logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jayaram Karthik:ನನ್ನನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ,ಚಿತ್ರರಂಗ ಬಿಡಲು ನಿರ್ಧರಿಸಿದ್ದೇನೆ; ಅಶ್ವಿನಿ ನಕ್ಷತ್ರ ನಟ ಜಯರಾಮ್ ಕಾರ್ತಿಕ್

Jayaram Karthik:ನನ್ನನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ,ಚಿತ್ರರಂಗ ಬಿಡಲು ನಿರ್ಧರಿಸಿದ್ದೇನೆ; ಅಶ್ವಿನಿ ನಕ್ಷತ್ರ ನಟ ಜಯರಾಮ್ ಕಾರ್ತಿಕ್

Jun 03, 2023 07:15 AM IST

'ಅಶ್ವಿನಿ ನಕ್ಷತ್ರ' ಧಾರಾವಾಹಿ ಖ್ಯಾತಿಯ ಜೆಕೆ ಅಲಿಯಾಸ್‌ ಜಯರಾಮ್‌ ಕಾರ್ತಿಕ್‌ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಧಾರಾವಾಹಿಯಲ್ಲಿ ದುರಹಂಕಾರಿ ಸಿನಿಮಾ ನಟ ಜೆಕೆ ಪಾತ್ರದಲ್ಲಿ ನಟಿಸಿದ್ದ ಈ ಪ್ರತಿಭೆ ಬೆಳ್ಳಿತೆರೆ, ಕಿರುತೆರೆ ವೀಕ್ಷಕರಿಗೆ ಬಹಳ ಪರಿಚಯ. 

ಜೆಕೆ ಧಾರಾವಾಹಿಯಲ್ಲಿ ನಟಿಸುವ ಮುನ್ನ ಸಿನಿಮಾಗಳಲ್ಲಿ ನಟಿಸಿದ್ದರು. 2011 ರಲ್ಲಿ ತೆರೆ ಕಂಡ ಸುದೀಪ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಕೆಂಪೇಗೌಡ ಚಿತ್ರದ ಮೂಲಕ ಜೆಕೆ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರು. 
(1 / 12)
ಜೆಕೆ ಧಾರಾವಾಹಿಯಲ್ಲಿ ನಟಿಸುವ ಮುನ್ನ ಸಿನಿಮಾಗಳಲ್ಲಿ ನಟಿಸಿದ್ದರು. 2011 ರಲ್ಲಿ ತೆರೆ ಕಂಡ ಸುದೀಪ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಕೆಂಪೇಗೌಡ ಚಿತ್ರದ ಮೂಲಕ ಜೆಕೆ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರು. (PC: Jayaram Karthik Facebook)
ಅದಾದ ನಂತರ ವಿಷ್ಣುವರ್ಧನ್‌, ಜರಾಸಂಧ, ಫೈಟರ್‌ ಸಿನಿಮಾಗಳಲ್ಲಿ ನಟಿಸಿದರು. ಜೆಕೆ ಕಿಚ್ಚ ಸುದೀಪ್‌ಗೆ ಆಪ್ತರಾಗಿದ್ದ ಕಾರಣ ಸುದೀಪ್‌, ಇವರಿಗೆ ತೆಲುಗು ನಿರ್ದೇಶಕರಿಗೆ ಪರಿಚಯಿಸಿದರು. 
(2 / 12)

ರಾಜಮೌಳಿ ನಿರ್ದೇಶನದ ತೆಲುಗಿನ 'ಈಗ' ಸಿನಿಮಾದಲ್ಲಿ ಜಯರಾಮ್‌ ಕಾರ್ತಿಕ್‌ ಸುದೀಪ್‌ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದರು. 
(3 / 12)

ಇದಾದ ನಂತರ ಜೆಕೆ ಕಿರುತೆರೆಗೆ ಬಂದರು. 2013-15 ವರೆಗೂ ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಂಡ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಜೆಕೆಗೆ ಬ್ರೇಕ್‌ ನೀಡಿತು. ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಇವರು ಈ ಧಾರಾವಾಹಿ ಮೂಲಕ ಮನೆ ಮಾತಾದರು. ಜೆಕೆ ಜೋಡಿಯಾಗಿ ಮಯೂರಿ ಕ್ಯಾತರಿ ನಾಯಕಿಯಾಗಿ ನಟಿಸಿದ್ದರು. 
(4 / 12)

ಕನ್ನಡ ಮಾತ್ರವಲ್ಲದೆ ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಜೆಕೆ ಮಿಂಚಿದರು. ಆದರೆ ಇದೀಗ ಜಯರಾಮ್‌ ಕಾರ್ತಿಕ್‌ ಚಿತ್ರರಂಗ ಬಿಡಲು ನಿರ್ಧರಿಸಿದ್ದಾರಂತೆ. 
(5 / 12)

ಜಯರಾಮ್‌ ಕಾರ್ತಿಕ್‌ ನಿರ್ಧಾರ ಕೇಳಿ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಜೆಕೆ ಈ ನಿರ್ಧಾರಕ್ಕೆ ಬರಲು ಪ್ರಮುಖ ಕಾರಣ ಇದೆಯಂತೆ. ಎಷ್ಟೇ ಕಷ್ಟ ಪಟ್ಟು ಮೇಲೆ ಬರಲು ಪ್ರಯತ್ನಿಸಿದರೂ ಕೆಲವರು ನನ್ನನ್ನು ತುಳಿಯವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜೆಕೆ ಬೇಸರ ವ್ಯಕ್ತಪಡಿಸಿದ್ದಾರೆ. 
(6 / 12)

