logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ವಗ್ರಾಮ ಕಲಬುರಗಿಯ ಕೋಳಕೂರಿನಲ್ಲಿ ಶ್ರೇಯಾಂಕಾ ಪಾಟೀಲ್​ಗೆ ಗ್ರ್ಯಾಂಡ್ ವೆಲ್​ಕಮ್​; ಟಗರು ಪುಟ್ಟಿ ನೋಡಲು ಜನವೋ ಜನ

ಸ್ವಗ್ರಾಮ ಕಲಬುರಗಿಯ ಕೋಳಕೂರಿನಲ್ಲಿ ಶ್ರೇಯಾಂಕಾ ಪಾಟೀಲ್​ಗೆ ಗ್ರ್ಯಾಂಡ್ ವೆಲ್​ಕಮ್​; ಟಗರು ಪುಟ್ಟಿ ನೋಡಲು ಜನವೋ ಜನ

Apr 08, 2024 04:36 PM IST

Shreyanaka Patil : ಭಾರತ ತಂಡ ಹಾಗೂ ಆರ್​ಸಿಬಿ ಮಹಿಳಾ ತಂಡದ ಭರವಸೆಯ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರಿಗೆ ಕಲಬುರಗಿಯ ಜೇವರ್ಗಿ ತಾಲೂಕಿನ ಕೋಳಕೂರು ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.

  • Shreyanaka Patil : ಭಾರತ ತಂಡ ಹಾಗೂ ಆರ್​ಸಿಬಿ ಮಹಿಳಾ ತಂಡದ ಭರವಸೆಯ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರಿಗೆ ಕಲಬುರಗಿಯ ಜೇವರ್ಗಿ ತಾಲೂಕಿನ ಕೋಳಕೂರು ಸ್ವಗ್ರಾಮದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೇಯಾಂಕಾ ಪಾಟೀಲ್ ಅವರಿಗೆ ತನ್ನ ಹುಟ್ಟೂರು ಕಲಬುರಗಿಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮದಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ.
(1 / 8)

ಡಬ್ಲ್ಯುಪಿಎಲ್ ಟ್ರೋಫಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ತನ್ನ ಗ್ರಾಮಕ್ಕೆ ಭೇಟಿಕೊಟ್ಟ ಶ್ರೇಯಾಂಕಾಗೆ ಗ್ರಾಮಸ್ಥರಿಂದ ಗ್ರ್ಯಾಂಡ್ ವೆಲ್​ಕಮ್ ಸಿಕ್ಕಿತು. ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ ಗ್ರಾಮಸ್ಥರು, ಯುವ ಆಟಗಾರ್ತಿಯನ್ನು ಸನ್ಮಾನಿಸಿದರು.
(2 / 8)

ಅಲ್ಲದೆ, ಜಿಲ್ಲಾಡಳಿತದ ಕಡೆಯಿಂದಲೂ ಡಿಸಿ ಕಚೇರಿಯಲ್ಲಿ ಶ್ರೇಯಾಂಕಾ ಪಾಟೀಲ್​ರನ್ನು ಸತ್ಕರಿಸಲಾಯಿತು. ಇದೇ ವೇಳೆ ಗ್ರಾಮದ ಜನರನ್ನು ಉದ್ದೇಶಿಸಿ ಮಾತನಾಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
(3 / 8)

ನಾನು ಕಲಬುರಗಿಗೆ ಬಂದರೆ ಅಜ್ಜನೊಂದಿಗೆ ಕೋಳಕೂರು ಗ್ರಾಮಕ್ಕೆ ಬರುತ್ತಿದ್ದೆ. ನನ್ನ ಸಕ್ಸಸ್​ ಅನ್ನು ನಿಮ್ಮೊಂದಿಗೆ ಸಂಭ್ರಮಿಸಲು ತುಂಬಾ ಖುಷಿಯಾಗುತ್ತಿದೆ. ನಮ್ಮ ಗ್ರಾಮಕ್ಕೆ ಬಂದಿದ್ದು ಖುಷಿ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
(4 / 8)

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಕ್ಕಳಿಗೆ ಸಲಹೆಯೊಂದನ್ನು ನೀಡಿದ ಶ್ರೇಯಾಂಕಾ, ನೀವು ಯಾವುದೇ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡರೂ, ಶಿಸ್ತು ಮತ್ತು ಶ್ರದ್ಧೆಯಿಂದ ಆಟವಾಡಿ ಎಂದು ಹೇಳಿದ್ದಾರೆ. ಜೀವನದಲ್ಲಿ ಶಿಸ್ತು ಬಹಳ ಮುಖ್ಯ ಎಂದಿದ್ದಾರೆ.
(5 / 8)

2ನೇ ಆವೃತ್ತಿಯ ಡಬ್ಲ್ಯುಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತು. ಶ್ರೇಯಾಂಕಾ ಪಾಟೀಲ್ 13 ವಿಕೆಟ್ ಉರುಳಿಸಿ ಪರ್ಪಲ್​ ಕ್ಯಾಪ್ ಗೆದ್ದುಕೊಂಡರು.
(6 / 8)

ಡಬ್ಲ್ಯುಪಿಎಲ್ ಬಳಿಕ ವಿಶ್ರಾಂತಿಯಲ್ಲಿರುವ ಶ್ರೇಯಾಂಕಾ ಪಾಟೀಲ್, ಮುಂಬರುವ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.
(7 / 8)

ಏಪ್ರಿಲ್ 28ರಿಂದ ಮೇ 9ರ ತನಕ ಬಾಂಗ್ಲಾದೇಶ ಮತ್ತು ಭಾರತ ಮಹಿಳಾ ತಂಡದ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.
(8 / 8)

    ಹಂಚಿಕೊಳ್ಳಲು ಲೇಖನಗಳು