logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Soya Chunks Kebab Recipe: ಜಿಟಿ ಜಿಟಿ ಮಳೆಗೆ ಬಾಯಿ ರುಚಿಸುವ ಸೋಯಾ ಚಂಕ್ಸ್‌ ಕಬಾಬ್‌; ಇಳಿ ಸಂಜೆಗೆ ಹೇಳಿ ಮಾಡಿಸಿದ ಹೈ ಪ್ರೋಟೀನ್‌ ರೆಸಿಪಿ

Soya chunks Kebab Recipe: ಜಿಟಿ ಜಿಟಿ ಮಳೆಗೆ ಬಾಯಿ ರುಚಿಸುವ ಸೋಯಾ ಚಂಕ್ಸ್‌ ಕಬಾಬ್‌; ಇಳಿ ಸಂಜೆಗೆ ಹೇಳಿ ಮಾಡಿಸಿದ ಹೈ ಪ್ರೋಟೀನ್‌ ರೆಸಿಪಿ

Jul 16, 2023 02:16 PM IST

Soya chunks Kebab Recipe: ಸೋಯಾ ಬೀನ್‌ನಿಂದ ಮಾಡಲ್ಪಟ್ಟ ಸೋಯಾ ಚಂಕ್ಸ್‌ ಬಾಯಿರುಚಿಗಷ್ಟೇ ಅಲ್ಲ ದೇಹಕ್ಕೂ ಅತ್ಯುತ್ತಮ ಪ್ರೋಟೀನ್‌ ಒದಗಿಸಬಲ್ಲ ಆಹಾರ. ಜಿಮ್‌ ವರ್ಕೌಟ್‌ ಮಾಡುವವರ ನೆಚ್ಚಿನ ಆಹಾರವಿದು. ಈ ಸೋಯಾದಿಂದ ಸಾಕಷ್ಟು ತರಹೇವಾರಿ ಖಾದ್ಯಗಳನ್ನು ಮಾಡಬಹುದು. ಇಂದು ನಾವಿಲ್ಲಿ ಸೋಯಾ ಚಂಕ್ಸ್‌ ಕಬಾಬ್‌ ಮಾಡುವ ಬಗೆ ಹೇಗೆಂಬುದನ್ನು ನೋಡೋಣ.

