logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Benne Chakli: ಗರಿಗರಿ ಬೆಣ್ಣೆ ಚಕ್ಕುಲಿ ತಿಂತಿದ್ರೆ ಸ್ವರ್ಗಸುಖ; ಇಲ್ಲಿದೆ ರೆಸಿಪಿ

Benne Chakli: ಗರಿಗರಿ ಬೆಣ್ಣೆ ಚಕ್ಕುಲಿ ತಿಂತಿದ್ರೆ ಸ್ವರ್ಗಸುಖ; ಇಲ್ಲಿದೆ ರೆಸಿಪಿ

Mar 23, 2024 05:06 PM IST

Benne Chakkuli Recipe In Kannada: ಚಕ್ಕುಲಿ ಅಥವಾ ಚಕ್ಲಿ ಅಂದ್ರೇನೆ ಬಹುತೇಕರ ಬಾಯಲ್ಲಿ ನೀರು ಬರತ್ತೆ. ಬೇಕರಿ-ಅಂಗಡಿ ಚಕ್ಕುಲಿ ತಿನ್ನೋಕಿಂತ ಮನೆಯಲ್ಲಿಯೇ ತಯಾರಿಸುವ ಚಕ್ಲಿ ಸಿಕ್ಕಾಪಟ್ಟೆ ರುಚಿ ಇರತ್ತೆ. ಅದರಲ್ಲಿಯೂ ಬೆಣ್ಣೆ ಚಕ್ಕುಲಿ ಅಂದ್ರೆ ಕೇಳಬೇಕಾ? ಆಹಾ! ಏನು ರುಚಿ ಅಂತೀರಾ. ನೀವೂ ಮನೆಯಲ್ಲೇ ಬೆಣ್ಣೆ ಚಕ್ಕುಲಿ ತಯಾರಿಸಬಹುದು, ಇಲ್ಲಿದೆ ರೆಸಿಪಿ.

