(4 / 8)ಬೆಂಗಳೂರು ಕರಗ 2024ರ ಉತ್ಸವದ ವೇಳಾಪಟ್ಟಿ ಪ್ರಕಾರ ಇಂದು (ಏಪ್ರಿಲ್ 15) ರಾತ್ರಿ10 ಗಂಟೆಗೆ ದೇವರ ಉತ್ಸವ ನಡೆಯಲಿದೆ. ಅದಾಗಿ ಮುಂಜಾನೆ 3 ಗಂಟೆಗೆ ಧ್ವಜಾರೋಹಣ. ಏಪ್ರಿಲ್ 16ರ ಮಧ್ಯಾಹ್ನ 12.30ಕ್ಕೆ ಕಬ್ಬನ್ ಪಾರ್ಕ್‌ನಲ್ಲಿ ಕರಗದ ಕುಂಟೆ ವಿಶೇಷ ಪೂಜೆ ನಡೆಯಲಿದೆ. ಏಪ್ರಿಲ್ 17ರ ಮಧ್ಯಾಹ್ನ 12.30ಕ್ಕೆ ಸಂಪಂಗಿ ಕೆರೆ ಅಂಗಳದ ಶಕ್ತಿಪೀಠದಲ್ಲಿ ವಿಶೇಷ ಪೂಜೆ, ಏಪ್ರಿಲ್ 18ರ ಮಧ್ಯಾಹ್ನ 12.30ಕ್ಕೆ ಹೂವಿನ ತೋಟ ಲಾಲ್‌ಬಾಗ್ ರಸ್ತೆ 3ನೇ ಕ್ರಾಸ್‌ನಲ್ಲಿರುವ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಇರಲಿದೆ. ಏಪ್ರಿಲ್ 19ರ ಮಧ್ಯಾಹ್ನ 12.30ಕ್ಕೆ ಗವಿಪುರ ಗುಟ್ಟಹಳ್ಳಿಯ ಶ್ರೀ ಜಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ.ಏಪ್ರಿಲ್ 20ರ ಬೆಳಗ್ಗೆ 10.30ಕ್ಕೆ ಕೆಂಪೇಗೌಡ ವೃತ್ತದಲ್ಲಿರುವ ಶ್ರೀ ಅಣ್ಣಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಏಪ್ರಿಲ್ 21ಕ್ಕೆ ಮಧ್ಯಾಹ್ನ 12.30ಕ್ಕೆ ಸಂಪಂಗಿ ಕೆರೆ ಶಕ್ತಿಪೀಠದಲ್ಲಿ ಕರಗದ ಕುಂಟೆ ವಿಶೇಷ ಪೂಜೆ, ಏಪ್ರಿಲ್ 22ಕ್ಕೆ ಮಧ್ಯಾಹ್ನ 12.30ಕ್ಕೆ ಕಲಾಸಿಪಾಳ್ಉ ಘಂಟೆಗೆ ಮರಿಸ್ವಾಮಿ ಮಠದಲ್ಲಿ ವಿಶಷ ಪೂಜೆ, ಏಪ್ರಿಲ್ 23ರಂದು ಬೆಳಗ್ಗೆ 10.30ಕ್ಕೆ ಕಬ್ಬನ್ ಪಾರ್ಕ್‌ನ ಕರಗದ ಕುಂಟೆ ವಿಶೇಷ ಪೂಜೆ, ರಾತ್ರಿ 12.30ಕ್ಕೆ ಶ್ರೀ ಧರ್ಮರಾಯಸ್ವಾಮಿ ರಥೋತ್ಸವ, ಶ್ರೀ ದ್ರೌಪದಿ ದೇವಿಯ ಕರಗಶಕ್ತ್ಯೋತ್ಸವ ನಡೆಯಲಿದೆ. ಏಪ್ರಿಲ್ 24ಕ್ಕೆ ರಾತ್ರಿ 2 ಗಂಟೆಗೆ ಬಾರತ ಕಥಾ ಪ್ರಚನ ಶಕ್ತಿಸ್ಥಘಳ ಏಳುಸುತ್ತಿನ ಕೋಟೆಯಲ್ಲಿ ನಡೆಯಲಿದೆ. ಮುಂಜಾನೆ 4 ಗಂಟೆಗೆ ಗಾವು ಶಾಂತಿ ದೇವಸ್ಥಾನದಲ್ಲಿ ನಡೆಯಲಿದೆ. ಏಪ್ರಿಲ್ 25ರಂದು ಸಂಜೆ 4ಕ್ಕೆ ವಸಂತೋತ್ಸವ, ರಾತ್ರಿ 10ಕ್ಕೆ ದೇವತಾ ಉತ್ಸವ, ರಾತ್ರಿ 12ಕ್ಕೆ ಧ್ವಜಾವರೋಹಣ ನಡೆಯಲಿದೆ.