logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Science News: ಮೊಟ್ಟೆ ಮೊದಲಾ, ಕೋಳಿ ಮೊದಲಾ; ವಿಜ್ಞಾನಿಗಳು ಕಂಡುಕೊಂಡ ಉತ್ತರ ಇದು

Science news: ಮೊಟ್ಟೆ ಮೊದಲಾ, ಕೋಳಿ ಮೊದಲಾ; ವಿಜ್ಞಾನಿಗಳು ಕಂಡುಕೊಂಡ ಉತ್ತರ ಇದು

Jun 16, 2023 08:22 PM IST

Science news: ಮೊಟ್ಟೆ ಮೊದಲಾ ಅಥವಾ ಕೋಳಿ ಮೊದಲಾ? ಶಾಲಾ ವಿದ್ಯಾರ್ಥಿಯಾಗಲಿ ಅಥವಾ ಶಿಕ್ಷಕರಾಗಲಿ, ಪ್ರತಿಯೊಬ್ಬರೂ ಈ ಪ್ರಶ್ನೆ ಕೇಳಿದರೆ ಉತ್ತರ ಹೇಳಲಾಗದೆ ನಿಂತುಬಿಡುತ್ತಾರೆ. ಆದರೆ ವಿಜ್ಞಾನಿಗಳು ಈಗ ಸಂಭವನೀಯ ಉತ್ತರವನ್ನು ಕಂಡುಕೊಂಡಿದ್ದಾರೆ. ಕೊನೆಗೂ ವಿಜ್ಞಾನಿಗಳಿಗೆ ಸಿಕ್ಕ ಉತ್ತರ ನೋಡಿ ಹುಬ್ಬೇರಿಸಬೇಡಿ. ಇಲ್ಲಿದೆ ಆ ವಿವರ.

