logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Top 10 Ministers: ಸಿದ್ದರಾಮಯ್ಯ ಸರ್ಕಾರದ ಕರ್ನಾಟಕ ಟಾಪ್‌ 10 ಸಕ್ರಿಯ ಸಚಿವರು ಯಾರಿದ್ದಾರೆ, ಅವರ ಕಾರ್ಯವೈಖರಿ ಹೇಗಿದೆ

Karnataka Top 10 ministers: ಸಿದ್ದರಾಮಯ್ಯ ಸರ್ಕಾರದ ಕರ್ನಾಟಕ ಟಾಪ್‌ 10 ಸಕ್ರಿಯ ಸಚಿವರು ಯಾರಿದ್ದಾರೆ, ಅವರ ಕಾರ್ಯವೈಖರಿ ಹೇಗಿದೆ

Dec 02, 2024 08:00 AM IST

Karnataka Top 10 ministers: ಕರ್ನಾಟಕದಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಸಕ್ರಿಯರಾಗಿರುವ ಸಚಿವರ ಪಟ್ಟಿ ಹೀಗಿದೆ. ಇಲಾಖೆಯ ಜತೆಗೆ ಜಿಲ್ಲೆ, ಕ್ಷೇತ್ರದಲ್ಲೂ ಇವರು ಸಕ್ರಿಯರು.

ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಒಂದು ಸ್ಥಾನ ಖಾಲಿ ಬಿಟ್ಟರೆ  32 ಸಚಿವರು ಇದ್ದಾರೆ. ಒಂದೂವರೆ ವರ್ಷದಿಂದ ಕೆಲವು ಸಚಿವರು ಸಕ್ರಿಯರಾಗಿ ಕೆಲಸ ಮಾಡುತ್ತಿದ್ಧಾರೆ. ತಮ್ಮ ಅನುಭವವನ್ನು ಇಲಾಖೆ ಪ್ರಗತಿ, ಕಾರ್ಯಕ್ರಮ ಜಾರಿಗೆ ಬಳಸುತ್ತಿದ್ದಾರೆ. ಅಂತಹ ಸಕ್ರಿಯ ಸಚಿವರ ಯಾರಿದ್ದಾರೆ?
(1 / 11)

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ದಿ ಇಲಾಖೆ ಸಚಿವರು. ನೀರಾವರಿ ಯೋಜನೆಗಳ ಜಾರಿಗೆ ಒತ್ತು ನೀಡಿರುವ ಅವರು ಎತ್ತಿನ ಹೊಳೆ ಸಹಿತ ಹಲವು ನೀರಾವರಿ ಯೋಜನೆಗೆ ಬಲ ತುಂಬಿದ್ದಾರೆ. ಬೆಂಗಳೂರಿನಲ್ಲಿ ಹಲವು ಅಭಿವೃದ್ದಿ ಕಾರ್ಯಕ್ರಮಗಳಿಗೂ ಗಮನ ನೀಡಿದ್ದಾರೆ. 
(2 / 11)

ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿರುವ ಕೃಷ್ಣಬೈರೇಗೌಡ ಅವರು ಕಂದಾಯ ಇಲಾಖೆ ಕಾರ್ಯಕ್ರಮಗಳ ಜಾರಿಗೆ ಇನ್ನಿಲ್ಲದ ಒತ್ತು ಕೊಟ್ಟಿದ್ದಾರೆ.ಬಹುತೇಕ ಎಲ್ಲಾ ಜಿಲ್ಲೆಗಳಿಗೆ ಎರಡು ಮೂರು ಬಾರಿ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಬಾಕಿ ಪ್ರಕರಣ,  ಇಲಾಖೆಯಲ್ಲಿನ ಲಂಚಾವತಾರ, ಅದಕ್ಷತೆ ವಿಚಾರದಲ್ಲಿ ಆಗಾಗ ದಿಢೀರ್‌ ಭೇಟಿ ನೀಡಿ  ಬಿಸಿ ಮುಟ್ಟಿಸಿದ್ದಾರೆ.
(3 / 11)

