logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rcb Squad For Wpl 2023: ಬಲಿಷ್ಠ ಆಟಗಾರ್ತಿಯರಿಗೆ ಬಿಡ್ ಮಾಡಿದ ಆರ್‌ಸಿಬಿ; ದುಬಾರಿ ಬೆಲೆ ಪಡೆದ ಸ್ಟಾರ್‌ಗಳಿವರು

RCB Squad for WPL 2023: ಬಲಿಷ್ಠ ಆಟಗಾರ್ತಿಯರಿಗೆ ಬಿಡ್ ಮಾಡಿದ ಆರ್‌ಸಿಬಿ; ದುಬಾರಿ ಬೆಲೆ ಪಡೆದ ಸ್ಟಾರ್‌ಗಳಿವರು

Feb 13, 2023 09:04 PM IST

WPL 2023 Player Auction: ಆಟಗಾರರ ಖರೀದಿ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಪ್ರಮುಖ ಆಟಗಾರ್ತಿಯರಿಗೆ ಗಾಳ ಹಾಕಿದೆ. ಪೆರ್ರಿ, ಡಿವೈನ್‌ ಸೇರಿದಂತೆ ವಿದೇಶಿ ಸೂಪರ್‌ಸ್ಟಾರ್‌ಗಳು ಸೇರಿದಂತೆ ಬಲಿಷ್ಠ ಆಗಾರ್ತಿಯರನ್ನು ಖರೀದಿಸಿದೆ.

