logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rayara Aradhana: ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಚಾಲನೆ, ಕಳೆಗಟ್ಟಿದೆ ತುಂಗಭದ್ರಾ ತೀರದ ಧಾರ್ಮಿಕ ತಾಣ Photos

Rayara Aradhana: ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಚಾಲನೆ, ಕಳೆಗಟ್ಟಿದೆ ತುಂಗಭದ್ರಾ ತೀರದ ಧಾರ್ಮಿಕ ತಾಣ photos

Aug 19, 2024 02:28 PM IST

Mantralaya Aradhana ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ ಕಳೆಗಟ್ಟಿದೆ. ಮೂರು ದಿನದ ಆರಾಧನೆ ಹಾಗೂ ಧಾರ್ಮಿಕ ಚಟುವಟಿಕೆ ಸೇರಿ ಒಂದು ವಾರ ನಾನಾ ಕಾರ್ಯಕ್ರಮಗಳನ್ನು ಸಹಸ್ರಾರು ಭಕ್ತರನ್ನು ಆಕರ್ಷಿಸಲಿದೆ. ಈ ಕುರಿತ ಚಿತ್ರನೋಟ ಇಲ್ಲಿದೆ.

  • Mantralaya Aradhana ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ ಕಳೆಗಟ್ಟಿದೆ. ಮೂರು ದಿನದ ಆರಾಧನೆ ಹಾಗೂ ಧಾರ್ಮಿಕ ಚಟುವಟಿಕೆ ಸೇರಿ ಒಂದು ವಾರ ನಾನಾ ಕಾರ್ಯಕ್ರಮಗಳನ್ನು ಸಹಸ್ರಾರು ಭಕ್ತರನ್ನು ಆಕರ್ಷಿಸಲಿದೆ. ಈ ಕುರಿತ ಚಿತ್ರನೋಟ ಇಲ್ಲಿದೆ.
ಮಂತ್ರಾಲಯದಲ್ಲಿ ರಾಯರ ಆರಾಧನೆಗೆ ಇನ್ನಿಲ್ಲ ಮಹತ್ವ. ಇದಕ್ಕಾಗಿ ಇಡೀ ರಾಯರ ಮಠ ಕಳೆಗಟ್ಟಿರುತ್ತದೆ. ಭಕ್ತರ ಉತ್ಸಾಹದ ನಡುವೆ  ಶ್ರೀರಾಘವೇಂದ್ರಸ್ವಾಮಿಗಳ 353ನೇ ಆರಾಧನಾ ಮಹೋತ್ಸವ. ರಾಯರ ಆರಾಧನೆ-2024ಕ್ಕೆ ಚಾಲನೆಯನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮೀಜಿಯವರು ನೀಡಿದರು,
(1 / 9)

ಆರಾಧನಾ ಮಹೋತ್ಸವ ಅಂಗವಾಗಿ ಮಂತ್ರಾಲಯ ಮಠದ ಆವರಣದಲ್ಲಿ ಒಂಟೆಗಳಿಗೆ ವಿಶೇಷ ಪೂಜೆಯನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮೀಜಿಯವರು ಸಲ್ಲಿಸಿದರು.
(2 / 9)

ರಾಘವೇಂದ್ರ ಸ್ವಾಮಿಗಳ ಆರಾಧನೆ ಅಂಗವಾಗಿ ನಡೆಯುವ ವಿವಿಧ ಧಾರ್ಮಿಕ ಮೆರವಣಿಗೆಗಳಲ್ಲಿ ಭಾಗಿಯಾಗುವ ಅಶ್ವಕ್ಕೂ ವಿಶೇಷ ಪೂಜೆಯನ್ನು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮೀಜಿಯವರು ಸಲ್ಲಿಸಿದರು.
(3 / 9)

 ಗುರುರಾಘವೇಂದ್ರ ಸ್ವಾಮಿಯವರ 353ನೇ ಆರಾಧನ ಮಹೋತ್ಸವದ ಪ್ರಯುಕ್ತ ಟಿಟಿಡಿ ಪರವಾಗಿ ಜೆ.ಶ್ಯಾಮಲರಾವ್ ದಂಪತಿಗಳು ಶೇಷವಸ್ತ್ರವನ್ನು ಸಲ್ಲಿಸಿದರು. ಇದನ್ನು ಶ್ರೀ ಸುಬುದೇಂದ್ರತೀರ್ಥ ಸ್ವಾಮಿಗಳು ಸ್ವೀಕರಿಸಿದರು.
(4 / 9)

ಆರಾಧನೆ ವೇಳೆ ಶ್ರೀ ಸುಬುದೇಂದ್ರತೀರ್ಥ ಸ್ವಾಮಿಗಳನ್ನು ಜೆ.ಶ್ಯಾಮಲರಾವ್ ದಂಪತಿ ಆತ್ಮೀಯವಾಗಿ ಸನ್ಮಾನಿಸಿದರು.
(5 / 9)

ಮುಂದಿನ ಮೂರು ದಿನ ಅಂದರೆ ಆಗಸ್ಟ್‌: 20ರ ಮಂಗಳವಾರದಂದು ಶ್ರೀರಾಯರ ಪೂರ್ವಾರಾಧನಾ ಮಹೋತ್ಸವ, ಆಗಸ್ಟ್‌ 21ರ ಬುಧವಾರ ಶ್ರೀರಾಯರ ಮುಖ್ಯ ಮಧ್ಯಾರಾಧಾನ ಮಹೋತ್ಸವ ಹಾಗೂ  ಆಗಸ್ಟ್‌ 22ರ ಗುರುವಾರದಂದು ಶ್ರೀರಾಯರ ಶ್ರೀರಾಯರ ಉತ್ತರಾರಾಧನಾ ಮಹೋತ್ಸವ  ಜರುಗಲಿವೆ.
(6 / 9)

ಮೂರು ದಿನಗಳೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿದ್ದು.  ಗುರುವಾರದಂದು ಉತ್ತರಾರಾಧನೆ ದಿನ ಮಠದ ರಥಬೀದಿಯಲ್ಲಿ ಮಹಾರಥೋತ್ಸವ ಜರುಗಲಿದೆ. ಮಠದಲ್ಲಿ ಭಾನುವಾರವೇ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದ್ದು. ಸೋಮವಾರವೂ ಪೂಜೆಗಳು ನೆರವೇರಿದವು.
(7 / 9)

ನಾನಾ ಭಾಗಗಳಿಂದ ಆಗಮಿಸಿರುವ ಭಕ್ತರು., ಗಣ್ಯರು ರಾಯರ ಬೃಂದಾವನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಶ್ರೀ ಸುಬುದೇಂದ್ರ  ತೀರ್ಥ ಸ್ವಾಮೀಜಿ ಅವರಿಂದ ಆಶಿರ್ವಾದವನ್ನು ಪಡೆದುಕೊಂಡರು,
(8 / 9)

ಏಳು ದಿನಗಳವರೆಗೆ ಪ್ರತಿನಿತ್ಯ  ಮಂತ್ರಾಲಯದ ರಾಯರ ಮಠದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಇದಕ್ಕಾಗಿ ದೇಶ, ವಿದೇಶ ಹಾಗೂ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದಾರೆ.
(9 / 9)

    ಹಂಚಿಕೊಳ್ಳಲು ಲೇಖನಗಳು