  • Soya chunks Kebab Recipe: ಸೋಯಾ ಬೀನ್‌ನಿಂದ ಮಾಡಲ್ಪಟ್ಟ ಸೋಯಾ ಚಂಕ್ಸ್‌ ಬಾಯಿರುಚಿಗಷ್ಟೇ ಅಲ್ಲ ದೇಹಕ್ಕೂ ಅತ್ಯುತ್ತಮ ಪ್ರೋಟೀನ್‌ ಒದಗಿಸಬಲ್ಲ ಆಹಾರ. ಜಿಮ್‌ ವರ್ಕೌಟ್‌ ಮಾಡುವವರ ನೆಚ್ಚಿನ ಆಹಾರವಿದು. ಈ ಸೋಯಾದಿಂದ ಸಾಕಷ್ಟು ತರಹೇವಾರಿ ಖಾದ್ಯಗಳನ್ನು ಮಾಡಬಹುದು. ಇಂದು ನಾವಿಲ್ಲಿ ಸೋಯಾ ಚಂಕ್ಸ್‌ ಕಬಾಬ್‌ ಮಾಡುವ ಬಗೆ ಹೇಗೆಂಬುದನ್ನು ನೋಡೋಣ.
ಸೋಯಾ ಚಂಕ್ಸ್‌ ಕಬಾಬ್‌ ಮಾಡಲು ಬೇಕಿರುವ ಸಾಮಗ್ರಿ: ಸೋಯಾ ಚಂಕ್ಸ್‌, ಒಂದು ಟೀ ಸ್ಪೂನ್‌ ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಒಂದು ಟೀ ಸ್ಪೂನ್‌ ಕಾರ್ನ್‌ ಫ್ಲೋರ್‌, ಒಂದು ಟೀ ಸ್ಪೂನ್‌ ಹಸಿ ಕಡಲೆ ಹಿಟ್ಟು, ಚೂರು ಗರಂ ಮಸಾಲಾ, ನಿಂಬೆ ರಸ, ಫುಡ್‌ ಕಲರ್‌ (ಬೇಕಿದ್ದರೆ), ಕರಿಯಲು ಎಣ್ಣೆ,  
(1 / 8)
ಸೋಯಾ ಚಂಕ್ಸ್‌ ಕಬಾಬ್‌ ಮಾಡಲು ಬೇಕಿರುವ ಸಾಮಗ್ರಿ: ಸೋಯಾ ಚಂಕ್ಸ್‌, ಒಂದು ಟೀ ಸ್ಪೂನ್‌ ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಒಂದು ಟೀ ಸ್ಪೂನ್‌ ಕಾರ್ನ್‌ ಫ್ಲೋರ್‌, ಒಂದು ಟೀ ಸ್ಪೂನ್‌ ಹಸಿ ಕಡಲೆ ಹಿಟ್ಟು, ಚೂರು ಗರಂ ಮಸಾಲಾ, ನಿಂಬೆ ರಸ, ಫುಡ್‌ ಕಲರ್‌ (ಬೇಕಿದ್ದರೆ), ಕರಿಯಲು ಎಣ್ಣೆ,  ( instagram/ deepu DIYs & Collections)
ಮೊದಲಿಗೆ ಸೋಯಾ ಚಂಕ್ಸ್‌ ತೆಗೆದುಕೊಂಡು, ನೀರಲ್ಲಿ 10 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಕುದಿಯುವ ಸಮಯದಲ್ಲಿಯೇ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿಕೊಳ್ಳಿ.
(2 / 8)
ಮೊದಲಿಗೆ ಸೋಯಾ ಚಂಕ್ಸ್‌ ತೆಗೆದುಕೊಂಡು, ನೀರಲ್ಲಿ 10 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಕುದಿಯುವ ಸಮಯದಲ್ಲಿಯೇ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿಕೊಳ್ಳಿ.
10 ನಿಮಿಷದ ಬಳಿಕ ಗ್ಯಾಸ್‌ ಆಫ್‌ ಮಾಡಿ, ಮೆತ್ತಗಾದ ಸೋಯಾದಲ್ಲಿನ ಬಿಸಿ ನೀರನ್ನು ಚೆಲ್ಲಿ. ಅದಕ್ಕೆ ತಣ್ಣನೆಯ ನೀರನ್ನು ಹಾಕಿ ಚೆನ್ನಾಗಿ ಹಿಂಡಿ, ಬೇರೆ ಪಾತ್ರೆಗೆ ತೆಗೆದಿಟ್ಟುಕೊಳ್ಳಿ. 
(3 / 8)
10 ನಿಮಿಷದ ಬಳಿಕ ಗ್ಯಾಸ್‌ ಆಫ್‌ ಮಾಡಿ, ಮೆತ್ತಗಾದ ಸೋಯಾದಲ್ಲಿನ ಬಿಸಿ ನೀರನ್ನು ಚೆಲ್ಲಿ. ಅದಕ್ಕೆ ತಣ್ಣನೆಯ ನೀರನ್ನು ಹಾಕಿ ಚೆನ್ನಾಗಿ ಹಿಂಡಿ, ಬೇರೆ ಪಾತ್ರೆಗೆ ತೆಗೆದಿಟ್ಟುಕೊಳ್ಳಿ. 