  • WPL 2023 Player Auction: ಆಟಗಾರರ ಖರೀದಿ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಪ್ರಮುಖ ಆಟಗಾರ್ತಿಯರಿಗೆ ಗಾಳ ಹಾಕಿದೆ. ಪೆರ್ರಿ, ಡಿವೈನ್‌ ಸೇರಿದಂತೆ ವಿದೇಶಿ ಸೂಪರ್‌ಸ್ಟಾರ್‌ಗಳು ಸೇರಿದಂತೆ ಬಲಿಷ್ಠ ಆಗಾರ್ತಿಯರನ್ನು ಖರೀದಿಸಿದೆ.
ಆರ್‌ಸಿಬಿಯು ಬಲಿಷ್ಠ ಆಟಗಾರ್ತಿಯರನ್ನು ಖರೀದಿಸಿದೆ. ಕೇವಲ ಐವರು ಆಟಗಾರ್ತಿಯರಿಗೆ ಬರೋಬ್ಬರಿ 9 ಕೋಟಿ ರೂಪಾಯಿಗಳನ್ನು ಬೆಂಗಳೂರು ವಿನಿಯೋಗಿಸಿದೆ.
(1 / 6)
ಆರ್‌ಸಿಬಿಯು ಬಲಿಷ್ಠ ಆಟಗಾರ್ತಿಯರನ್ನು ಖರೀದಿಸಿದೆ. ಕೇವಲ ಐವರು ಆಟಗಾರ್ತಿಯರಿಗೆ ಬರೋಬ್ಬರಿ 9 ಕೋಟಿ ರೂಪಾಯಿಗಳನ್ನು ಬೆಂಗಳೂರು ವಿನಿಯೋಗಿಸಿದೆ.(RCB Twitter)
ಹರಾಜಿನ ಆರಂಭದಲ್ಲೇ ಸ್ಮೃತಿ ಮಂಧನ ಅವರನ್ನು ಬೆಂಗಳೂರು ಖರೀದಿಸತು. ಅವರ ಮೂಲ ಬೆಲೆ 50 ಲಕ್ಷ ರೂಪಾಯಿ. ಮುಂಬೈ ಇಂಡಿಯನ್ಸ್ ಸ್ಪರ್ಧೆ ತೋರಿದರೂ, ಅಂತಿಮವಾಗಿ ಆರ್‌ಸಿಬಿ ಮಂಧನಾರನ್ನು 3 ಕೋಟಿ 40 ಲಕ್ಷಕ್ಕೆ ತಂಡಕ್ಕೆ ತೆಗೆದುಕೊಂಡಿತು.
(2 / 6)
ಹರಾಜಿನ ಆರಂಭದಲ್ಲೇ ಸ್ಮೃತಿ ಮಂಧನ ಅವರನ್ನು ಬೆಂಗಳೂರು ಖರೀದಿಸತು. ಅವರ ಮೂಲ ಬೆಲೆ 50 ಲಕ್ಷ ರೂಪಾಯಿ. ಮುಂಬೈ ಇಂಡಿಯನ್ಸ್ ಸ್ಪರ್ಧೆ ತೋರಿದರೂ, ಅಂತಿಮವಾಗಿ ಆರ್‌ಸಿಬಿ ಮಂಧನಾರನ್ನು 3 ಕೋಟಿ 40 ಲಕ್ಷಕ್ಕೆ ತಂಡಕ್ಕೆ ತೆಗೆದುಕೊಂಡಿತು.(RCB twitter)
ನ್ಯೂಜಿಲೆಂಡ್ ತಾರೆ ಸೋಫಿ ಡಿವೈನ್ ಕೂಡಾ ಆರ್‌ಸಿಬಿ ಬಳಗ ಸೇರಿಕೊಂಡಿದ್ದಾರೆ. ಇವರ ಮೂಲ ಬೆಲೆ 50 ಲಕ್ಷ ರೂಪಾಯಿ. ಆರ್‌ಸಿಬಿ ಸೋಫಿಯನ್ನು ಸುಲಭವಾಗಿ ಮೂಲ ಬೆಲೆಗೆ ತಂಡಕ್ಕೆ ಸೇರಿಸಿಕೊಂಡಿತು. ಇವರಿಗೆ ಬೇರೆ ಯಾವ ಫ್ರಾಂಚೈಸಿಯೂ ಬಿಡ್ ಮಾಡಿಲ್ಲ. ಹಾಗಾಗಿ ಆರ್‌ಸಿಬಿಯು ಬಲಿಷ್ಠ ಸೋಫಿಯವರನ್ನು ಕಡಿಮೆ ಮೊತ್ತಕ್ಕೆ ತಂಡ ಸೇರಿಸಿಕೊಂಡಿತು. 
(3 / 6)
ನ್ಯೂಜಿಲೆಂಡ್ ತಾರೆ ಸೋಫಿ ಡಿವೈನ್ ಕೂಡಾ ಆರ್‌ಸಿಬಿ ಬಳಗ ಸೇರಿಕೊಂಡಿದ್ದಾರೆ. ಇವರ ಮೂಲ ಬೆಲೆ 50 ಲಕ್ಷ ರೂಪಾಯಿ. ಆರ್‌ಸಿಬಿ ಸೋಫಿಯನ್ನು ಸುಲಭವಾಗಿ ಮೂಲ ಬೆಲೆಗೆ ತಂಡಕ್ಕೆ ಸೇರಿಸಿಕೊಂಡಿತು. ಇವರಿಗೆ ಬೇರೆ ಯಾವ ಫ್ರಾಂಚೈಸಿಯೂ ಬಿಡ್ ಮಾಡಿಲ್ಲ. ಹಾಗಾಗಿ ಆರ್‌ಸಿಬಿಯು ಬಲಿಷ್ಠ ಸೋಫಿಯವರನ್ನು ಕಡಿಮೆ ಮೊತ್ತಕ್ಕೆ ತಂಡ ಸೇರಿಸಿಕೊಂಡಿತು. (Getty)