  • Science news: ಮೊಟ್ಟೆ ಮೊದಲಾ ಅಥವಾ ಕೋಳಿ ಮೊದಲಾ? ಶಾಲಾ ವಿದ್ಯಾರ್ಥಿಯಾಗಲಿ ಅಥವಾ ಶಿಕ್ಷಕರಾಗಲಿ, ಪ್ರತಿಯೊಬ್ಬರೂ ಈ ಪ್ರಶ್ನೆ ಕೇಳಿದರೆ ಉತ್ತರ ಹೇಳಲಾಗದೆ ನಿಂತುಬಿಡುತ್ತಾರೆ. ಆದರೆ ವಿಜ್ಞಾನಿಗಳು ಈಗ ಸಂಭವನೀಯ ಉತ್ತರವನ್ನು ಕಂಡುಕೊಂಡಿದ್ದಾರೆ. ಕೊನೆಗೂ ವಿಜ್ಞಾನಿಗಳಿಗೆ ಸಿಕ್ಕ ಉತ್ತರ ನೋಡಿ ಹುಬ್ಬೇರಿಸಬೇಡಿ. ಇಲ್ಲಿದೆ ಆ ವಿವರ.
ಮೊಟ್ಟೆ ಮೊದಲಾ ಅಥವಾ ಕೋಳಿ ಮೊದಲಾ? ಹೀಗೊಂದು ಪ್ರಶ್ನೆ ಪ್ರತಿಯೊಬ್ಬರೂ ಎದುರಿಸಿರುತ್ತೀರಿ. ಉತ್ತರ ಕೊಡುವುದು ಸಾಧ್ಯವಾಗಿದೆಯೇ? ಇಲ್ಲ ಅಲ್ವ… 
(1 / 5)
ಮೊಟ್ಟೆ ಮೊದಲಾ ಅಥವಾ ಕೋಳಿ ಮೊದಲಾ? ಹೀಗೊಂದು ಪ್ರಶ್ನೆ ಪ್ರತಿಯೊಬ್ಬರೂ ಎದುರಿಸಿರುತ್ತೀರಿ. ಉತ್ತರ ಕೊಡುವುದು ಸಾಧ್ಯವಾಗಿದೆಯೇ? ಇಲ್ಲ ಅಲ್ವ… (Wikimedia commons)
ಜಗತ್ತಿನ ಪ್ರತಿಯೊಬ್ಬರೂ ಎದುರಿಸಿದ ಪ್ರಶ್ನೆಗಳಿಗೆ ವಿಜ್ಞಾನಿಗಳು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದರು ಎಂದರೆ ನಂಬುತ್ತೀರಾ.. ಹ್ಹೇ ಅದೊಂದು ಸಿಲ್ಲಿ ಪ್ರಶ್ನೆ ಎಂದು ಮೂಗು ತಿರುವಬೇಡಿ. ನಿಜಕ್ಕೂ ವಿಜ್ಞಾನಿಗಳಿಗೆ ಉತ್ತರ ಸಿಕ್ಕಿದೆಯಂತೆ ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ಆಧುನಿಕ ಪಕ್ಷಿಗಳು ಮತ್ತು ಸರೀಸೃಪಗಳ ಪೂರ್ವಜರು ಬಹುಶಃ ಮೊಟ್ಟೆಗಳನ್ನು ಇಡುತ್ತಿರಲಿಲ್ಲ. ಹಾಗಾದರೆ ಅವುಗಳ ಸಂತಾನ ಅಭಿವೃದ್ಧಿ ಹೇಗಾಗುತ್ತಿತ್ತು… ಇದು ಸಹಜ ಕುತೂಹಲದ ಮತ್ತೊಂದು ಪ್ರಶ್ನೆ.
(2 / 5)
ಜಗತ್ತಿನ ಪ್ರತಿಯೊಬ್ಬರೂ ಎದುರಿಸಿದ ಪ್ರಶ್ನೆಗಳಿಗೆ ವಿಜ್ಞಾನಿಗಳು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದರು ಎಂದರೆ ನಂಬುತ್ತೀರಾ.. ಹ್ಹೇ ಅದೊಂದು ಸಿಲ್ಲಿ ಪ್ರಶ್ನೆ ಎಂದು ಮೂಗು ತಿರುವಬೇಡಿ. ನಿಜಕ್ಕೂ ವಿಜ್ಞಾನಿಗಳಿಗೆ ಉತ್ತರ ಸಿಕ್ಕಿದೆಯಂತೆ ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ಆಧುನಿಕ ಪಕ್ಷಿಗಳು ಮತ್ತು ಸರೀಸೃಪಗಳ ಪೂರ್ವಜರು ಬಹುಶಃ ಮೊಟ್ಟೆಗಳನ್ನು ಇಡುತ್ತಿರಲಿಲ್ಲ. ಹಾಗಾದರೆ ಅವುಗಳ ಸಂತಾನ ಅಭಿವೃದ್ಧಿ ಹೇಗಾಗುತ್ತಿತ್ತು… ಇದು ಸಹಜ ಕುತೂಹಲದ ಮತ್ತೊಂದು ಪ್ರಶ್ನೆ.(Wikimedia commons)
ಇದಕ್ಕೆ ಉತ್ತರಿಸಲು ವಿಜ್ಞಾನಿಗಳು ಸುದೀರ್ಘ ಪ್ರಯೋಗಗಳನ್ನು ನಡೆಸಿದ್ದಾರೆ. ಪುರಾತನ ಕಾಲದಲ್ಲಿ ಹಕ್ಕಿಗಳು ಮತ್ತು ಸರೀಸೃಪಗಳ ಸಂತಾನ ಅಭಿವೃದ್ಧಿ ಸಸ್ತನಿಗಳಂತೆ ಸಾಮಾನ್ಯ ರೀತಿಯಲ್ಲೇ ಆಗುತ್ತಿತ್ತು. ಅಂದರೆ, ನೇರವಾಗಿ ಮರಿಗಳಿಗೆ ಜನ್ಮ ನೀಡುತ್ತಿದ್ದವು. ಮೊದಲು ಮೊಟ್ಟೆಗಳನ್ನು ಇಟ್ಟು ನಂತರ ಮರಿಯಾಗುವ ವ್ಯವಸ್ಥೆ ಇರಲಿಲ್ಲ.
(3 / 5)