ಈಗ ಆ ಸೋಯಾ ಚಂಕ್ಸ್‌ಗೆ ಚೂರು ಉಪ್ಪು, ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಒಂದು ಸ್ಪೂನ್‌ ಕಾರ್ನ್‌ ಹಿಟ್ಟು, ಒಂದು ಸ್ಪೂನ್‌ ಹಸಿ ಕಡಲೆ ಹಿಟ್ಟು ಹಾಕಿ ಮಿಶ್ರಣ ಮಾಡಿ. 
(4 / 8)
ಈಗ ಆ ಸೋಯಾ ಚಂಕ್ಸ್‌ಗೆ ಚೂರು ಉಪ್ಪು, ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಒಂದು ಸ್ಪೂನ್‌ ಕಾರ್ನ್‌ ಹಿಟ್ಟು, ಒಂದು ಸ್ಪೂನ್‌ ಹಸಿ ಕಡಲೆ ಹಿಟ್ಟು ಹಾಕಿ ಮಿಶ್ರಣ ಮಾಡಿ. 
ಬಳಿಕ ಮತ್ತೆ ಅದಕ್ಕೆ ಚೂರು ಗರಂ ಮಸಾಲಾ, ಅರ್ಧ ನಿಂಬೆಹಣ್ಣಿನ ರಸ ಹಾಕಿ, ಚೂರು ಫುಡ್‌ ಕಲರ್‌ ಹಾಕಿ ಮತ್ತೆ ಚೆನ್ನಾಗಿ ಕೈಯಿಂದಲೇ ಮಿಶ್ರಣ ಮಾಡಿ. 
(5 / 8)
ಬಳಿಕ ಮತ್ತೆ ಅದಕ್ಕೆ ಚೂರು ಗರಂ ಮಸಾಲಾ, ಅರ್ಧ ನಿಂಬೆಹಣ್ಣಿನ ರಸ ಹಾಕಿ, ಚೂರು ಫುಡ್‌ ಕಲರ್‌ ಹಾಕಿ ಮತ್ತೆ ಚೆನ್ನಾಗಿ ಕೈಯಿಂದಲೇ ಮಿಶ್ರಣ ಮಾಡಿ. 
ಇದೆಲ್ಲ ಆದ ಬಳಿಕ 10 ನಿಮಿಷ ಅದನ್ನು ಪಕ್ಕದಲ್ಲಿಟ್ಟು, ಇತ್ತ ಗ್ಯಾಸ್‌ ಸ್ಟೂವ್‌ ಆನ್‌ ಮಾಡಿ ಎಣ್ಣೆ ಕಾಯಲು ಇಡಿ. 
(6 / 8)
ಇದೆಲ್ಲ ಆದ ಬಳಿಕ 10 ನಿಮಿಷ ಅದನ್ನು ಪಕ್ಕದಲ್ಲಿಟ್ಟು, ಇತ್ತ ಗ್ಯಾಸ್‌ ಸ್ಟೂವ್‌ ಆನ್‌ ಮಾಡಿ ಎಣ್ಣೆ ಕಾಯಲು ಇಡಿ. 
ಮಸಾಲೆಯಿಂದ ನೆನೆಸಿಟ್ಟ ಸೋಯಾ ಚಂಕ್ಸ್‌ ಅನ್ನು ಕಾದ ಎಣ್ಣೆಗೆ ಹಾಕಿ ಕರಿಯಿರಿ. ಸಣ್ಣ ಉರಿಯಲ್ಲಿ ಕೊಂಚ ಕಂದು ಬಣ್ಣಕ್ಕೆ ಬರುವವರೆಗೂ ಎಣ್ಣೆಯಲ್ಲಿ ಕರಿಯಿರಿ.
(7 / 8)
ಮಸಾಲೆಯಿಂದ ನೆನೆಸಿಟ್ಟ ಸೋಯಾ ಚಂಕ್ಸ್‌ ಅನ್ನು ಕಾದ ಎಣ್ಣೆಗೆ ಹಾಕಿ ಕರಿಯಿರಿ. ಸಣ್ಣ ಉರಿಯಲ್ಲಿ ಕೊಂಚ ಕಂದು ಬಣ್ಣಕ್ಕೆ ಬರುವವರೆಗೂ ಎಣ್ಣೆಯಲ್ಲಿ ಕರಿಯಿರಿ.
ಇದಾದ ಬಳಿಕ ಒಂದು ಪಾತ್ರೆಗೆ ಕರಿದ ಸೋಯಾ ಕಬಾಬ್‌ಅನ್ನು ತೆಗೆಯಿರಿ. ಇತ್ತ ಅದೇ ಎಣ್ಣೆಯಲ್ಲಿ ಕರಿಬೇವು, ಗೋಡಂಬಿಯನ್ನು ಕರಿದು, ಕಬಾಬ್‌ ಮೇಲೆ ಹಾಕಿ. ಜಾಮ್‌ ಅಥವಾ ಖಾರದ ಚಟ್ನಿ ಜತೆಗೆ ಬ್ಯಾಟಿಂಗ್‌ ಮಾಡಬಹುದು.  
(8 / 8)
ಇದಾದ ಬಳಿಕ ಒಂದು ಪಾತ್ರೆಗೆ ಕರಿದ ಸೋಯಾ ಕಬಾಬ್‌ಅನ್ನು ತೆಗೆಯಿರಿ. ಇತ್ತ ಅದೇ ಎಣ್ಣೆಯಲ್ಲಿ ಕರಿಬೇವು, ಗೋಡಂಬಿಯನ್ನು ಕರಿದು, ಕಬಾಬ್‌ ಮೇಲೆ ಹಾಕಿ. ಜಾಮ್‌ ಅಥವಾ ಖಾರದ ಚಟ್ನಿ ಜತೆಗೆ ಬ್ಯಾಟಿಂಗ್‌ ಮಾಡಬಹುದು.  

    ಹಂಚಿಕೊಳ್ಳಲು ಲೇಖನಗಳು