logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kitchen Hacks: ನಾನ್ ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಈ ವಿಷಯಗಳನ್ನು ನೆನಪಿಡಿ; ತೊಳೆಯುವಾಗ ಕೂಡಾ!

Kitchen Hacks: ನಾನ್ ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಈ ವಿಷಯಗಳನ್ನು ನೆನಪಿಡಿ; ತೊಳೆಯುವಾಗ ಕೂಡಾ!

Dec 07, 2022 09:06 PM IST

Kitchen Hacks: ನಾನ್-ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಮತ್ತು ಅವುಗಳನ್ನು ತೊಳೆಯುವಾಗ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಒಂದು ವೇಳೆ ನೀವು ಈ ಕಾಳಜಿ ವಹಿಸದಿದ್ದರೆ ಈ ಸಮಸ್ಯೆಗಳಾಗುತ್ತವೆ.

  • Kitchen Hacks: ನಾನ್-ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡುವಾಗ ಮತ್ತು ಅವುಗಳನ್ನು ತೊಳೆಯುವಾಗ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಒಂದು ವೇಳೆ ನೀವು ಈ ಕಾಳಜಿ ವಹಿಸದಿದ್ದರೆ ಈ ಸಮಸ್ಯೆಗಳಾಗುತ್ತವೆ.
ಅನೇಕ ಜನರು ನಾನ್ ಸ್ಟಿಕ್ ಪ್ಯಾನ್‌ಗಳಲ್ಲಿ ಅಡುಗೆ ಮಾಡುವುದನ್ನು ಆನಂದಿಸುತ್ತಾರೆ. ಸಾಕಷ್ಟು ಹಣ ಖರ್ಚು ಮಾಡಿ ನಾನ್ ಸ್ಟಿಕ್ ಪಾತ್ರೆಗಳನ್ನೇ ಖರೀದಿಸುತ್ತಾರೆ.
(1 / 6)

ಅಂಗಡಿಯಿಂದ ನಾನ್ ಸ್ಟಿಕ್ ಪ್ಯಾನ್ ಖರೀದಿಸಿದ ಬಳಿಕ, ಮೊದಲು ಅದನ್ನು ಒದ್ದೆ ಸ್ಪಾಂಜ್‌ನಿಂದ ಒರೆಸಿ. ನಂತರ ಅದರ ಪದರವನ್ನು ಸುರಕ್ಷಿತವಾಗಿರಿಸಲು ಸ್ವಲ್ಪ ಎಣ್ಣೆಯನ್ನು ಹಚ್ಚಿ.
(2 / 6)

ನಾನ್‌ಸ್ಟಿಕ್ ಪ್ಯಾನ್‌ಗಳನ್ನು ಇತರ ಸಾಮಾನ್ಯ ಪ್ಯಾನ್‌ಗಳಂತೆ ಹೆಚ್ಚು ಬಿಸಿ ಮಾಡಬಾರದು. ಯಾವಾಗಲೂ ಮಧ್ಯಮದಿಂದ ಕಡಿಮೆ ಉರಿಯಲ್ಲಿ ಮಾತ್ರ ಬೇಯಿಸಿ. ನಾನ್ ಸ್ಟಿಕ್ ಪ್ಯಾನ್‌ಗಳನ್ನು ಖಾಲಿಯಾಗಿ ಬಿಸಿ ಮಾಡಬಾರದು.
(3 / 6)

ನಾನ್‌ಸ್ಟಿಕ್ ಪ್ಯಾನ್‌ಗಳೊಂದಿಗೆ ಮರದ ಅಥವಾ ಸಿಲಿಕಾನ್ ಚಮಚಗಳನ್ನು ಬಳಸಿ. ಲೋಹದ ಸ್ಪೂನ್‌ಗಳನ್ನು ಬಳಸಿದರೆ, ಪ್ಯಾನ್‌ನ ಲೇಪನಕ್ಕೆ ಹಾನಿಯಾಗಬಹುದು.
(4 / 6)

ನಾನ್ ಸ್ಟಿಕ್ ಪ್ಯಾನ್ ಅನ್ನು ಸ್ವಚ್ಛಗೊಳಿಸಲು ಸ್ಪಾಂಜ್ ಬಳಸಿ. ಸ್ಕ್ರಬ್ಬರ್ ಬಳಸಿ ಉಜ್ಜಬೇಡಿ. ತೊಳೆಯಲು ಸೌಮ್ಯವಾದ ದ್ರವ ರೂಪದ ಲಿಕ್ವಿಡ್‌ ಬಳಸಿ. ಎಣ್ಣೆಯಂತಹ ಜಿಡ್ಡಿನ ಅಂಶ ಇಲ್ಲದಿದ್ದರೆ ಬಿಸಿ ನೀರಿನಿಂದ ತೊಳೆಯಿರಿ.
(5 / 6)

ಮತ್ತೊಂದು ಪ್ರಮುಖ ಅಂಶವೆಂದರೆ ನಾನ್ ಸ್ಟಿಕ್ ಪಾತ್ರೆಗಳನ್ನು ಸಿಂಕ್‌ನಲ್ಲಿ ಅಥವಾ ನೀರಿನಲ್ಲಿ ಮುಳುಗಿಸಿ ಇಡಬಾರದು. ಏಕೆಂದರೆ ಬಿಸಿ ಅಥವಾ ತಣ್ಣಗಿನ ನೀರಿನಲ್ಲಿ ದೀರ್ಘಕಾಲ ಇರುವುದರಿಂದ ಲೇಪನ ಹೋಗಬಹುದು. ನಾನ್ ಸ್ಟಿಕ್ ಪ್ಯಾನ್ ಸಂಪೂರ್ಣವಾಗಿ ತಣ್ಣಗಾದ ನಂತರವೇ ತೊಳೆಯಿರಿ. ಬಿಸಿ ಇರುವಾಗ ತೊಳೆಯುವುದನ್ನು ಕಡಿಮೆ ಮಾಡಿ.
(6 / 6)

    ಹಂಚಿಕೊಳ್ಳಲು ಲೇಖನಗಳು