logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sambar Masala Powder Recipe: ಮನೆಯಲ್ಲಿಯೇ ತಯಾರಿಸಿ ಘಮ ಘಮಿಸೋ ಸಾಂಬಾರ್‌ ಮಸಾಲಾ ಪೌಡರ್‌; ಬೇಕಿರುವ ಸಾಮಗ್ರಿ ಪಟ್ಟಿ ಹೀಗಿದೆ

Sambar Masala Powder Recipe: ಮನೆಯಲ್ಲಿಯೇ ತಯಾರಿಸಿ ಘಮ ಘಮಿಸೋ ಸಾಂಬಾರ್‌ ಮಸಾಲಾ ಪೌಡರ್‌; ಬೇಕಿರುವ ಸಾಮಗ್ರಿ ಪಟ್ಟಿ ಹೀಗಿದೆ

Jun 07, 2023 06:41 PM IST

Sambar Masala Powder Recipe: ನೀವು ಮನೆಯಲ್ಲಿ ಮಾಡುವ ಸಾಂಬಾರ್‌ಗೆ ಕಿರಾಣಿ ಅಂಗಡಿಯಲ್ಲಿನ ಸಾಂಬಾರ್‌ ಮಸಾಲಾ ಪೌಡರ್‌ ಅನ್ನೇ ಹೆಚ್ಚು ಬಳಸುತ್ತೀರಾ? ಹಾಗಿದ್ದರೆ, ನೀವೇಕೆ ಮನೆಯಲ್ಲಿಯೇ ಮಸಾಲಾ ಪೌಡರ್‌ ರೆಡಿಮಾಡಿಟ್ಟುಕೊಳ್ಳಬಾರದು. ನಿಮ್ಮ ಕೈರುಚಿಯನ್ನೇಕೆ ಮತ್ತಷ್ಟು ಹೆಚ್ಚಿಸಿಕೊಳ್ಳಬಾರದು. ಹಾಗಿದ್ರೆ, ಇಲ್ಲಿದೆ ನೋಡಿ ಸರಳವಾಗಿ ಮಾಡುವ ಸಾಂಬಾರ್‌ ಪೌಡರ್.‌

  • Sambar Masala Powder Recipe: ನೀವು ಮನೆಯಲ್ಲಿ ಮಾಡುವ ಸಾಂಬಾರ್‌ಗೆ ಕಿರಾಣಿ ಅಂಗಡಿಯಲ್ಲಿನ ಸಾಂಬಾರ್‌ ಮಸಾಲಾ ಪೌಡರ್‌ ಅನ್ನೇ ಹೆಚ್ಚು ಬಳಸುತ್ತೀರಾ? ಹಾಗಿದ್ದರೆ, ನೀವೇಕೆ ಮನೆಯಲ್ಲಿಯೇ ಮಸಾಲಾ ಪೌಡರ್‌ ರೆಡಿಮಾಡಿಟ್ಟುಕೊಳ್ಳಬಾರದು. ನಿಮ್ಮ ಕೈರುಚಿಯನ್ನೇಕೆ ಮತ್ತಷ್ಟು ಹೆಚ್ಚಿಸಿಕೊಳ್ಳಬಾರದು. ಹಾಗಿದ್ರೆ, ಇಲ್ಲಿದೆ ನೋಡಿ ಸರಳವಾಗಿ ಮಾಡುವ ಸಾಂಬಾರ್‌ ಪೌಡರ್.‌
ಸಾಂಬಾರ್‌ ರುಚಿ ಮತ್ತಷ್ಟು ಹೆಚ್ಚಿಸಬೇಕೇ? ಹಾಗಿದ್ದರೆ, ನೀವೇ ನಿಮ್ಮ ಮನೆಯಲ್ಲಿಯೇ ಮಸಾಲಾ ಪೌಡರ್‌ ರೆಡಿಮಾಡಿಟ್ಟುಕೊಳ್ಳಿ. ಈ ಮಸಾಲಾ ಮಾಡಲು ಬೇಕಿರುವ ಸಾಮಗ್ರಿಗಳು ಹೀಗಿವೆ ನೋಡಿ. (Instagram/ @chandni_foodcorner)
(1 / 7)

