logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟೆಸ್ಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ದಾಖಲೆ ಮುರಿಯೋ ತಾಕತ್ತು ಈತನಿಗಿದೆ, ಕೊಹ್ಲಿಗಲ್ಲ; ರಿಕಿ ಪಾಂಟಿಂಗ್

ಟೆಸ್ಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ದಾಖಲೆ ಮುರಿಯೋ ತಾಕತ್ತು ಈತನಿಗಿದೆ, ಕೊಹ್ಲಿಗಲ್ಲ; ರಿಕಿ ಪಾಂಟಿಂಗ್

Aug 16, 2024 08:08 AM IST

Ricky Ponting on Joe Root: ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಜೋ ರೂಟ್ ಅವರು ಮೀರಿಸಬಹುದು ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

  • Ricky Ponting on Joe Root: ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಜೋ ರೂಟ್ ಅವರು ಮೀರಿಸಬಹುದು ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನು ಇಂಗ್ಲೆಂಡ್​ ಸ್ಟಾರ್​ ಬ್ಯಾಟರ್ ಜೋ ರೂಟ್ ಮುರಿಯಬಹುದು ಎಂದು ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ. ಮೂರು-ನಾಲ್ಕು ವರ್ಷಗಳಲ್ಲಿ ಪ್ರತಿ ವರ್ಷ 800 - 1000 ರನ್ ಗಳಿಸಲು ಸಾಧ್ಯವಾದರೆ, ರೂಟ್, ಸಚಿನ್​ರ ದೊಡ್ಡ ದಾಖಲೆ ಮುರಿಯುವುದು ದೊಡ್ಡ ವಿಷಯವೇನಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ತಾರೆ ಅಭಿಪ್ರಾಯಪಟ್ಟಿದ್ದಾರೆ. 
(1 / 7)

ಇತ್ತೀಚೆಗಷ್ಟೆ ಟೆಸ್ಟ್​​ನಲ್ಲಿ 12 ಸಾವಿರ ರನ್​​​ಗಳ ಮೈಲಿಗಲ್ಲನ್ನು ದಾಟಿರುವ ಜೋ ರೂಟ್​ಗೆ 33 ವರ್ಷ. ಅವರು ಕ್ರಿಕೆಟ್​ನಲ್ಲಿ ಮೂರ್ನಾಲ್ಕು ವರ್ಷಗಳ ಕಾಲ ಮುಂದುವರೆಯುವ ಸಾಧ್ಯತೆ ಇದ್ದು, ಅತಿ ಹೆಚ್ಚು ರನ್ ಗಳಿಸುವ ಅವಕಾಶ ಮುಂದಿದೆ. ಜೋ ರೂಟ್ 143 ಟೆಸ್ಟ್ ಪಂದ್ಯಗಳಲ್ಲಿ 261 ಇನ್ನಿಂಗ್ಸ್​​ಗಳಲ್ಲಿ 12,027 ರನ್ ಗಳಿಸಿದ್ದು, 32 ಶತಕ ಮತ್ತು 63 ಅರ್ಧಶತಕ ಸಿಡಿಸಿದ್ದಾರೆ.
(2 / 7)

ಟೆಸ್ಟ್ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಅವರು 200 ಟೆಸ್ಟ್ ಪಂದ್ಯಗಳ 329 ಇನ್ನಿಂಗ್ಸ್​​ಗಳಲ್ಲಿ 15921 ರನ್ ಕಲೆ ಹಾಕಿದ್ದು, 51 ಶತಕ, 68 ಅರ್ಧಶತಕ ಗಳಿಸಿದ್ದಾರೆ. ಆದರೆ ತೆಂಡೂಲ್ಕರ್​ಗಿಂತ ಜೋ ರೂಟ್ 3894 ರನ್ ಹಿಂದಿದ್ದಾರೆ. ಹಾಗಾಗಿ ಮೂರ್ನಾಲ್ಕು ವರ್ಷ 800 ರಿಂದ 1000 ಟೆಸ್ಟ್ ರನ್ ಗಳಿಸಿದರೆ, ಸಚಿನ್ ದಾಖಲೆ ಮುರಿಯಬಹುದು. 
(3 / 7)

ಹಾಲಿ ಕ್ರಿಕೆಟರ್​​​ಗಳ ಪಟ್ಟಿಯಲ್ಲಿ ಅತ್ಯಧಿಕ ಟೆಸ್ಟ್ ರನ್ ಗಳಿಸಿರುವ ಜೋ ರೂಟ್, ಅತಿ ಹೆಚ್ಚು ರನ್, ಅತಿ ಹೆಚ್ಚು ಶತಕ ಗಳಿಸಿರುವ ಆಟಗಾರ ಎನಿಸಿದ್ದಾರೆ. ಒಟ್ಟಾರೆ, ಟೆಸ್ಟ್​ನಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಜೋ ರೂಟ್ 7ನೇ ಸ್ಥಾನದಲ್ಲಿದ್ದಾರೆ.
(4 / 7)