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಸಚಿವ ಡಾ.ಎಂ.ಬಿ.ಪಾಟೀಲ ಕೂಡ ನಿರಂತರ ಚಟುವಟಿಕೆ ಮೂಲಕ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದಾರೆ. ಇಲಾಖೆ ಅಡಿಯ ಹಲವು ವಿಭಾಗಗಳ ಕಾರ್ಯಕ್ಷಮತೆ ಹೆಚ್ಚಿಸಿದ್ದಾರೆ. ಮುಂದಿನ ವರ್ಷದ ಕರ್ನಾಟಕ ಹೂಡಿಕೆದಾರರ ಸಮಾವೇಶದಲ್ಲಿ ಈಗ ಬ್ಯುಸಿ.
(4 / 11)

ಗೃಹ ಸಚಿವರಾದ ಡಾ.ಪರಮೇಶ್ವರ್‌ ಕೂಡ ಸಕ್ರಿಯವಾಗಿದ್ದಾರೆ. ಅಪರಾಧ ಚಟುವಟಿಕೆಗಳ ನಿಗ್ರಹ, ಪೊಲೀಸ್‌ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲೂ ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಪ್ರವಾಸ ಕೈಗೊಳ್ಳುತ್ತಲೇ ಪೊಲೀಸ್‌ ಇಲಾಖೆಯಲ್ಲೂ ಕಾರ್ಯಕ್ಷಮತೆ ವೃದ್ದಿಸುವ ನಿಟ್ಟಿನಲ್ಲೂ ಗಮನ ಹರಿಸಿದ್ದಾರೆ.
(5 / 11)

ಅರಣ್ಯ,ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಕೂಡ ಸಕ್ರಿಯರು. ಅರಣ್ಯ,ವನ್ಯಜೀವಿ,ಪರಿಸರಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ತತ್‌ ಕ್ಷಣವೇ ಸ್ಪಂದಿಸುತ್ತಾರೆ. ಘಟನೆ ಆದಾಗ ಸ್ಥಳಕ್ಕೆ ಹೋಗುತ್ತಾರೆ. ಬಹುತೇಕ ಅರಣ್ಯ ವಿಭಾಗಗಳ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಒತ್ತುವರಿ ತೆರವು ವಿಷಯದಲ್ಲೂ ಕಠಿಣ ನಿರ್ಧಾರಗಳನ್ನೇ ತೆಗದುಕೊಳ್ಳುತ್ತಿದ್ಧಾರೆ. ಬಹಳ ವರ್ಷಗಳ ನಂತರ ಅರಣ್ಯ ಇಲಾಖೆಗೆ ಒಳ್ಳೆಯ ಸಚಿವರು ಸಿಕ್ಕ ಅಭಿಪ್ರಾಯ ಇಲಾಖೆಯಲ್ಲಿದೆ.
(6 / 11)

ಎಚ್‌ಕೆ ಪಾಟೀಲ್‌ ಅವರು ಪ್ರವಾಸೋದ್ಯಮ ಹಾಗೂ ಕಾನೂನು, ಸಂಸದೀಯ ಸಚಿವರು. ಕರ್ನಾಟಕದಲ್ಲಿ ಪಾರಂಪರಿಕ ತಾಣಗಳ ದತ್ತು ಯೋಜನೆ, ಪ್ರವಾಸಿ ಸ್ಥಳಗಳಿಗೆ ಮೂಲ ಸೌಕರ್ಯ, ಪ್ರವಾಸಿ ತಾಣಗಳ ಸಂಪರ್ಕ ಜಾಲ ವೃದ್ದಿಸುವ ನಿಟ್ಟಿನಲ್ಲೂ ಗಮನ ಹರಿಸುತ್ತಿದ್ದಾರೆ. ಪ್ರವಾಸಿ ತಾಣಗಳು, ಪ್ರವಾಸಿ ಸಂಬಂಧಿತ ಚಟುವಟಿಕೆಗಳಲ್ಲಿ ತಪ್ಪದೇ ಭಾಗವಹಿಸುತ್ತಲೂ ಇದ್ದಾರೆ.
(7 / 11)

