logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್​​ಸಿಬಿ‌ ಮಹಿಳೆಯರ ಸಖತ್ ಫೋಟೋಶೂಟ್; ರೆಡ್ ಜರ್ಸಿಯಲ್ಲಿ ಸ್ಮೃತಿ ಮಂಧಾನ, ಶ್ರೇಯಾಂಕ ಪಾಟೀಲ್ ಆಕರ್ಷಣೆ - ಫೋಟೋ ಗ್ಯಾಲರಿ

ಆರ್​​ಸಿಬಿ‌ ಮಹಿಳೆಯರ ಸಖತ್ ಫೋಟೋಶೂಟ್; ರೆಡ್ ಜರ್ಸಿಯಲ್ಲಿ ಸ್ಮೃತಿ ಮಂಧಾನ, ಶ್ರೇಯಾಂಕ ಪಾಟೀಲ್ ಆಕರ್ಷಣೆ - ಫೋಟೋ ಗ್ಯಾಲರಿ

Feb 21, 2024 02:05 PM IST

Royal Challengers Bangalore : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯರು ಫೋಟೋಶೋಟ್ ನಡೆಸಿದ್ದು, ಅದರ ಫೋಟೋಗಳು ವೈರಲ್ ಆಗುತ್ತಿವೆ.

  • Royal Challengers Bangalore : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯರು ಫೋಟೋಶೋಟ್ ನಡೆಸಿದ್ದು, ಅದರ ಫೋಟೋಗಳು ವೈರಲ್ ಆಗುತ್ತಿವೆ.
ಮಹಿಳಾ ಪ್ರೀಮಿಯರ್ ಲೀಗ್​ ಆರಂಭಕ್ಕೂ ಮುನ್ನವೇ ನಡೆದ ಫೋಟೋಶೂಟ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿಯರು ಕಪ್ಪು ಮತ್ತು ಕೆಂಪು ಬಣ್ಣದ ಜೆರ್ಸಿಯಲ್ಲಿ ಮಿಂಚಿದ್ದಾರೆ.
(1 / 16)

ಫೆಬ್ರವರಿ 23ರಿಂದ ಮಹಿಳಾ ಪ್ರೀಮಿಯರ್​ ಲೀಗ್​ನ ಎರಡನೇ ಆವೃತ್ತಿ ಆರಂಭವಾಗಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಈ ಬಾರಿ ಮೊದಲ ಹಂತದ ಡಬ್ಲ್ಯುಪಿಎಲ್​ ನಡೆಯಲಿದೆ.
(2 / 16)

ತವರಿನ ಮೈದಾನದಲ್ಲಿ ಕನ್ನಡಿಗರನ್ನು ರಂಜಿಸಲು ಆರ್​ಸಿಬಿ ಮಹಿಳಾ ತಂಡದ ಸನ್ನದ್ಧಗೊಂಡಿದೆ. ಕಳೆದೊಂದು ವಾರದಿಂದ ಭರ್ಜರಿ ಪ್ರಾಕ್ಟೀಸ್ ಮಾಡುತ್ತಿರುವ ಸ್ಮೃತಿ ಬಳಗ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ.
(3 / 16)

ಟೂರ್ನಿಗೂ ಮುನ್ನವೇ ಭರ್ಜರಿ ಫೋಟೋಶೂಟ್​​ನಲ್ಲಿ ಭಾಗಿಯಾದ ಆಟಗಾರ್ತಿಯರು ವಿಭಿನ್ನವಾಗಿ ಪೋಸ್ ಕೊಟ್ಟಿದ್ದಾರೆ. ಕೆಲವರು ರಗಡ್ ಲುಕ್​ನಲ್ಲಿ ಮಿಂಚಿದ್ದಾರೆ.
(4 / 16)

ನಾಯಕಿ ಸ್ಮೃತಿ ಮಂಧಾನ, ಸೋಫಿ ಡಿವೈನ್, ರೇಣುಕಾ ಸಿಂಗ್, ರಿಚಾ ಘೋಷ್, ಕೇಟ್ ಕ್ರಾಸ್, ಶ್ರೇಯಾಂಕಾ ಪಾಟೀಲ್ ಸೇರಿದಂತೆ ತಂಡದ ಆಟಗಾರ್ತಿಯರು ಫೋಟೋಶೂಟ್​ನಲ್ಲಿ ಭಾಗಿಯಾಗಿದ್ದರು.
(5 / 16)

ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಫೋಟೋಗೆ ಪೋಸ್ ಕೊಟ್ಟಿದ್ದು ಹೀಗೆ.
(6 / 16)
ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಫೋಟೋಗೆ ಪೋಸ್ ಕೊಟ್ಟಿದ್ದು ಹೀಗೆ.
ಆರ್​ಸಿಬಿ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 24ರಂದು ಆಡಲಿದೆ. ಯುಪಿ ವಾರಿಯರ್ಸ್ ತನ್ನ ಮೊದಲ ಎದುರಾಳಿಯಾಗಿದೆ.
(7 / 16)

ಫೆಬ್ರವರಿ 23ರಿಂದ ಮಾರ್ಚ್​ 4ರವರೆಗೂ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಹಂತದ ಡಬ್ಲ್ಯುಪಿಎಲ್ ನಡೆಯಲಿದೆ.
(8 / 16)

ಆರ್​​ಸಿಬಿ ಫೋಟೋಶೂಟ್​ ಬೆನ್ನಲ್ಲೇ ಈ ಸಲ ಕಪ್​ ನಮ್ದೆ ಎಂಬ ಅಭಿಯಾನ ಆರಂಭಗೊಂಡಿದೆ. ಆಟಗಾರ್ತಿಯರು ಸಹ ಅಭಿಮಾನಿಗಳ ಕನಸು ಈಡೇರಿಸಲು ಸಹ ಉತ್ಸುಕರಾಗಿದ್ದಾರೆ.
(9 / 16)

ಆಟಗಾರ್ತಿಯರ ಫೋಟೋಗಳನ್ನು ಆರ್​ಸಿಬಿ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ.
(10 / 16)
ಆಟಗಾರ್ತಿಯರ ಫೋಟೋಗಳನ್ನು ಆರ್​ಸಿಬಿ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ.
ಕನ್ನಡತಿ ಶ್ರೇಯಾಂಕಾ ಪಾಟೀಲ್ ಮೇಲೆ ಈ ಬಾರಿ ನಿರೀಕ್ಷೆ ಹೆಚ್ಚಾಗಿದೆ. ಕಳೆದ ಬಾರಿಯೂ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. 
(11 / 16)

ಚೊಚ್ಚಲ ಆವೃತ್ತಿಯ ಡಬ್ಲ್ಯುಪಿಎಲ್​ನಲ್ಲಿ ಆರ್​​ಸಿಬಿ ತಂಡ ನಿರಾಸೆ ಮೂಡಿಸಿತ್ತು. ಸತತ ಐದು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಬಳಿಕ ಉಳಿದ ಮೂರು ಪಂದ್ಯಗಳಲ್ಲಿ ಎರಡು ಗೆದ್ದ ಸ್ಮೃತಿ ಮಂಧಾನ ಪಡೆ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಆಡಿದ 8 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದು, 6ರಲ್ಲಿ ಸೋತು 4 ಅಂಕ ಪಡೆದಿತ್ತು.
(12 / 16)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಆಶಾ ಶೋಭನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ನಡಿನ್ ಡಿ ಕ್ಲರ್ಕ್, ಇಂದ್ರಾಣಿ ರಾಯ್, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಜಾರ್ಜಿಯಾ ವೇರ್‌ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಬಿಷ್ತ್, ಶುಭಾ ಸತೀಶ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್, ಸಿಮ್ರಾನ್ ಬಹದ್ದೂರ್.
(13 / 16)

ವಿಕೆಟ್ ಕೀಪರ್ ರಿಚಾ ಘೋಷ್ ಖಡಕ್ ಪೋಸ್
(14 / 16)
ವಿಕೆಟ್ ಕೀಪರ್ ರಿಚಾ ಘೋಷ್ ಖಡಕ್ ಪೋಸ್
ಇಂಗ್ಲೆಂಡ್ ತಂಡದ ಆಟಗಾರ್ತಿ ಕೇಟ್​ ಕ್ರಾಸ್ ಖಡಕ್ ಲುಕ್.
(15 / 16)
ಇಂಗ್ಲೆಂಡ್ ತಂಡದ ಆಟಗಾರ್ತಿ ಕೇಟ್​ ಕ್ರಾಸ್ ಖಡಕ್ ಲುಕ್.
ಆರ್​ಸಿಬಿ ತಂಡದ ಸ್ಟಾರ್ ಆಟಗಾರ್ತಿ ಎಲಿಸ್ ಪೆರ್ರಿ ಅವರು ಇನ್ನೂ ತಂಡವನ್ನು ಕೂಡಿಕೊಂಡಿಲ್ಲ. ಅವರ ಆಗಮನದಿಂದ ತಂಡದ ಬಲ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.
(16 / 16)

    ಹಂಚಿಕೊಳ್ಳಲು ಲೇಖನಗಳು