ಇದಕ್ಕೆ ಉತ್ತರಿಸಲು ವಿಜ್ಞಾನಿಗಳು ಸುದೀರ್ಘ ಪ್ರಯೋಗಗಳನ್ನು ನಡೆಸಿದ್ದಾರೆ. ಪುರಾತನ ಕಾಲದಲ್ಲಿ ಹಕ್ಕಿಗಳು ಮತ್ತು ಸರೀಸೃಪಗಳ ಸಂತಾನ ಅಭಿವೃದ್ಧಿ ಸಸ್ತನಿಗಳಂತೆ ಸಾಮಾನ್ಯ ರೀತಿಯಲ್ಲೇ ಆಗುತ್ತಿತ್ತು. ಅಂದರೆ, ನೇರವಾಗಿ ಮರಿಗಳಿಗೆ ಜನ್ಮ ನೀಡುತ್ತಿದ್ದವು. ಮೊದಲು ಮೊಟ್ಟೆಗಳನ್ನು ಇಟ್ಟು ನಂತರ ಮರಿಯಾಗುವ ವ್ಯವಸ್ಥೆ ಇರಲಿಲ್ಲ.(Wikimedia commons)
ಇತ್ತೀಚೆಗೆ, ಪಕ್ಷಿಗಳು ಮತ್ತು ಸರೀಸೃಪಗಳ ಪೂರ್ವಜರಲ್ಲಿ ಹೆರಿಗೆಯ ಅಧ್ಯಯನವನ್ನು ನೇಚರ್ ಎಕಾಲಜಿ ಮತ್ತು ಎವಲ್ಯೂಷನ್ ನಲ್ಲಿ ವಿವರವಾಗಿ ಪ್ರಕಟಿಸಲಾಗಿದೆ. ಬ್ರಿಟಿಷ್ ಮಾಧ್ಯಮ ದಿ ಟೈಮ್ಸ್ ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರ ಸಂಶೋಧನಾ ವರದಿಯನ್ನು ಪ್ರಕಟಿಸಿದೆ  ಎಂದು ಎನ್‌ಡಿಟಿವಿ ವರದಿ ಮಾಡಿದೆ.
(4 / 5)
ಇತ್ತೀಚೆಗೆ, ಪಕ್ಷಿಗಳು ಮತ್ತು ಸರೀಸೃಪಗಳ ಪೂರ್ವಜರಲ್ಲಿ ಹೆರಿಗೆಯ ಅಧ್ಯಯನವನ್ನು ನೇಚರ್ ಎಕಾಲಜಿ ಮತ್ತು ಎವಲ್ಯೂಷನ್ ನಲ್ಲಿ ವಿವರವಾಗಿ ಪ್ರಕಟಿಸಲಾಗಿದೆ. ಬ್ರಿಟಿಷ್ ಮಾಧ್ಯಮ ದಿ ಟೈಮ್ಸ್ ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರ ಸಂಶೋಧನಾ ವರದಿಯನ್ನು ಪ್ರಕಟಿಸಿದೆ  ಎಂದು ಎನ್‌ಡಿಟಿವಿ ವರದಿ ಮಾಡಿದೆ.(Wikimedia commons)
ಈ ಅಧ್ಯಯನವನ್ನು ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರು ಮತ್ತು ನಾನ್‌ಜಿಂಗ್ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ನಡೆಸಿದ್ದರು. ಒಟ್ಟಾರೆಯಾಗಿ, ವಿಜ್ಞಾನಿಗಳು 51 ಪಳೆಯುಳಿಕೆ ಜಾತಿಗಳು ಮತ್ತು 29 ಜೀವಂತ ಜಾತಿಗಳೊಂದಿಗೆ ಕೆಲಸ ಮಾಡಿದ್ದಾರೆ. ಇವುಗಳಲ್ಲಿ ಗಟ್ಟಿಯಾದ ಅಥವಾ ಮೃದುವಾದ ಚಿಪ್ಪಿನ ಮೊಟ್ಟೆ ಇಡುವ ಪ್ರಾಣಿಗಳು ಸೇರಿದ್ದವು. ಮರಿಗಳಿಗೆ ಜನ್ಮ ನೀಡಿದ ಪ್ರಾಣಿಗಳೂ ಇದ್ದವು. ಈ ಎಲ್ಲ ಅಧ್ಯಯನಗಳನ್ನು ನಡೆಸಿದ ವಿಜ್ಞಾನಿಗಳು ಸಂಶೋಧನೆಯ ಮೂಲಕ ಇಂತಹ ತೀರ್ಮಾನಕ್ಕೆ ಬಂದಿದ್ದಾರೆ.
(5 / 5)
ಈ ಅಧ್ಯಯನವನ್ನು ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರು ಮತ್ತು ನಾನ್‌ಜಿಂಗ್ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ನಡೆಸಿದ್ದರು. ಒಟ್ಟಾರೆಯಾಗಿ, ವಿಜ್ಞಾನಿಗಳು 51 ಪಳೆಯುಳಿಕೆ ಜಾತಿಗಳು ಮತ್ತು 29 ಜೀವಂತ ಜಾತಿಗಳೊಂದಿಗೆ ಕೆಲಸ ಮಾಡಿದ್ದಾರೆ. ಇವುಗಳಲ್ಲಿ ಗಟ್ಟಿಯಾದ ಅಥವಾ ಮೃದುವಾದ ಚಿಪ್ಪಿನ ಮೊಟ್ಟೆ ಇಡುವ ಪ್ರಾಣಿಗಳು ಸೇರಿದ್ದವು. ಮರಿಗಳಿಗೆ ಜನ್ಮ ನೀಡಿದ ಪ್ರಾಣಿಗಳೂ ಇದ್ದವು. ಈ ಎಲ್ಲ ಅಧ್ಯಯನಗಳನ್ನು ನಡೆಸಿದ ವಿಜ್ಞಾನಿಗಳು ಸಂಶೋಧನೆಯ ಮೂಲಕ ಇಂತಹ ತೀರ್ಮಾನಕ್ಕೆ ಬಂದಿದ್ದಾರೆ.(Wikimedia commons)

    ಹಂಚಿಕೊಳ್ಳಲು ಲೇಖನಗಳು