 ಪ್ರಿಯಾಂಕ್‌ ಖರ್ಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌, ಐಟಿ ಹಾಗೂ ಬಿಟಿ ಸಚಿವರು. ಎರಡು ಭಿನ್ನ ಹಿನ್ನೆಲೆಯ ಖಾತೆಗಳಲ್ಲಿ ಸಕ್ರಿಯರಾಗಿಯೇ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಚುರುಕಿನ ಆಡಳಿತಕ್ಕೆ ಒತ್ತು ಕೊಟ್ಟಿದ್ದಾರೆ. ಹುದ್ದೆಗಳ ನೇಮಕಕ್ಕೂ ಬಲ ತುಂಬಿದ್ದಾರೆ. ಐಟಿ ಬಿಟಿ ಸಚಿವರಾಗಿಯೂ ಹೊಸ ಪೀಳಿಗೆಗೆ ತಂತ್ರಜ್ಞಾನ ಅವಕಾಶ, ನಿರ್ದಿಷ್ಟ ಯೋಜನೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ.
(8 / 11)

ಸಿದ್ದರಾಮಯ್ಯ ಸಂಪುಟದ ಏಕೈಕ ಮಹಿಳಾ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌. ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆ ಜಾರಿ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿ ಅಡೆತಡೆಗಳ ನಡುವೆಯೂ ಲಕ್ಷಾಂತರ ಮಂದಿಗೆ ಹಣ ತಲುಪುವಲ್ಲಿ ಶ್ರಮಿಸುತ್ತಿದ್ದಾರೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಶೇಷ ಚೇತನರು. ಹಿರಿಯ ನಾಗರೀಕರ ಅಭಿವೃದ್ದಿ ಸಚಿವರಾಗಿಯೂ ಸಕ್ರಿಯರು.  ಬಹುತೇಕ ಕಡೆ ಪ್ರವಾಸವನ್ನೂ ನಿರಂತರವಾಗಿ ಕೈಗೊಳ್ಳುತ್ತಾರೆ.
(9 / 11)

ಅನಗತ್ಯ ಮಾತುಗಳ ಮೂಲಕ ಕೆಲವೊಮ್ಮೆ ಟೀಕೆಗೆ ಗುರಿಯಾದರೂ ವಸತಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾಗಿರುವ ಜಿ.ಝಡ್‌. ಜಮೀರ್‌ ಅಹಮದ್‌ ಖಾನ್‌ ಅವರು ಸಕ್ರಿಯರಾಗಿರುವ ಸಚಿವರ ಪಟ್ಟಿಯಲ್ಲಿದ್ದಾರೆ. ಪ್ರವಾಸ ಕೈಗೊಳ್ಳುವ ಮೂಲಕ ಕಾರ್ಯಕ್ರಮಗಳ ಜಾರಿಗೆ ಒತ್ತು ಕೊಡುತ್ತಿದ್ದಾರೆ.
(10 / 11)

ಕರ್ನಾಟಕದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಕೂಡ ಸಚಿವರಾಗಿ ಗಮನ ಸೆಳೆದಿದ್ದಾರೆ. ಆರೋಗ್ಯ ಇಲಾಖೆಯಲ್ಲಿನ ಅನಾರೋಗ್ಯ ತಗ್ಗಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ. ಇಲಾಖೆ ಪ್ರಗತಿ ಪರಿಶೀಲನೆ, ಕಾರ್ಯಕ್ರಮಗಳ ಜಾರಿ, ಪರಿಣಾಮಕಾರಿ ಆಡಳಿತಕ್ಕೂ ಒತ್ತು ಕೊಟ್ಟಿದ್ದಾರೆ.
(11 / 11)

    ಹಂಚಿಕೊಳ್ಳಲು ಲೇಖನಗಳು