ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಕಬಳಿಸಿದ ಅಶ್ವಿನ್; ಅನಿಲ್ ಕುಂಬ್ಳೆ ದಾಖಲೆ ಹಿಂದಿಕ್ಕಿದ ಮತ್ತು ಸರಿಗಟ್ಟಿದ ಸ್ಪಿನ್ನರ್

ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಕಬಳಿಸಿದ ಅಶ್ವಿನ್; ಅನಿಲ್ ಕುಂಬ್ಳೆ ದಾಖಲೆ ಹಿಂದಿಕ್ಕಿದ ಮತ್ತು ಸರಿಗಟ್ಟಿದ ಸ್ಪಿನ್ನರ್

Feb 25, 2024 07:07 PM IST

Ravichandran Ashwin : ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ರವಿಚಂದ್ರನ್ ಅಶ್ವಿನ್, 5 ವಿಕೆಟ್ ಕಬಳಿಸುವ ಮೂಲಕ ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದ್ದಾರೆ.

  • Ravichandran Ashwin : ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ರವಿಚಂದ್ರನ್ ಅಶ್ವಿನ್, 5 ವಿಕೆಟ್ ಕಬಳಿಸುವ ಮೂಲಕ ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದ್ದಾರೆ.
ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಯ 4ನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ರವಿಚಂದ್ರನ್ ಅಶ್ವಿನ್, 15.5 ಓವರ್‌ಗಳಲ್ಲಿ 51 ರನ್ ನೀಡಿ 5 ವಿಕೆಟ್ ಪಡೆದರು.
(1 / 8)

ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದ ಅಶ್ವಿನ್, ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ ಮತ್ತು ಸರಿಗಟ್ಟಿದ್ದಾರೆ.
(2 / 8)

ಟೆಸ್ಟ್​ ಕ್ರಿಕೆಟ್​​ನಲ್ಲಿ 35 ಬಾರಿ 5 ವಿಕೆಟ್ ಗೊಂಚಲು ಪಡೆದಿರುವ ಕುಂಬ್ಳೆ ದಾಖಲೆಯನ್ನು ಅಶ್ವಿನ್ ಸರಿಗಟ್ಟಿದ್ದಾರೆ. ಆದರೆ ವೇಗದ 35 ವಿಕೆಟ್ ಗೊಂಚಲು ಪಡೆದವರಲ್ಲಿ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ.
(3 / 8)
ಟೆಸ್ಟ್​ ಕ್ರಿಕೆಟ್​​ನಲ್ಲಿ 35 ಬಾರಿ 5 ವಿಕೆಟ್ ಗೊಂಚಲು ಪಡೆದಿರುವ ಕುಂಬ್ಳೆ ದಾಖಲೆಯನ್ನು ಅಶ್ವಿನ್ ಸರಿಗಟ್ಟಿದ್ದಾರೆ. ಆದರೆ ವೇಗದ 35 ವಿಕೆಟ್ ಗೊಂಚಲು ಪಡೆದವರಲ್ಲಿ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ.(AP)
ಟೆಸ್ಟ್​ ಕ್ರಿಕೆಟ್​ನಲ್ಲಿ ಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ ಭಾರತ ಬೌಲರ್​ಗಳ ಪೈಕಿ ಕುಂಬ್ಳೆ ಅವರನ್ನು ಸರಿಗಟ್ಟಿದ್ದಾರೆ. ಅಶ್ವಿನ್ 99 ಟೆಸ್ಟ್‌ 187 ಇನ್ನಿಂಗ್ಸ್​​ಗಳಲ್ಲಿ 35 ಸಲ 5 ವಿಕೆಟ್ ಗೊಂಚಲು ಪಡೆದಿದ್ದಾರೆ.
(4 / 8)

ಕುಂಬ್ಳೆ 132 ಟೆಸ್ಟ್‌ಗಳ 236 ಇನ್ನಿಂಗ್ಸ್‌ಗಳಲ್ಲಿ 35 ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಕಬಳಿಸಿದ ಸಾಧನೆ ಮಾಡಿದ್ದಾರೆ. ಆದರೆ ಕುಂಬ್ಳೆಗಿಂತ ವೇಗವಾಗಿ ಈ ದಾಖಲೆ ಬರೆದಿರುವುದು ವಿಶೇಷ. ಕುಂಬ್ಳೆ ಮತ್ತು ಅಶ್ವಿನ್ ನಡವೆ​ 33 ಟೆಸ್ಟ್​​​ ಪಂದ್ಯಗಳ ಅಂತರ ಇದೆ.
(5 / 8)

ಟೆಸ್ಟ್​ ಕ್ರಿಕೆಟ್​ನಲ್ಲಿ ಹೆಚ್ಚು ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್ (ಕುಂಬ್ಳೆ) ಜಂಟಿ 4ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (67 ಸಲ), ಆಸ್ಟ್ರೇಲಿಯಾದ ಶೇನ್ ವಾರ್ನ್ (37), ನ್ಯೂಜಿಲೆಂಡ್‌ನ ರಿಚರ್ಡ್ ಹ್ಯಾಡ್ಲಿ (36) ಮೊದಲ 3 ಸ್ಥಾನದಲ್ಲಿದ್ದಾರೆ.
(6 / 8)

ಭಾರತದವರ ಪೈಕಿ ಅಶ್ವಿನ್ ಮತ್ತು ಕುಂಬ್ಳೆ ಅವರ ನಂತರ ಹರ್ಭಜನ್ ಸಿಂಗ್ (25), ಕಪಿಲ್ ದೇವ್ (23) ಮತ್ತು ಚಂದ್ರಶೇಖರ್ (16) ಅವರು ಸ್ಥಾನ ಪಡೆದಿದ್ದಾರೆ.
(7 / 8)
ಭಾರತದವರ ಪೈಕಿ ಅಶ್ವಿನ್ ಮತ್ತು ಕುಂಬ್ಳೆ ಅವರ ನಂತರ ಹರ್ಭಜನ್ ಸಿಂಗ್ (25), ಕಪಿಲ್ ದೇವ್ (23) ಮತ್ತು ಚಂದ್ರಶೇಖರ್ (16) ಅವರು ಸ್ಥಾನ ಪಡೆದಿದ್ದಾರೆ.(PTI)
ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಓದಿ.
(8 / 8)
ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಓದಿ.

    ಹಂಚಿಕೊಳ್ಳಲು ಲೇಖನಗಳು