logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wpl 2024: ಡಬ್ಲ್ಯೂಪಿಎಲ್‌ 2ನೇ ಆವೃತ್ತಿಗೆ ಬಲಿಷ್ಠ ಆಟಗಾರ್ತಿಯರನ್ನು ಉಳಿಸಿಕೊಂಡ ಆರ್‌ಸಿಬಿ

WPL 2024: ಡಬ್ಲ್ಯೂಪಿಎಲ್‌ 2ನೇ ಆವೃತ್ತಿಗೆ ಬಲಿಷ್ಠ ಆಟಗಾರ್ತಿಯರನ್ನು ಉಳಿಸಿಕೊಂಡ ಆರ್‌ಸಿಬಿ

Oct 19, 2023 05:00 PM IST

Royal Challengers Bangalore: ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ (WPL) ಎರಡನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಡಬ್ಲ್ಯೂಪಿಎಲ್‌ 2024ರ ಋತುವಿಗೂ ಮುನ್ನ ಟೂರ್ನಿಯಲ್ಲಿ ಆಡುತ್ತಿರುವ ಐದು ಫ್ರಾಂಚೈಸಿಗಳು ಕೆಲವು ಆಟಗಾರ್ತಿಯರನ್ನು ರಿಟೈನ್‌ ಮಾಡಿಕೊಂಡಿದೆ. ಅದರಲ್ಲಿ ಆರ್‌ಸಿಬಿ ವನಿತೆಯರ ತಂಡ ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿ ಇಲ್ಲಿದೆ.

