಂದಿರದಲ್ಲಿ ಪೂಜೆ ಸಲ್ಲಿಸಿದರು.
(1 / 9)
ಭಾರತ್ ಜೋಡೋ ಯಾತ್ರೆಯು ಪಂಜಾಬ್ ಪ್ರವೇಶಿಸುವ ಮೊದಲು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಅಮೃತಸರದ ಸ್ವರ್ಣ ಮಂದಿರದಲ್ಲಿ ಪೂಜೆ ಸಲ್ಲಿಸಿದರು.(HT)
ಗೋಲ್ಡನ್ ಟೆಂಪಲ್‌ನ ಗರ್ಭಗುಡಿಯಲ್ಲಿ ರಾಹುಲ್ ಗಾಂಧಿ ಅವರು, ಸಿಖ್ ಪೇಟ ಧರಿಸಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂದಿತು.
(2 / 9)
ಗೋಲ್ಡನ್ ಟೆಂಪಲ್‌ನ ಗರ್ಭಗುಡಿಯಲ್ಲಿ ರಾಹುಲ್ ಗಾಂಧಿ ಅವರು, ಸಿಖ್ ಪೇಟ ಧರಿಸಿ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂದಿತು.(AFP)
ರಾಹುಲ್ ಗಾಂಧಿ ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಪ್ರಸಾದವನ್ನು ಸ್ವೀಕರಿಸಿದರು.
(3 / 9)
ರಾಹುಲ್ ಗಾಂಧಿ ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಪ್ರಸಾದವನ್ನು ಸ್ವೀಕರಿಸಿದರು.(PTI)
ರಾಹುಲ್ ಗಾಂಧಿ ಅವರೊಂದಿಗೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ಸ್ಥಳೀಯ ಸಂಸದ ಗುರ್ಜಿತ್ ಸಿಂಗ್ ಔಜ್ಲಾ ಮತ್ತು ಪಕ್ಷದ ಇತರ ಮುಖಂಡರು ಇದ್ದರು.
(4 / 9)
ರಾಹುಲ್ ಗಾಂಧಿ ಅವರೊಂದಿಗೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ಸ್ಥಳೀಯ ಸಂಸದ ಗುರ್ಜಿತ್ ಸಿಂಗ್ ಔಜ್ಲಾ ಮತ್ತು ಪಕ್ಷದ ಇತರ ಮುಖಂಡರು ಇದ್ದರು.(Congress Twitter)
ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಪಾದಯಾತ್ರೆ ಕೊನೆಗೊಂಡ ಬಳಿಕ, ರಾಹುಲ್ ಗಾಂಧಿ ಜನವರಿ 9 ಮಧ್ಯಾಹ್ನ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
(5 / 9)
ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಪಾದಯಾತ್ರೆ ಕೊನೆಗೊಂಡ ಬಳಿಕ, ರಾಹುಲ್ ಗಾಂಧಿ ಜನವರಿ 9 ಮಧ್ಯಾಹ್ನ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದರು.(AFP)
"ಬೆಳಗ್ಗೆ, ಹರಿಯಾಣ ಪಿಸಿಸಿಯಿಂದ ಪಂಜಾಬ್ ಪಿಸಿಸಿಗೆ ಧ್ವಜ ವರ್ಗಾವಣೆ ನಡೆಯಲಿದೆ. ಬುಧವಾರ ಬೆಳಗ್ಗೆಯಿಂದ ನಾವು ಯಾತ್ರೆಯನ್ನು ಪಂಜಾಬ್‌ನಿಂದ ಪ್ರಾರಂಭಿಸುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನದ ಉಸ್ತುವಾರಿ, ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.
(6 / 9)
"ಬೆಳಗ್ಗೆ, ಹರಿಯಾಣ ಪಿಸಿಸಿಯಿಂದ ಪಂಜಾಬ್ ಪಿಸಿಸಿಗೆ ಧ್ವಜ ವರ್ಗಾವಣೆ ನಡೆಯಲಿದೆ. ಬುಧವಾರ ಬೆಳಗ್ಗೆಯಿಂದ ನಾವು ಯಾತ್ರೆಯನ್ನು ಪಂಜಾಬ್‌ನಿಂದ ಪ್ರಾರಂಭಿಸುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನದ ಉಸ್ತುವಾರಿ, ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.(AFP)
ಬುಧವಾರದ ಯಾತ್ರೆಯು ಪಂಜಾಬ್‌ನ ಮಂಡಿ ಗೋಬಿಂದಗಢದ ಮೂಲಕ ಹಾದುಹೋಗುತ್ತದೆ ಮತ್ತು ರಾತ್ರಿ ಖನ್ನಾದಲ್ಲಿ  ವಿಶ್ರಾಂತಿ ಪಡೆಯಲಿದೆ.
(7 / 9)
ಬುಧವಾರದ ಯಾತ್ರೆಯು ಪಂಜಾಬ್‌ನ ಮಂಡಿ ಗೋಬಿಂದಗಢದ ಮೂಲಕ ಹಾದುಹೋಗುತ್ತದೆ ಮತ್ತು ರಾತ್ರಿ ಖನ್ನಾದಲ್ಲಿ  ವಿಶ್ರಾಂತಿ ಪಡೆಯಲಿದೆ.(AFP)
ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು ಮತ್ತು ಜನವರಿ 30ರಂದು ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ.
(8 / 9)
ಭಾರತ್ ಜೋಡೋ ಯಾತ್ರೆಯು ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು ಮತ್ತು ಜನವರಿ 30ರಂದು ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ.(AFP)
ಪಾದಯಾತ್ರೆ ಇದುವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಸಂಚರಿಸಿದೆ.
(9 / 9)
ಪಾದಯಾತ್ರೆ ಇದುವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಸಂಚರಿಸಿದೆ.(AFP)

    ಹಂಚಿಕೊಳ್ಳಲು ಲೇಖನಗಳು