logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಜ್‌ಕೋಟ್ ಅಗ್ನಿದುರಂತ; ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಅಗ್ನಿಸುರಕ್ಷೆ ಕೊರತೆ, ಮಾಲೀಕ, ಮ್ಯಾನೇಜರ್ ಬಂಧನ

ರಾಜ್‌ಕೋಟ್ ಅಗ್ನಿದುರಂತ; ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಅಗ್ನಿಸುರಕ್ಷೆ ಕೊರತೆ, ಮಾಲೀಕ, ಮ್ಯಾನೇಜರ್ ಬಂಧನ

May 26, 2024 11:10 PM IST

ರಾಜ್‌ಕೋಟ್ ಅಗ್ನಿದುರಂತ; ಗುಜರಾತ್‌ನ ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಅಗ್ನಿಸುರಕ್ಷೆ ಕೊರತೆ ಇತ್ತು. ಇದರಿಂದಾಗಿ ದುರಂತ ಸಂಭವಿಸಿದ್ದು, ಗೇಮಿಂಗ್ ಝೋನ್ ಮಾಲೀಕ, ಮ್ಯಾನೇಜರ್ ಬಂಧನವಾಗಿದೆ. ದುರಂತದಲ್ಲಿ 27 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಭಾನುವಾರದ ಸಚಿತ್ರ ವರದಿ ಇಲ್ಲಿದೆ. 

ರಾಜ್‌ಕೋಟ್ ಅಗ್ನಿದುರಂತ; ಗುಜರಾತ್‌ನ ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಅಗ್ನಿಸುರಕ್ಷೆ ಕೊರತೆ ಇತ್ತು. ಇದರಿಂದಾಗಿ ದುರಂತ ಸಂಭವಿಸಿದ್ದು, ಗೇಮಿಂಗ್ ಝೋನ್ ಮಾಲೀಕ, ಮ್ಯಾನೇಜರ್ ಬಂಧನವಾಗಿದೆ. ದುರಂತದಲ್ಲಿ 27 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಭಾನುವಾರದ ಸಚಿತ್ರ ವರದಿ ಇಲ್ಲಿದೆ. 
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಅಗ್ನಿದುರಂತ ಸಂಭವಿಸಿದ ಟಿಆರ್‌ಪಿ ಗೇಮಿಂಗ್‌ ಝೋನ್‌ ಸ್ಥಳದಲ್ಲಿ ಅಧಿಕಾರಿಗಳು ಭಾನುವಾರ ಪರಿಶೀಲನೆ ನಡೆಸಿದರು. ದುರಂತದಲ್ಲಿ ನಾಲ್ಕು ಮಕ್ಕಳು ಸೇರಿ 27 ಜನ ಮೃತಪಟ್ಟರು.
(1 / 5)
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಅಗ್ನಿದುರಂತ ಸಂಭವಿಸಿದ ಟಿಆರ್‌ಪಿ ಗೇಮಿಂಗ್‌ ಝೋನ್‌ ಸ್ಥಳದಲ್ಲಿ ಅಧಿಕಾರಿಗಳು ಭಾನುವಾರ ಪರಿಶೀಲನೆ ನಡೆಸಿದರು. ದುರಂತದಲ್ಲಿ ನಾಲ್ಕು ಮಕ್ಕಳು ಸೇರಿ 27 ಜನ ಮೃತಪಟ್ಟರು.(AFP)
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಅಧಿಕಾರಿಗಳ ಜತೆಗೆ ಭಾನುವಾರ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
(2 / 5)
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಅಧಿಕಾರಿಗಳ ಜತೆಗೆ ಭಾನುವಾರ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.(AFP)
ಗುಜರಾತ್‌ನ ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಶನಿವಾರದಂದು ಭಾರೀ ಬೆಂಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ 27ಕ್ಕೇರಿದೆ. ಈ ಸಂಸ್ಥೆ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಅಗತ್ಯ ಅಗ್ನಿ ಸುರಕ್ಷತೆ ಕ್ಲಿಯರೆನ್ಸ್ ಪಡೆದಿಲ್ಲ. ಹೀಗಾಗಿ, ಗೇಮಿಂಗ್ ಝೋನ್‌ನ ಮಾಲೀಕ ಮತ್ತು ವ್ಯವಸ್ಥಾಪಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
(3 / 5)
ಗುಜರಾತ್‌ನ ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಶನಿವಾರದಂದು ಭಾರೀ ಬೆಂಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ 27ಕ್ಕೇರಿದೆ. ಈ ಸಂಸ್ಥೆ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಅಗತ್ಯ ಅಗ್ನಿ ಸುರಕ್ಷತೆ ಕ್ಲಿಯರೆನ್ಸ್ ಪಡೆದಿಲ್ಲ. ಹೀಗಾಗಿ, ಗೇಮಿಂಗ್ ಝೋನ್‌ನ ಮಾಲೀಕ ಮತ್ತು ವ್ಯವಸ್ಥಾಪಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (AFP)
ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ ಬೆಂಕಿ ದುರಂತದ ಬಳಿಕ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಭಾನುವಾರ ನಡೆಯಿತು.
(4 / 5)
ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ ಬೆಂಕಿ ದುರಂತದ ಬಳಿಕ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಭಾನುವಾರ ನಡೆಯಿತು.(AFP)
ಟಿಆರ್‌ಪಿ ಗೇಮಿಂಗ್ ಝೋನ್‌ ವಾರಾಂತ್ಯಕ್ಕಾಗಿ ಆಕರ್ಷಕ ರಿಯಾಯಿತಿ ಯೋಜನೆ ಘೋಷಿಸಿತ್ತು. ಇದರಿಂದಾಗಿ, ಅಲ್ಲಿ ಜನದಟ್ಟಣೆ ಹೆಚ್ಚಿತ್ತು. ಪ್ರವೇಶ ಶುಲ್ಕವನ್ನು 500 ರೂಪಾಯಿಯಿಂದ 99 ರೂಪಾಯಿಗೆ ಇಳಿಸಿದ್ದರು. ಜನದಟ್ಟಣೆ ನಿರ್ವಹಿಸಲು ಅಗತ್ಯ ಕ್ರಮಗಳನ್ನು ಅವರು ತೆಗೆದುಕೊಂಡಿರಲಿಲ್ಲ.  
(5 / 5)
ಟಿಆರ್‌ಪಿ ಗೇಮಿಂಗ್ ಝೋನ್‌ ವಾರಾಂತ್ಯಕ್ಕಾಗಿ ಆಕರ್ಷಕ ರಿಯಾಯಿತಿ ಯೋಜನೆ ಘೋಷಿಸಿತ್ತು. ಇದರಿಂದಾಗಿ, ಅಲ್ಲಿ ಜನದಟ್ಟಣೆ ಹೆಚ್ಚಿತ್ತು. ಪ್ರವೇಶ ಶುಲ್ಕವನ್ನು 500 ರೂಪಾಯಿಯಿಂದ 99 ರೂಪಾಯಿಗೆ ಇಳಿಸಿದ್ದರು. ಜನದಟ್ಟಣೆ ನಿರ್ವಹಿಸಲು ಅಗತ್ಯ ಕ್ರಮಗಳನ್ನು ಅವರು ತೆಗೆದುಕೊಂಡಿರಲಿಲ್ಲ.  (ANI )

    ಹಂಚಿಕೊಳ್ಳಲು ಲೇಖನಗಳು