logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೊಹ್ಲಿ, ರೋಹಿತ್ ಅಲ್ಲ; ಭಾರತದ ಈ ಆಟಗಾರ ಕಂಡರೆ ಭಯ ಜಾಸ್ತಿ; ತಮಗೆೆ ನಡುಕ ಹುಟ್ಟಿಸಿದ ಆಟಗಾರನ ಹೆಸರಿಸಿದ ಸ್ಕಾಟ್ ಬೋಲ್ಯಾಂಡ್

ಕೊಹ್ಲಿ, ರೋಹಿತ್ ಅಲ್ಲ; ಭಾರತದ ಈ ಆಟಗಾರ ಕಂಡರೆ ಭಯ ಜಾಸ್ತಿ; ತಮಗೆೆ ನಡುಕ ಹುಟ್ಟಿಸಿದ ಆಟಗಾರನ ಹೆಸರಿಸಿದ ಸ್ಕಾಟ್ ಬೋಲ್ಯಾಂಡ್

Nov 07, 2024 07:00 AM IST

Scott Boland: ಭಾರತ ತಂಡದಲ್ಲಿ ಯಾವ ಆಟಗಾರನನ್ನು ಕಂಡರೆ ಭಯ ಆಗುತ್ತದೆ ಎಂಬುದನ್ನು ಆಸ್ಟ್ರೇಲಿಯಾದ ವೇಗಿ ಸ್ಕಾಟ್ ಬೋಲ್ಯಾಂಡ್ ಬಹಿರಂಗಪಡಿಸಿದ್ದಾರೆ.

  • Scott Boland: ಭಾರತ ತಂಡದಲ್ಲಿ ಯಾವ ಆಟಗಾರನನ್ನು ಕಂಡರೆ ಭಯ ಆಗುತ್ತದೆ ಎಂಬುದನ್ನು ಆಸ್ಟ್ರೇಲಿಯಾದ ವೇಗಿ ಸ್ಕಾಟ್ ಬೋಲ್ಯಾಂಡ್ ಬಹಿರಂಗಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ ಗವಾಸ್ಕರ್ ಟ್ರೋಫಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ನವೆಂಬರ್ 22ರಿಂದ ಐದು ಪಂದ್ಯಗಳ ಸರಣಿ ಉಭಯ ತಂಡಗಳ ನಡುವೆ ನಡೆಯಲಿದೆ. ನವೆಂಬರ್​ 10ರಂದು ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ ಅದಕ್ಕೂ ಮುನ್ನವೇ ನ್ಯೂಜಿಲೆಂಡ್ ಸರಣಿಯಲ್ಲಿ ಅವಕಾಶ ಪಡೆಯದ ಕೆಎಲ್ ರಾಹುಲ್ ಮತ್ತು ಧ್ರುವ್ ಜುರೆಲ್ ಅವರು ಭಾರತ ಎ ತಂಡದ ಪರ ಆಡಲು ಆಸ್ಟ್ರೇಲಿಯಾಗೆ ಹಾರಿದ್ದಾರೆ. ಇದೆಲ್ಲದರ ನಡುವೆಯೇ ಆಸ್ಟ್ರೇಲಿಯಾದ ಆಟಗಾರನೊಬ್ಬ, ತಮಗೆ ಭಯ ಹುಟ್ಟಿಸುವ ಆಟಗಾರ ಯಾರೆಂದು ಬಹಿರಂಗಪಡಿಸಿದ್ದಾರೆ.
(1 / 5)

ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ, ಶುಭ್ಮನ್ ಗಿಲ್.. ಬೇರೆ ಯಾರೂ ಅಲ್ಲ. ಕೆಎಲ್ ರಾಹುಲ್ ಆಸ್ಟ್ರೇಲಿಯಾ ತಂಡಕ್ಕೆ ಹೆಚ್ಚು ಭಯ ಹುಟ್ಟಿಸಿದ್ದಾರೆ ಎಂದು  ಆಸೀಸ್ ವೇಗಿ ಸ್ಕಾಟ್ ಬೋಲ್ಯಾಂಡ್ ತಿಳಿಸಿದ್ದಾರೆ. ರಾಹುಲ್ ಆಸ್ಟ್ರೇಲಿಯಾದಲ್ಲಿ 5 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 2015ರಲ್ಲಿ ಸಿಡ್ನಿಯಲ್ಲಿ ರಾಹುಲ್ ಶತಕ ಗಳಿಸಿದ್ದರು. ಕೆಎಲ್ ರಾಹುಲ್ ಅವರನ್ನು ಒತ್ತಡಕ್ಕೆ ಸಿಲುಕಿಸುವುದು ಸುಲಭವಲ್ಲ. ಬೌಲರ್​​ಗಳು ಹೆಚ್ಚು ಅಧ್ಯಯನ ಮಾಡಬೇಕಾಗುತ್ತದೆ., ಆರಂಭದಿಂದಲೂ ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
(2 / 5)
ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ, ಶುಭ್ಮನ್ ಗಿಲ್.. ಬೇರೆ ಯಾರೂ ಅಲ್ಲ. ಕೆಎಲ್ ರಾಹುಲ್ ಆಸ್ಟ್ರೇಲಿಯಾ ತಂಡಕ್ಕೆ ಹೆಚ್ಚು ಭಯ ಹುಟ್ಟಿಸಿದ್ದಾರೆ ಎಂದು  ಆಸೀಸ್ ವೇಗಿ ಸ್ಕಾಟ್ ಬೋಲ್ಯಾಂಡ್ ತಿಳಿಸಿದ್ದಾರೆ. ರಾಹುಲ್ ಆಸ್ಟ್ರೇಲಿಯಾದಲ್ಲಿ 5 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 2015ರಲ್ಲಿ ಸಿಡ್ನಿಯಲ್ಲಿ ರಾಹುಲ್ ಶತಕ ಗಳಿಸಿದ್ದರು. ಕೆಎಲ್ ರಾಹುಲ್ ಅವರನ್ನು ಒತ್ತಡಕ್ಕೆ ಸಿಲುಕಿಸುವುದು ಸುಲಭವಲ್ಲ. ಬೌಲರ್​​ಗಳು ಹೆಚ್ಚು ಅಧ್ಯಯನ ಮಾಡಬೇಕಾಗುತ್ತದೆ., ಆರಂಭದಿಂದಲೂ ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.(AP)
"ನಾನು ಭಾರತದಲ್ಲಿ ಟೆಸ್ಟ್ ಆಡುವಾಗ ರಾಹುಲ್​​ ವಿರುದ್ಧ ಬೌಲಿಂಗ್ ಮಾಡಿದ್ದೇನೆ. ಆದರೆ, ಅವರಿಗೆ ಬೌಲಿಂಗ್ ಮಾಡುವುದು ವಿಭಿನ್ನ ಅನುಭವ ಎಂದು ಬೋಲ್ಯಾಂಡ್ ಹೇಳಿದ್ದಾರೆ. ಅವರು ವಿಶ್ವ ದರ್ಜೆಯ ಬ್ಯಾಟ್ಸ್​​ಮನ್​ ಮತ್ತು ಉತ್ತಮ ಕ್ರಿಕೆಟಿಗ. ಬೌಲರ್​​ಗಳು ಆರಂಭದಿಂದಲೂ ಅವರ ಮೇಲೆ ಒತ್ತಡ ಹೇರಿದರೆ, ಅದೇ ಒತ್ತಡದೊಂದಿಗೆ ಸರಣಿಯುದ್ದಕ್ಕೂ ಅವರನ್ನು ಸೈಲೆಂಟ್ ಮಾಡಬಹುದು ಎಂದು ತಮ್ಮ ಬೌಲರ್​​ಗಳಿಗೆ ಸಲಹೆ ನೀಡಿದ್ದಾರೆ ಬೋಲ್ಯಾಂಡ್.
(3 / 5)

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡವು ವೈಟ್​ವಾಶ್ ಆಗಿದೆ, ಆದ್ದರಿಂದ ಭಾರತ ತಂಡ ಸಾಕಷ್ಟು ಒತ್ತಡದಲ್ಲಿದೆ. ಭಾರತೀಯ ವಿಕೆಟ್ ಮತ್ತು ಆಸೀಸ್​​ ವಿಕೆಟ್ ನಡುವೆ ದೊಡ್ಡ ವ್ಯತ್ಯಾಸವಿದೆ. ಇದರ ಪರಿಣಾಮ ಭಾರತ ತಂಡವು ಇಲ್ಲಿ ಅದೇ ರೀತಿಯಲ್ಲಿ ಆಡಲಿದೆ. ಏಕೆಂದರೆ ಆಸ್ಟ್ರೇಲಿಯಾದ ಪಿಚ್​ಗಳಲ್ಲಿ ಸೀಮ್ ಮತ್ತು ವೇಗವು ತುಂಬಾ ಹೆಚ್ಚಾಗಿದೆ ಎಂದಿದ್ದಾರೆ.
(4 / 5)

ಕೆಎಲ್ ರಾಹುಲ್ ಸೇರಿದಂತೆ ಭಾರತೀಯ ಕ್ರಿಕೆಟ್ ತಂಡದ ಸಿದ್ಧತೆಯ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ಅಭ್ಯಾಸ ಪಂದ್ಯದಲ್ಲಿ ಆಡುವುದಕ್ಕಿಂತ ನೆಟ್ಸ್​​ನಲ್ಲಿ ಅಭ್ಯಾಸ ಮಾಡುವುದು ಉತ್ತಮ ಎಂದು ಹೇಳಿದ್ದಾರೆ. ಏಕೆಂದರೆ ಅಭ್ಯಾಸ ಪಂದ್ಯದಲ್ಲಿ ನೀವು ಔಟಾದರೆ, ನೀವು ದಿನವಿಡೀ ಕುಳಿತುಕೊಳ್ಳಬೇಕು. ಆದರೆ ನೀವು ನೆಟ್​ನಲ್ಲಿ ಅಭ್ಯಾಸ ಮಾಡಲು ಬಯಸುವವರೆಗೂ ಅಭ್ಯಾಸ ಮಾಡಬಹುದು. ಇದು ತಂಡಕ್ಕೆ ಒಳ್ಳೆಯದು ಎಂದಿದ್ದಾರೆ. ಇದರ ನಂತರ, ಭಾರತ ಎ ತಂಡದೊಂದಿಗೆ ಭಾರತೀಯ ಹಿರಿಯರ ತಂಡದ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸಲಾಯಿತು.
(5 / 5)

    ಹಂಚಿಕೊಳ್ಳಲು ಲೇಖನಗಳು