logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಿಂಕು ಶೂನ್ಯ, ಪಡಿಕ್ಕಲ್-ಸರ್ಫರಾಜ್ ಶತಕದಾಟ; ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ತಂಡ ಅಬ್ಬರ

ರಿಂಕು ಶೂನ್ಯ, ಪಡಿಕ್ಕಲ್-ಸರ್ಫರಾಜ್ ಶತಕದಾಟ; ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ತಂಡ ಅಬ್ಬರ

Jan 25, 2024 04:00 PM IST

India A vs England Lions 2nd Unofficial Test: ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ, ಭಾರತ ಎ ತಂಡದ ಯುವ ಆಟಗಾರರು ಅಬ್ಬರಿಸಿದ್ದಾರೆ. ನಾಯಕ ಅಭಿಮನ್ಯು ಈಶ್ವರನ್ ಅರ್ಧಶತಕ ದಾಖಲಿಸಿದರೆ, ಸರ್ಫರಾಜ್‌ ಖಾನ್‌ ಮತ್ತು ದೇವದತ್‌ ಪಡೆಕಲ್‌ ಶತಕ ಸಿಡಿಸಿದ್ದಾರೆ.

  • India A vs England Lions 2nd Unofficial Test: ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ, ಭಾರತ ಎ ತಂಡದ ಯುವ ಆಟಗಾರರು ಅಬ್ಬರಿಸಿದ್ದಾರೆ. ನಾಯಕ ಅಭಿಮನ್ಯು ಈಶ್ವರನ್ ಅರ್ಧಶತಕ ದಾಖಲಿಸಿದರೆ, ಸರ್ಫರಾಜ್‌ ಖಾನ್‌ ಮತ್ತು ದೇವದತ್‌ ಪಡೆಕಲ್‌ ಶತಕ ಸಿಡಿಸಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಸರಣಿಯ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದೇವದತ್ ಪಡಿಕ್ಕಲ್ ಆಕರ್ಷಕ ಶತಕ ಬಾರಿಸಿದರು. ಇನ್ನಿಂಗ್ಸ್ ಓಪನಿಂಗ್ ಮಾಡಿದ ಅವರು 126 ಎಸೆತಗಳಲ್ಲಿ 17 ಬೌಂಡರಿಗಳ ಸಹಾಯದಿಂದ 105 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು. ಭಾರತ ಆರಂಭಿಕ ಜೋಡಿಯು ಇಂಗ್ಲೆಂಡ್ ಲಯನ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿದ 152 ರನ್‌ಗೂ ಹೆಚ್ಚು ರನ್‌ ಕಲೆ ಹಾಕಿದರು.
(1 / 6)

ನಾಯಕ ಅಭಿಮನ್ಯು ಈಶ್ವರನ್ ಅರ್ಧಶತಕ ಗಳಿಸಿದರು, 108 ಎಸೆತಗಳ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಸಹಿತ 58 ರನ್ ಬಾರಿಸಿದರು.
(2 / 6)
ನಾಯಕ ಅಭಿಮನ್ಯು ಈಶ್ವರನ್ ಅರ್ಧಶತಕ ಗಳಿಸಿದರು, 108 ಎಸೆತಗಳ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಸಹಿತ 58 ರನ್ ಬಾರಿಸಿದರು.(PTI)
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ತಿಲಕ್ ವರ್ಮಾ ಗಮನ ಸೆಳೆಯುವಲ್ಲಿ ವಿಫಲರಾದರು. ಕೇವಲ 6 ರನ್ ಗಳಿಸಿ ಡ್ರೆಸ್ಸಿಂಗ್ ರೂಂಗೆ ಮರಳಿದರು. 14 ಎಸೆತ ಎದುರಿಸಿದ ಅವರು ಯಾವುದೇ ಬೌಂಡರಿ ಬಾರಿಸಲಿಲ್ಲ.
(3 / 6)
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ತಿಲಕ್ ವರ್ಮಾ ಗಮನ ಸೆಳೆಯುವಲ್ಲಿ ವಿಫಲರಾದರು. ಕೇವಲ 6 ರನ್ ಗಳಿಸಿ ಡ್ರೆಸ್ಸಿಂಗ್ ರೂಂಗೆ ಮರಳಿದರು. 14 ಎಸೆತ ಎದುರಿಸಿದ ಅವರು ಯಾವುದೇ ಬೌಂಡರಿ ಬಾರಿಸಲಿಲ್ಲ.(PTI)
ಇಂಗ್ಲೆಂಡ್ ಲಯನ್ಸ್ ವಿರುದ್ಧ ಸರ್ಫರಾಜ್ ಖಾನ್ ವಿಧ್ವಂಸಕ ಶತಕ ಗಳಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅವರು ಕೇವಲ 89 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ತಮ್ಮ ಶತಕ ಪೂರ್ಣಗೊಳಿಸಿದರು. ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಪೊಚೆಸ್ಟ್ರಮ್ ಮತ್ತು ಬೆನೋನಿಯಲ್ಲಿ 68 ಮತ್ತು 34 ರನ್ ಗಳಿಸಿದ್ದ ಸರ್ಫರಾಜ್‌ ಅಮೋಘ ಫಾರ್ಮ್‌ ಮುಂದುವರೆಸಿದ್ದಾರೆ.
(4 / 6)
ಇಂಗ್ಲೆಂಡ್ ಲಯನ್ಸ್ ವಿರುದ್ಧ ಸರ್ಫರಾಜ್ ಖಾನ್ ವಿಧ್ವಂಸಕ ಶತಕ ಗಳಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅವರು ಕೇವಲ 89 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಾಯದಿಂದ ತಮ್ಮ ಶತಕ ಪೂರ್ಣಗೊಳಿಸಿದರು. ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಪೊಚೆಸ್ಟ್ರಮ್ ಮತ್ತು ಬೆನೋನಿಯಲ್ಲಿ 68 ಮತ್ತು 34 ರನ್ ಗಳಿಸಿದ್ದ ಸರ್ಫರಾಜ್‌ ಅಮೋಘ ಫಾರ್ಮ್‌ ಮುಂದುವರೆಸಿದ್ದಾರೆ.(PTI)
ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿರುವ ರಿಂಕು ಸಿಂಗ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಂಕಾಗಿದ್ದಾರೆ. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅವರು ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ರಿಂಕು ಸಿಂಗ್ 4 ಎಸೆತಗಳನ್ನು ಆಡಿ ಶೂನ್ಯಕ್ಕೆ ಔಟಾದರು
(5 / 6)

ಇದಕ್ಕೂ ಮುನ್ನ ಭಾರತ ಎ ತಂಡವು ಇಂಗ್ಲೆಂಡ್ ಲಯನ್ಸ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 152 ರನ್‌ಗಳಿಗೆ ಆಲೌಟ್ ಮಾಡಿತು. ಆಕಾಶ್ ದೀಪ್ 46 ರನ್ ನೀಡಿ 4 ವಿಕೆಟ್ ಪಡೆದರು. ಯಶ್ ದಯಾಳ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರು. ಅರ್ಷದೀಪ್ ಸಿಂಗ್ ಮತ್ತು ಸೌರಭ್ ಕುಮಾರ್ ತಲಾ 1 ವಿಕೆಟ್ ಕಬಳಿಸಿದರು.
(6 / 6)

    ಹಂಚಿಕೊಳ್ಳಲು ಲೇಖನಗಳು