  • Benne Chakkuli Recipe In Kannada: ಚಕ್ಕುಲಿ ಅಥವಾ ಚಕ್ಲಿ ಅಂದ್ರೇನೆ ಬಹುತೇಕರ ಬಾಯಲ್ಲಿ ನೀರು ಬರತ್ತೆ. ಬೇಕರಿ-ಅಂಗಡಿ ಚಕ್ಕುಲಿ ತಿನ್ನೋಕಿಂತ ಮನೆಯಲ್ಲಿಯೇ ತಯಾರಿಸುವ ಚಕ್ಲಿ ಸಿಕ್ಕಾಪಟ್ಟೆ ರುಚಿ ಇರತ್ತೆ. ಅದರಲ್ಲಿಯೂ ಬೆಣ್ಣೆ ಚಕ್ಕುಲಿ ಅಂದ್ರೆ ಕೇಳಬೇಕಾ? ಆಹಾ! ಏನು ರುಚಿ ಅಂತೀರಾ. ನೀವೂ ಮನೆಯಲ್ಲೇ ಬೆಣ್ಣೆ ಚಕ್ಕುಲಿ ತಯಾರಿಸಬಹುದು, ಇಲ್ಲಿದೆ ರೆಸಿಪಿ.
ಬೆಣ್ಣೆ ಚಕ್ಕುಲಿ ಮಾಡಲು ಬೇಕಾಗುವ ಸಾಮಗ್ರಿಗಳು: ದಪ್ಪ ಅಕ್ಕಿ 4 ಕಪ್, ಉದ್ದಿನಬೇಳೆ 1 ಕಪ್ ಬೆಣ್ಣೆ 1 ಕಪ್, ಬಿಳಿ ಎಳ್ಳು 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ
(1 / 6)
ಬೆಣ್ಣೆ ಚಕ್ಕುಲಿ ಮಾಡಲು ಬೇಕಾಗುವ ಸಾಮಗ್ರಿಗಳು: ದಪ್ಪ ಅಕ್ಕಿ 4 ಕಪ್, ಉದ್ದಿನಬೇಳೆ 1 ಕಪ್ ಬೆಣ್ಣೆ 1 ಕಪ್, ಬಿಳಿ ಎಳ್ಳು 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ(twitter/@Namskaara)
ಬೆಣ್ಣೆ ಚಕ್ಕುಲಿ ಮಾಡುವ ವಿಧಾನ: ಮೊದಲಿಗೆ 4 ಕಪ್ ದಪ್ಪ ಅಕ್ಕಿಯನ್ನು ಚೆನ್ನಾಗಿ ತೊಳೆದು 1 ತಾಸು ನೆನಸಿ ಇಟ್ಟು ನೀರನ್ನ ಬಸಿದು ಒಂದು ಬಿಳಿ ಬಣ್ಣದ ಬಟ್ಟೆಯ ಮೇಲೆ ನೆರಳಿನಲ್ಲಿ ಆರಿಹಾಕಬೇಕು. ನಂತರ  ದೊಡ್ಡ ಬಾಣಲೆಗೆ 1 ಕಪ್ ಉದ್ದಿನಬೇಳೆ ಹಾಕಿ ಹೊಂಬಣ್ಣ ಬರುವ ತನಕ ಹುರಿದಮೇಲೆ ಅದಕ್ಕೆ 4 ಕಪ್ ಅಕ್ಕಿ ಹಾಕಿ ಸ್ವಲ್ಪ ಹೊತ್ತು ಹುರಿದರೆ ಸಾಕು. ಉದ್ದನ ಬೇಳೆಯ ಕಾವಿಗೇ ಅಕ್ಕಿ ಬೇಗ ಹುರಿದುಬಿಡುತ್ತದೆ. ತುಂಬಾ ಜಾಸ್ತಿ ಹುರಿದರೆ ಚೆನ್ನಾಗಿ ಆಗಲ್ಲ.  
(2 / 6)
ಬೆಣ್ಣೆ ಚಕ್ಕುಲಿ ಮಾಡುವ ವಿಧಾನ: ಮೊದಲಿಗೆ 4 ಕಪ್ ದಪ್ಪ ಅಕ್ಕಿಯನ್ನು ಚೆನ್ನಾಗಿ ತೊಳೆದು 1 ತಾಸು ನೆನಸಿ ಇಟ್ಟು ನೀರನ್ನ ಬಸಿದು ಒಂದು ಬಿಳಿ ಬಣ್ಣದ ಬಟ್ಟೆಯ ಮೇಲೆ ನೆರಳಿನಲ್ಲಿ ಆರಿಹಾಕಬೇಕು. ನಂತರ  ದೊಡ್ಡ ಬಾಣಲೆಗೆ 1 ಕಪ್ ಉದ್ದಿನಬೇಳೆ ಹಾಕಿ ಹೊಂಬಣ್ಣ ಬರುವ ತನಕ ಹುರಿದಮೇಲೆ ಅದಕ್ಕೆ 4 ಕಪ್ ಅಕ್ಕಿ ಹಾಕಿ ಸ್ವಲ್ಪ ಹೊತ್ತು ಹುರಿದರೆ ಸಾಕು. ಉದ್ದನ ಬೇಳೆಯ ಕಾವಿಗೇ ಅಕ್ಕಿ ಬೇಗ ಹುರಿದುಬಿಡುತ್ತದೆ. ತುಂಬಾ ಜಾಸ್ತಿ ಹುರಿದರೆ ಚೆನ್ನಾಗಿ ಆಗಲ್ಲ.  (twitter/@mglathamg)
ಈಗ ಒಂದು ದೊಡ್ಡ ಹರಿವಾಣಕ್ಕೆ ಹುರಿದ ಉದ್ದು-ಅಕ್ಕಿ ಹಾಕಿ ಆರಲು ಬಿಡಿ. ಆರಿದ ಮೇಲೆ ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ನಂತರ ಜರಡಿಯ ಸಹಾಯದಿಂದ ಸೋಸಿಕೊಳ್ಳಬೇಕು.  ಇದರಲ್ಲಿ ನಾಲ್ಕು ಕಪ್ ನುಣ್ಣನೆಯ ಹಿಟ್ಟು ಆಗುತ್ತದೆ.  
(3 / 6)
ಈಗ ಒಂದು ದೊಡ್ಡ ಹರಿವಾಣಕ್ಕೆ ಹುರಿದ ಉದ್ದು-ಅಕ್ಕಿ ಹಾಕಿ ಆರಲು ಬಿಡಿ. ಆರಿದ ಮೇಲೆ ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ನಂತರ ಜರಡಿಯ ಸಹಾಯದಿಂದ ಸೋಸಿಕೊಳ್ಳಬೇಕು.  ಇದರಲ್ಲಿ ನಾಲ್ಕು ಕಪ್ ನುಣ್ಣನೆಯ ಹಿಟ್ಟು ಆಗುತ್ತದೆ.  (twitter/@Lucky52561306)
ಈಗ ನಾಲ್ಕು ಕಪ್ ಅಕ್ಕಿ ಹಿಟ್ಟನ್ನು ಒಂದು ಬಾಣಲೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಬಿಳಿ ಎಳ್ಳು 2 ಚಮಚ,  ಸ್ವಲ್ಪ ಇಂಗು, 1 ಕಪ್ ಬೆಣ್ಣೆ ಹಾಕಿ ನೀರನ್ನ ಹಾಕದೇ ಕಲಸಿಕೊಳ್ಳಿ. ನಂತರ ಸ್ವಲ್ಪ ನೀರನ್ನ ಹಾಕಿ ಗಟ್ಟಿಯಾಗಿ ಕಲಸಿ ಕೊಳ್ಳಬೇಕು. ಚಕ್ಕುಲಿ ಹಿಟ್ಟನ್ನು ಕಲಸುವಾಗ ಸ್ವಲ್ಪವೂ ನೀರು ಇಲ್ಲದಂತೆ ಕಲಸಿದರೆ ಚಕ್ಕುಲಿ ಚೆನ್ನಾಗಿ ಬರುತ್ತದೆ. ಮತ್ತೆ ಹಿಟ್ಟನ್ನ ಚೆನ್ನಾಗಿ ನಾದುವುದರಿಂದ ಚಕ್ಕುಲಿ ಕಟ್ ಆಗೋದು,   ಒಡೆಯೋದು ಏನು ಆಗಲ್ಲ.   
(4 / 6)
ಈಗ ನಾಲ್ಕು ಕಪ್ ಅಕ್ಕಿ ಹಿಟ್ಟನ್ನು ಒಂದು ಬಾಣಲೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಬಿಳಿ ಎಳ್ಳು 2 ಚಮಚ,  ಸ್ವಲ್ಪ ಇಂಗು, 1 ಕಪ್ ಬೆಣ್ಣೆ ಹಾಕಿ ನೀರನ್ನ ಹಾಕದೇ ಕಲಸಿಕೊಳ್ಳಿ. ನಂತರ ಸ್ವಲ್ಪ ನೀರನ್ನ ಹಾಕಿ ಗಟ್ಟಿಯಾಗಿ ಕಲಸಿ ಕೊಳ್ಳಬೇಕು. ಚಕ್ಕುಲಿ ಹಿಟ್ಟನ್ನು ಕಲಸುವಾಗ ಸ್ವಲ್ಪವೂ ನೀರು ಇಲ್ಲದಂತೆ ಕಲಸಿದರೆ ಚಕ್ಕುಲಿ ಚೆನ್ನಾಗಿ ಬರುತ್ತದೆ. ಮತ್ತೆ ಹಿಟ್ಟನ್ನ ಚೆನ್ನಾಗಿ ನಾದುವುದರಿಂದ ಚಕ್ಕುಲಿ ಕಟ್ ಆಗೋದು,   ಒಡೆಯೋದು ಏನು ಆಗಲ್ಲ.   (twitter/@rajcaar)
ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಟ್ಟು, ಚಕ್ಕುಲಿ ಮಾಡುವ ಮೌಲ್ಡ್ ತೆಗೆದುಕೊಂದು ಚಕ್ಕುಲಿ ಒತ್ತಿಕೊಳ್ಳಬೇಕು.  ಆಮೇಲೆ ಎಣ್ಣೆ ಕಾದಮೇಲೆ ಚಕ್ಕುಲಿಯನ್ನ ಎಣ್ಣೆಗೆ ಹಾಕಿ ಹೊಂಬಣ್ಣ ಬರುವ ತನಕ ಕರಿದರೆ ಗರಿಗರಿಯಾದ ಬೆಣ್ಣೆ ಚಕ್ಕುಲಿ ತಿನ್ನಲು ರೆಡಿ. 
(5 / 6)
ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಇಟ್ಟು, ಚಕ್ಕುಲಿ ಮಾಡುವ ಮೌಲ್ಡ್ ತೆಗೆದುಕೊಂದು ಚಕ್ಕುಲಿ ಒತ್ತಿಕೊಳ್ಳಬೇಕು.  ಆಮೇಲೆ ಎಣ್ಣೆ ಕಾದಮೇಲೆ ಚಕ್ಕುಲಿಯನ್ನ ಎಣ್ಣೆಗೆ ಹಾಕಿ ಹೊಂಬಣ್ಣ ಬರುವ ತನಕ ಕರಿದರೆ ಗರಿಗರಿಯಾದ ಬೆಣ್ಣೆ ಚಕ್ಕುಲಿ ತಿನ್ನಲು ರೆಡಿ. (freepik)
*ಆರೋಗ್ಯ, ಸೌಂದರ್ಯ, ಜ್ಯೋತಿಷ್ಯ, ಹಬ್ಬ, ದೇಗುಲ... ಬದುಕಿನ ಸಂಭ್ರಮ ಹೆಚ್ಚಿಸುವ ಸಮಗ್ರ ಮಾಹಿತಿಗಾಗಿ "ಎಚ್‌ಟಿ ಕನ್ನಡ ಸಂಭ್ರಮ"  ಕಮ್ಯುನಿಟಿಗೆ ಸೇರಲು ಲಿಂಕ್: https://chat.whatsapp.com/JD3PfTHJMw6E4n53xdjBdu
(6 / 6)
*ಆರೋಗ್ಯ, ಸೌಂದರ್ಯ, ಜ್ಯೋತಿಷ್ಯ, ಹಬ್ಬ, ದೇಗುಲ... ಬದುಕಿನ ಸಂಭ್ರಮ ಹೆಚ್ಚಿಸುವ ಸಮಗ್ರ ಮಾಹಿತಿಗಾಗಿ "ಎಚ್‌ಟಿ ಕನ್ನಡ ಸಂಭ್ರಮ"  ಕಮ್ಯುನಿಟಿಗೆ ಸೇರಲು ಲಿಂಕ್: https://chat.whatsapp.com/JD3PfTHJMw6E4n53xdjBdu

    ಹಂಚಿಕೊಳ್ಳಲು ಲೇಖನಗಳು