ಐಸಿಸಿ ರಿವಿವ್ಯೂ ಶೋನಲ್ಲಿ ಜೋ ರೂಟ್ ವಿಶ್ವ ದಾಖಲೆ ಮಾಡುವ ಸಾಧ್ಯತೆಗಳ ಬಗ್ಗೆ ಮಾತನಾಡಿದ ರಿಕಿ ಪಾಂಟಿಂಗ್, 'ಅವರು (ಜೋ ರೂಟ್) ಕೇವಲ 33 ವರ್ಷ ವಯಸ್ಸಿನವರು. ಸಚಿನ್​ಗಿಂತ 3,000 ರನ್​​​ಗಳ ಹಿನ್ನಡೆಯಲ್ಲಿದ್ದಾರೆ (ವಾಸ್ತವವಾಗಿ ಸುಮಾರು 4,000). ಆದರೆ ಸಚಿನ್ ದಾಖಲೆ ಮುರಿಯಲು ಅವರು ಎಷ್ಟು ಟೆಸ್ಟ್ ಪಂದ್ಯಗಳನ್ನಾಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ, ಅವರು ವರ್ಷಕ್ಕೆ 10-14 ಟೆಸ್ಟ್ ಪಂದ್ಯಗಳನ್ನು ಆಡಿದರೆ ಮತ್ತು ವರ್ಷಕ್ಕೆ 800-1000 ರನ್ ಗಳಿಸಿದರೆ, ಅವರು ಸಚಿನ್ ಸಾಧನೆಯನ್ನು ತಲುಪಬಹುದು ಎಂದು ಹೇಳಿದ್ದಾರೆ.
(5 / 7)

ಜೋ ರೂಟ್ ಅವರಲ್ಲಿ ರನ್ ಗಳಿಸುವ ಹಸಿವು ಅವರಲ್ಲಿದ್ದರೆ, ಸಚಿನ್ ಅವರನ್ನು ಹಿಂದಿಕ್ಕುವುದು ದೊಡ್ಡ ವಿಷಯವೇನಲ್ಲ ಎಂದು ಪಾಂಟಿಂಗ್ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಎಷ್ಟು ಪ್ರಬುದ್ಧ ಕ್ರಿಕೆಟ್ ಆಡುತ್ತಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ಪ್ರಸ್ತುತ ಅವರು ಯಾವುದೇ ಪಂದ್ಯದಲ್ಲಿ 50ರ ಗಡಿ ದಾಟುತ್ತಿದ್ದಂತೆ, ಬಹುತೇಕ ಅದನ್ನು ಶತಕವಾಗಿ ಪರಿವರ್ತಿಸುತ್ತಿದ್ದಾರೆ. ಹಾಗಾಗಿ ಸಚಿನ್ ದಾಖಲೆಯನ್ನು ಮುರಿಯುವ ಸಾಮರ್ಥ್ಯ ರೂಟ್​ಗೆ ಇದೆ ಎಂದು ಪಾಂಟಿಂಗ್ ಹೇಳಿದ್ದಾರೆ.
(6 / 7)

ಜೋ ರೂಟ್ ಅವರಲ್ಲಿ ರನ್ ಗಳಿಸುವ ಹಸಿವು ಇದ್ದರೆ, ಸಚಿನ್ ಅವರನ್ನು ಹಿಂದಿಕ್ಕುವುದು ದೊಡ್ಡ ವಿಷಯವೇನಲ್ಲ ಎಂದು ಪಾಂಟಿಂಗ್ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಎಷ್ಟು ಪ್ರಬುದ್ಧ ಕ್ರಿಕೆಟ್ ಆಡುತ್ತಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ಪ್ರಸ್ತುತ ಅವರು ಯಾವುದೇ ಪಂದ್ಯದಲ್ಲಿ 50ರ ಗಡಿ ದಾಟುತ್ತಿದ್ದಂತೆ, ಬಹುತೇಕ ಅದನ್ನು ಶತಕವಾಗಿ ಪರಿವರ್ತಿಸುತ್ತಿದ್ದಾರೆ. ಹಾಗಾಗಿ ಸಚಿನ್ ದಾಖಲೆಯನ್ನು ಮುರಿಯುವ ಸಾಮರ್ಥ್ಯ ರೂಟ್​ಗೆ ಇದೆ ಎಂದು ಪಾಂಟಿಂಗ್ ಹೇಳಿದ್ದಾರೆ.
(7 / 7)

    ಹಂಚಿಕೊಳ್ಳಲು ಲೇಖನಗಳು