ಸಾಂಬಾರ್‌ ಮಸಾಲಾ ಪೌಡರ್‌ ಮಾಡಲು ಬೇಕಿರುವ ಸಾಮಗ್ರಿಗಳು: ಧನಿಯಾ ಪುಡಿ ಎರಡು ಚಮಚ, ಒಂದು ಚಮಚ ಜೀರಿಗೆ, ಒಂದು ಚಮಚ ಕಾಳು ಮೆಣಸು, ಒಂದು ಚಮಚ ಸಾಸಿವೆ, ಒಂದು ಚಮಚ ಮೆಂತ್ಯೆ, ಒಂದು ಚಮಚ ಉದ್ದಿನ ಬೇಳೆ, ಒಂದು ಚಮಚ ಕಡಲೆ ಬೇಳೆ, ಒಂದು ಚಮಚ ಅಕ್ಕಿ. (Instagram/ @chandni_foodcorner)
(2 / 7)

ಕರಿಬೇವಿನ ಸೊಪ್ಪು, ಕಾಶ್ಕೀರಿ ಕೆಂಪು ಮೆಣಸು ಒಂದು ಕಪ್‌, ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು, ಇಂಗು. ಈ ಎಲ್ಲ ಪದಾರ್ಥಗಳು ಸಾಂಬಾರ್‌ ಮಸಾಲಾ ಮಾಡಲು ಅತ್ಯವಶ್ಯಕವಾಗಿ ಬೇಕು. (Instagram/ @chandni_foodcorner)
(3 / 7)

ಗ್ಯಾಸ್‌ ಆನ್‌ ಮಾಡಿ ಅದರ ಮೇಲೆ ಬಾಣಲೆ ಇಡಿ. ಬಾಣಲೆ ಕಾದ ನಂತರ, ಧನಿಯಾ ಪುಡಿ ಎರಡು ಚಮಚ, ಒಂದು ಚಮಚ ಜೀರಿಗೆ, ಒಂದು ಚಮಚ ಕಾಳು ಮೆಣಸು, ಒಂದು ಚಮಚ ಸಾಸಿವೆ, ಒಂದು ಚಮಚ ಮೆಂತ್ಯೆಯನ್ನು ಮೊದಲು ಹುರಿದುಕೊಳ್ಳಿ. (Instagram/ @chandni_foodcorner)
(4 / 7)

ಬಳಿಕ ಇವೆಲ್ಲವನ್ನು ಒಂದು ತಟ್ಟೆಗೆ ಹಾಕಿ ತೆಗೆದಿಡಿ. ಅದೇ ಬಾಣಲೆಯಲ್ಲಿ ಒಂದು ಚಮಚ ಉದ್ದಿನ ಬೇಳೆ, ಒಂದು ಚಮಚ ಕಡಲೆ ಬೇಳೆ, ಒಂದು ಚಮಚ ಅಕ್ಕಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇವನ್ನೂ ಸಹ ಕೊಂಚ ತಣ್ಣಗಾಗಲು ಬಿಡಿ. (Instagram/ @chandni_foodcorner)
(5 / 7)

ಇದೀಗ ಕೆಂಪು ಮೆಣಸಿನಕಾಯಿಯನ್ನು ಬಾಣಲೆಗೆ ಹಾಕಿ ಸ್ವಲ್ಪ ಬಿಸಿಯಾಗುವ ವರೆಗೂ ಹುರಿಯಿರಿ. ಹೀಗೆ ಸಿದ್ಧವಾದ ಎಲ್ಲವನ್ನು ಮಿಕ್ಸರ್‌ ಬೌಲ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಸಿದ್ಧವಾದ ಪುಡಿಯನ್ನು ನೀವು ಗಾಜಿನ ಬಾಟಲಿಗೆ ಹಾಕಿಟ್ಟುಕೊಂಡು, ವರ್ಷದ ವರೆಗೂ ಬಳಕೆ ಮಾಡಿಕೊಳ್ಳಬಹುದು. (Instagram/ @chandni_foodcorner)
(6 / 7)

ಸಿದ್ಧವಾದ ಪುಡಿಯನ್ನು ನೀವು ಗಾಜಿನ ಬಾಟಲಿಗೆ ಹಾಕಿಟ್ಟುಕೊಂಡು, ವರ್ಷದ ವರೆಗೂ ಬಳಕೆ ಮಾಡಿಕೊಳ್ಳಬಹುದು. (Instagram/ @chandni_foodcorner)
(7 / 7)

    ಹಂಚಿಕೊಳ್ಳಲು ಲೇಖನಗಳು