ಹಿಂದಿಯಲ್ಲಿ ನನಗೆ ಸಾಕಷ್ಟು ಅವಕಾಶ ಇತ್ತು. ಆದರೆ ನಾನು ಕನ್ನಡಕ್ಕೆ ವಾಪಸ್‌ ಬಂದೆ. ಇಲ್ಲಿ ನನ್ನನ್ನು ಬೆಂಬಲಿಸುವ ಜನರಿದ್ದಾರೆ ಎಂದುಕೊಂಡೆ. ಆದರೆ ನನಗೆ ದೊರೆಯತ್ತಿರುವ ಅವಕಾಶಗಳನ್ನೆಲ್ಲಾ ಕೆಲವರು ದೂರ ಮಾಡುತ್ತಿದ್ದಾರೆ.
(7 / 12)

ಕೋವಿಡ್‌ಗೂ ಮುನ್ನ ಶೂಟಿಂಗ್‌ ಆರಂಭವಾದ 'ಐರಾವನ್‌' ಬಿಡುಗಡೆಗೆ ಸಿದ್ಧವಿದೆ. ನಂತರ 'ಕಾಡ' ಸಿನಿಮಾ ಇದೆ. ಮೊದಲು ಒಪ್ಪಿಕೊಂಡಿದ್ದ ಎಲ್ಲಾ ಹಿಂದಿ ಧಾರಾವಾಹಿಗಳನ್ನು ಮುಗಿಸಿಬಂದಿದ್ದೇನೆ. ಸಿನಿಮಾಗಳು ರಿಲೀಸ್‌ ಆದ ಬಳಿಗೆ ಇಲ್ಲಿ ಗುಡ್‌ ಬೈ ಹೇಳಿ ಬೇರೆ ಕ್ಷೇತ್ರಕ್ಕೆ ಹೋಗುತ್ತೇನೆ ಎಂದು ಜಯರಾಮ್‌ ಕಾರ್ತಿಕ್‌ ಬೇಸರ ವ್ಯಕ್ತಪಡಿಸಿದ್ದಾರೆ. 
(8 / 12)

ಅಗ್ನಿಸಾಕ್ಷಿ, ನಾಗಿಣಿ 2 ಧಾರಾವಾಹಿಗಳಲ್ಲಿ ಜೆಕೆ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. 2017-18 ರಲ್ಲಿ ಪ್ರಸಾರವಾದ ಬಿಗ್‌ ಬಾಸ್‌ 5ನೇ ಸಂಚಿಕೆಯಲ್ಲಿ ಜೆಕೆ ಸ್ಪರ್ಧಿಯಾಗಿ ಭಾಗವಹಿಸಿದ್ದರು. 
(9 / 12)

ಇಂಜಿನಿಯರಿಂಗ್‌ ಪದವಿ ಪಡೆದಿರುವ ಜಯರಾಮ್‌ ಕಾರ್ತಿಕ್‌ ಮಾಡೆಲ್‌ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಇವರ ಸೋಷಿಯಲ್‌ ಮೀಡಿಯಾ ತೆರೆದರೆ ಸಾಕು, ವರ್ಕೌಟ್‌ ಹಾಗೂ ಫ್ಯಾಷನ್‌ ಶೋಗಳದ್ದೇ ಹೆಚ್ಚು ಫೋಟೋಗಳನ್ನು ಕಾಣಬಹುದು. 
(10 / 12)

2015-16 ರಲ್ಲಿ ಸ್ಟಾರ್‌ ಪ್ಲಸ್‌ನಲ್ಲಿ ಪ್ರಸಾರ ಕಂಡ 'ಸಿಯಾ ಕೆ ರಾಮ್‌' ಹಿಂದಿ ಧಾರಾವಾಹಿಯಲ್ಲಿ ಜಯರಾಮ್‌ ಕಾರ್ತಿಕ್‌ ರಾವಣನ ಪಾತ್ರದಲ್ಲಿ ನಟಿಸಿದ್ದರು. ಈ ಧಾರಾವಾಹಿ ಹಿಂದಿಯಲ್ಲಿ ಅವರಿಗೆ ಹೆಸರು ತಂದು ನೀಡಿತ್ತು. ನಂತರ ಹಿಂದಿಯಲ್ಲಿ 'ಪುಷ್ಪ ಐ ಹೇಟ್‌' ಟಿಯರ್ಸ್‌ ಸಿನಿಮಾದಲ್ಲಿ ಜೆಕೆ ನಾಯಕನ ಪಾತ್ರದಲ್ಲಿ ಮಿಂಚಿದ್ದರು. 
(11 / 12)

ತಂದೆ-ತಾಯಿ ಜೊತೆ ಜಯರಾಮ್‌ ಕಾರ್ತಿಕ್.‌ ಇತ್ತೀಚೆಗೆ ಜೆಕೆ ತಾಯಿ ಹುಟ್ಟುಹಬ್ಬ ಆಚರಿಸಿ ಆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. 
(12 / 12)

    ಹಂಚಿಕೊಳ್ಳಲು ಲೇಖನಗಳು