logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ruturaj Gaikwad: ಎಂಎಸ್ ಧೋನಿಯ 11 ವರ್ಷಗಳ ದಾಖಲೆಯನ್ನು ಉಡೀಸ್ ಮಾಡಿದ ಋತುರಾಜ್ ಗಾಯಕ್ವಾಡ್

Ruturaj Gaikwad: ಎಂಎಸ್ ಧೋನಿಯ 11 ವರ್ಷಗಳ ದಾಖಲೆಯನ್ನು ಉಡೀಸ್ ಮಾಡಿದ ಋತುರಾಜ್ ಗಾಯಕ್ವಾಡ್

May 02, 2024 11:22 AM IST

Ruturaj Gaikwad: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಅವರು ತಮ್ಮ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ.

  • Ruturaj Gaikwad: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಅವರು ತಮ್ಮ ಮಾಜಿ ನಾಯಕ ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧ ಸಿಎಸ್​​ಕೆ ನಾಯಕ ಋತುರಾಜ್ ಗಾಯಕ್ವಾಡ್ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಸಿಎಸ್​ಕೆ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(1 / 5)

ಈ ಆವೃತ್ತಿಯಲ್ಲಿ 509 ರನ್ ಗಳಿಸಿರುವ ಋತುರಾಜ್, 11 ವರ್ಷಗಳ ಧೋನಿ ದಾಖಲೆಯನ್ನು ಮುರಿದಿದ್ದಾರೆ. 2013ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ 461 ರನ್ ಗಳಿಸಿದ್ದರು. ಇದೀಗ ಋತುರಾಜ್ ನಾಯಕನಾಗಿ ಈ ದಾಖಲೆಯನ್ನು ಉಡೀಸ್ ಮಾಡಿದ್ದಾರೆ. ಸಿಎಸ್​ಕೆ ಪರ ನಾಯಕನಾಗಿ ಅತ್ಯಧಿಕ ರನ್ ಗಳಿಸಿದ ಹೆಗ್ಗಳಿಕೆಗೆ ಗಾಯಕ್ವಾಡ್ ಪಾತ್ರವಾಗಿದ್ದಾರೆ.
(2 / 5)

ಚೆನ್ನೈ ಪರ ಪ್ರತಿ ಸೀಸನ್​ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಋತುರಾಜ್ ಗಾಯಕ್ವಾಡ್, ಐಪಿಎಲ್​​​ನಲ್ಲಿ ಇಲ್ಲಿಯವರೆಗೆ 2244 ರನ್ ಗಳಿಸಿದ್ದಾರೆ, 2 ಶತಕ, 17 ಅರ್ಧಶತಕಗಳನ್ನೂ ಸಿಡಿಸಿದ್ದಾರೆ.
(3 / 5)

ಬುಧವಾರ (ಮೇ 1ರಂದು) ತವರಿನಲ್ಲಿ ಚೆನ್ನೈನ ಬ್ಯಾಟಿಂಗ್ ಕ್ರಮಾಂಕ ಸ್ವಲ್ಪ ಅಸ್ಥಿರವಾಗಿತ್ತು. ಆಗ ಋತುರಾಜ್ 48 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್​ಗಳನ್ನೊಳಗೊಂಡ​ ಅಜೇಯ 62 ರನ್ ಸಿಡಿಸಿದರು. ಇದರಿಂದ ಚೆನ್ನೈ 150 ರನ್ ಗಡಿ ದಾಟಿತು. 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್ ಸಿಡಿಸಿತು.
(4 / 5)

ಈ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್​ 17.5 ಓವರ್​​ಗಳಲ್ಲಿ ಗೆಲುವಿನ ನಗೆ ಬೀರಿತು. ಪಂಜಾಬ್​ಗೆ ಇದು ಟೂರ್ನಿಯಲ್ಲಿ ನಾಲ್ಕನೇ ಗೆಲುವಾಗಿದೆ.
(5 / 5)

    ಹಂಚಿಕೊಳ್ಳಲು ಲೇಖನಗಳು