ಆಸೀಸ್‌ ಆಲ್ ರೌಂಡರ್ ಎಲ್ಲಿಸ್ ಪೆರಿ ಮೂಲ ಬೆಲೆ 50 ಲಕ್ಷ ರೂಪಾಯಿ. ಹರಾಜಿನಲ್ಲಿ ಅವರನ್ನು ಖರೀದಿಸಲು ದೆಹಲಿ ಮತ್ತು ಆರ್‌ಸಿಬಿ ಬಿಡ್ ಮಾಡಿತು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ಕೋಟಿ 70 ಲಕ್ಷಕ್ಕೆ ಎಲ್ಲಿಸ್ ಪೆರಿ ಅವರನ್ನು ತಂಡಕ್ಕೆ ತೆಗೆದುಕೊಂಡಿತು.
(4 / 6)
ಆಸೀಸ್‌ ಆಲ್ ರೌಂಡರ್ ಎಲ್ಲಿಸ್ ಪೆರಿ ಮೂಲ ಬೆಲೆ 50 ಲಕ್ಷ ರೂಪಾಯಿ. ಹರಾಜಿನಲ್ಲಿ ಅವರನ್ನು ಖರೀದಿಸಲು ದೆಹಲಿ ಮತ್ತು ಆರ್‌ಸಿಬಿ ಬಿಡ್ ಮಾಡಿತು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ಕೋಟಿ 70 ಲಕ್ಷಕ್ಕೆ ಎಲ್ಲಿಸ್ ಪೆರಿ ಅವರನ್ನು ತಂಡಕ್ಕೆ ತೆಗೆದುಕೊಂಡಿತು.(Gettty)
ರೇಣುಕಾ ಸಿಂಗ್ ಠಾಕೂರ್ ಅವರ ಮೂಲ ಬೆಲೆ 50 ಲಕ್ಷ ರೂಪಾಯಿ. ಹರಾಜಿನ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಬಿಡ್ ಮಾಡಿತು. ಇದಕ್ಕೆ ಆರ್‌ಸಿಬಿ ಸೇರಿಕೊಂಡಿತು. ಅಂತಿಮವಾಗಿ, ಆರ್‌ಸಿಬಿ 1 ಕೋಟಿ 50 ಲಕ್ಷ ರೂಪಾಯಿಗಳಿಗೆ ರೇಣುಕಾ ಸಿಂಗ್ ಠಾಕೂರ್ ಅವರನ್ನು ತಂಡಕ್ಕೆ ತೆಗೆದುಕೊಂಡಿತು.
(5 / 6)
ರೇಣುಕಾ ಸಿಂಗ್ ಠಾಕೂರ್ ಅವರ ಮೂಲ ಬೆಲೆ 50 ಲಕ್ಷ ರೂಪಾಯಿ. ಹರಾಜಿನ ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಬಿಡ್ ಮಾಡಿತು. ಇದಕ್ಕೆ ಆರ್‌ಸಿಬಿ ಸೇರಿಕೊಂಡಿತು. ಅಂತಿಮವಾಗಿ, ಆರ್‌ಸಿಬಿ 1 ಕೋಟಿ 50 ಲಕ್ಷ ರೂಪಾಯಿಗಳಿಗೆ ರೇಣುಕಾ ಸಿಂಗ್ ಠಾಕೂರ್ ಅವರನ್ನು ತಂಡಕ್ಕೆ ತೆಗೆದುಕೊಂಡಿತು.(BCCI)
ಬಂಗಾಳದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಿಚಾ ಘೋಷ್ ಅವರ ಮೂಲ ಬೆಲೆ 50 ಲಕ್ಷ ರೂಪಾಯಿ. ಹರಾಜಿನಲ್ಲಿ ಅವರನ್ನು ದೆಹಲಿ ಮತ್ತು ಆರ್‌ಸಿಬಿ ಬಿಡ್ ಮಾಡಿತು. ಅಂತಿಮವಾಗಿ ಆರ್‌ಸಿಬಿಯು ಇವರನ್ನು 1 ಕೋಟಿ 90 ಲಕ್ಷ ರೂಪಾಯಿಗಳಿಗೆ ತಂಡಕ್ಕೆ ಖರೀದಿಸಿತು.
(6 / 6)
ಬಂಗಾಳದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಿಚಾ ಘೋಷ್ ಅವರ ಮೂಲ ಬೆಲೆ 50 ಲಕ್ಷ ರೂಪಾಯಿ. ಹರಾಜಿನಲ್ಲಿ ಅವರನ್ನು ದೆಹಲಿ ಮತ್ತು ಆರ್‌ಸಿಬಿ ಬಿಡ್ ಮಾಡಿತು. ಅಂತಿಮವಾಗಿ ಆರ್‌ಸಿಬಿಯು ಇವರನ್ನು 1 ಕೋಟಿ 90 ಲಕ್ಷ ರೂಪಾಯಿಗಳಿಗೆ ತಂಡಕ್ಕೆ ಖರೀದಿಸಿತು.(PTI)

    ಹಂಚಿಕೊಳ್ಳಲು ಲೇಖನಗಳು