logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಧೀರನ ಜತೆ ಕಾಟೇರ, ಸಂಜಯ್‌ ದತ್‌ ಜತೆಗೆ ಕಾಣಿಸಿಕೊಂಡ್ರು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಇದು ಸ್ಪೆಷಲ್‌ ಮೀಟಿಂಗ್‌ ಅಂತೆ

ಅಧೀರನ ಜತೆ ಕಾಟೇರ, ಸಂಜಯ್‌ ದತ್‌ ಜತೆಗೆ ಕಾಣಿಸಿಕೊಂಡ್ರು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಇದು ಸ್ಪೆಷಲ್‌ ಮೀಟಿಂಗ್‌ ಅಂತೆ

Feb 08, 2024 08:27 AM IST

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಬಾಲಿವುಡ್‌ನ ಖ್ಯಾತ ನಟ ಸಂಜಯ್‌ ದತ್‌ ಭೇಟಿಯಾಗಿದ್ದು, ಒಟ್ಟಿಗೆ ಫೋಟೋ ತೆಗೆದುಕೊಂಡಿದ್ದಾರೆ. ಈ ಫೋಟೋಗಳನ್ನು ಕೆಡಿ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್‌ ಹಂಚಿಕೊಂಡಿದ್ದು "ಸ್ಪೆಷಲ್‌ ಮೀಡಿಂಗ್‌ ಮತ್ತು ಸ್ಪೆಷಲ್‌ ಮೊಮೆಂಟ್‌" ಎಂದು ಟ್ವೀಟ್‌ ಮಾಡಿದೆ.

  • ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಬಾಲಿವುಡ್‌ನ ಖ್ಯಾತ ನಟ ಸಂಜಯ್‌ ದತ್‌ ಭೇಟಿಯಾಗಿದ್ದು, ಒಟ್ಟಿಗೆ ಫೋಟೋ ತೆಗೆದುಕೊಂಡಿದ್ದಾರೆ. ಈ ಫೋಟೋಗಳನ್ನು ಕೆಡಿ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್‌ ಹಂಚಿಕೊಂಡಿದ್ದು "ಸ್ಪೆಷಲ್‌ ಮೀಡಿಂಗ್‌ ಮತ್ತು ಸ್ಪೆಷಲ್‌ ಮೊಮೆಂಟ್‌" ಎಂದು ಟ್ವೀಟ್‌ ಮಾಡಿದೆ.
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಬಾಲಿವುಡ್‌ನ ಖ್ಯಾತ ನಟ ಸಂಜಯ್‌ ದತ್‌ ಭೇಟಿಯಾಗಿದ್ದು, ಒಟ್ಟಿಗೆ ಫೋಟೋ ತೆಗೆದುಕೊಂಡಿದ್ದಾರೆ. ಈ ಫೋಟೋಗಳನ್ನು ಕೆಡಿ ಚಿತ್ರದ ನಿರ್ಮಾಣ ಸಂಸ್ಥೆ ಕೆವಿಎನ್‌ ಹಂಚಿಕೊಂಡಿದೆ.
(1 / 7)

ಸಂಜಯ್‌ ದತ್‌ ಅವರು ಜೋಗಿ ಪ್ರೇಮ್‌ ನಿರ್ದೇಶನದ ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕೆಡಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೆಡಿ ಚಿತ್ರದ ತಂಡದ ಜತೆ ಸಂಜಯ್‌ ದತ್‌ ಇದ್ದಾರೆ. ಇದೇ ಸಮಯದಲ್ಲಿ ಕಾಟೇರ ಸಿನಿಮಾದ ಮೂಲಕ ಸದ್ಯ ಸುದ್ದಿಯಲ್ಲಿರುವ ದರ್ಶನ್‌ ಅವರು ಸಂಜಯ್‌ ದತ್‌ರನ್ನು ಭೇಟಿಯಾಗಿದ್ದಾರೆ. 
(2 / 7)

ಸಂಜಯ್‌ ದತ್‌, ದರ್ಶನ್‌, ರಕ್ಷಿತಾ, ಪ್ರೇಮ್‌ ಎಲ್ಲರೂ ಜತೆಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಇದು ವಿಶೇಷ ಭೇಟಿ ಮತ್ತು ವಿಶೇಷ ಕ್ಷಣಗಳು ಎಂದು ಕೆವಿಎನ್‌ ಪ್ರೊಡಕ್ಷನ್‌ ಸಂಸ್ಥೆ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದೆ.
(3 / 7)

ಸಂಜಯ್‌ ದತ್‌ ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಜಿಎಫ್‌ ಚಾಪ್ಟರ್‌ 2ನಲ್ಲಿ ಅಧೀರನಾಗಿ ಮಿಂಚಿದ್ದರು. ರಜನಿಕಾಂತ್‌ ಜೈಲರ್‌ ಸಿನಿಮಾದಲ್ಲಿಯೂ ಸಂಜಯ್‌ ದತ್‌ ಇದ್ದರು.
(4 / 7)

ಕೆಡಿ ದಿ ಡೆವಿಲ್‌ ಎನ್ನುವ ಧ್ರುವ ಸರ್ಜಾ ನಟನೆಯ ಸಿನಿಮಾದಲ್ಲಿ ಪ್ರಮುಖ ಕಲಾವಿದರ ದಂಡೇ ಇದೆ. ಈ ಪ್ಯಾನ್‌ ಇಂಡಿಯಾ ಚಿತ್ರದಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ, ಬಾಲಿವುಡ್‌ ನಟ ಸಂಜಯ್‌ ದತ್‌, ಕನ್ನಡದ ರವಿಚಂದ್ರನ್‌ ಸೇರಿದಂತೆ ಪ್ರಮುಖ ತಾರಾಗಣವಿದೆ.
(5 / 7)

ನಿರ್ದೇಶಕ ಪ್ರೇಮ್‌ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ‘ಕೆಡಿ’ ಸಿನಿಮಾ ಸಿದ್ಧವಾಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಚಿತ್ರಕ್ಕೆ ಕೆವಿಎನ್‌ ಪ್ರೊಡಕ್ಷನ್ಸ್‌ ಬಂಡವಾಳ ಹೂಡುತ್ತಿದೆ. 70- 80ರ ಕಾಲಘಟ್ಟದ ಭೂಗತ ಜಗತ್ತಿನ ಹಿನ್ನೆಲೆಯುಳ್ಳ ಈ ಚಿತ್ರ, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ನಿರ್ಮಾಣವಾಗುತ್ತಿದೆ.
(6 / 7)

ಕೆಡಿ ದಿ ಡೆವಿಲ್‌ ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತವಿದೆ.  ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್‌ ಛಾಯಾಗ್ರಹಣವಿದೆ. ಬಹುತೇಕ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತದೆ. ಈ ಪ್ಯಾನ್‌ ಇಂಡಿಯಾ ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಾಗಿದೆ. 
(7 / 7)

    ಹಂಚಿಕೊಳ್ಳಲು ಲೇಖನಗಳು