  • Royal Challengers Bangalore: ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ (WPL) ಎರಡನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಡಬ್ಲ್ಯೂಪಿಎಲ್‌ 2024ರ ಋತುವಿಗೂ ಮುನ್ನ ಟೂರ್ನಿಯಲ್ಲಿ ಆಡುತ್ತಿರುವ ಐದು ಫ್ರಾಂಚೈಸಿಗಳು ಕೆಲವು ಆಟಗಾರ್ತಿಯರನ್ನು ರಿಟೈನ್‌ ಮಾಡಿಕೊಂಡಿದೆ. ಅದರಲ್ಲಿ ಆರ್‌ಸಿಬಿ ವನಿತೆಯರ ತಂಡ ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿ ಇಲ್ಲಿದೆ.
ತಂಡದ ನಾಯಕಿ ಹಾಗೂ ಸ್ಟೈಲಿಶ್‌ ಬ್ಯಾಟರ್‌ ಸ್ಮೃತಿ ಮಂಧಾನ ಅವರನ್ನು ಆರ್‌ಸಿಬಿ ತಂಡವು ನಿಸ್ಸಂದೇಹವಾಗಿ ರಿಟೈನ್‌ ಮಾಡಿಕೊಂಡಿದೆ. ಎರಡನೇ ಸೀಸನ್‌ನಲ್ಲೂ ಅವರು ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತ.
(1 / 6)
ತಂಡದ ನಾಯಕಿ ಹಾಗೂ ಸ್ಟೈಲಿಶ್‌ ಬ್ಯಾಟರ್‌ ಸ್ಮೃತಿ ಮಂಧಾನ ಅವರನ್ನು ಆರ್‌ಸಿಬಿ ತಂಡವು ನಿಸ್ಸಂದೇಹವಾಗಿ ರಿಟೈನ್‌ ಮಾಡಿಕೊಂಡಿದೆ. ಎರಡನೇ ಸೀಸನ್‌ನಲ್ಲೂ ಅವರು ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತ.
ಆರಂಭಿಕ ಆಟಗಾರ್ತಿ ಸ್ಫೋಟಕ ಬ್ಯಾಟರ್‌ ಸೋಫಿ ಡಿವೈನ್ ಕೂಡಾ ರಿಟೈನ್‌ ಆಗಿದ್ದಾರೆ. ಮೊದಲ ಸೀಸನ್‌ನಲ್ಲಿ ಸೋಫಿ ಅಬ್ಬರಿಸಿದ್ದರು. ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 36 ಎಸೆತಗಳಲ್ಲಿ 99 ರನ್‌ ಸಿಡಿಸಿದ್ದರು.   
(2 / 6)
ಆರಂಭಿಕ ಆಟಗಾರ್ತಿ ಸ್ಫೋಟಕ ಬ್ಯಾಟರ್‌ ಸೋಫಿ ಡಿವೈನ್ ಕೂಡಾ ರಿಟೈನ್‌ ಆಗಿದ್ದಾರೆ. ಮೊದಲ ಸೀಸನ್‌ನಲ್ಲಿ ಸೋಫಿ ಅಬ್ಬರಿಸಿದ್ದರು. ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 36 ಎಸೆತಗಳಲ್ಲಿ 99 ರನ್‌ ಸಿಡಿಸಿದ್ದರು.   
ಆಸ್ಟ್ರೇಲಿಯಾದ ಸ್ಟಾರ್‌ ಬ್ಯಾಟರ್‌ ಹಾಗೂ ಮೊದಲ ಸೀಸನ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಎಲ್ಲಿಸ್ ಪೆರ್ರಿ, ನಿಸ್ಸಂಶಯವಾಗಿ ತಂಡದಲ್ಲೇ ಉಳಿದುಕೊಂಡಿದ್ದಾರೆ.
(3 / 6)
ಆಸ್ಟ್ರೇಲಿಯಾದ ಸ್ಟಾರ್‌ ಬ್ಯಾಟರ್‌ ಹಾಗೂ ಮೊದಲ ಸೀಸನ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಎಲ್ಲಿಸ್ ಪೆರ್ರಿ, ನಿಸ್ಸಂಶಯವಾಗಿ ತಂಡದಲ್ಲೇ ಉಳಿದುಕೊಂಡಿದ್ದಾರೆ.(AFP)
ತಂಡದಲ್ಲಿರುವ ಏಕೈಕ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರನ್ನು ಕೂಡಾ ಫ್ರಾಂಚೈಸಿ ರಿಟೈನ್‌ ಮಾಡಿಕೊಂಡಿದೆ.
(4 / 6)
ತಂಡದಲ್ಲಿರುವ ಏಕೈಕ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರನ್ನು ಕೂಡಾ ಫ್ರಾಂಚೈಸಿ ರಿಟೈನ್‌ ಮಾಡಿಕೊಂಡಿದೆ.(AFP)
ಹೆದರ್ ನೈಟ್ (ಇಂಗ್ಲೆಂಡ್‌), ರೇಣುಕಾ ಸಿಂಗ್, ರಿಚಾ ಘೋಷ್, ಉಳಿದಂತೆ ಆಶಾ ಶೋಬನಾ, ದಿಶಾ ಕಸತ್, ಇಂದ್ರಾಣಿ ರಾಯ್, ಕನಿಕಾ ಅಹುಜಾ ಅವರನ್ನು ಉಳಿಸಿಕೊಳ್ಳಲಾಗಿದೆ.
(5 / 6)
ಹೆದರ್ ನೈಟ್ (ಇಂಗ್ಲೆಂಡ್‌), ರೇಣುಕಾ ಸಿಂಗ್, ರಿಚಾ ಘೋಷ್, ಉಳಿದಂತೆ ಆಶಾ ಶೋಬನಾ, ದಿಶಾ ಕಸತ್, ಇಂದ್ರಾಣಿ ರಾಯ್, ಕನಿಕಾ ಅಹುಜಾ ಅವರನ್ನು ಉಳಿಸಿಕೊಳ್ಳಲಾಗಿದೆ.(PTI)
ಇದೇ ವೇಳೆ ಕೆಲವು ಆಟಗಾರರನ್ನು ತಂಡದಿಂದ ಕೈ ಬಿಡಲಾಗಿದೆ. ಡೇನೆ ವ್ಯಾನ್ ನೀಕರ್ಕ್, ಎರಿನ್ ಬರ್ನ್ಸ್, ಕೋಮಲ್ ಝಂಜಾದ್, ಮೇಗನ್ ಶಟ್, ಪೂನಮ್ ಖೇಮ್ನಾರ್, ಪ್ರೀತಿ ಬೋಸ್, ಸಹನಾ ಪವಾರ್ ತಂಡದಿಂದ ಹೊರಬಿದ್ದಿದ್ದಾರೆ.
(6 / 6)
ಇದೇ ವೇಳೆ ಕೆಲವು ಆಟಗಾರರನ್ನು ತಂಡದಿಂದ ಕೈ ಬಿಡಲಾಗಿದೆ. ಡೇನೆ ವ್ಯಾನ್ ನೀಕರ್ಕ್, ಎರಿನ್ ಬರ್ನ್ಸ್, ಕೋಮಲ್ ಝಂಜಾದ್, ಮೇಗನ್ ಶಟ್, ಪೂನಮ್ ಖೇಮ್ನಾರ್, ಪ್ರೀತಿ ಬೋಸ್, ಸಹನಾ ಪವಾರ್ ತಂಡದಿಂದ ಹೊರಬಿದ್ದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು